00532.ಕಿರುಗಥೆಗಳು – 01 : ಮುನಿಸು


ಕಿರುಗಥೆಗಳು – 01: ಮುನಿಸು

ತಳಮಳದಿಂದ ಹಿಡಿತಕ್ಕೆ ಸಿಗದೆ ಒದ್ದಾಡುತ್ತಿದ್ದ ಮನಸಿಗೆ ಅವಳು ಆನ್-ಲೈನ್ ಆಗಿದ್ದು ಕಂಡು ತಟ್ಟನೆ ಜೀವ ಬಂದಂತಾಗಿ, ಹೊಯ್ದಾಟವೆಲ್ಲ ಒಂದೆ ಏಟಿಗೆ ಸ್ಥಿಮಿತಕ್ಕೆ ಬಂದಂತಾಯ್ತು. ‘ಹಾಯ್’ ಎಂದು ಮೇಸೇಜ್ ಕಳಿಸಿ ಮಾರುತ್ತರಕ್ಕಾಗಿ ಹಾತೊರೆದು ಕೂತ – ನಿನ್ನೆ, ಮೊನ್ನೆಯಂತೆ ನಿರ್ಲಕ್ಷಿಸದೆ ಇಂದಾದರು ಮಾತನಾಡುವಳೆಂದು. 

ಪ್ರತೀಕ್ಷೆಯ ಪ್ರತಿ ಕ್ಷಣವು ಯುಗದಂತೆ…

‘ಹಾಯ್..’ ಎಂದ ಪರದೆಯನ್ನು ನೋಡುತ್ತಿದ್ದಂತೆ ನಿಂತು ಹೋದಂತಿದ್ದ ಉಸಿರಾಟ ನಿರಾಳ ನಿಟ್ಟುಸಿರಾಗಿತ್ತು. 

‘ಗುಡ್ ಮಾರ್ನಿಂಗ್.. ಹೇಗಿದ್ದಿ? ..’

ಯಾಕೊ ಮಾರುತ್ತರವಿಲ್ಲ…. ಇನ್ನು ಕೋಪ ಆರಿದಂತೆ ಕಾಣುತ್ತಿಲ್ಲ.. ಹೇಗಾದರು ರಮಿಸಬೇಕು, ನಿನ್ನೆಯ ಹಾಗೆ ಕೋಪ, ಜಗಳದಲ್ಲಿ ಮುಕ್ತಾಯವಾಗಲಿಕ್ಕೆ ಬಿಡಬಾರದು.. ಆದರೆ ಏನು ಮಾತಾಡಲು ಹೊಳೆಯುತ್ತಿಲ್ಲ… ಹಿಂದೆಲ್ಲ ಗಂಟೆಗಟ್ಟಲೆ ಮಾತಾಡುತ್ತಿದ್ದರೂ ಮುಗಿಯಲೆ ಇಲ್ಲ ಅನ್ನುವಷ್ಟು ಸರಕಿರುತ್ತಿತ್ತು.. ಈಗೇಕೆ ಹೀಗೆ ? ಮನಸು ಸರಿಯಿದ್ದರೆ ಅದೆ ಮಾತಿನ ಹೂರಣವಾಗುತ್ತದೆ.. ಇಲ್ಲದಿದ್ದರೆ ಯಾವ ಮಾತಿಗೇನು ಅನಾಹುತ ಕಾದಿದೆಯೊ ಎನ್ನುವ ಅನುಮಾನದಲ್ಲಿ ಏನೂ ಹೊರಡುವುದಿಲ್ಲ..

‘ ಈಗ ಎದ್ದೆಯಾ…’

ಕೆಲವೊಮ್ಮೆ ಆಯುಧವಿಲ್ಲದೆ ಕೊಲ್ಲಲು, ಹಿಂಸಿಸಲು ಮೌನವೊಂದಿದ್ದರೆ ಸಾಕು.. ಭುಗಿಲೆಬ್ಬಿಸಿ, ದಿಗಿಲಾಗಿಸಿ, ಕಂಗೆಡಿಸಿ, ಕಂಗಾಲಾಗಿಸಿ ಮೆಟ್ಟಿಹಾಕಿಬಿಡಬಹುದು.. 

ಆದರೆ ತಡೆದುಕೊಳ್ಳಬೇಕು.. ಅವಳ ಮನಸ್ಸು ಸರಿಯಿಲ್ಲ.. ಈಗವಳಿಗೆ ಬೇಕಾದ್ದು ಸಮಾಧಾನಿಸುವ ಮಾತ ಸಖ್ಯ, ಶಾಂತಿ ನೀಡುವ ಮೌನ..

‘ ಇನ್ನೂ ಕೋಪಾನಾ?…’

‘……..’

‘ಐ ಯಾಮ್ ರಿಯಲಿ ಸಾರೀ.. ತಪ್ಪಾಯ್ತೂ..’

‘……..’

‘ ನಂಗೊತ್ತು ನಿಂಗೆ ಬೇಜಾರಾಗಿದೆ… ಬಟ್ ಐಯಾಂ ರೀಯಲಿ ಟ್ರೈಯಿಂಗ್ ಹಾರ್ಡ್..’

‘……..’

ಮಾತು ಯಾರಪ್ಪನ ಗಂಟಿದ್ದರು ಇರಬಹುದು.. ಕೋಪವೇನು ಯಾರಪ್ಪನ ಮನೆ ಗಂಟೆ ? ನೆಪವಿಲ್ಲದೆಯೆ ಕಾಲಿಕ್ಕುವ ಖಳನಿಗೆ, ನೆಪ ಸಿಕ್ಕಿದರೆ ಮಾತಾಡುವಂತೆಯೆ ಇಲ್ಲ..

‘ಏನಾದ್ರೂ ಮಾತಾಡಬಾರದೆ? ಹೀಗೆ ಮೌನ ಗೌರಿ ತರ ಕೂತ್ರೆ ನನಗೆ ಹೇಗೆ ಅರ್ಥ ಆಗಬೇಕು?’

‘ ………’

‘ ನಾ ಏರ್ಪೋರ್ಟಿಗೆ ಹೊರಡ್ಬೇಕು … ಆಗ್ಲೆ ಲೇಟ್ ಆಗಿದೆ..ಏನಾದ್ರೂ ಹೇಳಬಾರದೆ?’ ಕೋಪದೊಂದಿಗೆ ಬೆರೆತ ದೈನ್ಯವನ್ನ ಪದಗಳಾಗಿಸಿ ಪರದೆ ಮೇಲೆ ಮೂಡಿಸುತ್ತ ನುಡಿದ..

ಅವಳದದೆ ದಿವ್ಯ ಮೌನ.. ಆದರೆ ಪ್ರತಿ ಮೇಸೇಜನ್ನು ಓದುತ್ತಿರುವುದು ಕಾಣುತ್ತಿದೆ..

‘ ನಿನಗೆ ತುಂಬಾ ಇಗೊ ಜಾಸ್ತಿ ಬಿಡು… ಅಷ್ಟೊಂದು ಬೇಡ್ಕೊತಾ ಇದೀನಿ..ಕೇರೆ ಮಾಡಲ್ವಲ್ಲಾ ನೀನು.. ? ಕಲ್ಲು ಹೃದಯದ ಕಟುಕ ರಾಕ್ಷಸಿ ನೀನು… ಐ ಹೇಟ್ ಯೂ…’ ಈ ಮಾತನ್ನ ಟೈಪ್ ಮಾಡಿದವನಿಗೆ ಕಳಿಸಲೊ ಬಿಡಲೊ ಅನ್ನೊ ಸಂದಿಗ್ದ.. 

ಅದಾವುದೊ ಧ್ಯಾನದಲ್ಲಿ ಡಿಲೀಟ್ ಮಾಡಲು ಹೋಗಿ ‘ಸೆಂಡ್ ‘ ಒತ್ತಿ ಬಿಟ್ಟ…. !

ಅದುವರೆವಿಗು ಮೌನವಾಗಿದ್ದ ಬಾಂಬ್ ಆಗ ಸಿಡಿಯಿತು…!

‘ ಐ ಹೇಟ್ ಯು ಟೂ….!!’

ಸ್ಟೇಟಸ್ ಅನ್ ಲೈನ್ ಇದ್ದವಳು ಪಟ್ಟನೆ ಮತ್ತೆ ಮಾಯವಾಗಿಬಿಟ್ಟಳು… ಮಿಂಚಿಹೋದ ಅಚಾತುರ್ಯಕ್ಕೆ ಚಿಂತಿಸುತ್ತ ಮತ್ತೆ ಎಷ್ಟು ಮೇಸೇಜು ಕಳಿಸಿದರೂ ನಿರುತ್ತರ.. 

ಅವಳು ಮತ್ತೆ ಆನ್ಲೈನಿಗೆ ಬರಲೆ ಇಲ್ಲ , ಮೇಸೇಜುಗಳನ್ನು ನೋಡುತ್ತಲೂ ಇಲ್ಲಾ.. 

ಅದರಲ್ಲಿದ್ದುದ್ದೆಲ್ಲ ಬರಿ ನೂರಾರು ಸಾರಿಗಳು, ನೂರಾರು ತಪ್ಪೊಪ್ಪಿಗೆಗಳು .. ಆದರೆ ಕೇಳುವವರಿಲ್ಲ, ನೋಡುವವರಿಲ್ಲ..

ನಿರಾಶನಾಗಿ ಮೇಲೆದ್ದ ಅವನು ಭಾರವಾದ ಮನದೊಡನೆ ಭಾರದ ಲಗೇಜನ್ನು ಎಳೆಯುತ್ತ ಏರ್ಪೋರ್ಟಿನತ್ತ ನಡೆದ, ಇನ್ನೆಲ್ಲಾ ಮುಗಿಯಿತು ಎಂಭಂತೆ…

ಅರ್ಧಗಂಟೆಯ ನಂತರ ಟ್ಯಾಕ್ಸಿಯಲ್ಲಿ ತಲೆ ಮೇಲೆ ಕೈ ಹೊತ್ತು ಕುಳಿತಿದ್ದವನಿಗೆ ಇಡಿ ಪ್ರಪಂಚವೆ ಬೇಡವೆನಿಸುವಂತಹ ಅಸಹನೀಯ, ವೈರಾಗ್ಯ ಭಾವ.. ಎರಡು ಮೂರು ಬಾರಿ ಪೋನಿನ ಬೀಪ್ ಸದ್ದು ಕೂಡ ಗಮನಿಸದಷ್ಟು ಅನ್ಯಮನಸ್ಕತೆ.. 

ಎರಡು ಗಂಟೆಯ ನಂತರ ಪ್ಲೇನಿನೊಳಗೆ ಕುಳಿತಾಗ ಪೋನ್ ಏರ್ಪ್ಲೇನ್ ಮೋಡಿಗೆ ಬದಲಿಸಲಿಲ್ಲವೆಂದು ನೆನಪಾಯ್ತು..
ತೆರೆದು ನೋಡಿದರೆ ಅಲ್ಲೊಂದು ಯಾರದೊ ಮೇಸೇಜ್ ಕಾಯುತ್ತಿತ್ತು.. ಯಾರದೆಂದು ನೋಡುವ ಮನಸಿರದಿದ್ದರು ತೆರೆದು ನೋಡಿದ , ಆಫ್ ಮಾಡುವ ಮೊದಲು..

ಎರಡು ಗಂಟೆಗು ಮೊದಲು ಅವಳು ಕಳಿಸಿದ್ದ ಮೇಸೇಜೊಂದು ಅಲ್ಲಿ ಕಾಯುತ್ತಿತ್ತು…

‘ ಹ್ಯಾಪಿ ಜರ್ನೀ…!!!!’

‘……..’

ಅದೊಂದು ಮಾತಿನ ಹಿಂದೆ, ಮುನಿಸಿನ ಮೋಡವೆಲ್ಲ ಕರಗಿ ಅಡಗಿಸಿಟ್ಟ ಪ್ರೀತಿಯ ಮಳೆಯಾದ ಅದ್ಭುತ ಸಂದೇಶವಿತ್ತು..

ಆ ಎರಡು ಪದಗಳ ಹಿಂದಿನ ಭಾವದರಿವಿನಿಂದಲೆ, ಅವನ ಮೈ ಮನದಲ್ಲಿ ಮತ್ತೆ ನವಚೇತನ ತುಂಬಿಕೊಂಡಂತಾಗಿ ಆನಂದದ ಶಿಳ್ಳೆಯಾಗಿ ಹೊರಬಿತ್ತು, ಪಯಣಕ್ಕೆ ಉತ್ಸಾಹ ತುಂಬುವ ಸಂಜೀವಿನಿಯಾಗಿ..

00355. ಇರುಸು ಮುರುಸಡಿಗೆ..


00355. ಇರುಸು ಮುರುಸಡಿಗೆ..
_________________________________

ಯಾವಾವುದೊ ಸಲ್ಲುವ, ಸಲ್ಲದ ಕಾರಣಕ್ಕಾಗಿ ಇರುಸು ಮುರಿಸಿಗೆ ಒಳಗಾಗದ ಜೋಡಿಯಾದರೂ ಎಲ್ಲುಂಟು ಈ ಜಗದಲ್ಲಿ ? ಪ್ರೇಮಿಗಳಲ್ಲಿ, ದಂಪತಿಗಳಲ್ಲಿ, ನೆಂಟಸ್ತಿಕೆ, ಸ್ನೇಹಗಳಲ್ಲಿ ಇರುಸುಮುರುಸಾಗುವುದು ಸರ್ವೆ ಸಹಜವಾದರೂ, ದಂಪತಿಗಳಲ್ಲಿ ಅದು ತಾಳುವ ವೈವಿಧ್ಯಮಯ ರೂಪಕ್ಕೆ ಸರಿಸಾಟಿಯಾದದ್ದು ಮತ್ತೊಂದಿರಲಾರದು. ಅದರಲ್ಲು ನಮ್ಮ ಭಾರತೀಯ ದಂಪತಿಗಳ ವಿಷಯಕ್ಕೆ ಬಂದರೆ, ಆ ರಣರಂಗದ ಕಾರ್ಯ ಭೂಮಿಕೆ ನಡೆಯುವುದೆ ಅಡಿಗೆ ಮನೆ ಮತ್ತು ಅಡಿಗೆಯ ಬಗೆ ಮತ್ತು ರುಚಿಗಳಲ್ಲಿನ ವೈವಿಧ್ಯಗಳ ಅನಾವರಣವಾಗುವ ಮೂಲಕ. ಅದುವರೆವಿಗು ತೆರೆಮರೆಯಲಿದ್ದ ಸೃಜನಶೀಲತೆಯ ಅಂಶಗಳೆಲ್ಲಾ ‘ಕಲಾಕಾರ್’ ಭಾಷೆಯಲ್ಲಿ ವ್ಯಕ್ತವಾಗುವ ಈ ‘ಘನ ಘೋರ’ ಮೌನ ಕದನದಲ್ಲಿ ಅಂತಿಮವಾಗಿ ಶಾಂತಿ ಸಂಧಾನವೆ ಗೆದ್ದು ಬರುವುದು ಸಾಮಾನ್ಯವಾದರೂ, ಅದು ಬರುವವರೆಗಿನ ಹೊಯ್ದಾಟ, ತಾಕಲಾಟಗಳು ಮಾತ್ರ ಒಂದು ವಿಧದ ಅದ್ಭುತ ಅನುಭೂತಿಯ ಸರಕೆಂದೆ ಹೇಳಬೇಕು.

ಆ ನೂರಾರು ವೈವಿಧ್ಯಗಳಲ್ಲೊಂದು ತರವಾದ, ಅಂತದ್ದೊಂದು ದೃಶ್ಯವನ್ನು ಸರಳ ಕವನದಲ್ಲಿ ಹಿಡಿದಿಡುವ ಯತ್ನ ಈ ಕೆಳಗೆ..

ಇದ್ದರೇನಂತೆ ಇರಿಸು ಮುರಿಸು
ಪ್ರೇಮದಡಿಗೆ ಮಾಡಿ ಬಡಿಸು
ಉಣಿಸಲಿರಲಿ ತಿನಿಸು ಮುನಿಸು
ತಟ್ಟೆ ಮುಂದೆ ಕೂತೆ ನಿಭಾಯಿಸು ||

ಹಾಕಿಷ್ಟು ಉಪ್ಪು ಹೆಚ್ಚು ಕಮ್ಮಿ
ದುಮುಗುಟ್ಟಿಸುತಳುವಾ ಡಮ್ಮಿ
ಹೆಚ್ಚಿರಲಿ ಅನ್ನ ಸಾಲದ ಸಾರು
ಗೊತ್ತಾಗುವಂತೆ ಒಡತಿ ಯಾರು ||

ಹಾಕಿದೊಗ್ಗರಣೆಗು ಏರುಪೇರು
ಮಾತಿನಲಂತು ಬರಿ ಕಹಿ ಒಗರು
ಕಣ್ಣೋಟವಿರಲಿ ಹುಲಿಯುಗುರು
ಅಪ್ಪಿ ತಪ್ಪಿಯೂ ಇಡದೆ ನೀರು ||

ಬಲಮೂಲೆ ಖಾಲಿ ಬರಿ ಗಲಿಬಿಲಿ
ಮಿಡಿಯುಪ್ಪಿನ ಕಾಯೂ ತಬ್ಬಲಿ
ಮೊಸರನ್ನವಿಲ್ಲ ಹುಳಿ ಮಾತಲ್ಲ
ಸಾಕೆ ಮಾರಾಯ್ತಿ ಸಿಡಿದೆದ್ದ’ನಲ್ಲ’ ||

ಸಾರಿ ಕ್ಷಮಿಸು ಬರಿ ಲೆಕ್ಕಾಚಾರ
ಬಾಯ್ಬಿಟ್ಟರೆ ಸರಿ ದುಃಖ ದೂರ
ತಂದೊಳಗಿಂದ ಬಡಿಸು ಈಗವಶ್ಯ
ಮುನಿಸಲು ಮಾಡಿಟ್ಟ ಭಕ್ಷ್ಯ ಭೋಜ್ಯ ||

00231. ಮುನಿಸೆಂಬ ದ್ರಾಕ್ಷಾರಸ…


00231. ಮುನಿಸೆಂಬ ದ್ರಾಕ್ಷಾರಸ…

ಜಗಳ, ಮುನಿಸುಗಳಿಲ್ಲದ ನಂಟುಗಳಾದರೂ ಯಾವಿದ್ದಾವು? ಎಲ್ಲಾ ತರಹದ ಬಂಧ ಸಂಬಂಧಗಳಲ್ಲೂ ಒಂದಲ್ಲ ಒಂದು ರೀತಿಯ ತಿಕ್ಕಾಟ, ಕಸಿವಿಸಿಗಳುಧ್ಬವಿಸಿ ಬಹಿರಂಗ ಕದನವಾಗಿಯೊ, ಮುಸುಕಿನ ಗುದ್ದಾಟವಾಗಿಯೊ, ತಮ್ಮ ಮಾತಿಯ ‘ವಾಗ್ಯುದ್ಧ’ದ ಪರಿಣಿತಿಯನ್ನು ಪ್ರಸ್ತುತ ಪಡಿಸುವ ರಣರಂಗದ ಅಖಾಡವಾಗಿಯೊ ತಮ್ಮ ವರಸೆ ತೋರುವುದು ಎಲ್ಲರ ಬದುಕಿನ ಶಾಲೆಯಲ್ಲಿ ಪರಿಚಿತವಾಗಿ ಕಾಣುವ ಚಿತ್ರಣ……

https://nageshamysore.wordpress.com/00231-%e0%b2%ae%e0%b3%81%e0%b2%a8%e0%b2%bf%e0%b2%b8%e0%b3%86%e0%b2%82%e0%b2%ac-%e0%b2%a6%e0%b3%8d%e0%b2%b0%e0%b2%be%e0%b2%95%e0%b3%8d%e0%b2%b7%e0%b2%be%e0%b2%b0%e0%b2%b8/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00000. ಮನದಿಂಗಿತಗಳ ಸ್ವಗತ – ಪರಿವಿಡಿ ಮತ್ತು ಇತರೆ ವಿವರ


______________________________________________________________________________

00000. ಮನದಿಂಗಿತಗಳ ಸ್ವಗತ – ಪರಿವಿಡಿ ಮತ್ತು ಇತರೆ ವಿವರ
______________________________________________________________________________

00140. ಶುಮಾಕರನೆಂಬ ವೇಗದ ವಿಪರ್ಯಾಸ (ಕಿರು ಬರಹ + ಕವನ)

00138. ಎರಡು ದೋಣಿಯ ಮೇಲೆ ಕಾಲಿಟ್ಟ ಬದುಕು…(ಅನುಭವ + ಕಿರು ಪ್ರಬಂಧ)

00139. ಕಾಲದ ಗಡಿಯಾರ . (ಕಿರು ಬರಹ + ಕವನ)

00137. ಮಳೆಯಾಗವ್ಳೆ ಚೌಡಿ.. (ಕಿರು ಬರಹ + ಕವನ)

00136. ಹೋಗ್ಲಿ ಬಿಡಿ, ಹಾಳಾಗ್ಲಿ ಬಿಡ್ರಿ..(ಹೊಸದ ತಂದು ಹಳತ ಮರೆತುಬಿಡಿ..)

00135. ಸುದ್ದಿ ಮುಟ್ಟಿ ಮನ ಸೂತಕ…(ಕಳಚಿದ ಕೊಂಡಿ) (ಕಿರು ಬರಹ + ಕವನ)

00134. ದೇವರು ನಮಗೆ ಹಾಕಿದ ಟೋಪಿ (ಮಕ್ಕಳ ಪದ್ಯ) (ಕಿರು ಬರಹ + ಕವನ)

00133. ಚಿತ್ರಗುಪ್ತನಿಗೊಂದು ಸಲಹೆ (ಸರಿ ತಪ್ಪುಗಳ ಲೆಕ್ಕ) (ಕಿರು ಬರಹ + ಕವನ)

00132. ಅಂಗಜನ ಅಂಗದ ಸದ್ದು … (ಕಿರು ಬರಹ + ಕವನ)

00131. ಮಳೆಯಾಗುತ ಸಾಂಗತ್ಯ…. (ಕಿರು ಬರಹ + ಕವನ).

00130. ರಾಜರತ್ನಂ ನೆನಪಿಗೆ (ಕಿರು ಬರಹ + ಕವನ)

00129. ಪುಸ್ತಕ ವಿಮರ್ಶೆ: ಕಣ್ಣೀರಜ್ಜ ಮತ್ತು ಇತರ ಕಥೆಗಳು (ಪುಸ್ತಕ ವಿಮರ್ಶೆ)

00128. “ಬೀರ” ದೇವರು ಒಳಗಿಳಿದರೆ ಶುರು! (ಕಿರು ಬರಹ + ಕವನ)

00127. ಮುರಿದು ಬಿದ್ದ ಪಿಎಸ್ಪಿ (ಬರಹ + ಕವನ)

00126. ನೂರು ಶತಕಗಳ ಸರದಾರ (ಕಿರು ಬರಹ + ಕವನ)

00125. ಶ್ರೀ ಸತ್ಯನಾರಾಯಣ ವ್ರತದಿ ಪೂಜಾಂಗವಾಗಿಹ ಕಥನ (ಸರಳ ಕಾವ್ಯರೂಪದಲ್ಲಿ)

00124. ಈ ಕೆಮ್ಮೊಣಕೆಮ್ಮು… (ಕಿರು ಬರಹ + ಕವನ)

00123. ತುಳಸಿಗಿಂದು ಸಂಭ್ರಮ (ಕಿರು ಬರಹ + ಕವನ)

00122. ಈ ಸಂಪದ (ಕಿರು ಬರಹ + ಕವನ)

00121. ಮಂಗಳಗ್ರಹಕ್ಕೊಂದು ಗ್ರಹಕೊಂದು ಕಲ್ಲು (ಕಿರು ಬರಹ + ಕವನ)

00120. ಹುಡುಗಾಟ ಆಡಿದ್ರೆ, ಪಟಾಕಿ ಸುಮ್ನೆ ಬಿಡುತ್ತ? (ಕಿರು ಬರಹ + ಕವನ) (04.11.2013)

00119. ದೀಪೋತ್ಸಾಹಂ ಭುವಂಗತೆ.. (ಬರಹ + 2 ಕವನ) (02.11.2013)

00118. ರಾಜ್ಯೋತ್ಸವದ ಮನವಿ : ಪದಗಳಿಗಾಗುತ ದನಿ (ಕವನ + ಕಿರು ಬರಹ) (01.11.2013)

00117. ಗುಜರಾತಿನ ಮೋಡಿ, ಪಟೇಲರ ಹಾಡಿ (ಕವನ + ಕಿರು ಬರಹ)

00116. ‘ಐ’ಗಳ ಪುರಾಣ – 03 …’ಐ’-ಪೋನು, ಪಾಡು, ಪ್ಯಾಡುಗಳ ಪಾಡಿನ ಹರಟೆ, (ಪ್ರಬಂಧ + ಲೇಖನ + ಕಥನ + ಹರಟೆ + ಅನುಭವ)

00115. ಮಂಡೋದರಿ, ನಿನಗ್ಯಾಕಿ ಪರಿ ಕಿರಿಕಿರಿ..? (ಕವನ + ಬರಹ) (WIP)

00114. 00114. ಸಮಾನಾಂತರ ಚಿಂತನಾ ಚಿತ್ತ (ಕವನ + ಕಿರು ಬರಹ)

00113. ಹಾಸ್ಯದಲೆ ಕೊಲ್ಲೆ ಪೂರ್ತಿ, ಸಿದ್ದಹಸ್ತ ನರಸಿಂಹಮೂರ್ತಿ (ಕವನ + ಕಿರು ಬರಹ)

00112. ಪೌರ್ಣಿಮೆ ಚಂದ್ರನ ಕಾಲೆಳೆಯುತ್ತ….(ಕವನ + ಕಿರು ಬರಹ)

00111. ಖೈರುದ್ದೀನನಿಗೆ ಹಬ್ಬದ ಶುಭಾಶಯ ಹೇಳಿ…(ಕವನ + ಕಿರು ಬರಹ)

00110. ಸಿಂಗಪುರ್ ಈಸ್ ಏ ಫೈನ್ ಸಿಟಿ…(ಕವನ + ಕಿರು ಬರಹ)

00109. ಆಯುಧ ಪೂಜೆ, ವಿಜಯದಶಮಿ (2) (ಕವನ + ಕಿರು ಬರಹ)

00108. ಮಹಾಲಯ ಅಮಾವಾಸೆ (ಮಹಾನವಮಿ) (01) (ಕವನ + ಕಿರು ಬರಹ)

00107. ಪಾತ್ರಗಳೆ ರಾಯರಿಗೆ ಸಲ್ಲಿಸಿವೆ ವಂದನ ! (ಕವನ + ಕಿರು ಬರಹ)

00106. …..ನಿನ್ನ ನೆನಸುತ್ತೇನೆ ! (ಕವನ + ಕಿರು ಬರಹ)

00105. ಯಾರದು ಮುಂದಿನ ಪಾಳಿ? (ಕವನ + ಕಿರು ಬರಹ)

00104. ಕೂರ್ಮಾವತಾರ : ಸಾಮಾನ್ಯ ಪ್ರೇಕ್ಷಕನೊಬ್ಬನ ಅನುಭವ, ವಿಮರ್ಶೆಯ ಒಳನೋಟ (ಅನುಭವ + ವಿಮರ್ಶೆ + ಬರಹ)

00103. ಯಾರ ಗೆಲುವು – ‘ಛಿಧ್ರವೋ, ಸಮಗ್ರವೋ? (ಕವನ + ಕಿರು ಬರಹ)

00102. ಪಂಚ್ಲೈನ್ ‘ಪಂಚೆ’ ಸಿದ್ರಾಮಣ್ಣ.. (ಕವನ + ಕಿರು ಬರಹ)

00101. ಯಾರು..? (ಚಿಣ್ಣರ ಹಾಡು) (ಕವನ + ಕಿರು ಬರಹ)

00100. ನಮ್ಮ ಬಾಲ್ಯದ ‘ಶರ್ಲಾಕ್ ಹೋಂ’ “ಎನ್. ನರಸಿಂಹಯ್ಯ” ನೆನಪಲಿ ..(ಕವನ + ಕಿರು ಬರಹ)

00099. ಕೆಂಪೇಗೌಡರೆ ಬನ್ನಿ ಹೀಗೆ ……(ಕವನ + ಕಿರು ಬರಹ)

00098. “ಮುದ್ದಣ್ಣ ಮನೋರಮೆ ಕಲಿತ ಚೀನಿ ಭಾಷೆ – 02” (ಭಾಗ – 02) (ಹಾಸ್ಯಬರಹ + ಹರಟೆ + ವ್ಯಂಗ್ಯ)

00097. ತೊಡಕುಗಳನು ಬಿಡಿಸಲು “ತೊಡಕಿನ ಸಿದ್ದಾಂತ – 04” – (ತೊಡಕು ಸಿದ್ದಾಂತ) (ತಾಂತ್ರಿಕ + ಮ್ಯಾನೇಜ್ಮೆಂಟು + ವ್ಯವಸ್ಥೆ )

00096. ತೊಡಕುಗಳನು ಬಿಡಿಸಲು “ತೊಡಕಿನ ಸಿದ್ದಾಂತ – 03” – (ತೊಡಕು ಸಿದ್ದಾಂತ) (ತಾಂತ್ರಿಕ + ಮ್ಯಾನೇಜ್ಮೆಂಟು + ವ್ಯವಸ್ಥೆ )

00095. ತೊಡಕುಗಳನು ಬಿಡಿಸಲು “ತೊಡಕಿನ ಸಿದ್ದಾಂತ – 02” – (ತೊಡಕು ಸಿದ್ದಾಂತ) (ತಾಂತ್ರಿಕ + ಮ್ಯಾನೇಜ್ಮೆಂಟು + ವ್ಯವಸ್ಥೆ )

00094. ‘ಐ’ಗಳ ಪುರಾಣ – 02 …’ಐ’-ಪೋನು, ಪಾಡು, ಪ್ಯಾಡುಗಳ ಪಾಡಿನ ಹರಟೆ, (ಪ್ರಬಂಧ + ಲೇಖನ + ಕಥನ + ಹರಟೆ + ಅನುಭವ)

00093. ಅಲ್ಲಿರೋದು ನಮ್ಮನೆ, ಇಲ್ಲಿರೋದು ಸುಮ್ಮನೆ…(ಕವನ + ಕಿರು ಬರಹ)

00092. ಗಜಾನನ ಗಜ-ಮೂಷಿಕಾಸುರ ಕಥೆ (ಕವನ + ಕಿರು ಬರಹ)

00091. ಹುಟ್ಟುಹಬ್ಬದ ನಮಸ್ತೆ..(ಪೂಚಂತೆ ಯಾರಂತೆ?) (ಕವನ + ಕಿರು ಬರಹ)

00090. ಅವರಿತ್ತ ಜೀವನ ಭಿಕ್ಷೆ (ಕವನ + ಕಿರು ಬರಹ)

00089. ಶ್ರಾವಣ (ಕವನ + ಕಿರು ಬರಹ)

00088. ಮಿನುಗುತಾರೆ, ಗುನುಗುತ್ತಾರೆ… (ಕವನ + ಕಿರು ಬರಹ)

00087. ಡಾಲರ ರೂಪಾಯಿ ಲೆಕ್ಕಾಚಾರ (ಕವನ + ಕಿರು ಬರಹ)

00086. ಗೋಕುಲದಲಿ ಅಷ್ಟಮಿ , ಗೋಕುಲಾಷ್ಟಮಿ.. (ಕವನ + ಕಿರು ಬರಹ)

00085. ಜಲಚಕ್ರ (ಕವನ + ಕಿರು ಬರಹ)

00084. ವರಮಹಾಲಕ್ಷ್ಮಿ ವ್ರತ (ಕವನ + ಕಿರು ಬರಹ)

00083. ಅಷ್ಟಲಕ್ಷ್ಮಿಯರ ವರ (ಕವನ + ಕಿರು ಬರಹ)

00082. ಭಾರತಿಮನ, ಭಾರತಿತನ! (ಕವನ)

00081. ಮತ್ತೊಂದು ಸ್ವಾತಂತ್ರದ ದಿನ…. (ಕವನ + ಕಿರು ಬರಹ)

00080. ನಿಯತಿಯ ಶಿರ (ಕವನ)

00079. ಬದಲಾಗಬೇಕಾಗಿದ್ದು ನಾವು-ನೀವಾ ಅಥವಾ ಈ ವ್ಯವಸ್ಥೆಯಾ? (ಚಿಂತನೆ + ಲೇಖನ + ವಾಸ್ತವ )

00078. ಕಟ್ಟುವ ಬನ್ನಿ ಕನ್ನಡ ಉಳಿಸಿ ಬೆಳೆಸುವ ಪೀಳಿಗೆ (ಚಿಂತನೆ + ಅಂಕಣ: ಚಿಂತಕರ ಚಾವಡಿ (ಕನ್ನಡ ಸಂಘ)+ ಲೇಖನ + ಸಿಂಚನ)

00077. ಮೋಡ ಚುಂಬನ..ಗಾಢಾಲಿಂಗನ.. (ಕವನ + ಕಿರು ಬರಹ)

00076. ಎರಡು ಆಷಾಡ ಗೀತೆಗಳು (ಕವನ + ಕಿರು ಬರಹ)

00075. ಪುಟ್ಟನ ಅಳಲು .. (ಕವನ + ಕಿರು ಬರಹ)

00074. ಕಲಿಯಲು ಎಲ್ಲಿದೆ ಬಿಡುವು? (ಕವನ + ಕಿರು ಬರಹ)

00073. ದೆವ್ವ ಭೂತದ ಭೀತಿ! (ಕವನ)

00072. ಆಧ್ಯಾತ್ಮಿಕ ಕರ ಬಾಡಿಗೆ ತರ..! (ಕವನ + ಕಿರು ಬರಹ)

00071. ಅಸಂಗತ..! (ಕವನ + ಕಿರು ಬರಹ)

00070. ಹೆಣ್ಮನದ ಹವಾಗುಣ….! (ಕವನ + ಕಿರು ಬರಹ)

00069. ಬಿಟ್ಟುಬಿಡಿ ಸಿಗರೇಟು…! (ಬಿಟ್ಟು ಬೀಡಿ ಸಿಗರೇಟು..) (ಕವನ + ವಾಸ್ತವ)

00068. ಚಿಲ್ಲರೆ ಅಂಗಡಿ ಕಾಕ , ರೀಟೇಲಲಿ ಅಕ್ಕಿ..! ( ಕವನ + ವಾಸ್ತವ)

00067. ಧೂಮಸ್ನಾನ….! (ಕವನ + ವಾಸ್ತವ)

00066. ಧೂಮ-ಸಾಹಿತ್ಯ…! (ಕವನ + ವಾಸ್ತವ)

00065. ಸರಿ ತಪ್ಪುಗಳ ಲೆಕ್ಕ (ಚಿತ್ರಗುಪ್ತ ವಾಗ್ವಾದ – ಪೂರ್ವಾರ್ಧ: ಲಘು ಹಾಸ್ಯದ ಧಾಟಿ) (ಕವನ + ಕಿರು ಬರಹ)

00064. ಗಂಗಾವತಾರಣ (ಗಂಗಾ + ಅವತಾರ + ರಣ) (ಕವನ + ಬರಹ + ವಾಸ್ತವ + ಪೌರಾಣಿಕ)

00063. ಗಂಗಾವತರಣ…! (ಕವನ + ಕಿರು ಬರಹ)

00062. ಪಾಂಚಾಲಿಯ ಹಾಡು (ಕವನ + ಕಿರು ಬರಹ)

00061. ಈ ಅಪ್ಪಗಳು (ಕವನ + ಕಿರು ಬರಹ)

00060. ಸಾವೆಂಬ ಸಕಲೇಶಪುರದಲ್ಲಿ….!

00059. ನಿರಂತರ ಕುಣಿತ! (ಕವನ)

00058. ಗುಂಪಿನೊಳಗವಿತಿದೆಯೆ ವರ್ಣ? (ಕವನ + ಕಿರು ಬರಹ)

00057. ಈ ದಿನ ತನು ಮನ ಭಾವ….! (ಕವನ)

00056. ಹಿತ್ತಲ ಗಿಡದ ಮದ್ದು (ಕವನ + ಕಿರು ಬರಹ)

00055. ಏಕಾಂತದ ಏಕಾಂತ…! (ಕವನ + ಕಿರು ಬರಹ)

00054. ಈ ಅಮ್ಮಗಳು (ಕವನ + ಕಿರು ಬರಹ)

00053. ಚುನಾವಣಾ ಫಲಿತಾಂಶ ! (ಕವನ)

00052. ಸೃಷ್ಟಿ ರಹಸ್ಯ..! (ಈ ಅಂಡ ಪಿಂಡ ಬ್ರಹ್ಮಾಂಡದ ಸಶೇಷ ಭಾಗ) (ಕವನ + ಕಿರು ಬರಹ)

00051. ಈ ಅಂಡ ಪಿಂಡ ಬ್ರಹ್ಮಾಂಡ …(ಕವನ + ಕಿರು ಬರಹ)

00050. ಈ ಏಪ್ರಿಲ್ಲಿಗೇಕೊ ಮುನಿಸು…(ಕವನ + ಕಿರು ಬರಹ)

00049. ಯುಗಾದಿಯಾಗಲಿ ಜಾಗತಿಕ…! (ಕವನ)

00048. ಒತ್ತಡಗಳ ಬೆತ್ತ ! (ಕವನ)

00047. ಸುಖಕಿರುವ ಅವಸರ….! (ಕವನ)

00046. ತ್ಸುನಾಮಿ ಹೊತ್ತಲಿ…(ಕವನ)

00045. ಗುಬ್ಬಣ್ಣನ ಸ್ವಗತಗಳು (ಚುಟುಕಗಳು)

00044. ಮುಗಿದರೆ ಇಹ ವ್ಯಾಪಾರ…..(ಕವನ)

00043. ಮಾತಿಗೊಬ್ಬರ ….(ಕವನ)

00042. ವಚನದಲ್ಲಿ ನಾಮಾಮೃತ ತುಂಬಿದ ವಚನಾಂಜಲಿ ಕಾರ್ಯಕ್ರಮ (ವರದಿ) (ಕನ್ನಡ ಸಂಘ + ವರದಿ + ಲೇಖನ)

00041. ‘ಕನ್ನಡ ಪ್ರಭ’ದ ಕಬ್ಬಿಗ ತೋಟದಲ್ಲರಳಿದ ಡಬ್ಲ್ಯು. ಬಿ. ಏಟ್ಸನ ಕವನ : ನನ್ನ ಮೊದಲ ಅನುವಾದದ ಯತ್ನ..(ಕವನ + ಬರಹ)

00040. ಆಗ್ನೇಯೇಷ್ಯಾದ ಹಣ್ಣಿನ ರಾಣಿ – ‘ಮಾಂಗಸ್ಟೀನ್’! (ಹಣ್ಣುಗಳ ಪರಿಚಯ + ಲಘು ಹಾಸ್ಯ)

00039. “ಮುದ್ದಣ್ಣ ಮನೋರಮೆ ಕಲಿತ ಚೀನಿ ಭಾಷೆ – 01!” (ಹಾಸ್ಯಬರಹ + ಹರಟೆ + ವ್ಯಂಗ್ಯ)

00038 – ಹೊಸ (ಹಳೆ) ರುಚಿ: “ಹಸಿ-ಹುಳಿ” (ಹೊಸ ರುಚಿ + ಲಘು ಹಾಸ್ಯ)

00037 – ರುಚಿಗೆ ರಾಜಾ, ವಾಸನೆಯೆ ಗಾರ್ಬೇಜಾ! (ಹಣ್ಣುಗಳ ಪರಿಚಯ + ಲಘು ಹಾಸ್ಯ)

00036 – ಈ ಕೆಂಪಮ್ಮನ ಹೆಸರೆ ಡ್ರಾಗನ್ ಫ್ರೂಟು, ನೋಡಲೆ ಸೊಗಸು ಅವಳಾಕಿದ ಸೂಟು! (ಹಣ್ಣುಗಳ ಪರಿಚಯ + ಲಘು ಹಾಸ್ಯ)

00035 – ಜುಟ್ಟಿನ ಬಟ್ಟೆ ಹೊದ್ದ ‘ಕೇಶೀರಾಜ’, ಮುತ್ತಿನ ಬಣ್ಣದ ‘ರಂಬೂತಾನ್’ ಹಣ್ಣೆ ಖನಿಜ! (ಹಣ್ಣುಗಳ ಪರಿಚಯ + ಲಘು ಹಾಸ್ಯ)

00034 – ವಿಷಾಪಹಾರಿ ‘ಡ್ರಾಗನ್ನಿನ ಕಣ್ಣು’, ಈ ರುಜಾಪಹಾರಿ ‘ಲೊಂಗನ್’ ಹಣ್ಣು! (ಹಣ್ಣುಗಳ ಪರಿಚಯ + ಲಘು ಹಾಸ್ಯ)

033A – ಸಿಂಗಾಪುರದ “ಹಾವ್ ಪಾರ ವಿಲ್ಲಾ” ದೃಶ್ಯ ಕಲಾ ತೋಟ! (photos) (ಪ್ರವಾಸಿ ತಾಣ ಪರಿಚಯ + ಪ್ರವಾಸ ಅನುಭವ)

033 – ಸಿಂಗಪುರದಲ್ಲಿನ ಚೀಣಿ ದೃಶ್ಯ ಕಾವ್ಯ “ಹಾವ್ ಪಾರ್ ವಿಲ್ಲಾ” ( ಪ್ರವಾಸಿ ತಾಣ ಪರಿಚಯ + ಪ್ರವಾಸ ಅನುಭವ + ಲಘು ಹಾಸ್ಯ)

00032 – ಸಂಪತ್ತಿನ ಬೀಜ, ಸಸಿ ಮತ್ತು ವೃಕ್ಷಗಳ ನೀತಿ ಭೋಧಕ ಕಥೆ (ಆಧುನಿಕ ಪುರಾಣ ಕಥಾ ಕಾಲಕ್ಷೇಪ)! (ಆಧುನಿಕ ನೀತಿ ಭೋಧೆ + ವಿಡಂಬನೆ + ವ್ಯಂಗ್ಯ)

00031 – ಅಪೂರ್ವ ಕವನದ ಕುರಿತು ಹಿರಿಯ ಕವಿಯೊಬ್ಬರ ಮಾತು (ಲೇಖನ + ಬರಹ + ಪ್ರಬಂಧ + ಕವನ + ವ್ಯಕ್ತಿತ್ವ )

00030 – ಪುಸ್ತಕ ವಿಮರ್ಶೆ: ಮಾವೋನ ಕೊನೆಯ ನರ್ತಕ (ಪುಸ್ತಕ ವಿಮರ್ಶೆ)

00029. ಇರುವೆ ಮತ್ತು ಒಂದು ತುಂಡು ರೊಟ್ಟಿಯ ಕಥೆ! (ಆಧುನಿಕ ನೀತಿ ಭೋಧೆ + ವಿಡಂಬನೆ + ವ್ಯಂಗ್ಯ)

00028. ಸಿಂಗನ್ನಡಿಗರಿಂದ ಸಿಂಗನ್ನಡಿಗರಿಗಾಗಿ! – ಸಿಂಗಾರ ಉತ್ಸವ 2013 (ಕನ್ನಡ ಸಂಘ + ವರದಿ + ಲೇಖನ )

00027. ಗುಬ್ಬಣ್ಣನ ಯೂನಿವೆರ್ಸಲ್ ಸ್ಟುಡಿಯೊ ದಂಡಯಾತ್ರೆ ! (ಭಾಗ – 02) (ಹಾಸ್ಯಬರಹ + ಹರಟೆ)

00026. ಗುಬ್ಬಣ್ಣನ ಯೂನಿವೆರ್ಸಲ್ ಸ್ಟುಡಿಯೊ ದಂಡಯಾತ್ರೆ ! (ಭಾಗ – 01) (ಹಾಸ್ಯಬರಹ + ಹರಟೆ)

00025. ಸರಿಯಪ್ಪಾ ಸಾಕು ಬಿಡು ಕಲಿಸಿದ್ದು ಸುಗ್ಗಿ, ಉರು ಹೊಡೆದೇ ಕಲಿವೆ ನಾ ಕನ್ನಡದ ಮಗ್ಗಿ! ( ಲಘು ಹಾಸ್ಯ + ಕಥನ + ಅನುಭವ)

00024. ಜತೆ ನೀ ಕಾಡಿಗೆ , ಹೋಗಲಿಲ್ಲವೇಕೆ ಊರ್ಮಿಳೆ? (ಬರಹ + ಕಾವ್ಯಬರಹ + ಪೌರಾಣಿಕ + ವ್ಯಕ್ತಿತ್ವ + ಪಾತ್ರ)

00023. ಶೂರ್ಪನಖಿ, ಆಹಾ! ಎಂಥಾ ಸುಖಿ! (ಬರಹ + ಕಾವ್ಯಬರಹ + ಪೌರಾಣಿಕ + ವ್ಯಕ್ತಿತ್ವ + ಪಾತ್ರ)

00022. ದುರಂತ ನಾಯಕಿ ಸೀತೆಯ ಬದುಕು………! (ಬರಹ + ಕಾವ್ಯಬರಹ + ಪೌರಾಣಿಕ + ವ್ಯಕ್ತಿತ್ವ + ಪಾತ್ರ)

00021. ಶ್ರೀ ರಾಮನಿಗೇನಿತ್ತನಿವಾರ್ಯ….? (ಬರಹ + ಕವನ + ಪೌರಾಣಿಕ + ವ್ಯಕ್ತಿತ್ವ + ಪಾತ್ರ)

00020. ಈ ದಿನ ಜನುಮದಿನಾ…..! (ಬರಹ + ಕವನ + ನೆನಪು + ಭಾವನೆ)

00019. ‘ಐ’ಗಳ ಪುರಾಣ – 01….’ಐ’-ಪೋನು, ಪಾಡು, ಪ್ಯಾಡುಗಳ ಪಾಡಿನ ಹರಟೆ, (ಪ್ರಬಂಧ + ಲೇಖನ + ಕಥನ + ಹರಟೆ + ಅನುಭವ)

00018. ಸಿಂಗಪೂರ ಸುತ್ತಾಟ, ಊಟ – ಸಿಕ್ಕಿತ ಕನಿಷ್ಟ ರೋಟಿ, ಪರಾಟ..? (ಪ್ರವಾಸದ ಅನುಭವ + ಕವನ + ಲಘು ಹಾಸ್ಯ )

00017. ಹುಡುಕೂ, ವರ್ಷದ್ಹುಡುಕು ..! (ಹಬ್ಬ + ಹರಿದಿನ + ಸಂಪ್ರದಾಯ + ಬರಹ + ಲೇಖನ)

00016. ಅಂತರಂಗದಂತಃಪುರದ ಕದಪದ ಮನದನ್ನೆಯರು…! (ಬರಹ + ಕವನ + ಅನುಭವ + ಆಡಳಿತಾತ್ಮಕ + ಲಘು ಹಾಸ್ಯ)

00015 – ತರ ತರ ಋತು ಸಂವತ್ಸರ……ಹಳತೊಸತು ಮೇಳೈಸಿತೊ ಬೆರೆತು! (ಹಬ್ಬ + ಹರಿದಿನ + ಸಂಪ್ರದಾಯ + ಬರಹ + ಕವನ)

00014 – ಉಚ್ಚೈಶ್ರವಸ್ಸಿನ ಕಪ್ಪು ಬಾಲದಮಚ್ಚೆ….! (ನೀಳ್ಗಾವ್ಯ + ಕಾವ್ಯ + ಪೌರಾಣಿಕ)

00013 – ಹಾರುತ ದೂರಾದೂರ…..! (ಅನುಭವ + ಪ್ರಬಂಧ + ಹಾಸ್ಯಲೇಖನ + ಲಘು ಹಾಸ್ಯ)

00012. ಹೆಚ್ಚು ಬೆಲೆಯೆಂದರೆ ಶ್ರೇಷ್ಟ ಗುಣಮಟ್ಟವಿರಬೇಕೆಂದೇನಿಲ್ಲ, ಗೊತ್ತಾ! (ಆಡಳಿತಾತ್ಮಕ + ಮ್ಯಾನೇಜ್ಮೆಂಟು + ವ್ಯವಸ್ಥೆ + ವಾಸ್ತವ)

00011. ಲಘು ಪ್ರಬಂಧ: ನನ್ನ ಪ್ರಧಾನ ಸಂಪಾದಕ ಹುದ್ದೆ…! (ಅನುಭವ + ಪ್ರಬಂಧ + ಹಾಸ್ಯಲೇಖನ + ಲಘು ಹಾಸ್ಯ)

00010. ವಿಮರ್ಶೆ : ಕವನ ಸಂಕಲನ: “ಅಂತರ ಹಾಗು ಇತರ ಕವನಗಳು” ಕವಿ: ವಸಂತ ಕುಲಕರ್ಣಿ

00009. ತೊಡಕುಗಳನು ಬಿಡಿಸಲು “ತೊಡಕಿನ ಸಿದ್ದಾಂತ – 01” – (ತೊಡಕು ಸಿದ್ದಾಂತ) (ತಾಂತ್ರಿಕ + ಮ್ಯಾನೇಜ್ಮೆಂಟು + ವ್ಯವಸ್ಥೆ )

00008. ಆ “ಸ್ವಾಭಿಮಾನದ ನಲ್ಲೆ” ಯರ ನೆನೆನೆನೆದು…..(03) (ಬರಹ + ವಿಡಂಬನೆ + ಲೇಖನ)

00007. ಆ “ಸ್ವಾಭಿಮಾನದ ನಲ್ಲೆ” ಯರ ನೆನೆನೆನೆದು…..(02) (ಬರಹ + ವಿಡಂಬನೆ + ಲೇಖನ)

00006. ಆ “ಸ್ವಾಭಿಮಾನದ ನಲ್ಲೆ” ಯರ ನೆನೆನೆನೆದು…..(01) (ಬರಹ + ವಿಡಂಬನೆ + ಲೇಖನ)

00005. ಮೆಲ್ಲುಸಿರೆ ಸವಿಗಾನ….! (ಬರಹ + ಭಾವನೆ + ವಿಮರ್ಶೆ)

00004. ಗಮನೇಶ್ವರಿಯ ಗಮಕ, ವಯಸ್ಸಿನಾ ಮಯಕ…! (ಬರಹ + ಅನುಭವ)

00003. ನೀನೋದಿದ ವಿದ್ಯೆಗೆಲ್ಲಿಡುವೆ ನೈವೇದ್ಯ? (ಲೇಖನ)

00002. ಏನಾಗಿದೀದಿನಗಳಿಗೆ? (ಲೇಖನ)

00001. ಮೊದಲ ಬ್ಲಾಗ್ – ಮನದಿಂಗಿತಗಳ ಸ್ವಗತ! (ಬರಹ + ಕವನ)