02106. ಬಿಡಿ, ಮೌನದ ವಿಷಯ ನಮಗ್ಯಾಕೆ ?


02106. ಬಿಡಿ, ಮೌನದ ವಿಷಯ ನಮಗ್ಯಾಕೆ ?
_____________________________________


ಯಾರಿಗಿಲ್ಲ ಇಷ್ಟ ಮೌನ ?
ಮೌನವೇ ಮಾತಾಗುವ ಧ್ಯಾನ
ಮೌನದಿಂದ ಗೆದ್ದರು ಜಗ
ಮೌನಕದಕೆ ನೆಚ್ಚಿನ ಜಾಗ

ಮೌನಕ್ಕಿಟ್ಟ ಹೆಸರು ಗೊತ್ತಾ ?
ಮೌನವೆಂದರು ದಡ್ಡರು
ಮೌನವೇ ಹುಡುಕಾಡಿದೆ
ಮಾತಾಡದೆ ಬಾಯಿಗೆ ಹಾಕಿ ಬೀಗ

ಮೌನದ ಗಣಿತ ಗೊತ್ತಾ ?
ಮೌನಕೆ ಮೌನ ಕೂಡೆ ಮೌನ
ಮೌನದಿಂದ ಮೌನ ಕಳೆದರು ಮೌನ
ಗುಣಿಸೂ ಭಾಗಿಸು ಮೌನಾ ಅನಂತ !


ಮೌನದ ಬೆಲೆ ಅಗಣಿತ
ಮಾತಿಗಷ್ಟೇ ಬೆಲೆ ನಿಯಮಿತ
ಮಾತಾಡಿ ಮುಗ್ಗುರಿಸುವ ಜನ
ಮಾತಾಡದೆ ಗೆದ್ದರೋ ಮನಸನ್ನ

ಕೂತಲ್ಲವಳೊಬ್ಬಳು ಮೌನವ್ರತ
ಹುಟ್ಟು ಹಾಕುತ ಮುಗುಳ್ನಗೆ
ತೇಲಿಸಿದ್ದಾಳೆ ಕವಿತೆಯ ನೌಕೆ
ಬಿಡಿ, ಮೌನದ ವಿಷಯ ನಮಗ್ಯಾಕೆ ?


– ನಾಗೇಶ ಮೈಸೂರು
೦೮.೦೭.೨೦೧೭
(Picture source : Creative Commons / I nternet / social media)

01120. ಬಿಡಿ – ಹತ್ತು – ನೂರು- ಸಾವಿರ


01120. ಬಿಡಿ – ಹತ್ತು – ನೂರು- ಸಾವಿರ

ಬಿಡಿ ಮೊಗ್ಗು ಆಯ್ದಾಯ್ದು ಪೋಣಿಸಿಟ್ಟ ಹೂ ದಂಡೆ
ಗಮಗಮಿಸಿ ಹತ್ತುತಿದೆ ಅವಳ ಕೇಶರಾಶಿಯ ಹಿಂದೆ
ಮೇಲಿದೆ ವಿಶಾಲ ಬಾನೂರು ಮಿಂಚಿದೆ ಜಡೆ ನಾಗರ
ಎಣಿಕೆಗೆ ಸಿಕ್ಕದ್ದವಳ ಸಾವಿರದ ನಗೆ ಮಿಂಚು ಮಾತ್ರ !

– ನಾಗೇಶ ಮೈಸೂರು

೦೩.೦೨.೨೦೧೭

01007.ನಾನ್ಯಾವತ್ತೂ ಕದ್ದಿಲ್ಲ ಬಿಡಿ


01007.ನಾನ್ಯಾವತ್ತೂ ಕದ್ದಿಲ್ಲ ಬಿಡಿ
___________________________

ಕದಿಯೋರಿಗೆ ಬಲಿಯಾಗಿದ್ದುಂಟೇ ಸಿವಾಯಿ
ನಾನ್ಯಾವತ್ತೂ ಕದ್ದಿಲ್ಲ ಬಿಡಿ
ಹಾಗಂತೆನಲ್ಲ ಸಾಚಾ ಕವನ ;
ಕದಿಯೋದು ಕುಲ ಕಸುಬು, ಮನಸಿಗೆ

ಕದಿಯೋದಂದ್ರೆ ಅಂತಿಂಥ ಮಾಲಲ್ಲ
ಬಿಕರಿ ಅಂಗಡಿಲಿ ಸಿಕ್ಕೋದಲ್ಲ
ಬೇಕಂದ್ರು ಕಣ್ಣಿಗೆ ಕಾಣೋದಿಲ್ಲ
ಎಷ್ಟೊಂದು ಕದ್ರು ಕರ್ಗೊದೆ ಇಲ್ಲ ದಾಸ್ತಾನು

ಪ್ರೀತಿ ಹೆಸರಲ್ ಕದೀತಾರೆ ಮಂದಿ
ನೀತಿ ಹೆಸರಲ್ ಮುಸುಗ್ಹಾಕ್ತಾರೆ ಕೌದಿ
ಮುನಿಸೊ ಸೊಗಸೊ ಹುಚ್ಚಾಟದ ಕುದುರೆ
ಕದಿ ಆವೇಶ ಬಂತಂದ್ರೆ ಕುಡೀದಿದ್ರೂ ಮದಿರೆ

ಬರ್ತಾಳೆ ಸ್ಫೂರ್ತಿ ಜತೆ ಬಾಳಿನ ಗೆಳತಿ
ತರ್ತಾಳೆ ಸುದ್ಧಿ ಮುರೂರಿನ ಸಂಗ್ತಿ ಕಡ
ಕೆರೆ ದಂಡೇಲ್ ಕೂತು ಜಾಲ್ಸಿದ್ದು ಒಗದಿದ್ದು
ಬಟ್ಟೆಲ್ ಹಿಡ್ದಾ ಮೀನಾ ಸೋಸಿ ಕದ್ದೋಡಿದ್ದು..

ಇನ್ನೇನಿದೆ, ಕದಿಯೋ ಪುಕ್ಸಟ್ಟೆ ಮಾಲಿಲ್ಲಿ ?
ಭಾವ್ನೆ – ಬವಣೆ ಚೆಲ್ಲಾಡ್ಕೊಂಡ್ ಬಿದ್ದೈತಿಲ್ಲಿ
ಕೇಳೋರಿಲ್ಲ ಹೇಳಿರಿಲ್ಲ ಕದಿಯೋದೆ ಹಾಕಿ ಕನ್ನ
ಕದ್ರುನು ಹಿಡಿಯೋರಿಲ್ಲ, ಓದ್ತಾರೆ ಬರ್ದಿದ್ ಕವನ !

– ನಾಗೇಶ ಮೈಸೂರು
14.11.2016

Avadhi published on 17.11.2016

http://www.facebook.com/sharer.php?u=http://avadhimag.com/2016/11/18/%e0%b2%a8%e0%b2%be%e0%b2%a8%e0%b3%8d%e0%b2%af%e0%b2%be%e0%b2%b5%e0%b2%a4%e0%b3%8d%e0%b2%a4%e0%b3%82-%e0%b2%95%e0%b2%a6%e0%b3%8d%e0%b2%a6%e0%b2%bf%e0%b2%b2%e0%b3%8d%e0%b2%b2-%e0%b2%ac%e0%b2%bf%e0%b2%a1/