00953. ಕಾಲದ ಬಾಲ


00953. ಕಾಲದ ಬಾಲ
_________________


ಹಿಡಿದು ಕಾಲದ ಬಾಲ
ಯಾತ್ರೆ ಹೊರಟೋರೆ ಎಲ್ಲ
ತೇಜಿ ಕುದಿರೆಯ ಬಾಲಕೆ
ಪಣ ಕಟ್ಟಿ ಜೂಜಾಡುವ ಜಾಲ..

ಕಾಲದ ಬಾಲ ತಲೆಯಲಿ
ತಲೆ ಹೊಕ್ಕಿದ್ದು ಬಾಲದಲಿ
ಕಾಲಚಕ್ರದ ಒಗಟೊಗಟು
ಸುತ್ತಿ ತಲೆಸುತ್ತೋ ಖಯಾಲಿ

ಕಳೆದುಹೋದರೆ ಚರಿತ್ರೆ ಹಳೆ
ಮರಳಿ ಬರುವಂತಿದ್ದರೆ ನಾಳೆ
ಕೈಲಿದ್ದಾಗಲೆ ಪದಕ, ಬಹುಮಾನ
ಹಿಡಿಯೊ ಬಿಟ್ಟು ಮಾತಿನ ಬೊಗಳೆ ..

ಕಿಲಾಡಿ ವೃದ್ಧ ಬಾಲಕ ಪ್ರಬುದ್ಧ
ಪ್ರಾಯ ಯೌವ್ವನ ಅಸಂಬದ್ಧ
ಎಲ್ಲವು ತಾನಾಗಿ ಎಲ್ಲರ ಭಾವ
ಕಳಚದ ಕೊಂಡಿ ಕಳಚೆ ನಿರ್ಯಾಣ..

ಕಾಲಕ್ಕಿಲ್ಲ ಕೊನೆಮೊದಲು ವೃತ್ತ
ಸುತ್ತುತ್ತೆ ತನ್ನಲ್ಲೆ ಲೆಕ್ಕಾಚಾರ ಪ್ರವೃತ್ತ
ಧೂರ್ತಾಧೂರ್ತತೆ ಸಜ್ಜನಿಕೆ ದೌರ್ಜನ್ಯ
ಎಲ್ಲಕೂ ನಿರ್ಲಿಪ್ತ ಕಂಡೂ ಕಾಣದ ಮಳ್ಳ

– ನಾಗೇಶ ಮೈಸೂರು

– ನಾಗೇಶ ಮೈಸೂರು
22.10.2016
(Picture source Creative Commons)

00873. ಬಾಲ ಕೃಷ್ಣನ ಪಾತ್ರ


00873. ಬಾಲ ಕೃಷ್ಣನ ಪಾತ್ರ
___________________

ನಾಟಕ ಸಿನಿಮಾದವರ ಕಣ್ಣಲಿ
ಬಾಲಕೃಷ್ಣನು ಒಂದು ಹೆಣ್ಣು ?
ಅದಕೆ ಇರಬೇಕು ಬಾಲಕೃಷ್ಣನ
ಪಾತ್ರಧಾರಿಗಳು ಹೆಣ್ಣು !

ತಟ್ಟನೆಂದಳು ರಾಧಾ
ವಿಷಯವದಲ್ಲ ಮೊತ್ತ
ಹೆಣ್ಣರಿತಂತೆ ಕೃಷ್ಣನ
ಅರಿತ ಗಂಡುಗಳೆಲ್ಲಿತ್ತಾ ?

ನಮ್ಮಲಿ ಬಿಡಿ ಸುಲಭ
ಕಟ್ಟಲು ಜುಟ್ಟಿದ್ದರೆ ಸರಿ
ಗಂಡಾಗಲಿ ಹೆಣ್ಣಾಗಲಿ
ತಲೆಗೊಂದು ನವಿಲುಗರಿ !

– ನಾಗೇಶ ಮೈಸೂರು
( picture from Internet / Facebook)

00343. ‘ಬಾಲವಿಜ್ಞಾನಿಯಾದ ಪುಟ್ಟಿ..!’


00343. ‘ಬಾಲವಿಜ್ಞಾನಿಯಾದ ಪುಟ್ಟಿ..!’
______________________

(ಸಿಂಗಪುರ ಕನ್ನಡ ಸಂಘದ ‘ಸಿಂಗಾರ 2015’ ದ್ವೈವಾರ್ಷಿಕ ಪತ್ರಿಕೆಯಲ್ಲಿ ಪ್ರಕಟವಾಗಿದ್ದು)

ಇಡಿ ಜಗತ್ತೆ ಅದುರಿಹೋಗಿತ್ತು ಆ ಹೊಸ ಬೆಳವಣಿಗೆಯಿಂದ….

ಎಲ್ಲರಿಗು ಈ ಕರಾಳ ದಿನ ಮುಂದೆಂದೊ ಬರುವುದೆಂದು ಗೊತ್ತಿದ್ದರು, ಯಾರಿಗು ಇಷ್ಟು ಕ್ಷಿಪ್ರವಾಗಿ ಬರಬಹುದೆಂಬ ಅರಿವಿರಲಿಲ್ಲ, ಯಾರೂ ಊಹಿಸಿರಲೂ ಇಲ್ಲ..

ಆದರೆ ಅದಾಗಲೆ ಬಂದು ಹೊಸಿಲಿಗೆ ಕಾಲಿಟ್ಟುಬಿಟ್ಟಿತ್ತು..ಬೇಕಿರಲಿಬಿಡಲಿ ಅನುಭವಿಸದೆ ವಿಧಿಯಿಲ್ಲ ಎನ್ನುವಂತೆ !

ಪುಟ್ಟಿಯ ಅಪ್ಪ ಪ್ರೊಫೆಸರ್ ಜ್ಞಾನಚಂದ್ರರು ತಲೆಯ ಮೇಲೆ ಕೈಹೊತ್ತು ಕುಳಿತಿದ್ದರು, ಮುಂದೇನು ಎನ್ನುವಂತೆ. ಅವರು ಮೈಸೂರಿನ ಸಿ.ಎಫ್.ಟಿ.ಆರ್.ಐ ಸಂಸ್ಥೆಯಲ್ಲಿ ಆಹಾರಕ್ಕೆ ಸಂಬಂಧಪಟ್ಟ ವಿಭಾಗವೊಂದರಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದರು. ಆಹಾರತಳಿಗಳ ಗುಣಮಟ್ಟ, ಇಳುವರಿಗಳನ್ನು ಸಾಂಪ್ರದಾಯಿಕ, ಹಾನಿಕಾರಕವಲ್ಲದ ವಿಧಾನಗಳ ಮೂಲಕ ಹೆಚ್ಚಿಸಬಹುದಾದ ಸಾಧ್ಯತೆಯ ಸಂಶೋಧನೆಯಲ್ಲಿ ನಿರತರಾಗಿದ್ದವರು.

(click the page link to see the rest of the article:https://nageshamysore.wordpress.com/00343-%e0%b2%ac%e0%b2%be%e0%b2%b2%e0%b2%b5%e0%b2%bf%e0%b2%9c%e0%b3%8d%e0%b2%9e%e0%b2%be%e0%b2%a8%e0%b2%bf%e0%b2%af%e0%b2%be%e0%b2%a6-%e0%b2%aa%e0%b3%81%e0%b2%9f%e0%b3%8d%e0%b2%9f%e0%b2%bf/)

Thanks and best regards,

Nagesha Mysore

00245. ಯಶೋಧೆಯ ಅಸೂಯೆಯ ಜಗ..


00245. ಯಶೋಧೆಯ ಅಸೂಯೆಯ ಜಗ..
______________________________

ಈ ಜಗವೇನೆಂದುಕೊಳ್ಳುವುದೆಂಬ ಚಿಂತೆ ನನಗಿಲ್ಲ.. ನಾನು ಸ್ವಾರ್ಥಿ, ಪಕ್ಷಪಾತಿ ಎಂದೆಲ್ಲ ಬೈದಾಡಿಕೊಂಡರು ಅಡ್ಡಿಯಿಲ್ಲ. ನನಗವನೆ ಸರ್ವಸ್ವ, ಅವನ ಒಡನಾಟವೆ ಪೂಜ್ಯ. ಅವನ ಹಿಂದೆ ಸುತ್ತಿ ಅವನನ್ನು ಸಂತೃಪ್ತಿಗೊಳಿಸುವುದೆ ನನ್ನ ಸರ್ವೋತ್ಕೃಷ್ಟ ಮಾತೃಧರ್ಮ. ಅವನು ಕಾಡಿಸಲಿ, ಪೀಡಿಸಲಿ, ಚೇಷ್ಟೆ, ತುಂಟತನ ಮಾಡಲಿ – ನನಗದೆಲ್ಲ ನಗಣ್ಯ….

https://nageshamysore.wordpress.com/00245-%e0%b2%af%e0%b2%b6%e0%b3%8b%e0%b2%a7%e0%b3%86%e0%b2%af-%e0%b2%85%e0%b2%b8%e0%b3%82%e0%b2%af%e0%b3%86%e0%b2%af-%e0%b2%9c%e0%b2%97/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00244. ಯಶೋಧೆ ರಾಧೆಯರ ಜತೆ…….


00244. ಯಶೋಧೆ ರಾಧೆಯರ ಜತೆ…….

ಜನ್ಮಾಷ್ಟಮಿಯ ಅಗಮನದೊಂದಿಗೆ ಕೃಷ್ಣನ ಬಾಲ ಲೀಲೆಯ ಜತೆ ಜತೆಯಲ್ಲೆ ನೆನಪಾಗುವುದು ಯಶೋಧೆಯ ಅಗಾಧ ಪುತ್ರ ವಾತ್ಸಲ್ಯ, ಪ್ರೇಮ. ತನ್ನ ಬಾಲ್ಯದ ತುಂಟತನಗಳೆಲ್ಲ ಯಶೋಧೆಯ ಬಳಿಗೆ ದೂರುಗಳಾಗಿ ಹೋಗುವುದೆಂದು ಗೊತ್ತಿದ್ದೂ ಕೃಷ್ಣ ತನ್ನ ತುಂಟಾಟಗಳನ್ನು ಬಿಡದೆ ಕಾಡಿಸುತ್ತ ಆಟವಾಡಿಸುವುದು ಬಹುಶಃ ಅವಳ ಮೇಲಿರುವ ಅಪರಿಮಿತ ವಿಶ್ವಾಸದಿಂದಲೆ ಇರಬೇಕು – ಏನಾದರೂ ನೆಪ ಹುಡುಕಿ ತನ್ನನ್ನು ಕಾಪಾಡುತ್ತಾಳೆಂದು…..

https://nageshamysore.wordpress.com/00244-%e0%b2%af%e0%b2%b6%e0%b3%8b%e0%b2%a7%e0%b3%86-%e0%b2%b0%e0%b2%be%e0%b2%a7%e0%b3%86%e0%b2%af%e0%b2%b0-%e0%b2%9c%e0%b2%a4%e0%b3%86/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com