00806. ಬಾಳೆ ಹೊಂಬಾಳೆ


00806. ಬಾಳೆ ಹೊಂಬಾಳೆ
________________________

ಬಾಳು ಬಾಳೆಯ ಗಿಡದ ಹಾಗೆ – ನೆಟ್ಟ ನೇರವೂ ಹೌದು, ಹಗುರವೂ ಹೌದು, ಕತ್ತರಿಸಲು ಸುಲಭವೂ ಹೌದು, ಸಿಹಿಯೂ ಹೌದು, ಅಳಿಸಲಾಗದ ಕಲೆಯೂ ಹೌದು, ಉಣಿಸುವ ಬಾಳೆಲೆಯೂ ಹೌದು, ಆ ಎಲೆಯಷ್ಟೆ ನವಿರಾದ ಜತನವೂ ಹೌದು, ಕಲ್ಲು ಕರಗಿಸುವ ಸ್ಪರ್ಶಮಣಿಯೂ ಹೌದು. ಈ ಬಾಳಿನ ಹೊಂಬಾಳೆಯನ್ನು ಕಾಯಿಂದ ಮಾಗಿಸಿ ಹಣ್ಣಾಗಿಸುವ ಬದುಕಿನ ಚಿತ್ರ ಸೂಚಿ – ಈ ತ್ರಿವಳಿ ಕವನ. ಬಾಳೆ ಎಂದು ಓದುವಾಗ ಬಾಳೆಹಣ್ಣಿನ ಚಿತ್ರಣವನ್ನು ಮನದಲಿಟ್ಟುಕೊಂಡಂತೆ ಬಾಳು, ಜೀವನ ಎನ್ನುವ ಅರ್ಥವನ್ನು ಆರೋಪಿಸಿಕೊಂಡಾಗ ವಿಭಿನ್ನ ಅರ್ಥವೂ ಹೋರಾಡುತ್ತದೆ – ಕೆಲವು ಸಾಲುಗಳಲ್ಲಿ. ಬಾಳೆ ಹಣ್ಣಾಗಬೇಕು ಎನ್ನುವಾಗ ತಿನ್ನಲು ರುಚಿಯಿರಬೇಕಾದರೆ ಹಣ್ಣಾಗಿರಬೇಕು ಎನ್ನುವ ಅರ್ಥ ಹೊರಟಂತೆ, ಬದುಕಿದ್ದು ಸಾರ್ಥಕವಾಗಲು ಬಾಳು ಪಕ್ವವಾಗಬೇಕು, ಪ್ರಬುದ್ಧವಾಗಬೇಕು ಎನ್ನುವ ಅರ್ಥವೂ ಹೌದು; ನಮ್ಮ ಬಾಳೆ ಪ್ರಬುದ್ದತೆಯಲ್ಲಿ ಸಾಗಿ ಮಾಗಿ ಹಣ್ಣಾಗಬೇಕೆಂಬ ಆಶಯವೂ ಹೌದು. ಅದೆಲ್ಲ ಬಿಟ್ಟು ಬಾಳೆಗಿಡ, ಹಣ್ಣು, ಎಲೆಗಳ ಕುರಿತಾದ ಮಕ್ಕಳ ಪದ್ಯವೆಂದುಕೊಂಡರೂ ಸರಿಯೇ 😊


ಎಳೆತನ ಕಾಯ (ಬಾಳೆ ಹೊಂಬಾಳೆ – 01)
___________________________________

ಬಾಳೇ ಎಳೆ
ಎಳಸು ಬಾಳೆಲೆ
ತೆಳುವಾದ ಹಾಳೆ
ಜತನ ಕಾದರೆ ಬಾಲೆ
ಎಳೆಳೆಯಾಗಿ ತೆರೆಯುವಳೆ..!

ಎಳೆತನ ಕಾಯ
ಜಾರಿಸುವಪಾಯ
ಗಾಳಿಗ್ಹರಿವ ಸಮಯ
ಕಾಯುತ್ತಲೆ ಸರಿ ಪ್ರಾಯ
ಸುತ್ತಿ ಮುಚ್ಚಿಡಲು ಉಪಾಯ..!

ಎಲೆಯ ಸಾರ
ದೋಣಿಯಾಕಾರ
ಸಿಗಿದು ಬೆನ್ನ್ಮೂಳೆ ತರ
ಕತ್ತರಿಸಿ ಮೂರಾಗುವ ಪೂರ
ಎಲೆಯಿಡೆ ಮೂರಾಳಿಗೆ ಆಹಾರ..!

ಬಾಳೇ ಗಿಡ
ನಿಂತಾಗ ನೋಡ
ಕಲಿಯುತ ಗಾಢ
ಸೆಟೆದು ನಡೆವ ಜಡ
ಕಲಿತೆ ಬೆಳೆ ಬಾಳ ನಿಗೂಢ..!

ಗಿಡವಾಗಿ ಬಗ್ಗೆ
ಎಳೆ ಕಂದು ಕುಗ್ಗೆ
ಅಡಿಪಾಯದ ಮೊಗ್ಗೆ
ಮೈ ಮರೆತು ನುಗ್ಗಿ ನಗ್ಗೆ
ಜೀವಮಾನ ನೋವಿನ ಬುಗ್ಗೆ..!

——————————————————————-
ನಾಗೇಶ ಮೈಸೂರು
——————————————————————-

ಬಾಳೇ ಕರ್ಮಕಾಂಡ (ಬಾಳೆ ಹೊಂಬಾಳೆ – 02)
_____________________________________

ಬಾಳೇ ಕಾಂಡ
ಪದರದ ಅಂಡ
ಸಿಪ್ಪೆ ಸುಲಿಸಬೇಡ
ನಿಲುವ ಶಕ್ತಿಯ ದಂಡ
ಸುತ್ತಿಸುತ್ತಿಸಿಟ್ಟ ಪ್ರಕಾಂಡ..!

ಕರ್ಮಕಾಂಡ
ಹೋರಾಟ ನಿಭಿಢ
ಒಳಾಂಗಣ ನಿಗೂಢ
ಸವರೆ ಕತ್ತಿಯ ಜಾಡ
ತರಿದ ಶಕ್ತಿಯ ನೋಡಾ..!

ಬಾಳೇ ಕಂದು
ಕಂದಿಸದ ಬಂಧು
ಮಾಗಿದ ವಯಸೆಂದು
ಅನುಭವ ಅನುಭಾವಿಸದು
ಸಮ್ಮಿಶ್ರಣ ಯೌವ್ವನ ಸರಿದು..!

ಕಂದದೆ ತುಸು
ಕುಂದ ಸಾವಾರಿಸು
ಹಗಲಿರುಳಿನ ಕೂಸು
ಎದೆಗುಂದದೆ ಮುನ್ನಡೆಸು
ಬಿಡುವಿರೆ ನಡುವೆ ತೂಕಡಿಸು..!

————————————————————
ನಾಗೇಶ ಮೈಸೂರು
————————————————————

ಬಾಳೇ ಹಣ್ಣು (ಬಾಳೆ ಹೊಂಬಾಳೆ – 03)
_____________________________________

ಬಾಳೇ ಹಣ್ಣು
ನೀ ಸಾರ್ಥಕವೆನ್ನು
ಧನ್ಯತೆ ಸೇರಿದರಿನ್ನು
ಪೂಜಿಸಿ ತಿನ್ನೋ ತಾನು
ರುಚಿ ಪೋಷಣೆ ಕಾನೂನು..!

ಹಣ್ಣಿನ ರೀತಿ
ಜಗವಿರೆ ಪ್ರೀತಿ
ಸಿಪ್ಪೆ ಸುಲಿದ ನೀತಿ
ಅಡಗಿ ವಿಸ್ಮಯ ಪ್ರಕೃತಿ
ಹೆಣ್ಣಾದರೆ ಹಣ್ಣೆ ಜಾಗೃತಿ…!

ಬಾಳೇ ದಿಂಡು
ಅಂತರಂಗ ತಂಡು
ಜತನದಿ ಒಳಗಿಟ್ಟ ಕಡು
ಸ್ವಾಸ್ತ್ಯದ ಗುಟ್ಟಿನ ಕರಡು
ಬಲ್ಲಿದರಷ್ಟೇ ಬಲ್ಲ ತೆಳುತುಂಡು..!

ಬಿಚ್ಚೆ ಕಾಂಡ
ಪದರ ದಪ್ಪ ಗಿಡ
ಹೊಕ್ಕಂತೆ ಒಳ ನಾಡ
ತೆಳುವಾಗೊ ಬಾಳೇಪತ್ರ ಕೊಡ
ಅಪರೂಪದ ತರಕಾರಿ ತಿಂದುಬಿಡ..!

————————————————————
ನಾಗೇಶ ಮೈಸೂರು
————————————————————

ಬಾಳೇ = Banana Fruit , ಲೈಫ್

00496. ಬಾಳೆ ಹೊಂಬಾಳೆ


00496. ಬಾಳೆ ಹೊಂಬಾಳೆ
________________________

  

(Picture source : kannada wikipedia – https://kn.m.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:Luxor,_Banana_Island,_Banana_Tree,_Egypt,_Oct_2004.jpg)

ಬಾಳು ಬಾಳೆಯ ಗಿಡದ ಹಾಗೆ – ನೆಟ್ಟ ನೇರವೂ ಹೌದು, ಹಗುರವೂ ಹೌದು, ಕತ್ತರಿಸಲು ಸುಲಭವೂ ಹೌದು, ಸಿಹಿಯೂ ಹೌದು, ಅಳಿಸಲಾಗದ ಕಲೆಯೂ ಹೌದು, ಉಣಿಸುವ ಬಾಳೆಲೆಯೂ ಹೌದು, ಆ ಎಲೆಯಷ್ಟೆ ನವಿರಾದ ಜತನವೂ ಹೌದು, ಜಠರದ ಕಲ್ಲು ಕರಗಿಸುವ ಸ್ಪರ್ಶಮಣಿಯೂ ಹೌದು. ಈ ಬಾಳಿನ ಹೊಂಬಾಳೆಯನ್ನು ಕಾಯಿಂದ ಮಾಗಿಸಿ ಹಣ್ಣಾಗಿಸುವ ಬದುಕಿನ ಚಿತ್ರ ಸೂಚಿ – ಈ ಕವನ. ಬಾಳೆ ಪ್ರಬುದ್ದತೆಯಲ್ಲಿ ಮಾಗಿ ಹಣ್ಣಾಗಬೇಕೆಂಬ ಆಶಯವೂ ಇಲ್ಲಿಯದು.

ಬಾಳೇ ಎಳೆ
ಎಳಸು ಬಾಳೆಲೆ
ತೆಳುವಾದ ಹಾಳೆ
ಜತನ ಕಾದರೆ ಬಾಲೆ
ಎಳೆಳೆಯಾಗಿ ತೆರೆಯುವಳೆ ||

ಎಳೆತನ ಕಾಯ
ಜಾರಿಸುವಪಾಯ
ಗಾಳಿಗ್ಹರಿವ ಸಮಯ
ಕಾಯುತ್ತಲೆ ಸರಿ ಪ್ರಾಯ
ಸುತ್ತಿ ಮುಚ್ಚಿಡಲು ಉಪಾಯ ||

ಎಲೆಯ ಸಾರ
ದೋಣಿಯಾಕಾರ
ಸಿಗಿದು ಬೆನ್ನ್ಮೂಳೆ ತರ
ಕತ್ತರಿಸಿ ಮೂರಾಗುವ ಪೂರ
ಎಲೆಯಿಡೆ ಮೂರಾಳಿಗೆ ಆಹಾರ ||

ಬಾಳೇ ಗಿಡ
ನಿಂತಾಗ ನಡ
ಕಲಿಯುತ ಕನ್ನಡ
ಸೆಟೆದು ನಡೆವ ಜಡ
ಕಲಿತೆ ಬೆಳೆ ಬಾಳ ನಿಗೂಢ ||

ಗಿಡವಾಗಿ ಬಗ್ಗೆ
ಎಳೆ ಕಂದು ಕುಗ್ಗೆ
ಅಡಿಪಾಯದ ಮೊಗ್ಗೆ
ಮೈ ಮರೆತು ನುಗ್ಗಿ ನಗ್ಗೆ
ಜೀವಮಾನ ನೋವಿನ ಬುಗ್ಗೆ ||

——————————————————————-
ನಾಗೇಶ ಮೈಸೂರು
——————————————————————-
ಬಾಳೇ = banana (fruit), Life