01602. ಮಾತು ಬೆಳ್ಳಿ ಮೌನ ಬಂಗಾರ..


01602. ಮಾತು ಬೆಳ್ಳಿ ಮೌನ ಬಂಗಾರ..

_____________________________________

ನಿಜ, ಮಾತು ಬೆಳ್ಳಿ ಮೌನ ಬಂಗಾರ

ಮಾತಿನ ಮಲ್ಲಿಗ್ಹಾಕಲೆಂತು ನಿರ್ಬಂಧ ?

ಮಾತವಳಾ ಆಕರ್ಷಣೆ ಬಂಡವಾಳ

ಪ್ರಬುದ್ಧ ಮೌನಕಿಂತ ಹುಡುಗಾಟಿಕೆ ಸೊಗ ! ||

ಮಾತವಳರಳು ಹುರಿದಂತೆ ಚಟಪಟ

ಸುಳ್ಳಾಡಿದರೂ ಸತ್ಯದ ತಲೆಗೆ ಸುತ್ತಿಗೆ ಪೆಟ್ಟು

ಕೇಳುತಲೆ ಇರುವ ಅಪೇಕ್ಷೆ ಮನದಲಿ

ಸತ್ಯಾಮಿಥ್ಯದ ಗೊಡವೆ ಬೇಕ್ಯಾರಿಗೆ ಗಣನೆ? ||

ಮೌನವಾದರವಳು ನೀರವ ಮಸಣ

ಚಡಪಡಿಕೆ ನೀರಾಚೆ ಬಿದ್ದ ಮೀನಿನೊದ್ದಾಟ

ಮಾತಾಡಿರೆ ಸರಿ ಅಸಂಬದ್ಧವೂ ಹಿತ

ದಿಟ್ಟಿಸುತ ಮೋಹಕ ಪುಳಕಿತ ಕಳುವಾಗೆ ||

ಬೆಳ್ಳಿಯಾದರು ಸರಿ ಅಗ್ಗದ ವ್ಯಾಪಾರ

ಗುಲಗಂಜಿ ಬಂಗಾರಕು ತೆರಬೇಕು ದ್ರೋಣ

ಒಡವೆಯ ಗೊಡವೆ ಮೋಹವಿರದಿರಲು

ಯಾಕೆ ಗಾಳಿ ಗುದ್ದಾಟ? ವೈಭವದ ಮಾತಾಟ ||

ಮಾತಾಡದ ಗುಮ್ಮಗು ಮಾತ ಕಲಿಸಾಳು

ಮಾತುಮಾತಲಿ ಕವಿತೆಯಾಗಿ ಹೊಮ್ಮಿಯಾಳು

ಎಳಸು ಮಾತಲು ಸೆಳೆದು ಹೃದಯಕೆ ಲಗ್ಗೆ

ಮಗುವಿನಾ ಮನಸೆಂದು ಮೆಚ್ಚುವ ಮನ ಸೋಗೆ! ||

– ನಾಗೇಶ ಮೈಸೂರು

೧೪.೦೨.೨೦೧೮

(Nagesha Mn)

(Picture source internet / social media received via Madhu Smitha – thank you madam 🙏👍😊)

01190. ರೆಕ್ಕೆ- ಮ್ಲಾನ – ಕಳಂಕ – ಬೆಳ್ಳಿ


01190. ರೆಕ್ಕೆ- ಮ್ಲಾನ – ಕಳಂಕ – ಬೆಳ್ಳಿ

ರೆಕ್ಕೆ ಬಿಚ್ಚಿ ಹಾರು, ಮುಕ್ತಹಕ್ಕಿಯ ತೆರದೆ ಪ್ರಾಯದಲ್ಲಿ
ಯಾಕ್ಹೀಗೆ ಮ್ಲಾನವಾದನ ? ಬದಿಗಿಡು ಚಿಂತೆ ಸಹಜ
ಹತ್ತದಂತೆ ಕಳಂಕ, ನಿಭಾಯಿಸಬೇಕು ಯೌವನ ಬಯಕೆ
ಮುನ್ನೆಚ್ಚರಿಕೆಯಿದ್ದರೆ ಸಾಕು, ಬದುಕಿಗದೆ ಬೆಳ್ಳಿ ರೇಖೆ

– ನಾಗೇಶ ಮೈಸೂರು
೩೦.೦೩.೨೦೧೭
chouchoupadi