01720. ಚುನಾವಣೆ ಮಳೆ


01720. ಚುನಾವಣೆ ಮಳೆ

______________________

ಕಾವೇರಿದ ಚುನಾವಣೆಯ

ತಣಿಸಬಹುದೆ ಮಳೆರಾಣಿ ?

ಹರ್ಷಕೊ ಖೇದಕೊ ಸುರಿದು

ಮೀರದೆ ನೀತಿಯ ಸರಹದ್ದು ||

ಮಳೆಯಾಗಬಾರದು ದಿನವೆಲ್ಲ

ಮತದಾನಕು ಬಿಡದಾ ಹಾಗೆ

ಬಿಡುವಿತ್ತ ಹೊತ್ತಲಿ ಚಲಾವಣೆ

ನಿನ್ನೆ ಚಲಾಯಿಸಿಕೊ ತರುವಾಯ ||

ಯಾರಿಗಾದರು ಹಾಕಲಿ ಓಟು

ಆಯ್ದು ಸರಿಯಾದ ಹುರಿಯಾಳ

ನೋಯುವ ಸಂತಾಪ ಬೇಡ

ಜರಡಿಯಾಡೀಗಲೆ ಎಳ್ಳುಜೊಳ್ಳು ||

ಮುಗಿದೆಲ್ಲ ಭಾಷಣ ಕೂಗಾಟ ಸ್ತಬ್ಧ

ವಿರಮಿಸು ಚಿಂತನೆಯಲಿ ತೆರೆದು

ಆಮಿಷಗಳಿಲ್ಲದ ಆಯ್ಕೆಯ ಹಾದಿ

ನಾಂದಿ ಸ್ವಚ್ಚತೆ ಅಭಿಯಾನ ಸಿದ್ಧ ||

ಚುನಾವಣೆ ನಾವೆ ನಡೆಸಿ ನಾವ್ನಾವೆ

ಚುನಾಯಿಸೋಣ ಭವಿತಕೆ ಮೇನೆ

ಮಳೆಯಾದರು ತೊಳೆಯಲಿ ಕಲ್ಮಷ

ಬಿಸಿಲ ಬೆವರಾದರು ಹರಿದು ಸಾರ್ಥಕ ||

– ನಾಗೇಶ ಮೈಸೂರು

೧೦.೦೫.೨೦೧೮

(Picture source: Wikipedia)

01690. ಮಾತಾಡಿತು ಮಳೆ


01690. ಮಾತಾಡಿತು ಮಳೆ

___________________________

ಸದ್ದಿಲ್ಲದೆ ಮಳೆ ಮಾತಾಡುತಿದೆ

ಕಿಟಕಿಯಾಚೆ ನಭದಲ್ಲಿ ಅವಿರತ

ಸಂದೇಶವೇನೊ, ಯಾರ ಪರವೊ

ತಂದೆರಚುತಿದೆ ಹನಿಹನಿ ಕಾಗುಣಿತ ||

ಸುತ್ತೆಲ್ಲ ಗಾಢ ನಿಗೂಢ ನೀರವ

ಮಬ್ಬು ಕವಿದ ಪರಿ ಮಂಕು ಆವರಣ

ನುಸುಳುತಲ್ಲಿಲ್ಲಿ ನಸು ಬೆಳಕ ಕಿಂಡಿ

ಹಗಲೆ ಇರುಳಾಗೊ ಮೋಹ ಮಾಯೆ ||

ಆಲಿಸುತಿಹರೆಲ್ಲ ಧಾರೆಗೇನೊ ಆವೇಗ

ಚಡಪಡಿಕೆ ಮನದಲಿ, ಮಳೆಯದೆ ತರ

ನಿಂತುಹೋಗಿಬಿಡುವ ಭೀತಿ ಧಾವಂತ

ಅವಸರದಲೇನು ತೋಚದಾ ಮೊರೆತ ! ||

ಏನೋ ಘಳಿಗೆ ಬಿರಿದ ಗಗನ ತನ್ನೊಡಲು

ಬಾನ ಕಡಲಲಿ ಏನೇನೊ, ತುದಿಮೊದಲು

ಮನದೇನೊ ಉತ್ಕರ್ಷ ಹೇಳುತಿದೆ ಅಸ್ಪಷ್ಟ

ಮಾಡಲೇನೊ ಇದ್ದೂ, ಅರಿವಿರದೆ ಚಂಚಲಿತ ||

ಯಾಕೀ ಉದ್ಘೋಷ, ಮಳೆಯಾಗೊ ಹೊತ್ತಲಿ?

ಮನಸೇಕೊ ತಡಬಡಿಸಿ ಹುಡುಕುವ ಗೋಜಲು..

ಏನಿಹುದಿ ಬಂಧ ಸಂಬಂಧ ಭಾವನೆ ಬೆಸುಗೆ ?

ಬದಿಗಿತ್ತು ಕೂರೆ ಚಂದ ಸುರಿವ ಮಳೆ ನೋಡುತ ! ||

– ನಾಗೇಶ ಮೈಸೂರು

೧೫.೦೪.೨೦೧೮

(Picture source : Internet / social media)

01652. ಘಜಲ್ (ಮಳೆ ಮೊದಲ ಮಳೆ)


01652. ಘಜಲ್ (ಮಳೆ ಮೊದಲ ಮಳೆ)

_______________________________

ಹನಿ ಹನಿ ಮುತ್ತು ಉದುರಿಸಿತ್ತಂತೆ ಬಾನು

ಮಳೆ ಮೊದಲ ಮಳೆ

ಉದುರಿದೊಂದೊಂದರಲು ಘಜಲಿನ ಜೇನು

ಮಳೆ ಮೊದಲ ಮಳೆ ||

ಋತುಮತಿ ಪ್ರಕೃತಿ ಕಾದ ಹೆಂಚಾಗಲು

ನೆನೆದ ವಸ್ತ್ರ ಹಿಡಿದು ನೆನೆಸೆ ಬಂತೇನು

ಮಳೆ ಮೊದಲ ಮಳೆ ||

ಫಸಲು ಟಿಸಿಲಾಗೆ ಸಸಿ ಗಿಡ ಮರ

ಗೊಬ್ಬರದುಣಿಸಿಡೆ ಖುದ್ದಾಗಿ ಚೆಲ್ಲಿದನು

ಮಳೆ ಮೊದಲ ಮಳೆ ||

ಮರೆ ರವಿ ಚಂದ್ರ ತಾರೆ ಮೇಘ ಬಿತ್ತರ

ಹರವಿ ಭುವಿ ಪೂರ ಮೆತ್ತೆ ಮಿಂಚಿಸಿ ಬೆನ್ನು

ಮಳೆ ಮೊದಲ ಮಳೆ ||

ಗುಬ್ಬಿಗೂಡಲಿ ಬೆಚ್ಚಗೆ ಹೊದ್ದು ಮಲಗಿಸೆ

ಇನಿಯನನ್ನರಸಿ ಅಭಿಸಾರಿಕೆ ಏನು ?

ಮಳೆ ಮೊದಲ ಮಳೆ ||

– ನಾಗೇಶ ಮೈಸೂರು

(Picture source via internet :

Picture 1 – https://goo.gl/images/VK4DBh

Picture 2 – https://goo.gl/images/ZbgUxj )

01387. ಮಳೆ ಹನಿ ಸಾಲದ ಲೆಕ್ಕ


01387. ಮಳೆ ಹನಿ ಸಾಲದ ಲೆಕ್ಕ
______________________________


ಲೆಕ್ಕ ಹಾಕುತ ಕುಳಿತೆ
ಮಳೆ ಹನಿ ಮೊತ್ತ
ಗಗನವಿತ್ತ ಸಾಲ ಭುವಿಗೆ..
ಯುಗಯುಗಾಂತರ ಯಾರಿಟ್ಟಿಹರೊ ?
ಅಸಲು ಬಡ್ಡಿ ಚಕ್ರಬಡ್ಡಿಯೆ ಕರಾಳ.. ||

ತೀರಲಿಲ್ಲ ಅಸಲು ಸಹಜ
ಕಟ್ಟಲಿಲ್ಲ ಬಡ್ಡಿಗು ವನವಾಸ
ಬದುಕಬೇಕಲ್ಲ ಸಾಲ ನಿರಂತರ
ತುಂತುರಲ್ಲೆ ಬಾಕಿ ಏರುತ್ತಾ ದರ
ಈ ಲೇವಾದೇವಿ ಚುಕ್ತಾ ಮಾಡುವವರಾರು ? ||

ಎಲ್ಲಾ ಅವರವರ ಬದುಕಲಿ ವ್ಯಸ್ಥ
ಸ್ವಂತ ಸ್ವಸ್ಥಕೆ ಅಲ್ಲೆ ಮೊಗೆಯುತ್ತ
ಹನಿ ಸಾಲವೆಲ್ಲ ಸಿಕ್ಕೆಲ್ಲೆಡೆ ಚೆಲ್ಲಾಪಿಲ್ಲಿ
ತಿರುಗಿ ಕೊಡರಲ್ಲ ತುಂಬಿರೆ ಸರಿ ಪೆಟಾರಿ
ಏರಿ ಸಾಲದ ಮೊತ್ತ ಇಳೆ ಮೇಲೆ ಸವಾರಿ ||

ಕಾದ ಕೊಟ್ಟವ ಈಗಾದ ಕೆಟ್ಟವ
ಕೊಟ್ಟದ್ದನೆ ಸುರಿಸಿ ಮಾಡಿಹ ನಿರ್ಜೀವ
ಮೋಡದಾರ್ಭಟ ಮುಸುಕಿ ಧೂರ್ತ
ಅಸಲು ಬಡ್ಡಿ ಹನಿಯಲೆ ಮುಳುಗಿಸುತ
ಸೇಡಿಗಿಳಿದು ವಸೂಲಿ ಧ್ವಂಸ ಮಾಡುತ.. ||

– ನಾಗೇಶ ಮೈಸೂರು
(Nagesha Mn)
(picture source: from Readoo Kannada)

01381. ಮಳೆ – ಮ‘he’ಳೆ…


01381. ಮಳೆ – ಮ‘he’ಳೆ…
___________________________


ಅವನು – ಮಳೆಯ
ನಡುವೆ ಸಿಕ್ಕಿಬಿದ್ದವನು
ಹಿ he ಹಿ ಆಂಗ್ಲದವನು
ಮಳೆ ನಡುವೆ ಸೇರಿಕೊಂಡು
ಮ’ಹಿ’ಳೆಯಾಗಿಸಿದವನು ! ||

ಅವನು ಪುರುಷ
ಪ್ರಕೃತಿ ಮಿಲನ ಸಹಜ
ಬೇಕಿತ್ತೆ ಪ್ರಕೃತಿ ಮಳೆ ?
ಮಹಿಳೆಯಾಗಿ ರೂಪಾಂತರ –
ಮಳೆಯಂತೆ ಮಹಿಳೆ ! ||

ಮಳೆ ಮಹಿಳೆ ಒಂದೇ ತರ
ಅತ್ತಾಗ ಮೀರಿಸುವವರಾರಿಲ್ಲಿ?
ಇಬ್ಬರದೂ ಚಲನಶೀಲ ಪ್ರವೃತ್ತಿ
ನೀರೊ, ಮಾತೊ ಮುರಿವಾ ಶಕ್ತಿ !
ಪುರುಷಕೇಕೊ ಎರಡೂ ಆಸಕ್ತಿ.. ||

ಮಳೆ ಮಹಿಳೆ ಒಂದೇ ಮನೋಧರ್ಮ
ಮೋಡ ಮುಸುಕು ಗುಸುಗುಸು ಸದ್ದು
ಬಿಕ್ಕುವುದೊ ಇಕ್ಕುವುದೊ ನಕ್ಕ ಸದ್ದೊ
ಗೊತ್ತಾಗದು ಎಲ್ಲಾ ಮೂಡಿನ ಮಾತು.. ||

ಆದರೂ ಏಕೊ ಎರಡೂ ಹಿತಕರ ಸುಖ
ಜಡಚೇತನವೆಬ್ಬಿಸಿ ಪುಳಕಿಸೊ ಸೊಬಗು
ಕವಿಯಾಗಿಸುತ ಕುಣಿಸುವ ಮಳೆ ಮಹಿಳೆ
ಕಥೆಯಾಗಿ ಉಳಿದೇಬಿಡುವ ನೆನಪಿನ ಮೂಲೆ ! ||


– ನಾಗೇಶ ಮೈಸೂರು
(Nagesha Mn)
(Picture from social media via Madhu Smitha posts – thank you😍🙏👍)

02162. ಇಳೆ ಮಳೆ ಕಥೆ


02162. ಇಳೆ ಮಳೆ ಕಥೆ
________________________

ಮಳೆ ಮಾತಾಡಿತು
ಇಳೆಯ ಜತೆ ಸಮನೆ
ಲೆಕ್ಕಿಸಬೇಡವೆ ಇನಿತೂ ?
ಹಳ್ಳ ಕೊಳ್ಳ ಹೊಂಡದ ಕಥೆ !

ಇಳೆ ಮಳೆ ಹೆಣ್ಣೆರಡು
ಇಜ್ಜೋಡಿನ ಸಂಭಾಷಣೆ
ಎರಚಾಟಾ ಅರಚಾಟಾ ಆಟ
ಇರಬಹುದಪರೂಪದ ಭೇಟಿ !

ಕಾರುವವಳವಳು ಇಳೆಗೆ
ಮಳೆ ಹೀರುವವಳು ಕೆಳಗೆ
ಇವರಿಬ್ಬರ ತಾಳಮೇಳ ಜಿದ್ದಿಗೆ
ದೈನಂದಿನವಾಗದಿರಲಿ ಕೊರಗು !

ಕೊಟ್ಟುಕೊಳ್ಳುವರವರು
ಕೆಟ್ಟರೆ ತಪಿಸುವರು ಜನರು
ಹಾದಿ ಬೀದಿ ನಡಿಗೆ ತೇಲಾಡಿಸೆ
ಕೊಚ್ಚಿ ಹೋಗುವ ಸಹನೆ ದುಮ್ಮಾನ !

ನೀವಿಬ್ಬರು ಮಾತೆಯರು
ಭುವಿಯಾಗಸ ಬೆಸೆದ ಬಂಧ
ನಿಮ್ಮಲಿರೆ ಹೊಂದಾಣಿಕೆ ಸತತ
ಪಾಮರರ ಜಗದಲಿ ಬದುಕೆ ಚಂದ !

– ನಾಗೇಶ ಮೈಸೂರು
(Picture source : internet / social media)

02115. ಮಳೆ


02115. ಮಳೆ
____________


ಮಳೆಗೆ
ತಾನು ಮಳೆ ಅಂತ ಗೊತ್ತಾ?
ಇರಲಾರದು
ಯಾಕೆಂದರೆ ನನಗೆ
ನಾನು ನಾನೇ ಅಂತ ಗೊತ್ತಿಲ್ಲ !

ಮಳೆ
ಸ್ನಾನಕೆ ಹೊರಟಿತು
– ಭಾವದ ನೀರಲಿ.

ಮಳೆ
ಸುರಿದಾಗ ಅತ್ತು
ನಿಂತಾಗ ನಕ್ಕು
ಕಾಡುವ ಬಗೆ ಸೋಜಿಗ !

ಮಳೆಯಿರಲಿ ಬಿಡಲಿ
ಬದುಕಾದರೆ ತನ್ಮಯ
ಗೆಲ್ಲಬಹುದು
– ತನ್ನ ಮಾಯಾ.

ಮಳೆ
ಮಹಿಳೆ
ಮಹಾ+ಇಳೆ
ಮಳೆ ತೊಳೆ ಇಳೆ
ಮಳೆಯಂತೆ ಮಹಿಳೆ
– ನಿರಂತರ ವಿಸ್ಮಯ !

– ಮೈಸೂರು ನಾಗೇಶ
೧೨.೦೭.೨೦೧೭

(Picture source : internet / social media)

01199. ತುತ್ತು ಮಳೆ


01199. ತುತ್ತು ಮಳೆ
_____________________


ಮೋಡದವ್ವನಿಕ್ಕಿದ ಹನಿ ತುತ್ತು
ಮುತ್ತು ಮುತ್ತಾಗಿ ಚದುರಿ ಉದುರಿ
ಉಂಡುಂಡೆ ಕೈ ತುತ್ತಾಗಿ ಬಿತ್ತಾ
ಹಿಗ್ಗಿ ಹೀರುತ್ತಾ ಮಣ್ಣವ್ವ ಫಲವತ್ತ

ಯಾರಪ್ಪನದೊ ಅವ್ವನದೊ ಜಗ
ಯಾವಣುವಿಗೆ ಯಾವುದೊ ಬೀಗ
ಜಲದಾಮ್ಲ ಕರಗಿಸಿ ಸರಿ ಬೇಟ
ಹನಿಯುಕ್ಕಿಸಿ ಕಾರಂಜಿಯ ರಸದೂಟ

ಎಂತಪ್ಪ ರಭಸದ ಧಾರೆ ಮುಸಲ
ಸ್ಖಲನದಲೂ ಇರುವುದೇ ಆಕ್ರೋಶ?
ತುಂತುರ ಹೊತ್ತಲಿ ಶಾಂತಿ ಸಂಧಾನ
ಕಿವಿ ಕಚ್ಚೆ ಮಂಥರೆ ಹಠ ಹಿಡಿದ ಕೈಕೆಯೇ

ಏನಾದರಾಗಲಿ ಕೊನೆಗಿಷ್ಟು ಜೀವಜಲ
ಮಣ್ಣುಪಾಲಾಗಿ ಪೊರೆಯುವ ಫಸಲು
ಯಾವ ಕಾಲದ ಒಡಂಬಡಿಕೆ ನಿಸರ್ಗಕೆ
ಬಿಡದೆ ಪಾಲಿಸಿವೆ ಎರಡೂ ಕಡೆ ಬಿಡದೆ

ಪ್ರಕೋಪ ವಿಕೋಪ ಹಿನ್ನಲೆಯ ಸ್ವರೂಪ
ಬಿಟ್ಟೆಲ್ಲ ನೋಡಿದರೆ ಮಣ್ಣ ವಾಸನೆ ಹಿತ
ಹನಿ ಜತೆಗೆ ಹುಟ್ಟಿ ಕವಿ ಕವಿತೆ ಕಾಮನೆ
ಮಿಲನದೋಕುಳಿ ಸ್ಪುರಿಸಿ ಸೃಷ್ಟಿಗೆ ನಾಂದಿ


– ನಾಗೇಶ ಮೈಸೂರು
೦೬.೦೪.೨೦೧೭

(Picture source : social media and self click)

00946. ಮನಸ ಮಳೆ..


00946. ಮನಸ ಮಳೆ..
________________________


ಮಳೆ ಬರುತಿದೆ ಮನಗಳ ಮಾತು
ಮನೆ ಮನೆಗಳ ಕಥೆ ಜತೆ ಸೋತು
ಹರಿದ ರಾಡಿ ಕಣ್ಣೀರೊ ಖುಷಿಗೊ
ಮೋಡದೊಳಗು ಏನೇನೋ ಮುಸುಕು ||

ಮಳೆಗೇಕೊ ರಾಯಭಾರಿ ಬಿನ್ನಾಣ
ತರುವುದೆಲ್ಲ ಹೆಕ್ಕಿ ಹನಿಯ ಕಣಕಣ
ದನಿಯ ಏಕತಾನತೆ ಹಿಮ್ಮೇಳನ
ತಂದೊಳಗಿನೆಲ್ಲ ತಲ್ಲಣ ಸಮ್ಮೇಳನ ||

ಮಸುಕು ಮಸುಕು ನೆನಪು ಮಂಕು
ಮೋಡಗಟ್ಟಿದ ಮಬ್ಬಿನ ಸೆರಗು
ಗಾಳಿಗಾಡುತ ಅಲೆ ಅಲೆ ಚಳಿಯ
ತರುವ ತರಂಗ ಅಂತರಂಗದ ಎಳೆಯ ||

ಹೆಪ್ಪುಗಟ್ಟಿದೆಲ್ಲಾ ಕೊತಕೊತ
ಕುದಿಸುವ ಸೂತ್ರ ಮಳೆಗೆಲ್ಲಿತ್ತೊ ?
ತುಂತುಂಬಿ ಸೊಕ್ಕಿ ಉಕ್ಕುಕ್ಕಿ ಭಾವ
ಒಲೆ ಮೇಲಿಟ್ಟ ಅನ್ನದಂತೆ ಮೈದುಂಬಿ ||

ಮಳೆಗೂ ಮನದ ಮಾತಿಗೂ ಜೋಡಿ
ವಿಷಯವೆ ಇರದು ಬಿಡದು ಕಾಡಿ
ಕಂಗೆಡಿಸೊ ಹುಮ್ಮಸ್ಸು ಹರ್ಷೋಲ್ಲಾಸ
ನೆನಪುಗಳ ಜಾತ್ರೆ ಖಿನ್ನತೆಗೂ ದಾಸ್ಯ ||

– ನಾಗೇಶ ಮೈಸೂರು
20.10.2016
(Picture source Creative common)

00935. ಮಳೆ ಸದ್ದಾಗುತ್ತಿದೆ..


00935. ಮಳೆ ಸದ್ದಾಗುತ್ತಿದೆ..
___________________________


ಮಳೆ ಸದ್ದಾಗುತ್ತಿದೆ ಬೆಳಗಾಗೋ ಮೊದಲೆ
ಯಾಕೆ ನಿದಿರೆ ಕಳುವಾಗಿ ಹೋದಳೆ ?
ಅಪ್ಪಿ ತಪ್ಪಿ ಆದಂತೆ ನಿದ್ದೆಯೇ ಬರಲಿಲ್ಲವೆ ?
ಎಚ್ಚರ ತಪ್ಪಿದ ಪರಿ ಏನೀ ಸುರಿಮಳೆ !

ಸುತ್ತೆಲ್ಲ ಮೌನ ಅಂಧಕಾರದ ಗಹನವಿತ್ತು
ಸೀಳುತ್ತ ಬಿರುಶಾಖ ತಿರುಗುತಿತ್ತು ಫಂಖದ ಸದ್ದು
ಸದ್ದಿಗೆ ಸಡ್ಡು ಹೊಡೆದಂತೇನೊ ಮುಗಿಲ ಕ್ರೋಧ
ಸಿಡಿಲು ಗುಡುಗು ಮಳೆ ಹನಿ ಹನಿಯಾಗಿ ವಿಷಾದ !

ಭಾರದ ರೆಪ್ಪೆ ಚಳುವಳಿ ಮರಳೇ ನಿದಿರೆಗೆ
ಬಿಡದಲ್ಲ ಟಪಟಪ ಹನಿ ಸಂಭ್ರಮ ಇಳಿದು ಧರೆಗೆ
ಓಡಿಸುತ ಕಿಟಕಿಯ ತೆರೆಸಿ ಎರಚಲಿಗೊಡ್ಡಿ ಕೈ
ಅದುರುತ್ತ ಚಳಿ ಕೈ ಕಟ್ಟಿದ ಹೊತ್ತಲು ನೆನೆದಾ ಮೈ !

ಜೋರು ಜೋರಾದಂತೆ ತಲ್ಲಣ ಭಾವದ ಯಾತ್ರೆ
ಎದೆಯೊಳಗೇನೊ ತಿಲ್ಲಾನ ನೂರೆಂಟು ತರದ ಜಾತ್ರೆ
ಕೊನೆಗೆಲ್ಲ ಹರಿದು ಮಿಕ್ಕಿ ಬರಿ ಏಕತಾನತೆ ಉದ್ಭವಿಸೆ
ಯಾಕದರಲ್ಲೆ ಕಾತರ ಕೋಟಿ ಮನ ಬಯಸುತಿದೆ ದ್ರವಿಸೆ..

ಹೇ! ನೀರಾಂಜನೇಯ ನಿಲದಿರು ಮುಕ್ಕರಿದಾದರೂ ಸರಿ
ಇರಲಿ ಬಿಡಲಿ ಮಿಂಚು ಗುಡುಗು ಸಿಡಿಲದೇನು ಖಾತರಿ
ನೀ ಸುರಿಯುತಿರು ನಿರಂತರ ಆಶಾವಾದದ ಸದ್ದಾಗಿ ಸತತ
ನಿಲ್ಲದ ಪಯಣದೆ ಕೊನೆಯಾಗೆ ರಸ್ತೆ ಕಾಡಿದಂತದೆ ಸಂಕಟ..

– ನಾಗೇಶ ಮೈಸೂರು
14.10.2016
(Picture source internet)

00835. ಮಳೆಗೊಂದು ಪೆಗ್ಗಿನ ಜೊತೆ….


00835. ಮಳೆಗೊಂದು ಪೆಗ್ಗಿನ ಜೊತೆ….
______________________________

(ಚಿತ್ರ : ಫೇಸ್ಬುಕ್ಕಿನಿಂದ ಆಯ್ದುಕೊಂಡಿದ್ದು )

ಜಿಟಿಪಿಟಿ ಪಿಟಿಪಿಟಿ ಮಳೆ ತಾನೆ
ಬಿಡದೆ ಸುರಿಯುತ್ತಿದೆ ಸಮನೆ
ದಿಗ್ಗನೆದ್ದ ಮಣ್ಣ್ವಾಸನೆ ಪುನುಗು
ತುಟಿ ಗುನುಗು, ಕೈಯಲಿ ಪೆಗ್ಗು.. ||

ಹಳ್ಳ ಕೊಳ್ಳ ಕೊಚ್ಚೆ ಕೆಸರು ಗುಂಡಿ
ಅದೋ ಹಾದಿ ಬೀದಿಗಳೆಲ್ಲ ರಣಚಂಡಿ !
ಸಂತೆಗೆ ನೇಯ್ದ ಮೊಳದಂತೆ ಹೊಳೆ
ಹರಿಸೆ ಮನೆ ಮುಂದೆ, ಪೆಗ್ಗಿಗೆ ಚಾಚೊ ತೋಳೆ..! ||

ಅಲ್ಲೆಲ್ಲೋ ಬೆಪ್ಪು ಟ್ರಾಫಿಕ್ಕು ದೋಣಿ ತೆಪ್ಪ
ಮಾಡಿದ್ದೆಲ್ಲ ಮಾಡಿ ಹುಡುಕೋದೆಲ್ಲಿ ತಪ್ಪ ?
ನೀನಿದ್ದಿ ತಾನೆ ಎತ್ತರ ? ಕುಂತ್ಯಾಕೆ ಗುಗ್ಗು ?
ಹಿಗ್ಗಲಿ ಕುಗ್ಗಲಿ ಹಿಡಿಯದೆ ಕೈಗೊಂದು ಪೆಗ್ಗು ! ||

ಹಾಕು ಗಾನ ಗಾಯನ ಬಾಜಾ ಭಜಂತ್ರಿ
ಮಳೇಲಿ ತಾನೆ ಗೋಷ್ಠಿ ? ಕಾಡ್ತಿಲ್ವಾ ಸಾವಿತ್ರಿ ?
ನೆಂಚಿಕೊ ಹಂಚಿಕೊ ಬೀಜ ನೆನಪಿಂದೆ ಬುತ್ತಿ..
ಮೈ ಮರೆಸಳಿಸೋ ನಗಿಸೋ ಪೆಗ್ಗಿನದದ್ಭುತ ಶಕ್ತಿ ! ||

ಗಜಲ್ ಘಜಲ್ ಪಜಲ್ಲು ಗುಲ್ಲೋಗುಲ್ಲು ಈ ದಿಲ್ಲು
ಯಾವನೊ ಯಾವಳೊ ಯಾಕೊ ಎಲ್ಲಾ ತಾಜುಮಹಲ್ಲು…
ಗುಡುಗುಡಿ ಬುಡುಬುಡಿಕೆ ಮಾತಾಗೆ ಸುಗ್ಗಿ ಜಿನುಗು
ತಲೆ ತೂಗಿ ತೂಕಡಿಕೆ, ನಡುಗೊ ಕೈಲಿನ್ನೊಂದು ಪೆಗ್ಗು..! ||

– ನಾಗೇಶ ಮೈಸೂರು

00807. ರೋಷಾವೃತ ವರ್ಷಗಾನ…


00807. ರೋಷಾವೃತ ವರ್ಷಗಾನ…
________________________________

ಪ್ರಕೃತಿಯ ಅಗಾಧ ಶಕ್ತಿಯೆದುರು ನಾವೆಷ್ಟು ಕುಬ್ಜರೆಂದು ಅರಿವಾಗುವುದು ಅದರ ವಿನಾಶಕಾರಕ ಪರಿಣಾಮಗಳನ್ನು ಕಣ್ಣಾರೆ ನೋಡಿಯೊ, ಕಿವಿಯಾರೆ ಕೇಳಿಯೊ ಅನುಭವಿಸಿದಾಗಲಷ್ಟೆ. ಅಂತಹ ಸಹಜ ಮತ್ತು ಸಾಧಾರಣಕಾರಕಗಳಲ್ಲಿ ಒಂದಾದ ಮಳೆ ತನ್ನ ರೌದ್ರ ರೂಪ ತಾಳಿ ಅವತರಿಸಿದರೆ ಏನಾಗಬಹುದೆಂಬ ಚಿತ್ರಣ ‘ರೋಷಾವೃತ್ತ ವರ್ಷಗಾನ’ – ರೌದ್ರತೆಯಾಗಮನದೊಂದಿಗೆ, ವಿನಾಶದುಗಮದ ಕಿಡಿಯನ್ನು ಹೊತ್ತು ತರುವ ಇದರ ಆರ್ಭಟದ ವರ್ಣಣೆ, ಆಟಾಟೋಪ ಇಲ್ಲಿನ ಮೊದಲ ಭಾಗದ ಭಾವ (ರೌದ್ರಾಗಮ ವಿನಾಶಾದುಗಮ – ಈಗಾಗಲೇ ಪ್ರಕಟಿಸಿದ ಮತ್ತೊಂದು ಪದ್ಯ)

ಎಲ್ಲಕ್ಕೂ ಅಂತ್ಯವೆಂಬುದೊಂದಿರುವಂತೆ, ಈ ರೌದ್ರಾಕಾರದ ಮಳೆಗೂ ಉಪಸಂಹಾರದ ಹೊತ್ತು ಬಂದಾಗ ಆರ್ಭಟವೆಲ್ಲಾ ಕರಗಿ, ಶಾಂತತೆಯ ತಂಗಾಳಿ ಬೀಸಲಾರಂಭಿಸಿದರೂ, ರೌದ್ರಾವತಾರದಲ್ಲಿ ಕೆಡಿಸಿಟ್ಟ ವಿನಾಶದ ಪರಿಮಾಣ ಮತ್ತು ಪರಿಣಾಮ ಎದ್ದು ಕಾಣಲಾರಂಭಿಸುತ್ತದೆ. ಅಳಿದುಳಿದವುಗಳ ಪರಿಗಣನೆ, ಅವಲೋಕನ, ಸ್ವಾಂತನ, ಸಮಾರೋಪಣ ಪ್ರಕ್ರಿಯೆಗಳಿಗೆ ಚಾಲನೆ ಕೊಡುವ ಬಗೆ ಎರಡನೆ ಭಾಗದ ಮೂಲ ಆಶಯ (ಉಪ ಸಂಹಾರ).


ಉಪ ಸಂಹಾರ (ರೋಷಾವೃತ ವರ್ಷಗಾನ – 02)
________________________________________

ಭದ್ರ ಸುಭದ್ರಗಿದ್ರ ನಿದ್ರಾವೃತ ಕಂದ ರುದ್ರ
ಅಸುವಳಿದಂತೆದ್ದು ರೋಧಿಸಿ ಗುದ್ದು ದರಿದ್ರ
ಛಿದ್ಛಿದರ ಚದರ ದುರ್ಬರ ದನಿ ಮೇಲ್ಚಾವಣಿ
ಎಗರೆಗರಿಸಿ ಹಾರಿಸಿ ಧೂಳಿಸಿ ಬೀಳಿಸಿ ಮಣಿ ||

ಭೋಗ ಭೋಗಿನಿಯೋಗ ಸಹಭಾಗಿನಿ ಸಮೆ
ಸಂಭೋಗದ ಸುರತ ನಿರತದಲೆಗೆ ಭೂರಮೆ
ಭದ್ರಾಲಿಂಗನ ಮೇಘಾಮೋಘ ಸರ್ಪಯಾಗ
ಇಂದ್ರಚಾಪಾವೃತ ವರ್ಣಜಾಲಾ ನಿಯೋಗ ||

ರತಿ ಮನ್ಮಥರಾವೇಶಾಂಗ ಸುಖಾಗಮ ದಮನ
ಮಾಡಲ್ಹವಣಿಸಿದ ಸುರೆಂದ್ರನತ್ತಿಸಿದ ಗಮನ
ಆಗ್ನಿ ಕುಂಡಕ್ಸುರಿದರಿಸಿದ ತರ ತರ ಜಲಸ್ನಾನ
ಕಾವ ಗೆದ್ದನೆ ಸೋತು ಸರಿದನೆ ವರ್ಷದಜ್ಞಾನ ||

ವರ್ಷ ಋತು ಸತು ಸಮದ್ರೂಪಿಸಿನಿತೊಳಿತು
ಧ್ವಂಸಕಾರಿಸದಲೆ ನಿರ್ವಂಶದಾಶಯ ಹೂತು
ತಂಗಾಳಿಯಲೆಯಲೆಯಾಗಿಳೆ ಸರಿ ಸಮಿತ್ತು
ಬರ್ಬರದಗರವಳಿಸಿ ನೆನೆಸಿತ ಕರಗಿ ಹೊತ್ತು ||

——————————————————————
ನಾಗೇಶ ಮೈಸೂರು
——————————————————————

00785. ಹನಿ ಹಾರಕದೆಲ್ಲಿಯ ದಾರ ?


00785. ಹನಿ ಹಾರಕದೆಲ್ಲಿಯ ದಾರ ?
____________________________

ಮಳೆಗೆ ಮಳೆಯೇ ಸ್ಪೂರ್ತಿ..😊


ಮಳೆಹನಿ ಪೋಣಿಸುತಿದೆ ಹಾರ
ಕಾಣಿಸದೇಕೊ ಜೋಡಿಸೊ ದಾರ
ಹನಿಹನಿ ತುಂತುರು ಕಳಚಿ ಜಾರಿ
ಬಿಸಿಲ ಮೇಲೇರಿ ಕುದುರೆ ಸವಾರಿ..

ಪ್ರತಿಹನಿ ಪ್ರೀತಿಯ ಸಾಹಿತ್ಯ ದನಿ
ಭೋರ್ಗರೆವ ಅಬ್ಬರದಲು ಉರವಣಿ
ನೋಡುತಲದೆ ಪದೆ ವಿಸ್ಮಿತ ಸಂದಣಿ
ಮೂಕ ಭಾವ ಮಾತಾಗಿಸಿ ಲಾವಣಿ..

ಮೋಡದ ನಾಡಲಿ ಅತ್ತವರಾರೊ ?
ಇಳೆ ಸಾಂಗತ್ಯಕೆ ಪರಿತಪಿಸಿದರೊ ?
ಭಾನು ಭುವಿಯ ನಡುವಿನ ಸೇತುವೆ
ಜಲರಾಶಿ ಕಟ್ಟಿದ ಅದ್ಭುತ ಪ್ರಸಂಗವೆ !

ಅಭಿಸಾರಿಕೆ ಯಾರೊ ಅಲ್ಲಿಂದಿಳಿದು
ಹನಿ ಮೇಲೆ ಹೆಜ್ಜೆ ಇಟ್ಟು ಬಂದ ಸದ್ದು
ಮಾಡುತ ಗುಡುಗು ಸಿಡಿಲಾಗಿ ಮಿಂಚು
ದಾರಿ ತಪ್ಪದಂತೆ ದೀಪ ಹಚ್ಚೋ ಸಂಚು !

ಬಿಕ್ಕಿದರೆ ಮುಗಿಲು ಯಾರೊ ಅತ್ತಂತೆ
ಎದೆಯೊಳಗದೇನೊ ಭಾವಗಳ ಸಂತೆ
ತಳಮಳ ತುಡಿತ ನೆನದವಳ ಸ್ವಗತ
ಪುಳಕದ ಹಾರ ತನ್ನಲೆ ತಾನೇ ನಗುತ..

– ನಾಗೇಶ ಮೈಸೂರು

(Picture source : http://www.123rf.com/stock-photo/raindrops.html)

00784. ಆಹಾ! ಏನೀ ಮಳೆ !!


00784. ಆಹಾ! ಏನೀ ಮಳೆ !!
___________________________


ಆಹಾ! ಏನೀ ಮಳೆ !!
ಸುರಿದಿದೆ ತಾ ಒಕ್ಕೊರಲಲಿ
ತನ್ನನೆ ಕಳಚಿಟ್ಟೆಲ್ಲೊ ಪರವಶ,
ತನ್ಮಯ ಪರಕಾಯದಲಿ
ತುಂತುರು ಕಳೆದು ಮುಸಲ,
ನಿಗೂಢ ಗಾಢ ಬಸುರಿ ಮೋಡ
ಪ್ರಸವಿಸುತಿದೆ ದಟ್ಟ ತೆರೆಯ
ನೆರಳಾಗಿ ಹೊದ್ದು ಸುರಿಮಳೆಯ..

ಸುತ್ತಲ ಕಾನನ ಗಮನ
ಹಚ್ಚ ಹಸಿರ ಪಚ್ಚೆ ತೋರಣ
ಜಳಕಿಸುತಿದೆ ಸಂಭ್ರಮದಲಿ
ಕೊಡವುತ ಹನಿ ತೊಟ್ಟು ತುದಿಯಲ್ಲಿ
ಸೂರೊಂದರಡಿ ಕುಳಿತ ನಡುಕ
ನಿನ್ನಾವರಿಸಿ ತಬ್ಬಿ ಪುಳಕದಲಿ
ಕಂಪಿಸಿದೆ ತನು ತುಟಿಯದುರಿಸಿ
ಕಾವೇರಿದಂತೆ ಕಾಡಿಗೂ ಬೆಂಕಿ..

ಮಳೆಗಾಳಿಚಳಿಗೆದುರಾಡದೆ
ಗೊರಗುಟ್ಟಿ ಸ್ತಬ್ಧ ಹಚ್ಚಿಟ್ಟ ಬೆಂಕಿ
ಬೂದಿ ಮುಚ್ಚಿಟ್ಟ ಕೆಂಡ ಬೆಚ್ಚನೆ ನೆನಪು
ಹಚ್ಚಿತೊಳಗೇನೊ ಕುಲುಮೆ
ಕಟ್ಟೆಯ್ಹೊಡೆಯದಿದ್ದೀತೆ ಸಹನೆ ?
ನಡುವಿನ ಗಾಳಿ ವಿರಳವಾಗಿ ಶೂನ್ಯ
ಬೆಚ್ಚಿಗಿನ ಜೀವದ ಕಾವಿಗಿಂತೇನು ಹಿರಿದು ?
ಎಂದಪ್ಪಿದವೆರಡು ಒಕ್ಕೊರಲ ಹಿತದಪ್ಪುಗೆ..

– ನಾಗೇಶ ಮೈಸೂರು

(Picture source: http://www.friendlymela.com/showthread.php/51891-Most-Beautiful-Rainforest-Wallpapers/page2)

ಮಳೆಯಾಗವ್ಳೆ ಚೌಡಿ..


ಮಳೆಯ ಬಗ್ಗೆ ೨೦೧೩ ರಲ್ಲಿ ಬರೆದಿದ್ದ ಒಂದು ಜೋಡಿ ಪದ್ಯ ತುಸು ಗ್ರಾಮ್ಯ ಶೈಲಿಯಲ್ಲಿ..

ಮಳೆಯಾಗವ್ಳೆ ಚೌಡಿ..
______________________


ಮಳೆ ಭಾವ ಪ್ರೇರೇಪಕವಾದಷ್ಟೆ ಸಹಜವಾಗಿ, ಕರಾಳ ವಿಶ್ವರೂಪ ತೋರುವ ವಿಧ್ವಂಸಕ ಶಕ್ತಿಯೂ ಹೌದು. ಸಲಿಲ ಮಳೆಧಾರೆ ಮಧುರ ಭಾವನೆ ಯಾತನೆಗಳನ್ನು ಬಡಿದೆಬ್ಬಿಸುವಷ್ಟೆ ಸಹಜವಾಗಿ, ಮುಸಲಧಾರೆಯ ಆರ್ಭಟ ರೊಚ್ಚಿನಿಂದ ಕೊಚ್ಚಿ, ಸಕಲವನ್ನು ವಿನಾಶದತ್ತ ಒಯ್ದು ನೆಲಸಮಗೊಳಿಸುವ ಬಗೆಯೂ ಅಷ್ಟೆ ಸಹಜ. ಒಂದು ರೀತಿ ಈ ಜಗದ ಸೃಷ್ಟಿ-ಸ್ಥಿತಿ-ಲಯಗಳೆಲ್ಲದರ ಸಂಕೇತವನ್ನು ಮಳೆಯ ವಿವಿಧ ರೂಪಗಳಲ್ಲೆ ಕಾಣಬಹುದು. ಕವಿಗಳಿಗೆ ಕವಿತೆಯಾಗುವ, ಪ್ರೇಮಿಗಳಿಗೆ ಬತ್ತದ ಒರತೆಯಾಗುವ, ವಿರಹಿಗಳಿಗೆ ಸಾಮೀಪ್ಯದ ಕೊರತೆಯಾಗಿಸುವ ಈ ವಿಶ್ವದೇಹಿ ನಿಜವಾದ ಅರ್ಥದಲಿ ನಿರಂತರ ಭಾವ ಚಿಲುಮೆ, ಅಂತೆಯೆ ಅಭಾವದ ಪ್ರೌಢಿಮೆ. ಆ ಮಳೆಯ ಆರ್ಭಟ, ರೌದ್ರ ರೂಪವನ್ನು ತುಸು ಆಡು ಭಾಷೆಯ ಮೂಲಕ ಪದವಾಗಿ ಹಿಡಿಯುವ ಯತ್ನ, ಈ ಜೋಡಿ ಕವನ – ‘ಮಳೆಯಾಗವ್ಳೆ ಚೌಡಿ’

ಮೊದಲನೆಯ ಕವನ ‘ಹುಚ್ಮಳೆ, ಕೆಚ್ಮಳೆ ಪೆಚ್ಮಳೆ…’ ಆ ಚೌಡಿಯವತಾರದ ಬಗೆಯನ್ನು ವರ್ಣಿಸುತ್ತಲೆ ಸಂವಾದಕ್ಕಿಳಿದರೆ ಎರಡನೆ ಪದ್ಯ ‘ಕ್ಯಾಣ ಬಿಟ್ಟಾಕು, ಬೃಹನ್ನಳೆ..’ ಆ ಸಂವಾದವನ್ನು ಸಂಧಾನದ ಮಾತುಕಥೆಯ ರೂಪಕ್ಕಿಳಿಸಿ ಚೌಡಿಯವತಾರದ ಮಳೆಯನ್ನು ರಮಿಸಿ, ತಣಿಸಲು ಯತ್ನಿಸುತ್ತದೆ. ಮಳೆ ಕೇಳುವುದೊ ಬಿಡುವುದೊ – ಒಟ್ಟಾರೆ ಕವಿಯಾಶಯ ಬಿಂಬಿಸುವ ಪ್ರಯತ್ನವಂತೂ ಮಾಡುತ್ತದೆ – ನಿರಂತರವಾದ, ಎಡಬಿಡದ ಮಾನವ ಪ್ರಯತ್ನದ ದ್ಯೋತಕವಾಗಿ. ಪ್ರಕೃತಿಯ ಶಕ್ತಿಗಳೊಡನೆ ಹೋರಾಡಲಾಗದಿದ್ದರೂ, ಮಾತುಕಥೆಯಾಡಿ ಮನಗೆಲ್ಲಬಹುದೇನೊ ಎಂಬ ಶಾಂತಿಯ ಸದಾಶಯವೂ ಇಲ್ಲಿ ಅಡಕವಾಗಿದೆ.

ಆಡುಭಾಷೆಯ ಬಳಕೆ ಮಳೆಯೊಂದಿಗಿನ ಸಂವಾದದ ತಾದಾತ್ಮ್ಯತೆಯನ್ನು ಇನ್ನಷ್ಟು ಆಪ್ತವಾಗಿಸಬಹುದೆಂದು ನನ್ನ ಅನಿಸಿಕೆ – ಹಾಗೆಯೆ ಗ್ರಾಮ್ಯ ಭಾಷೆಯ ಸೊಗಡನ್ನು ಲೇಪಿಸುವ ಹುನ್ನಾರ. ತಮಗೆ ಹಿಡಿಸೀತೆಂಬ ಆಶಯದೊಂದಿಗೆ ತಮ್ಮೆಲ್ಲರ ಮಡಿಲಿಗೆ ಇದೋ – ‘ಮಳೆಯಾಗವ್ಳೆ ಚೌಡಿ..’

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

01. ಹುಚ್ಮಳೆ ಕೆಚ್ಮಳೆ ಪೆಚ್ಮಳೆ
___________________

ಹುಚ್ಮಳೆ ಕೆಚ್ಮಳೆ ಪೆಚ್ಮಳೆ
ಹಾದಿ ಬೀದಿ ಗದ್ದೆ ಕೊಚ್ಮಳೆ
ಕೋಲ್ಮಳೆ ಕುಣಿತಿರೊ ಬೃಹನ್ನಳೆ
ತಗ್ಸಿ ಮೂತಿ ಮೊರೆ ಜೋಲ್ಮಳೆ ||

ಊರ್ತೋಳೆ ಮನೆ ಮಾರ್ತೊಳೆ
ಬಿಡಿಸಿಟ್ಟಂಗೆ ಹಣ್ ತೊಳ್ತೊಳೆ
ಗಾಳಿ ಮರಗಿಡ ಮುರ್ದ್ ಹಾಕ್ತಲೆ
ತಲೆ ಚಿಟ್ಟಿಡ್ಸೋ ಹಂಗೆ ಸುರಿಯೆಲೆ ||

ಸದ್ದಿಂದ್ಲೆ ಮುದ್ದೆ ತಲ್ತಲೆ ಶೂಲೆ
ಮೈ ಕೈಯೆಲ್ಲಾ ವದ್ದೆ ದೊಗಳೆ
ನೀ ಜಪ್ಪಿ ಜಪ್ಪಿ ನೆಲ ಬಿದ್ದಾಗಲೆ
ಧೋ ಅಂತಾ ಸುರ್ದು ಬಿಗ್ದಂಗೆ ಕಳ್ಳೆ ||

ತಂಗ್ಳಂಗೆ ತಂಪಾಗಿ ಕುಳ್ಕುಳು ಮೈಗೆ
ಜಡ್ಡಿಡ್ದೋರ ಮ್ವಾರೆ ಅತ್ತಂಗೆ ಬೆವರ್ಗೆ
ಸುಕ್ಕೆಲ್ಲ ಸುಪನಾತಿ ಮಾಡಿಲ್ದಂಗ್ ಚೌರ
ಕತ್ಲೆ ಮುಸ್ಕಲೆನ್ ಲೆಕ್ಕನೊ ಕಪ್ಪಾಗ್ತದೆ ಗೌರ ||

ಕಪ್ ಕೊಚ್ಚೊ ಮೋರಿಲಿ ಕೆಂಪಣ್ಣನ್ ತಂಗಿ
ಕೆಸರಲ್ ಬಸ್ರಾದಂಗೆ ನುಲ್ಕೊಂಡಂಗ್ ಭಂಗಿ
ಮೈಕೈ ಕಾಲ್ ಸುತ್ಕೊಂಡ್ ಒಂಟೋರ ತೆಪ್ಪ
ಕೊಂಬೆ ರೆಂಬೆ ಕೊಚ್ಕೊಂಡು ದಬ್ದಂಗೆ ಬೆಪ್ಪಾ ||

————————————————————
ನಾಗೇಶ ಮೈಸೂರು
————————————————————-

02. ಕ್ಯಾಣ ಬಿಟ್ಟಾಕು, ಬೃಹನ್ನಳೆ
___________________________

ಗೊತ್ತಿಲ್ದೊಂದ್ ಮಾತ್ಕೇಳ್ತೀನಿ ಕ್ಯಾಣ ಬಿಟ್ಟಾಕು
ಯಾರ್ಮೇಲಪ್ಪ ಕೋಪ ತಾಪ ಸುಟ್ಟಾಕು
ಮುಟ್ಟಾದವ್ಳು ಮಿಡ್ದಂಗೆ ಯಾಕಪ್ಪ ದುಡುಕ್ತಿ
ಯಾರ್ದೊ ಮೇಲ್ ಕ್ವಾಪಕ್ಕೆ ಇಲ್ಲ್ಯಾಕೆ ಸಿಡುಕ್ತಿ ? ||

ಬರ್ಬಾರ್ದೆ ತಂಪಾಗಿ ಬಿಸ್ಲೊತ್ತಿನ್ ಮುಸ್ಸಂಜೆ
ಬಿಸ್ಬಿಸಿ ಚಾ ಕಾಫಿ ಜೊತೆ ಕಳ್ಳೆ ಪುರಿ ಗಿಂಜೆ
ಬೋಂಡಾ ಬಜ್ಜಿ ಕರ್ದೋರಜ್ಜಿ ಬೆಚ್ಗಿದ್ರೆ ಕುರ್ಕು
ಗರ್ಮಾಗರಂ ಚೌಚೌ ಜತೆ ಬೆಚ್ಬೇಕ್ ಮಳೆ ಮುರ್ಕು ||

ಕಟ್ಟೆ ಮೇಲ್ ಮಾತಾಟ ಚಿಕ್ಮಕ್ಳಾ ಕೂತಾಟ
ಪುಂಡು ಹೊಂಡ್ದಲಿ ಕಾಲಲ್ ನೆಗ್ದು ನೆಗ್ದಾಟ
ಅಂಚೆಲ್ಲಾ ವದ್ದೆ ಆದ್ರು ಬಿಡ್ದೇನೆ ಕುಣ್ದಿದ್ದೆ
ಆ ಮಾಯನೆಲ್ಲಾ ಯಾಕೊ ನೀನಿಂಗೆ ಕದ್ದೆ ||

ಬಲ್ ಮರ್ಯಾದಸ್ತ ನೀನು ಸಾಭ್ಯಸ್ತ
ಕದ್ದು ಮುಚ್ಚಿ ಇರ್ದೆ ಗುಟ್ಮಾತ್ನ ಕೇಳ್ತಾ
ಯಾಕಪ್ಪ ಬೇಕು ಚೆಲ್ಲಾಟ ಈ ಹೊತ್ನಲ್ಲಿ
ಕತ್ಲೆಲ್ ಕಾಲಿಟ್ಟವಳ್ಗೆ ಸುಮ್ನನ್ನಲ್ವಾ ಚಿನಾಲಿ ||

ಈಚಲ್ ಮರ್ದಾ ಕೆಳ್ಗೆ ಬ್ಯಾಡಪ್ಪಾ ಮಜ್ಗೆ
ಹೆಂಡಾಂತ್ಲೆ ಅನ್ನೋದು ಕುಡ್ದ್ರೂನು ಸಜ್ಗೆ
ಯಾರೊ ತಪ್ ಮಾಡುದ್ರೆ ಎಲ್ರಿಗ್ಯಾಕ್ ಶಿಕ್ಷೆ
ಮೊದ್ಲೆ ನೆಟ್ಗಿಲ್ದೊರ್ಗೆ ಕೊಟ್ ಕಿತ್ತಂಗಲ್ವಾ ಭಿಕ್ಷೆ ||

————————————————————
ನಾಗೇಶ ಮೈಸೂರು
————————————————————-
(ಚಿತ್ರ : ಅಂತರ್ಜಾಲದಿಂದ)

00684. ಮೋಡ, ಮಳೆ, ಇತ್ಯಾದಿ (ಹಾಯ್ಕು)


00684. ಮೋಡ, ಮಳೆ, ಇತ್ಯಾದಿ (ಹಾಯ್ಕು)
_________________________________


(೦೧)
ಬಸುರಿ ಮೋಡ
ನಿತ್ಯ ಚಡಪಡಿಕೆ
– ಹೆರಿಗೆ ನೋವು.

(೦೨)
ಮೋಡದ ಬೇಟ
ಪ್ರಣಯ? ಅತ್ಯಾಚಾರ?
– ಹುಟ್ಟಿದ್ದು ಮಳೆ.

(೦೩)
ಮಳೆ ಹುಟ್ಟಿಗೆ
ಯಾರೂ ಕೊಡುವುದಿಲ್ಲ
– ಜಾರಿಣಿ ಪಟ್ಟ.

(೦೪)
ಕಂಡೀತು ಮಳೆ
ಕಾಣದ್ದು ಮೋಡ ಸ್ರಾವ
– ಕರಗೋ ಕ್ರೂರ.

(೦೫)
ರವಿ ಪೊಗರು
ಮೋಡದ ಸೆರಗಲಿ
– ಮಂಕು ದೀವಿಗೆ.

(೦೬)
ಹುಲ್ಲು ಗರಿಕೆ
ಸುರಿಸಿದ ಜೊಲ್ಲದು
– ಮೋಡದಿಬ್ಬನಿ.

(೦೭)
ಮಿಂಚೂ ಗುಡುಗು
ಖಳರು ಮಿಲನಕೆ
– ಗುಟ್ಟಾಗಿಡರು.

(೦೮)
ನಮ್ಮದೇ ನಭ
ಹೆತ್ತ ಮೋಡದ ರಾಜ್ಯ
– ಮಳೆ ನಮ್ಮಿಷ್ಟ.

(೦೯)
ಬರ ಸಿಡಿಲು
ಬರಗಾಲ ಕಾಲಿಡೆ
– ಮರ ನೆಡರು !

(೧೦)
ಪ್ರಗತಿ ಬೇಕು
ಮುಚ್ಚಿಸಿ ಮಳೆ ಬಾಯಿ
– ನಾಳೆ ನೋಡೋಣ.

– ನಾಗೇಶ ಮೈಸೂರು

00679. ಧುತ್ತನೆ ಮಳೆ – ಆಶಾವಾದ


00679. ಧುತ್ತನೆ ಮಳೆ – ಆಶಾವಾದ
__________________________________

[In nilume on 29.04.2016: ಮಳೆ ನಿಲ್ಲದ ಹಾಗೆ ಸುರಿಯುತ್ತಿರಬೇಕು ಒಂದೇ ಸಮನೆ – ಭಾವೋತ್ಕರ್ಷದ ಮುಸಲಧಾರೆಯ ಹಾಗೆ.. ಅದೇ ನನಗಿಷ್ಟ ..( ಪ್ರಕೋಪಕ್ಕೆಡೆಗೊಡದ ಹಾಗೆ ಅನ್ನುತ್ತಿದ್ದಾನೆ ಮರೆಯಿಂದ ಡೊಂಕುತಿಮ್ಮ 😜 )]

ಧುತ್ತನೆ ಆರಂಭವಾದ ಮಳೆಯೊಂದು ತೆರೆದಿಟ್ಟುಕೊಂಡ ಬಗೆಯನ್ನು ಚಿತ್ರಿಸುತ್ತಲೆ, ಅದು ಸತತವಾಗಿ, ನಿರಂತರವಾಗಿ ಸುರಿಯುತ್ತಲೆ ಇರಬೇಕೆಂದು ಬಯಸುತ್ತದೆ ಕವಿಮನ; ನಿಂತ ಮಳೆ ಪಿಚ್ಚನೆಯ ಭಾವದ ಪ್ರತಿನಿಧಿಯಾಗಿ ನೀರವತೆಯನ್ನು ತುಂಬುವ ವಿಕಲ್ಪವಾದರೆ, ಸತತ ಸುರಿಯುವ ಮಳೆ ಆಶಾವಾದ ಸಂಕೇತವಾಗಿ ಕಾಣುತ್ತದೆ ಕವಿಯ ಕಣ್ಣಿಗೆ. ಅದು ‘ಧೋ’ ಎಂದು ಸುರಿಯುತ್ತಿರುವ ತನಕ ಕವಿ ಮನ ಗರಿ ಬಿಚ್ಚಿದ ಹಕ್ಕಿ – ಇದು ಕೇವಲ ಒಂದು ಪಾರ್ಶ್ವದ ನೋಟವಾದರೂ (ಮಳೆಯ ವಿಕೋಪ ಮತ್ತೊಂದು ಪಾರ್ಶ್ವ). ಅದರ ಆಲಾಪದ ತುಣುಕು ಈ ಪದ್ಯ.

ಧುತ್ತನೆ ಮಳೆ…
_____________________

ಎಲ್ಲಿತ್ತೋ ಮೋಡ
ಕಪ್ಪನೆ ಕಾಡ
ಕವಿದು ಮುಗಿಲು ಬೆಟ್ಟ ಗುಡ್ಡ ..
ಕಲ್ಲೆತ್ತರ ಕಟ್ಟಡ;
ಸಂಜೆಗತ್ತಲಿನ ನಾಡ ||

ಧುತ್ತನೆ ಮಳೆರಾಯ
ಸುರಿದ ಪ್ರಾಯ
ತೊಳೆದಾಗಸ ಮೋಡ ಖೆಡ್ಡ..
ಗುಡಿ ಕಟ್ಟಡ ನಡ;
ಕವಿಸುತ ಕತ್ತಲ ಗೂಡ ||

ಮಳೆ ಸದ್ದು ಅವಿರತ
ಹಿನ್ನಲೆ ಸಂಗೀತ
ಮಿಂಚು ಗುಡುಗಿನ ಹಿಮ್ಮೇಳ..
ವಾದ್ಯಗೋಷ್ಠಿ ತಾಳ;
ಸುಸ್ತಾಗದ ನಿಸರ್ಗದ ಬಹಳ ||

ನಿಲಬಾರದು ಸುರಿತವಿದು
ನಿಲದೆ ಮಳೆ ಸದ್ದು
ಅವಿರತ ಸುರಿತ ಆಶಾವಾದ..
ನಿಂತರೆ ಪಿಚ್ಚೆನಿಸಿದ ;
ಸುರಿಯುತಲೇ ಜೀವಂತಿಕೆ ಸದಾ ||

– ನಾಗೇಶ ಮೈಸೂರು

(picture source : http://e2ua.com/WDF-1783423.html)

00132. ಅಂಗಜನ ಅಂಗದ ಸದ್ದು..


00132. ಅಂಗಜನ ಅಂಗದ ಸದ್ದು …
________________________

ಬೆಳದಿಂಗಳಿನ ಸಖಿಯಿಲ್ಲದ ಏಕಾಂತದ ರಾತ್ರಿಯೊಂದರಲ್ಲಿ ವಿರಹಿಯೊಬ್ಬ ಕಿಟಕಿಯಿಂದ ಕಾಣುವ ನಭ ವೈಭವವನು ನೋಡಿ ಆಸ್ವಾದಿಸುತ್ತಲೆ, ಕಾರ್ಮೋಡಗಳ ಆಲಿಂಗನ ಸದ್ದಿನಲಿ ವಿರಹಿಗಳ ಪ್ರಣಯದ ತಾದ್ಮಾತ್ಮತೆಯನ್ನು ಕಾಣುತ್ತಾ, ಹುಚ್ಚೆದ್ದಂತೆ ಮಳೆಯಾಗುವ ಹೊತ್ತು, ಮನಕೂ ಹುಚ್ಚಿಡಿಸಿ ರಚ್ಚೆಯಾಡಿಸುತ ಕಾಡುವ ಬಗೆಯನ್ನು, ಅಂಗಜನ ಕೆದಕನ್ನು, ಪ್ರಣಯಿನಿಯಿರದೆ ಕೇಳಲಾಗದ ಅಂಗದದ ಸದ್ದಿರದ ಸ್ಥಿತಿಯನ್ನು ಚಿತ್ರಿಸುವ ಕವನ.

https://nageshamysore.wordpress.com/00132-%e0%b2%85%e0%b2%82%e0%b2%97%e0%b2%9c%e0%b2%a8-%e0%b2%85%e0%b2%82%e0%b2%97%e0%b2%a6-%e0%b2%b8%e0%b2%a6%e0%b3%8d%e0%b2%a6%e0%b3%81/

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
Thanks & Best Regards
Nagesha Mysore
WeBlog site: nageshamysore.wordpress.com

20131201-223922.jpg

00000. ಮನದಿಂಗಿತಗಳ ಸ್ವಗತ – ಪರಿವಿಡಿ ಮತ್ತು ಇತರೆ ವಿವರ


______________________________________________________________________________

00000. ಮನದಿಂಗಿತಗಳ ಸ್ವಗತ – ಪರಿವಿಡಿ ಮತ್ತು ಇತರೆ ವಿವರ
______________________________________________________________________________

00140. ಶುಮಾಕರನೆಂಬ ವೇಗದ ವಿಪರ್ಯಾಸ (ಕಿರು ಬರಹ + ಕವನ)

00138. ಎರಡು ದೋಣಿಯ ಮೇಲೆ ಕಾಲಿಟ್ಟ ಬದುಕು…(ಅನುಭವ + ಕಿರು ಪ್ರಬಂಧ)

00139. ಕಾಲದ ಗಡಿಯಾರ . (ಕಿರು ಬರಹ + ಕವನ)

00137. ಮಳೆಯಾಗವ್ಳೆ ಚೌಡಿ.. (ಕಿರು ಬರಹ + ಕವನ)

00136. ಹೋಗ್ಲಿ ಬಿಡಿ, ಹಾಳಾಗ್ಲಿ ಬಿಡ್ರಿ..(ಹೊಸದ ತಂದು ಹಳತ ಮರೆತುಬಿಡಿ..)

00135. ಸುದ್ದಿ ಮುಟ್ಟಿ ಮನ ಸೂತಕ…(ಕಳಚಿದ ಕೊಂಡಿ) (ಕಿರು ಬರಹ + ಕವನ)

00134. ದೇವರು ನಮಗೆ ಹಾಕಿದ ಟೋಪಿ (ಮಕ್ಕಳ ಪದ್ಯ) (ಕಿರು ಬರಹ + ಕವನ)

00133. ಚಿತ್ರಗುಪ್ತನಿಗೊಂದು ಸಲಹೆ (ಸರಿ ತಪ್ಪುಗಳ ಲೆಕ್ಕ) (ಕಿರು ಬರಹ + ಕವನ)

00132. ಅಂಗಜನ ಅಂಗದ ಸದ್ದು … (ಕಿರು ಬರಹ + ಕವನ)

00131. ಮಳೆಯಾಗುತ ಸಾಂಗತ್ಯ…. (ಕಿರು ಬರಹ + ಕವನ).

00130. ರಾಜರತ್ನಂ ನೆನಪಿಗೆ (ಕಿರು ಬರಹ + ಕವನ)

00129. ಪುಸ್ತಕ ವಿಮರ್ಶೆ: ಕಣ್ಣೀರಜ್ಜ ಮತ್ತು ಇತರ ಕಥೆಗಳು (ಪುಸ್ತಕ ವಿಮರ್ಶೆ)

00128. “ಬೀರ” ದೇವರು ಒಳಗಿಳಿದರೆ ಶುರು! (ಕಿರು ಬರಹ + ಕವನ)

00127. ಮುರಿದು ಬಿದ್ದ ಪಿಎಸ್ಪಿ (ಬರಹ + ಕವನ)

00126. ನೂರು ಶತಕಗಳ ಸರದಾರ (ಕಿರು ಬರಹ + ಕವನ)

00125. ಶ್ರೀ ಸತ್ಯನಾರಾಯಣ ವ್ರತದಿ ಪೂಜಾಂಗವಾಗಿಹ ಕಥನ (ಸರಳ ಕಾವ್ಯರೂಪದಲ್ಲಿ)

00124. ಈ ಕೆಮ್ಮೊಣಕೆಮ್ಮು… (ಕಿರು ಬರಹ + ಕವನ)

00123. ತುಳಸಿಗಿಂದು ಸಂಭ್ರಮ (ಕಿರು ಬರಹ + ಕವನ)

00122. ಈ ಸಂಪದ (ಕಿರು ಬರಹ + ಕವನ)

00121. ಮಂಗಳಗ್ರಹಕ್ಕೊಂದು ಗ್ರಹಕೊಂದು ಕಲ್ಲು (ಕಿರು ಬರಹ + ಕವನ)

00120. ಹುಡುಗಾಟ ಆಡಿದ್ರೆ, ಪಟಾಕಿ ಸುಮ್ನೆ ಬಿಡುತ್ತ? (ಕಿರು ಬರಹ + ಕವನ) (04.11.2013)

00119. ದೀಪೋತ್ಸಾಹಂ ಭುವಂಗತೆ.. (ಬರಹ + 2 ಕವನ) (02.11.2013)

00118. ರಾಜ್ಯೋತ್ಸವದ ಮನವಿ : ಪದಗಳಿಗಾಗುತ ದನಿ (ಕವನ + ಕಿರು ಬರಹ) (01.11.2013)

00117. ಗುಜರಾತಿನ ಮೋಡಿ, ಪಟೇಲರ ಹಾಡಿ (ಕವನ + ಕಿರು ಬರಹ)

00116. ‘ಐ’ಗಳ ಪುರಾಣ – 03 …’ಐ’-ಪೋನು, ಪಾಡು, ಪ್ಯಾಡುಗಳ ಪಾಡಿನ ಹರಟೆ, (ಪ್ರಬಂಧ + ಲೇಖನ + ಕಥನ + ಹರಟೆ + ಅನುಭವ)

00115. ಮಂಡೋದರಿ, ನಿನಗ್ಯಾಕಿ ಪರಿ ಕಿರಿಕಿರಿ..? (ಕವನ + ಬರಹ) (WIP)

00114. 00114. ಸಮಾನಾಂತರ ಚಿಂತನಾ ಚಿತ್ತ (ಕವನ + ಕಿರು ಬರಹ)

00113. ಹಾಸ್ಯದಲೆ ಕೊಲ್ಲೆ ಪೂರ್ತಿ, ಸಿದ್ದಹಸ್ತ ನರಸಿಂಹಮೂರ್ತಿ (ಕವನ + ಕಿರು ಬರಹ)

00112. ಪೌರ್ಣಿಮೆ ಚಂದ್ರನ ಕಾಲೆಳೆಯುತ್ತ….(ಕವನ + ಕಿರು ಬರಹ)

00111. ಖೈರುದ್ದೀನನಿಗೆ ಹಬ್ಬದ ಶುಭಾಶಯ ಹೇಳಿ…(ಕವನ + ಕಿರು ಬರಹ)

00110. ಸಿಂಗಪುರ್ ಈಸ್ ಏ ಫೈನ್ ಸಿಟಿ…(ಕವನ + ಕಿರು ಬರಹ)

00109. ಆಯುಧ ಪೂಜೆ, ವಿಜಯದಶಮಿ (2) (ಕವನ + ಕಿರು ಬರಹ)

00108. ಮಹಾಲಯ ಅಮಾವಾಸೆ (ಮಹಾನವಮಿ) (01) (ಕವನ + ಕಿರು ಬರಹ)

00107. ಪಾತ್ರಗಳೆ ರಾಯರಿಗೆ ಸಲ್ಲಿಸಿವೆ ವಂದನ ! (ಕವನ + ಕಿರು ಬರಹ)

00106. …..ನಿನ್ನ ನೆನಸುತ್ತೇನೆ ! (ಕವನ + ಕಿರು ಬರಹ)

00105. ಯಾರದು ಮುಂದಿನ ಪಾಳಿ? (ಕವನ + ಕಿರು ಬರಹ)

00104. ಕೂರ್ಮಾವತಾರ : ಸಾಮಾನ್ಯ ಪ್ರೇಕ್ಷಕನೊಬ್ಬನ ಅನುಭವ, ವಿಮರ್ಶೆಯ ಒಳನೋಟ (ಅನುಭವ + ವಿಮರ್ಶೆ + ಬರಹ)

00103. ಯಾರ ಗೆಲುವು – ‘ಛಿಧ್ರವೋ, ಸಮಗ್ರವೋ? (ಕವನ + ಕಿರು ಬರಹ)

00102. ಪಂಚ್ಲೈನ್ ‘ಪಂಚೆ’ ಸಿದ್ರಾಮಣ್ಣ.. (ಕವನ + ಕಿರು ಬರಹ)

00101. ಯಾರು..? (ಚಿಣ್ಣರ ಹಾಡು) (ಕವನ + ಕಿರು ಬರಹ)

00100. ನಮ್ಮ ಬಾಲ್ಯದ ‘ಶರ್ಲಾಕ್ ಹೋಂ’ “ಎನ್. ನರಸಿಂಹಯ್ಯ” ನೆನಪಲಿ ..(ಕವನ + ಕಿರು ಬರಹ)

00099. ಕೆಂಪೇಗೌಡರೆ ಬನ್ನಿ ಹೀಗೆ ……(ಕವನ + ಕಿರು ಬರಹ)

00098. “ಮುದ್ದಣ್ಣ ಮನೋರಮೆ ಕಲಿತ ಚೀನಿ ಭಾಷೆ – 02” (ಭಾಗ – 02) (ಹಾಸ್ಯಬರಹ + ಹರಟೆ + ವ್ಯಂಗ್ಯ)

00097. ತೊಡಕುಗಳನು ಬಿಡಿಸಲು “ತೊಡಕಿನ ಸಿದ್ದಾಂತ – 04” – (ತೊಡಕು ಸಿದ್ದಾಂತ) (ತಾಂತ್ರಿಕ + ಮ್ಯಾನೇಜ್ಮೆಂಟು + ವ್ಯವಸ್ಥೆ )

00096. ತೊಡಕುಗಳನು ಬಿಡಿಸಲು “ತೊಡಕಿನ ಸಿದ್ದಾಂತ – 03” – (ತೊಡಕು ಸಿದ್ದಾಂತ) (ತಾಂತ್ರಿಕ + ಮ್ಯಾನೇಜ್ಮೆಂಟು + ವ್ಯವಸ್ಥೆ )

00095. ತೊಡಕುಗಳನು ಬಿಡಿಸಲು “ತೊಡಕಿನ ಸಿದ್ದಾಂತ – 02” – (ತೊಡಕು ಸಿದ್ದಾಂತ) (ತಾಂತ್ರಿಕ + ಮ್ಯಾನೇಜ್ಮೆಂಟು + ವ್ಯವಸ್ಥೆ )

00094. ‘ಐ’ಗಳ ಪುರಾಣ – 02 …’ಐ’-ಪೋನು, ಪಾಡು, ಪ್ಯಾಡುಗಳ ಪಾಡಿನ ಹರಟೆ, (ಪ್ರಬಂಧ + ಲೇಖನ + ಕಥನ + ಹರಟೆ + ಅನುಭವ)

00093. ಅಲ್ಲಿರೋದು ನಮ್ಮನೆ, ಇಲ್ಲಿರೋದು ಸುಮ್ಮನೆ…(ಕವನ + ಕಿರು ಬರಹ)

00092. ಗಜಾನನ ಗಜ-ಮೂಷಿಕಾಸುರ ಕಥೆ (ಕವನ + ಕಿರು ಬರಹ)

00091. ಹುಟ್ಟುಹಬ್ಬದ ನಮಸ್ತೆ..(ಪೂಚಂತೆ ಯಾರಂತೆ?) (ಕವನ + ಕಿರು ಬರಹ)

00090. ಅವರಿತ್ತ ಜೀವನ ಭಿಕ್ಷೆ (ಕವನ + ಕಿರು ಬರಹ)

00089. ಶ್ರಾವಣ (ಕವನ + ಕಿರು ಬರಹ)

00088. ಮಿನುಗುತಾರೆ, ಗುನುಗುತ್ತಾರೆ… (ಕವನ + ಕಿರು ಬರಹ)

00087. ಡಾಲರ ರೂಪಾಯಿ ಲೆಕ್ಕಾಚಾರ (ಕವನ + ಕಿರು ಬರಹ)

00086. ಗೋಕುಲದಲಿ ಅಷ್ಟಮಿ , ಗೋಕುಲಾಷ್ಟಮಿ.. (ಕವನ + ಕಿರು ಬರಹ)

00085. ಜಲಚಕ್ರ (ಕವನ + ಕಿರು ಬರಹ)

00084. ವರಮಹಾಲಕ್ಷ್ಮಿ ವ್ರತ (ಕವನ + ಕಿರು ಬರಹ)

00083. ಅಷ್ಟಲಕ್ಷ್ಮಿಯರ ವರ (ಕವನ + ಕಿರು ಬರಹ)

00082. ಭಾರತಿಮನ, ಭಾರತಿತನ! (ಕವನ)

00081. ಮತ್ತೊಂದು ಸ್ವಾತಂತ್ರದ ದಿನ…. (ಕವನ + ಕಿರು ಬರಹ)

00080. ನಿಯತಿಯ ಶಿರ (ಕವನ)

00079. ಬದಲಾಗಬೇಕಾಗಿದ್ದು ನಾವು-ನೀವಾ ಅಥವಾ ಈ ವ್ಯವಸ್ಥೆಯಾ? (ಚಿಂತನೆ + ಲೇಖನ + ವಾಸ್ತವ )

00078. ಕಟ್ಟುವ ಬನ್ನಿ ಕನ್ನಡ ಉಳಿಸಿ ಬೆಳೆಸುವ ಪೀಳಿಗೆ (ಚಿಂತನೆ + ಅಂಕಣ: ಚಿಂತಕರ ಚಾವಡಿ (ಕನ್ನಡ ಸಂಘ)+ ಲೇಖನ + ಸಿಂಚನ)

00077. ಮೋಡ ಚುಂಬನ..ಗಾಢಾಲಿಂಗನ.. (ಕವನ + ಕಿರು ಬರಹ)

00076. ಎರಡು ಆಷಾಡ ಗೀತೆಗಳು (ಕವನ + ಕಿರು ಬರಹ)

00075. ಪುಟ್ಟನ ಅಳಲು .. (ಕವನ + ಕಿರು ಬರಹ)

00074. ಕಲಿಯಲು ಎಲ್ಲಿದೆ ಬಿಡುವು? (ಕವನ + ಕಿರು ಬರಹ)

00073. ದೆವ್ವ ಭೂತದ ಭೀತಿ! (ಕವನ)

00072. ಆಧ್ಯಾತ್ಮಿಕ ಕರ ಬಾಡಿಗೆ ತರ..! (ಕವನ + ಕಿರು ಬರಹ)

00071. ಅಸಂಗತ..! (ಕವನ + ಕಿರು ಬರಹ)

00070. ಹೆಣ್ಮನದ ಹವಾಗುಣ….! (ಕವನ + ಕಿರು ಬರಹ)

00069. ಬಿಟ್ಟುಬಿಡಿ ಸಿಗರೇಟು…! (ಬಿಟ್ಟು ಬೀಡಿ ಸಿಗರೇಟು..) (ಕವನ + ವಾಸ್ತವ)

00068. ಚಿಲ್ಲರೆ ಅಂಗಡಿ ಕಾಕ , ರೀಟೇಲಲಿ ಅಕ್ಕಿ..! ( ಕವನ + ವಾಸ್ತವ)

00067. ಧೂಮಸ್ನಾನ….! (ಕವನ + ವಾಸ್ತವ)

00066. ಧೂಮ-ಸಾಹಿತ್ಯ…! (ಕವನ + ವಾಸ್ತವ)

00065. ಸರಿ ತಪ್ಪುಗಳ ಲೆಕ್ಕ (ಚಿತ್ರಗುಪ್ತ ವಾಗ್ವಾದ – ಪೂರ್ವಾರ್ಧ: ಲಘು ಹಾಸ್ಯದ ಧಾಟಿ) (ಕವನ + ಕಿರು ಬರಹ)

00064. ಗಂಗಾವತಾರಣ (ಗಂಗಾ + ಅವತಾರ + ರಣ) (ಕವನ + ಬರಹ + ವಾಸ್ತವ + ಪೌರಾಣಿಕ)

00063. ಗಂಗಾವತರಣ…! (ಕವನ + ಕಿರು ಬರಹ)

00062. ಪಾಂಚಾಲಿಯ ಹಾಡು (ಕವನ + ಕಿರು ಬರಹ)

00061. ಈ ಅಪ್ಪಗಳು (ಕವನ + ಕಿರು ಬರಹ)

00060. ಸಾವೆಂಬ ಸಕಲೇಶಪುರದಲ್ಲಿ….!

00059. ನಿರಂತರ ಕುಣಿತ! (ಕವನ)

00058. ಗುಂಪಿನೊಳಗವಿತಿದೆಯೆ ವರ್ಣ? (ಕವನ + ಕಿರು ಬರಹ)

00057. ಈ ದಿನ ತನು ಮನ ಭಾವ….! (ಕವನ)

00056. ಹಿತ್ತಲ ಗಿಡದ ಮದ್ದು (ಕವನ + ಕಿರು ಬರಹ)

00055. ಏಕಾಂತದ ಏಕಾಂತ…! (ಕವನ + ಕಿರು ಬರಹ)

00054. ಈ ಅಮ್ಮಗಳು (ಕವನ + ಕಿರು ಬರಹ)

00053. ಚುನಾವಣಾ ಫಲಿತಾಂಶ ! (ಕವನ)

00052. ಸೃಷ್ಟಿ ರಹಸ್ಯ..! (ಈ ಅಂಡ ಪಿಂಡ ಬ್ರಹ್ಮಾಂಡದ ಸಶೇಷ ಭಾಗ) (ಕವನ + ಕಿರು ಬರಹ)

00051. ಈ ಅಂಡ ಪಿಂಡ ಬ್ರಹ್ಮಾಂಡ …(ಕವನ + ಕಿರು ಬರಹ)

00050. ಈ ಏಪ್ರಿಲ್ಲಿಗೇಕೊ ಮುನಿಸು…(ಕವನ + ಕಿರು ಬರಹ)

00049. ಯುಗಾದಿಯಾಗಲಿ ಜಾಗತಿಕ…! (ಕವನ)

00048. ಒತ್ತಡಗಳ ಬೆತ್ತ ! (ಕವನ)

00047. ಸುಖಕಿರುವ ಅವಸರ….! (ಕವನ)

00046. ತ್ಸುನಾಮಿ ಹೊತ್ತಲಿ…(ಕವನ)

00045. ಗುಬ್ಬಣ್ಣನ ಸ್ವಗತಗಳು (ಚುಟುಕಗಳು)

00044. ಮುಗಿದರೆ ಇಹ ವ್ಯಾಪಾರ…..(ಕವನ)

00043. ಮಾತಿಗೊಬ್ಬರ ….(ಕವನ)

00042. ವಚನದಲ್ಲಿ ನಾಮಾಮೃತ ತುಂಬಿದ ವಚನಾಂಜಲಿ ಕಾರ್ಯಕ್ರಮ (ವರದಿ) (ಕನ್ನಡ ಸಂಘ + ವರದಿ + ಲೇಖನ)

00041. ‘ಕನ್ನಡ ಪ್ರಭ’ದ ಕಬ್ಬಿಗ ತೋಟದಲ್ಲರಳಿದ ಡಬ್ಲ್ಯು. ಬಿ. ಏಟ್ಸನ ಕವನ : ನನ್ನ ಮೊದಲ ಅನುವಾದದ ಯತ್ನ..(ಕವನ + ಬರಹ)

00040. ಆಗ್ನೇಯೇಷ್ಯಾದ ಹಣ್ಣಿನ ರಾಣಿ – ‘ಮಾಂಗಸ್ಟೀನ್’! (ಹಣ್ಣುಗಳ ಪರಿಚಯ + ಲಘು ಹಾಸ್ಯ)

00039. “ಮುದ್ದಣ್ಣ ಮನೋರಮೆ ಕಲಿತ ಚೀನಿ ಭಾಷೆ – 01!” (ಹಾಸ್ಯಬರಹ + ಹರಟೆ + ವ್ಯಂಗ್ಯ)

00038 – ಹೊಸ (ಹಳೆ) ರುಚಿ: “ಹಸಿ-ಹುಳಿ” (ಹೊಸ ರುಚಿ + ಲಘು ಹಾಸ್ಯ)

00037 – ರುಚಿಗೆ ರಾಜಾ, ವಾಸನೆಯೆ ಗಾರ್ಬೇಜಾ! (ಹಣ್ಣುಗಳ ಪರಿಚಯ + ಲಘು ಹಾಸ್ಯ)

00036 – ಈ ಕೆಂಪಮ್ಮನ ಹೆಸರೆ ಡ್ರಾಗನ್ ಫ್ರೂಟು, ನೋಡಲೆ ಸೊಗಸು ಅವಳಾಕಿದ ಸೂಟು! (ಹಣ್ಣುಗಳ ಪರಿಚಯ + ಲಘು ಹಾಸ್ಯ)

00035 – ಜುಟ್ಟಿನ ಬಟ್ಟೆ ಹೊದ್ದ ‘ಕೇಶೀರಾಜ’, ಮುತ್ತಿನ ಬಣ್ಣದ ‘ರಂಬೂತಾನ್’ ಹಣ್ಣೆ ಖನಿಜ! (ಹಣ್ಣುಗಳ ಪರಿಚಯ + ಲಘು ಹಾಸ್ಯ)

00034 – ವಿಷಾಪಹಾರಿ ‘ಡ್ರಾಗನ್ನಿನ ಕಣ್ಣು’, ಈ ರುಜಾಪಹಾರಿ ‘ಲೊಂಗನ್’ ಹಣ್ಣು! (ಹಣ್ಣುಗಳ ಪರಿಚಯ + ಲಘು ಹಾಸ್ಯ)

033A – ಸಿಂಗಾಪುರದ “ಹಾವ್ ಪಾರ ವಿಲ್ಲಾ” ದೃಶ್ಯ ಕಲಾ ತೋಟ! (photos) (ಪ್ರವಾಸಿ ತಾಣ ಪರಿಚಯ + ಪ್ರವಾಸ ಅನುಭವ)

033 – ಸಿಂಗಪುರದಲ್ಲಿನ ಚೀಣಿ ದೃಶ್ಯ ಕಾವ್ಯ “ಹಾವ್ ಪಾರ್ ವಿಲ್ಲಾ” ( ಪ್ರವಾಸಿ ತಾಣ ಪರಿಚಯ + ಪ್ರವಾಸ ಅನುಭವ + ಲಘು ಹಾಸ್ಯ)

00032 – ಸಂಪತ್ತಿನ ಬೀಜ, ಸಸಿ ಮತ್ತು ವೃಕ್ಷಗಳ ನೀತಿ ಭೋಧಕ ಕಥೆ (ಆಧುನಿಕ ಪುರಾಣ ಕಥಾ ಕಾಲಕ್ಷೇಪ)! (ಆಧುನಿಕ ನೀತಿ ಭೋಧೆ + ವಿಡಂಬನೆ + ವ್ಯಂಗ್ಯ)

00031 – ಅಪೂರ್ವ ಕವನದ ಕುರಿತು ಹಿರಿಯ ಕವಿಯೊಬ್ಬರ ಮಾತು (ಲೇಖನ + ಬರಹ + ಪ್ರಬಂಧ + ಕವನ + ವ್ಯಕ್ತಿತ್ವ )

00030 – ಪುಸ್ತಕ ವಿಮರ್ಶೆ: ಮಾವೋನ ಕೊನೆಯ ನರ್ತಕ (ಪುಸ್ತಕ ವಿಮರ್ಶೆ)

00029. ಇರುವೆ ಮತ್ತು ಒಂದು ತುಂಡು ರೊಟ್ಟಿಯ ಕಥೆ! (ಆಧುನಿಕ ನೀತಿ ಭೋಧೆ + ವಿಡಂಬನೆ + ವ್ಯಂಗ್ಯ)

00028. ಸಿಂಗನ್ನಡಿಗರಿಂದ ಸಿಂಗನ್ನಡಿಗರಿಗಾಗಿ! – ಸಿಂಗಾರ ಉತ್ಸವ 2013 (ಕನ್ನಡ ಸಂಘ + ವರದಿ + ಲೇಖನ )

00027. ಗುಬ್ಬಣ್ಣನ ಯೂನಿವೆರ್ಸಲ್ ಸ್ಟುಡಿಯೊ ದಂಡಯಾತ್ರೆ ! (ಭಾಗ – 02) (ಹಾಸ್ಯಬರಹ + ಹರಟೆ)

00026. ಗುಬ್ಬಣ್ಣನ ಯೂನಿವೆರ್ಸಲ್ ಸ್ಟುಡಿಯೊ ದಂಡಯಾತ್ರೆ ! (ಭಾಗ – 01) (ಹಾಸ್ಯಬರಹ + ಹರಟೆ)

00025. ಸರಿಯಪ್ಪಾ ಸಾಕು ಬಿಡು ಕಲಿಸಿದ್ದು ಸುಗ್ಗಿ, ಉರು ಹೊಡೆದೇ ಕಲಿವೆ ನಾ ಕನ್ನಡದ ಮಗ್ಗಿ! ( ಲಘು ಹಾಸ್ಯ + ಕಥನ + ಅನುಭವ)

00024. ಜತೆ ನೀ ಕಾಡಿಗೆ , ಹೋಗಲಿಲ್ಲವೇಕೆ ಊರ್ಮಿಳೆ? (ಬರಹ + ಕಾವ್ಯಬರಹ + ಪೌರಾಣಿಕ + ವ್ಯಕ್ತಿತ್ವ + ಪಾತ್ರ)

00023. ಶೂರ್ಪನಖಿ, ಆಹಾ! ಎಂಥಾ ಸುಖಿ! (ಬರಹ + ಕಾವ್ಯಬರಹ + ಪೌರಾಣಿಕ + ವ್ಯಕ್ತಿತ್ವ + ಪಾತ್ರ)

00022. ದುರಂತ ನಾಯಕಿ ಸೀತೆಯ ಬದುಕು………! (ಬರಹ + ಕಾವ್ಯಬರಹ + ಪೌರಾಣಿಕ + ವ್ಯಕ್ತಿತ್ವ + ಪಾತ್ರ)

00021. ಶ್ರೀ ರಾಮನಿಗೇನಿತ್ತನಿವಾರ್ಯ….? (ಬರಹ + ಕವನ + ಪೌರಾಣಿಕ + ವ್ಯಕ್ತಿತ್ವ + ಪಾತ್ರ)

00020. ಈ ದಿನ ಜನುಮದಿನಾ…..! (ಬರಹ + ಕವನ + ನೆನಪು + ಭಾವನೆ)

00019. ‘ಐ’ಗಳ ಪುರಾಣ – 01….’ಐ’-ಪೋನು, ಪಾಡು, ಪ್ಯಾಡುಗಳ ಪಾಡಿನ ಹರಟೆ, (ಪ್ರಬಂಧ + ಲೇಖನ + ಕಥನ + ಹರಟೆ + ಅನುಭವ)

00018. ಸಿಂಗಪೂರ ಸುತ್ತಾಟ, ಊಟ – ಸಿಕ್ಕಿತ ಕನಿಷ್ಟ ರೋಟಿ, ಪರಾಟ..? (ಪ್ರವಾಸದ ಅನುಭವ + ಕವನ + ಲಘು ಹಾಸ್ಯ )

00017. ಹುಡುಕೂ, ವರ್ಷದ್ಹುಡುಕು ..! (ಹಬ್ಬ + ಹರಿದಿನ + ಸಂಪ್ರದಾಯ + ಬರಹ + ಲೇಖನ)

00016. ಅಂತರಂಗದಂತಃಪುರದ ಕದಪದ ಮನದನ್ನೆಯರು…! (ಬರಹ + ಕವನ + ಅನುಭವ + ಆಡಳಿತಾತ್ಮಕ + ಲಘು ಹಾಸ್ಯ)

00015 – ತರ ತರ ಋತು ಸಂವತ್ಸರ……ಹಳತೊಸತು ಮೇಳೈಸಿತೊ ಬೆರೆತು! (ಹಬ್ಬ + ಹರಿದಿನ + ಸಂಪ್ರದಾಯ + ಬರಹ + ಕವನ)

00014 – ಉಚ್ಚೈಶ್ರವಸ್ಸಿನ ಕಪ್ಪು ಬಾಲದಮಚ್ಚೆ….! (ನೀಳ್ಗಾವ್ಯ + ಕಾವ್ಯ + ಪೌರಾಣಿಕ)

00013 – ಹಾರುತ ದೂರಾದೂರ…..! (ಅನುಭವ + ಪ್ರಬಂಧ + ಹಾಸ್ಯಲೇಖನ + ಲಘು ಹಾಸ್ಯ)

00012. ಹೆಚ್ಚು ಬೆಲೆಯೆಂದರೆ ಶ್ರೇಷ್ಟ ಗುಣಮಟ್ಟವಿರಬೇಕೆಂದೇನಿಲ್ಲ, ಗೊತ್ತಾ! (ಆಡಳಿತಾತ್ಮಕ + ಮ್ಯಾನೇಜ್ಮೆಂಟು + ವ್ಯವಸ್ಥೆ + ವಾಸ್ತವ)

00011. ಲಘು ಪ್ರಬಂಧ: ನನ್ನ ಪ್ರಧಾನ ಸಂಪಾದಕ ಹುದ್ದೆ…! (ಅನುಭವ + ಪ್ರಬಂಧ + ಹಾಸ್ಯಲೇಖನ + ಲಘು ಹಾಸ್ಯ)

00010. ವಿಮರ್ಶೆ : ಕವನ ಸಂಕಲನ: “ಅಂತರ ಹಾಗು ಇತರ ಕವನಗಳು” ಕವಿ: ವಸಂತ ಕುಲಕರ್ಣಿ

00009. ತೊಡಕುಗಳನು ಬಿಡಿಸಲು “ತೊಡಕಿನ ಸಿದ್ದಾಂತ – 01” – (ತೊಡಕು ಸಿದ್ದಾಂತ) (ತಾಂತ್ರಿಕ + ಮ್ಯಾನೇಜ್ಮೆಂಟು + ವ್ಯವಸ್ಥೆ )

00008. ಆ “ಸ್ವಾಭಿಮಾನದ ನಲ್ಲೆ” ಯರ ನೆನೆನೆನೆದು…..(03) (ಬರಹ + ವಿಡಂಬನೆ + ಲೇಖನ)

00007. ಆ “ಸ್ವಾಭಿಮಾನದ ನಲ್ಲೆ” ಯರ ನೆನೆನೆನೆದು…..(02) (ಬರಹ + ವಿಡಂಬನೆ + ಲೇಖನ)

00006. ಆ “ಸ್ವಾಭಿಮಾನದ ನಲ್ಲೆ” ಯರ ನೆನೆನೆನೆದು…..(01) (ಬರಹ + ವಿಡಂಬನೆ + ಲೇಖನ)

00005. ಮೆಲ್ಲುಸಿರೆ ಸವಿಗಾನ….! (ಬರಹ + ಭಾವನೆ + ವಿಮರ್ಶೆ)

00004. ಗಮನೇಶ್ವರಿಯ ಗಮಕ, ವಯಸ್ಸಿನಾ ಮಯಕ…! (ಬರಹ + ಅನುಭವ)

00003. ನೀನೋದಿದ ವಿದ್ಯೆಗೆಲ್ಲಿಡುವೆ ನೈವೇದ್ಯ? (ಲೇಖನ)

00002. ಏನಾಗಿದೀದಿನಗಳಿಗೆ? (ಲೇಖನ)

00001. ಮೊದಲ ಬ್ಲಾಗ್ – ಮನದಿಂಗಿತಗಳ ಸ್ವಗತ! (ಬರಹ + ಕವನ)