00136. ಹೋಗ್ಲಿ ಬಿಡಿ, ಹಾಳಾಗ್ಲಿ ಬಿಡ್ರಿ


00136. ಹೋಗ್ಲಿ ಬಿಡಿ, ಹಾಳಾಗ್ಲಿ ಬಿಡ್ರಿ..(ಹೊಸದ ತಂದು ಹಳತ ಮರೆತುಬಿಡಿ..)
__________________________________________________

ಆಧುನಿಕ ಜೀವನದಲ್ಲಿ ಸಹಚರರಂತೆ ಕೈಗೂಡಿಸಿರುವ ಅನೇಕಾನೇಕ ಉಪಕರಣಗಳು, ನಮ್ಮ ದೈನಂದಿನ ಬದುಕನ್ನು ಸುಗಮಗೊಳಿಸಿದಷ್ಟೆ ಸಹಜವಾಗಿ, ಬದುಕುವ ಶೈಲಿಯಲ್ಲಿ ಬದಲಾವಣೆ ತಂದುಬಿಟ್ಟಿವೆ. ಆ ಬದಲಾವಣೆಯ ಒಂದು ಪ್ರಮುಖ ಬಳುವಳಿ – ಸೋಮಾರಿತನ. ಮಿಕ್ಸಿ, ಗ್ರೈಂಡರುಗಳು, ಫ್ರಿಡ್ಜು, ಗ್ಯಾಸು, ವಾಷರುಗಳು – ಯಾವುದನ್ನೆ ಹೆಸರಿಸಿದರೂ ಒಂದು ಮುಖದಲ್ಲಿ ಬಳಕೆಯ ಸುಗಮತೆಯಿದ್ದರೆ, ನಾಣ್ಯದ ಮತ್ತೊಂದು ಮುಖ ಅದರ ಅಡ್ಡ ಪರಿಣಾಮಗಳು. ಆಧುನಿಕ ಆಕರ್ಷಣೆಯನ್ನು ನಿಭಾಯಿಸಿ, ಸಂಭಾಳಿಸಿ, ಅಳವಡಿಸಿಕೊಳ್ಳದೆ ದೂರವಿರುವ ಸಂತರು ನಾವಲ್ಲದ ಕಾರಣ ಅದರ ಪರಿಧಿಗೆ ಸಿಗದೆ ಹೊರಗುಳಿಯುವುದು ಅಸಾಧ್ಯ….

https://nageshamysore.wordpress.com/00136-%e0%b2%b9%e0%b3%8b%e0%b2%97%e0%b3%8d%e0%b2%b2%e0%b2%bf-%e0%b2%ac%e0%b2%bf%e0%b2%a1%e0%b2%bf-%e0%b2%b9%e0%b2%be%e0%b2%b3%e0%b2%be%e0%b2%97%e0%b3%8d%e0%b2%b2%e0%b2%bf-%e0%b2%ac%e0%b2%bf%e0%b2%a1/

ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
WeBlog site: nageshamysore.wordpress.com

00131. ಮಳೆಯಾಗುತ ಸಾಂಗತ್ಯ….


ಮಳೆಯಾಗುತ ಸಾಂಗತ್ಯ….
________________________

ಮಳೆಗಳಿಗೂ ಭಾವನೆಗಳಿಗೂ ಅವಿನಾಭಾವ ಸಂಬಂಧ. ಭಾವನೆಯ ಹೂರಣವೆ ಪ್ರೀತಿ, ಪ್ರೇಮ, ಮುನಿಸು, ದ್ವೇಷಾಸೂಯೆಗಳ ಸಂಕಲನ. ಹೀಗಾಗಿ ಮಳೆ ಬಂದಾಗ ಭಾವ ಪುಳಕಿತವಾದಷ್ಟೆ ಸಹಜವಾಗಿ, ಹೂರಣದ ಪದರಗಳು ಉದ್ದೀಪನಗೊಳ್ಳುತ್ತವೆ. ಸನಿಹ ಮುನಿಸಾಗುವುದಾಗಲಿ, ಮುನಿಸ ಮರೆತ ಸಿಹಿ ಮನಸಾಗುವುದಾಗಲಿ – ಚೆಲ್ಲಾಡಿದ ಹನಿಗಳ ಪ್ರೇರೇಪಣೆ ಯಾವ ರೀತಿಯ ಉದ್ಘೋಷವನೆಬ್ಬಿಸಿ, ಮನದಾವ ಮೂಲೆಯ ಅನುರಣಿತವನ್ನು ಅಲುಗಾಡಿಸಿ ಧೂಳೆಬ್ಬಿಸುವುದೊ ಅರಿವಾಗದು. ಗೊತ್ತಾಗುವುದೇನಿದ್ದರೂ, ಒಳಗಿನಿಂದಾವುದೊ ಲಹರಿ; ಝಿಲ್ಲೆನುವ ಝರಿಯಾಗಿ ತಟ್ಟನೆ ಚಿಮ್ಮಿ ಹರಿದು ಅಲ್ಲಿಯವರೆಗೆ ಆವರಿಸಿದ್ದ ಭಾವದ ತೆರೆಗೆ ಅಪ್ರಸ್ತುತತೆಯ ಮುಸುಕೆಳೆದು, ಹೊಸತಿನ ಹುರುಪು, ಉಲ್ಲಾಸ, ಹರ್ಷಗಳನ್ನು ಕಟ್ಟಿಕೊಡುವ ಹರಿಕಾರನಾಗಿಬಿಡುತ್ತದೆ.

https://nageshamysore.wordpress.com/00131-%e0%b2%ae%e0%b2%b3%e0%b3%86%e0%b2%af%e0%b2%be%e0%b2%97%e0%b3%81%e0%b2%a4-%e0%b2%b8%e0%b2%be%e0%b2%82%e0%b2%97%e0%b2%a4%e0%b3%8d%e0%b2%af/

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

00130. ರಾಜರತ್ನಂ ನೆನಪಿಗೆ…


ರಾಜರತ್ನಂ ನೆನಪಿಗೆ…
______________
.
ನಾಳೆ (೦೫ ನೆ ಡಿಸೆಂಬರ) ಅಭಿಮಾನಿ ಬಳಗದಲ್ಲಿ ಪ್ರೀತಿಯಿಂದ ಗುಂಡು ಪಂಡಿತರೆಂದೆ ಕರೆಸಿಕೊಳ್ಳುವ ಕನ್ನಡದ ಹಿರಿಯ ಪ್ರಖ್ಯಾತ ಕವಿ ಜಿ.ಪಿ.ರಾಜರತ್ನಂರವರ ಜನ್ಮದಿನ. ಎಷ್ಟೋ ಸಾಮಾನ್ಯ ಜನರಿಗೆ ಅವರ ಹೆಸರು ಗೊತ್ತಿರದಿದ್ದರೂ, ಅವರ ಗುಂಡಿನ ಪದ್ಯಗಳು ಚೆನ್ನಾಗಿ ತಿಳಿದಿರುತ್ತವೆ – ಅಷ್ಟರಮಟ್ಟಿಗೆ ಪ್ರಸಿದ್ದವಾದ ಕುಡಿತದ ಹಾಡುಗಳು ಶ್ರೀ ರಾಜರತ್ನಂ ರವರದು. ‘ರತ್ನನ ಪದಗಳು’ ಕವಿಯಾಗಿ ಇವರ ಹೆಸರನ್ನು ಅಜರಾಮರಗೊಳಿಸಿದರೆ, ಉತ್ಕೃಷ್ಟ ಹಾಗೂ ಅಡಂಬರವಿಲ್ಲದ ಜನಪದದ ಯಥಾವತ್ ದಾಖಲೆಯಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ಗಟ್ಟಿಯಾಗಿ ನೆಲೆಯೂರಿಬಿಟ್ಟಿದೆ……..
.
01. ಕುಡೀದಿದ್ರೂ ಒಂದೇ ಒಂತೊಟ್ಟು
02. ಗುಂಡು ಪಂಡಿತ ರಾಜರತ್ನಂ
.
https://nageshamysore.wordpress.com/00130-%e0%b2%b0%e0%b2%be%e0%b2%9c%e0%b2%b0%e0%b2%a4%e0%b3%8d%e0%b2%a8%e0%b2%82-%e0%b2%a8%e0%b3%86%e0%b2%a8%e0%b2%aa%e0%b2%bf%e0%b2%97%e0%b3%86/

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು