00807. ರೋಷಾವೃತ ವರ್ಷಗಾನ…


00807. ರೋಷಾವೃತ ವರ್ಷಗಾನ…
________________________________

ಪ್ರಕೃತಿಯ ಅಗಾಧ ಶಕ್ತಿಯೆದುರು ನಾವೆಷ್ಟು ಕುಬ್ಜರೆಂದು ಅರಿವಾಗುವುದು ಅದರ ವಿನಾಶಕಾರಕ ಪರಿಣಾಮಗಳನ್ನು ಕಣ್ಣಾರೆ ನೋಡಿಯೊ, ಕಿವಿಯಾರೆ ಕೇಳಿಯೊ ಅನುಭವಿಸಿದಾಗಲಷ್ಟೆ. ಅಂತಹ ಸಹಜ ಮತ್ತು ಸಾಧಾರಣಕಾರಕಗಳಲ್ಲಿ ಒಂದಾದ ಮಳೆ ತನ್ನ ರೌದ್ರ ರೂಪ ತಾಳಿ ಅವತರಿಸಿದರೆ ಏನಾಗಬಹುದೆಂಬ ಚಿತ್ರಣ ‘ರೋಷಾವೃತ್ತ ವರ್ಷಗಾನ’ – ರೌದ್ರತೆಯಾಗಮನದೊಂದಿಗೆ, ವಿನಾಶದುಗಮದ ಕಿಡಿಯನ್ನು ಹೊತ್ತು ತರುವ ಇದರ ಆರ್ಭಟದ ವರ್ಣಣೆ, ಆಟಾಟೋಪ ಇಲ್ಲಿನ ಮೊದಲ ಭಾಗದ ಭಾವ (ರೌದ್ರಾಗಮ ವಿನಾಶಾದುಗಮ – ಈಗಾಗಲೇ ಪ್ರಕಟಿಸಿದ ಮತ್ತೊಂದು ಪದ್ಯ)

ಎಲ್ಲಕ್ಕೂ ಅಂತ್ಯವೆಂಬುದೊಂದಿರುವಂತೆ, ಈ ರೌದ್ರಾಕಾರದ ಮಳೆಗೂ ಉಪಸಂಹಾರದ ಹೊತ್ತು ಬಂದಾಗ ಆರ್ಭಟವೆಲ್ಲಾ ಕರಗಿ, ಶಾಂತತೆಯ ತಂಗಾಳಿ ಬೀಸಲಾರಂಭಿಸಿದರೂ, ರೌದ್ರಾವತಾರದಲ್ಲಿ ಕೆಡಿಸಿಟ್ಟ ವಿನಾಶದ ಪರಿಮಾಣ ಮತ್ತು ಪರಿಣಾಮ ಎದ್ದು ಕಾಣಲಾರಂಭಿಸುತ್ತದೆ. ಅಳಿದುಳಿದವುಗಳ ಪರಿಗಣನೆ, ಅವಲೋಕನ, ಸ್ವಾಂತನ, ಸಮಾರೋಪಣ ಪ್ರಕ್ರಿಯೆಗಳಿಗೆ ಚಾಲನೆ ಕೊಡುವ ಬಗೆ ಎರಡನೆ ಭಾಗದ ಮೂಲ ಆಶಯ (ಉಪ ಸಂಹಾರ).


ಉಪ ಸಂಹಾರ (ರೋಷಾವೃತ ವರ್ಷಗಾನ – 02)
________________________________________

ಭದ್ರ ಸುಭದ್ರಗಿದ್ರ ನಿದ್ರಾವೃತ ಕಂದ ರುದ್ರ
ಅಸುವಳಿದಂತೆದ್ದು ರೋಧಿಸಿ ಗುದ್ದು ದರಿದ್ರ
ಛಿದ್ಛಿದರ ಚದರ ದುರ್ಬರ ದನಿ ಮೇಲ್ಚಾವಣಿ
ಎಗರೆಗರಿಸಿ ಹಾರಿಸಿ ಧೂಳಿಸಿ ಬೀಳಿಸಿ ಮಣಿ ||

ಭೋಗ ಭೋಗಿನಿಯೋಗ ಸಹಭಾಗಿನಿ ಸಮೆ
ಸಂಭೋಗದ ಸುರತ ನಿರತದಲೆಗೆ ಭೂರಮೆ
ಭದ್ರಾಲಿಂಗನ ಮೇಘಾಮೋಘ ಸರ್ಪಯಾಗ
ಇಂದ್ರಚಾಪಾವೃತ ವರ್ಣಜಾಲಾ ನಿಯೋಗ ||

ರತಿ ಮನ್ಮಥರಾವೇಶಾಂಗ ಸುಖಾಗಮ ದಮನ
ಮಾಡಲ್ಹವಣಿಸಿದ ಸುರೆಂದ್ರನತ್ತಿಸಿದ ಗಮನ
ಆಗ್ನಿ ಕುಂಡಕ್ಸುರಿದರಿಸಿದ ತರ ತರ ಜಲಸ್ನಾನ
ಕಾವ ಗೆದ್ದನೆ ಸೋತು ಸರಿದನೆ ವರ್ಷದಜ್ಞಾನ ||

ವರ್ಷ ಋತು ಸತು ಸಮದ್ರೂಪಿಸಿನಿತೊಳಿತು
ಧ್ವಂಸಕಾರಿಸದಲೆ ನಿರ್ವಂಶದಾಶಯ ಹೂತು
ತಂಗಾಳಿಯಲೆಯಲೆಯಾಗಿಳೆ ಸರಿ ಸಮಿತ್ತು
ಬರ್ಬರದಗರವಳಿಸಿ ನೆನೆಸಿತ ಕರಗಿ ಹೊತ್ತು ||

——————————————————————
ನಾಗೇಶ ಮೈಸೂರು
——————————————————————

00365. ರೌದ್ರಾಗಮ,ವಿನಾಶದುಗಮ (ರೋಷಾವೃತ ವರ್ಷಗಾನ)


00365. ರೌದ್ರಾಗಮ,ವಿನಾಶದುಗಮ(ರೋಷಾವೃತ ವರ್ಷಗಾನ)
__________________________________________
ಚಿತ್ರ ಕೃಪೆ: ಸ್ವಯಂಕೃತಾಪರಾಧ

 ಪ್ರಕೃತಿಯ ಅಗಾಧ ಶಕ್ತಿಯೆದುರು ನಾವೆಷ್ಟು ಕುಬ್ಜರೆಂದು ಅರಿವಾಗುವುದು ಅದರ ವಿನಾಶಕಾರಕ ಪರಿಣಾಮಗಳನ್ನು ಕಣ್ಣಾರೆ ನೋಡಿಯೊ, ಕಿವಿಯಾರೆ ಕೇಳಿಯೊ ಅನುಭವಿಸಿದಾಗಲಷ್ಟೆ. ಅಂತಹ ಸಹಜ ಮತ್ತು ಸಾಧಾರಣಕಾರಕಗಳಲ್ಲಿ ಒಂದಾದ ಮಳೆ ತನ್ನ ರೌದ್ರ ರೂಪ ತಾಳಿ ಅವತರಿಸಿದರೆ ಏನಾಗಬಹುದೆಂಬ ಚಿತ್ರಣ ‘ರೋಷಾವೃತ್ತ ವರ್ಷಗಾನ’ – ರೌದ್ರತೆಯಾಗಮನದೊಂದಿಗೆ, ವಿನಾಶದುಗಮದ ಕಿಡಿಯನ್ನು ಹೊತ್ತು ತರುವ ಇದರ ಆರ್ಭಟದ ವರ್ಣನೆ, ಆಟಾಟೋಪ ಇಲ್ಲಿನ ಭಾವ (ರೌದ್ರಾಗಮ,ವಿನಾಶದುಗಮ)

ಅಚ್ಛಾದ ಎಂಬ ಹಳೆಗನ್ನಡದ ಪದವನ್ನು ಶಾಲೆಯ ನೆನಪಿಂದ ಹೆಕ್ಕಿ (ಅಚ್ಛಾದ ಸರೋವರ), ‘ಬಿಳಿ’ ‘ಸ್ವಚ್ಛ ‘ ಅನ್ನುವ ಅರ್ಥದಲ್ಲಿ ಬಳಸಿದ್ದೇನೆ – ನೆನಪಲ್ಲಿ ತಪ್ಪಿದ್ದರೆ ತಿಳಿದವರು ದಯವಿಟ್ಟು ತಿದ್ದಲು ಕೋರುತ್ತೇನೆ (ಹಾಗೆ ಬೇರೆ ತಪ್ಪೂ ಸಹ)

ಹಿನ್ನಲೆ: ಒಂದು ನಸು ಬೆಳಕಿನ ಮುಂಜಾವಿನ ಹೊತ್ತಲಿ ಇದ್ದಕ್ಕಿದ್ದಂತೆ ಭೀಕರವಾಗಿ ಶುರುವಾದ ಮಳೆ ನಿದ್ದೆಯಿಂದ ಬದಿದೆಬ್ಬಿಸಿತು. ಆ ಹೊತ್ತಿನಲ್ಲಿನ ಆ ಮಳೆಯ ರೋಷ, ಭೀಷಣತೆ, ಸರಸರನೆ ಪದಗಳಾಗತೊಡಗಿದಾಗ ಸೆರೆ ಹಿಡಿದ ಬಗೆ ಹೀಗೆ. ಕಿಟಕಿಯಿಂದ ಕಂಡ ದೃಶ್ಯ ಪದಗಳಾಗುವ ಅವಸರದಲ್ಲಿ ಅರ್ಥರಾಹಿತ್ಯತೆಯೊ, ಪದ ವೈಭವವೊ ನುಸುಳಿಕೊಂಡಿರಬಹುದೆಂಬ ಅನಿಸಿಕೆಯಿದ್ದರೂ, ಆ ಹೊತ್ತಿನಲ್ಲಿ ಮೂಡಿದ ಪದ ಭಾವವನ್ನು ಹಾಗೆ ಹಿಡಿದ ರೀತಿಯಿದು. ಕ್ಷಿಪ್ರಗತಿಯಲ್ಲಿ ಮೂಡಿದ ಪದಗಳು ಮಳೆಯ ಭೀಕರತೆಗೆ ಸಂವಾದಿಯಾಗಿ ಮೂಡಿದ ಬಗೆ ನನಗೇ ಅಚ್ಚರಿ ಮೂಡಿಸಿದ್ದು ನಿಜ. ಅದೀಗ ನಿಮ್ಮ ಮುಂದೆ ಈ ಎದುರು ಕಾವ್ಯದ ರೂಪದಲ್ಲಿ….

ಅಂದ ಹಾಗೆ ಇದು ಬರಿಯ ಶಬ್ದಾಡಂಬರವೆನಿಸಿದರೆ ಕ್ಷಮೆಯಿರಲಿ 🙂

1. ರೌದ್ರಾಗಮ,ವಿನಾಶದುಗಮ
__________________________

ಸ್ವಚ್ಚಾಗಸದಿಚ್ಚಾರತಿ ಸ್ತರದಲಿ ಭರತಿ
ಅಚ್ಚಾದದುಚ್ಚೈಸಿರಿ ತರದಲಿದೆ ಸರತಿ
ಮುಚ್ಚೇಳುವ ಕಾಳ ಮೇಘಾದ್ಭುತ ರತಿ
ಧೃತಿಗೆಡದಕ್ಷಯ ಪಾತ್ರೆಯ ವರ್ಣಸತಿ ||

ಕ್ಷಾತ್ರ ತೇಜಾನ್ವಿತ ಮಿಳಿತ ಮಿಂಚಿ ಸ್ಮಿತ
ಸಿಡಿಲ್ಗುಡುಗೋತ್ಕರ್ಶವೆ ಮಂದ ಸ್ಮೃತ
ಪರಿಧಿ ಪದುಮ ವಾರಿಧಿ ಸುಮಶರದಿಪ
ಸತತೋತ್ಪಾತ ಮುಸಲಧಾರೆ ಕೋಪ ||

ಭೀತಿಗೂ ಭಯ ಭೀತಿ ಕೊಲ್ಮಿಂಚಾಹುತಿ
ಗುಡುಗುಡುಗುಡುತ್ತಾ ಸುತ್ತಾಮುತ್ತಾಣತಿ
ಮರ ಗಿಡ ಪರಗಣ ತರು ನಿಕರಣ ಕಾರಣ
ರಕ್ಷಾ ಕವಚ ಶಿರಸ್ತ್ರಾಣಾಭರಣ ಸಂಸ್ಕರಣ ||

ಅಡ್ಡ ಬೀದಿ ಹಾದಿ ಬದಿ ಕೊಚ್ಚೆ ರಾಡಿ ರಾಳ
ಭೈರವ ನೃತ್ಯದ ನೀರಲೆ ಮೇಲೆತ್ತಿ ಕರಾಳ
ಕೋನಾತ್ಮಕ ವೇಗಾವೃತ ತೆರೆ ತೆರೆ ನೀರ್ಚಪ್ಪಡಿ
ಅಪ್ಪಳಿಸಿದಾವೇಗದಲೆ ಕಂದ ಕರಿದಂಗಡಿ ||

ವಿಸ್ತೃತ ವಿಸ್ಮೃತಿ ಕರಾಮತಿ ಸನ್ಮತಿ ಪ್ರಗತಿ
ಅರೆ ಕ್ಷಣಗಳಿಗೆಯೊಳಗೆಸೆ ನಿರ್ನಾಮ ಗತಿ
ಪ್ರಯೋಜಪ್ರಯೋಜಕಾರಕಾರಕ ಬೇಸ್ತು
ಬಿಡದಟ್ಟಿ ದಶೆಗೆ ನಿಸರ್ಗಾವೇಶವೆ ಸುಸ್ತು ||

– ನಾಗೇಶ ಮೈಸೂರು

ರೌದ್ರಾಗಮ,ವಿನಾಶದುಗಮ,ರೋಷಾವೃತ,ವರ್ಷಗಾನ,ನಾಗೇಶಮೈಸೂರು,ನಾಗೇಶ,ಮೈಸೂರು,nagesha, mysore, nageshamysore