00658. ನಮ್ಮ ಚಿತ್ರ ನಿಮ್ಮ ಕವನ – ೩೬ (3K ನಮ್ಮ ಚಿತ್ರ ನಿಮ್ಮ ಕವನ – ೩೬)


00658. ಕಾಲಯಾನದ ಕ(ನ)ಸು
______________________________
(3K ನಮ್ಮ ಚಿತ್ರ ನಿಮ್ಮ ಕವನ – ೩೬) 

 

ಮೊಗ್ಗರಳುವ ಮೊದಲೇ
ಸೋತು ಮಲಗಿಬಿಟ್ಟೆ ಹೀಗೆ
ಕಾಲಯಾನದೆ ನಿದ್ರೆ;
ಹೇಗೊ ಮಾಡಲ್ಹವಣಿಸುತ್ತ
ಕಾಲಯಂತ್ರದ ಮಾದರಿ ನಮೂನೆ.
ಏನಿದ್ದರೇನು ಬಿಟ್ಟರೇನು ಸರಕು ?
ಸಾಕೀ ಗುಜರಿ ಮಾಲು ದಿಮ್ಮಿ ಸರಪಳಿ
ಕೆತ್ತುವೆನದರಲ್ಲೇ ಹೊಸತು
ಖರ್ಚಿಲ್ಲದ ಕಾಲಯಂತ್ರ
ಕಾಸಿಲ್ಲದ ದೂರ ಪಯಣ..
ಕನಿಷ್ಠ ಕನಸಿನಲ್ಲಾದರೂ..!
ಮರೆತು ಹೊಟ್ಟೆ ಬಟ್ಟೆ ಸುಪ್ಪತ್ತಿಗೆ
ಬಿಸಿಲು ಗಾಳಿ ಮಳೆ ಚಳಿ
ಋತುಗಾನದ ತುರ್ತು..
ಎಲ್ಲರೂ ಹೇಳುತ್ತಿದ್ದಾರೆ
ಭವಿತ ಸುಂದರ ಮಧುರವೆಂದು
ತಾಳಲಾಗದೀ ಬೇಗುದಿ ಬದುಕು
ಜಿಗಿದುಬಿಡುವೆ ಆ ಭವಿತಕೆ
ಸಿದ್ದವಾದೊಡನೆ ಕಾಲದ ಹಕ್ಕಿ
ಒಂದೆಟಿಗೆ ದಾಟೆಲ್ಲ ಬವಣೆಗಳ ಕಾಲ
ಸುಖದ ಮಡಿಲಿನ ಚೀಲಕೆ
ನನಸಾಗದಿದ್ದರೇನು ?
ಕನಸಲ್ಲಾದರೂ..

– ನಾಗೇಶ ಮೈಸೂರು

00592. ಕಾಲಯಾನದೆ ಸಖಿ..


00592. ಕಾಲಯಾನದೆ ಸಖಿ..
____________________  

ಕಾಲ ಹಾಸಿದ ಚಾಪೆಯಂತೆ
ಬಿದ್ದಿರುತ್ತದೆಯಂತೆ ಹಾಗೆ
ಭೂತ ಪ್ರಸ್ತುತ ಭವಿತದಾಯಮದೆ.
ತೆಗೆದಿಟ್ಟ ಸ್ಥಿರಚಿತ್ರದ ಹಾಗೆ
ದಿನ ಸಮಯ ವೇಳೆ ನಮೂದಿಸಿ
ರಾಶಿನಕ್ಷತ್ರಗಳ ಹೊಂದಾಣಿಸಿ.

ಬರಿ ನಾನಲ್ಲ ಹೇಳಿದ್ದು
ಐನ್ಸ್ಟೈನನ ಮಾತಿದು ಗೊತ್ತಾ.
ಪ್ರತಿಯೊಂದು ಚಿತ್ತಾರ ಕಟ್ಟು ಹಾಕಿ
ಕಾಲದ ಮೊಳೆಗೆ ತಗುಲಿ ಹಾಕಿದೆ ತನ್ನೆ
ನೇತಿಟ್ಟ ಪಟ ತನ್ನನಲ್ಲೇ ಮರುಕಳಿಸಿ
ನಿರಂತರದೆ ಪುನರಾವರ್ತಿಸಿ ಅದೆ ಗಳಿಗೆ.

ಪಿಚ್ಚೆನಿಸಿಬಿಟ್ಟಿತು ಗೆಳತಿ ಸಖಿ
ಇಲ್ಲ ಗತ ಕಾಲಯಾನದ ವಿಮಾನ.
ಇಂದು ನೀ ನಿಂತ ದೂರಕೆ ಹುಳು ಹೃದಯ
ಚಡಪಡಿಸಿ ಮರುಗಿದೆ ಸರಿತಪ್ಪಿಗೆ ಮಮ್ಮಲ
ಸಿಕ್ಕಿದರೊಂದವಕಾಶ ಭೂತಕಾಲದ ಪಟದೆ
ಬೇಡದ್ದನಳಿಸಿ, ಬೇಕಿದ್ದ ಮಾತ್ರ ತಂದು ಪ್ರಸ್ತುತಕೆ…

– ನಾಗೇಶ ಮೈಸೂರು

(Picture source: http://vignette4.wikia.nocookie.net/timemachine/images/4/45/The_Time_Machine.jpg/revision/latest?cb=20090502052213)

00330. ಜ್ಞಾನ ಯಾನ, ಅನುಭವ ಘನ..!


00330. ಜ್ಞಾನ ಯಾನ, ಅನುಭವ ಘನ..!
_____________________________

ಪುಸ್ತಕ ಮಸ್ತಕಕೇರಿಸಿ
ಹೊತ್ತು ಮೆರೆಸಿದೆ ಸುತ್ತಿ
ಭಟ್ಟಿ ಇಳಿದೀತೆ ತಳಕೆ ?
ತಲೆಯೊಳಗಿನ ಬುಡಕೆ ||…..

(To read the full poem please click on this page link : https://nageshamysore.wordpress.com/00330-%e0%b2%9c%e0%b3%8d%e0%b2%9e%e0%b2%be%e0%b2%a8-%e0%b2%af%e0%b2%be%e0%b2%a8-%e0%b2%85%e0%b2%a8%e0%b3%81%e0%b2%ad%e0%b2%b5-%e0%b2%98%e0%b2%a8/)
Thanks and best regards,

Nagesha MN 

00293. ಸುಖ ಪಯಣ


00293. ಸುಖ ಪಯಣ
_________________________

ವಿಮಾನದಲಿ ಕೂತಾ ಹೊತ್ತು
ಗೊತ್ತಾ ತಟ್ಟನೆ ಕಳವಳ ?
ಕಳಚಿ ಬಿದ್ದಂತೆ ತಳಕೆ, ಪಾತಾಳಕೆ
ನೆಲವೊ? ನೀರೊ? ಪಂಚ ಭೂತಗಳಾಳ ||
……………

https://nageshamysore.wordpress.com/00293-%e0%b2%b8%e0%b3%81%e0%b2%96-%e0%b2%aa%e0%b2%af%e0%b2%a3/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha MN
WeBlog site: nageshamysore.wordpress.com

00169. ಕಾಣದ ಮನ ವ್ಯಾಪಾರ


00169. ಕಾಣದ ಮನ ವ್ಯಾಪಾರ
________________________

ಮನದ ಅಪಾರ ಶಕ್ತಿಯ ವಿಸ್ಮಯ ಮಾತಲ್ಹಿಡಿಯಲಾಗದ ಮಹಾಕಾಯ. ಬರೆದು ಕಟ್ಟಿಡಲಾಗದ ಅನಂತ ವಿಸ್ತಾರದ ದಾಯ. ಅದರ ಯಾನದ ಪರಿಯನ್ನು ಸ್ವೇಚ್ಛೆಯೆನ್ನಬೇಕೊ, ಸ್ವಾತ್ಯಂತ್ರವೆನ್ನಬೇಕೊ ಎನ್ನುವ ಗೊಂದಲ ಒಂದೆಡೆಯಾದರೆ, ಅದನ್ನು ನಿಯಂತ್ರಿಸ ಬಯಸಿ ಕಡಿವಾಣ ಹಾಕಿ ಜಿತೇಂದ್ರಿಯರಾಗ ಹೊರಟವರ ಆಟವಾಡಿಸಿ ಕಾಡುವ ಪರಿ ಅದರ ಅದ್ಭುತ ಶಕ್ತಿಯ…..

https://nageshamysore.wordpress.com/00169-2/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com