00668. ರಾಜ್ ಇಲ್ಲದ ಕನ್ನಡವೆಂತು ?


00668. ರಾಜ್ ಇಲ್ಲದ ಕನ್ನಡವೆಂತು ?
___________________________

ಏನಪ್ಪಾ ಗತಿ ಕನ್ನಡ ?
ನಿನ್ನ ಹೆಸರಿಲ್ಲದಿದ್ದರೆ ಅಡ್ಡ
ನುಂಗಿ ನೀರು ಕುಡಿದು ಸಕಲ
ಕನ್ನಡ ಹುಡುಕಿದರೂ ಸಿಗದ ಕಾಲ..

ಕಾಲಾಡಿಸಲು ಬಂದವರು
ಜೀವಕಾಲವಿಲ್ಲೇ ಕಳೆವ ಜನರು
ಕಲಿತಾಡಲಿ ಕನ್ನಡನುಡಿ ಬೆರೆಯುತ್ತೆ
ನೋಡಲಿ ಸಾಕು ಸಿನಿಮಾಗಳೆ ಕಲಿಸುತ್ತೆ..

ಮಕ್ಕಳು-ಮರಿಗು ರೀತಿ
ಜೀವನಮೌಲ್ಯದ ಪಾಠ ನೀತಿ
ಬೇಕಲ್ಲವೆ ಬದುಕಿನಡಿಪಾಯ ಸೂತ್ರ
ತೋರಿಸಿ ಸಾಕು ರಾಜಣ್ಣನ ಜೀವನ ಚೈತ್ರ..

ಜನುಮ ದಿನ ಬರಿ ನೆಪ
ನಿತ್ಯ ಸಿನಿಮ ಹಾಡಲಿ ಜಪ
ನೋಡಿ ಕನ್ನಡ ಟೀವಿ ಚಂದದಲಿ
ಚಂದನ ಸುಗಂಧ ಕಸ್ತೂರಿ ಹರಡಲಿ..

ಬೇಡಿನ್ನೇನು ಸ್ಮರಣೆ ನೆನಪು
ಕನ್ನಡ ಮಾತಾಡಿದರದೆ ಕಂಪು
ನಾಡುನುಡಿ ಉಳಿಸೆ ಜೊತೆಗೂಡೆ
ಜತೆಯಾಗಿ ಸದಾ ಕನ್ನಡ ರಾಜನ ಹಾಡೆ..

– ನಾಗೇಶ ಮೈಸೂರು

00667. ಡಾಕ್ಟರ್ ರಾಜ್ !


00667. ಡಾಕ್ಟರ್ ರಾಜ್ !
__________________

ಏಪ್ರಿಲ್ ೨೪ ರಾಜ್ ಹುಟ್ಟಿದ ಹಬ್ಬದ ನೆನಪಿಗಾಗಿ ಕೆಲವು ಹಾಯ್ಕುಗಳು.


(೦೧)
ಹಿಂದೆಯೂ ಇಲ್ಲ
ಮುಂದೂ ಇರುವುದಿಲ್ಲ
– ಡಾಕ್ಟರ ರಾಜ್ !

(೦೨)
ರಾಜ್ ಹೆಸರು
ಭದ್ರತೆ ಕನ್ನಡಕೆ.
– ಭಾಗ್ಯವಂತರು !

(೦೩)
ವೀರ ಕೇಸರಿ
ಸ್ವಾಭಿಮಾನದ ನಲ್ಲೆ
– ಬಾಲ್ಯದಿಂದಲೆ !

(೦೪)
ಕಠಾರಿ ವೀರ
ಹಾಯಾದ ಈ ಸಂಗಮ
– ಪೂರ್ವ ಸುಕೃತ !

(೦೫)
‘ನಾನಿರುವುದೆ
ನಿಮಗಾಗಿ’ ಹಾಡಿದ
– ಸ್ವರ ಮಯೂರ !

(೦೬)
ಬೆಂಕಿಯ ಚೆಂಡು
ಬಂಕಾಪುರದ ಗಂಡು
– ಇನ್ನೂ ಜೀವಂತ !

(೦೭)
‘ನಾನು’ ಹೋದರೆ
ಹೋದೆನು ಅಂದೆ ನಿಜ.
– ಹೋಗೆ ಬಿಟ್ಟೆಯಾ?

(೦೮)
ಇದ್ದರೂ ಲಕ್ಷ
ಹೋದರೂ ಲಕ್ಷ ಜನ
-ಸದಾ ಜೀವಂತ!

(೦೯)
ಬಭ್ರುವಾಹನ
ಅರ್ಜುನನ ಕಡಿದ !
– ಎಲ್ಲವೂ ನೀನೆ !!

(೧೦)
ಪುರದ ಪುಣ್ಯ
ಪುರುಷ ರೂಪದಲಿ..
– ಸರ್ವಾಂತರ್ಯಾಮಿ !

– ನಾಗೇಶ ಮೈಸೂರು

(Picture source: https://en.m.wikipedia.org/wiki/File:Actor_Rajkumar.jpg)

00652. ರಾಜಣ್ಣನ ಹತ್ತು ವರ್ಷದ ದೂರ..


00652. ರಾಜಣ್ಣನ ಹತ್ತು ವರ್ಷದ ದೂರ..
____________________________

  
(Picture source : one India )

ಕೈ ಬೀಸಿ ನಡೆದೆ ನೀನು
ಬಂಗಾರದ ಮನುಷ್ಯ
ಮಾಡಿಟ್ಟು ಕನ್ನಡ ಸಿನಿಮಾ
ನೀನಾಳಿದ ಸಾಮ್ರಾಜ್ಯದ ಸಂಭ್ರಮ || ಕೈ ಬೀಸಿ ||

ಹತ್ತಾಯಿತು ನೋಡಿಗಾಗಲೆ
ಯಾಕೋ ಹತ್ತಿಲ್ಲವಿನ್ನು ಈ ತಲೆಗೆ!
ನೀನಿಲ್ಲಿಲ್ಲ ಎನ್ನುವ ಸತ್ಯ
ಏರಬಿಡದ ನೆನಪಿನ ಭತ್ಯ ! || ಕೈ ಬೀಸಿ ||

ಬಿಡಲೆಲ್ಲಿ ಸಿನಿಮಾ ಸಾಲು
ಟಿವಿ ಪರದೆ ಮೊಬೈಲು ಹಾಲು
ಗುಣುಗುಣಿಸುತಿರೆ ನಿನ್ನದೇ ಧ್ಯಾನ
ನೀ ಹೋದೆಯೆಂದು ಹೇಗೆ ನಂಬೋಣಾ ? || ಕೈ ಬೀಸಿ ||

ನೀ ಬರೆದು ಹೋದೆ ಸುವರ್ಣ ಯುಗ
ತುಂಬಿಲ್ಲ ಇನ್ನು ಬಿಟ್ಟು ಹೋದ ಜಾಗ
ಬಂದರು ಹೋದರು ನೂರಾರು
ಮೂರು ದಿನದ ಸವಕಲು ತೇರು.. || ಕೈ ಬೀಸಿ ||

ಬಂದವರು ಜಪಿಸುತ ನಿನ್ನನೆ
ನಿನ್ನಭಿಮಾನಿಗಳ ಎದೆಯೊಳಗೆ
ತಾವಿಗಿಷ್ಟು ತಪಿಸುತಲೇ ಇಹರು
ದೇವತಾಮನುಷ್ಯ ನೀನೆಂದರಿಯದೆ.. || ಕೈ ಬೀಸಿ ||

– ನಾಗೇಶ ಮೈಸೂರು

00285. ಇದ್ದರು ಲಕ್ಷ, ಹೋದರು ಲಕ್ಷ, ಗೊತ್ತ ? (ಡಾ. ರಾಜ್)


00285. ಇದ್ದರು ಲಕ್ಷ, ಹೋದರು ಲಕ್ಷ, ಗೊತ್ತ ? (ಡಾ. ರಾಜ್)
________________________________________

ಈಚೆಗೆ ಬಣ್ಣದಲ್ಲಿ ಬಿಡುಗಡೆಯಾದ ಡಾ. ರಾಜ್ ಅಭಿನಯದ ‘ಕಸ್ತೂರಿ ನಿವಾಸ’ದ ಮರುಬಿಡುಗಡೆಯ ಕೆಲವು ದೃಶ್ಯಾವಳಿಗಳನ್ನು ನೋಡುತ್ತಿದ್ದಂತೆ ನೆನಪಾದದ್ದು ಈ ನಾಣ್ಣುಡಿ – ‘ಆನೆ ಇದ್ದರು ಲಕ್ಷ, ಹೋದರೂ ಲಕ್ಷ’. ಕೆಲವದರ ಮೌಲ್ಯ ಅದರ ಭೌತಿಕ ಅಸ್ತಿತ್ವವಿರಲಿ ಬಿಡಲಿ ಕುಗ್ಗುವುದೇ ಇಲ್ಲ – ನಿರಂತರವಾಗಿ ಹಿಗ್ಗುತಲೆ ಇರುವ ಅಭೌತಿಕ, ಅಲೌಕಿಕ ಸ್ವರೂಪದ್ದು.

https://nageshamysore.wordpress.com/00286-%e0%b2%87%e0%b2%a6%e0%b3%8d%e0%b2%a6%e0%b2%b0%e0%b3%81-%e0%b2%b2%e0%b2%95%e0%b3%8d%e0%b2%b7-%e0%b2%b9%e0%b3%8b%e0%b2%a6%e0%b2%b0%e0%b3%81-%e0%b2%b2%e0%b2%95%e0%b3%8d%e0%b2%b7-%e0%b2%97/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha MN
WeBlog site: nageshamysore.wordpress.com