00488. ಸಪ್ತಮ ಜ್ಞಾನ ಸಂಗಮ (ಮಕ್ಕಳಿಗೆ)


00488. ಸಪ್ತಮ ಜ್ಞಾನ ಸಂಗಮ (ಮಕ್ಕಳಿಗೆ)
_______________________

೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭

ನಮ್ಮ ಪುರಾಣಾದಿ ಸಂಭವಗಳಿಂದೆಲ್ಲಾ ಗಮನಿಸಿದರೆ ಪ್ರತಿ ಸಂಖ್ಯೆಗೂ ತನ್ನದೆ ಆದ ಮಹತ್ವವಿರುವುದು ಕಾಣುತ್ತದೆ. ಪ್ರತಿ ಸಂಸ್ಖೃತಿಯಲೂ ಇದರ ಪ್ರಭಾವವಿರುವುದು ಕಾಣುವುದಾದರೂ, ಭಾರತೀಯತೆಯಲ್ಲಿ ಇದರ ಬಳಕೆ ತುಸು ಹೆಚ್ಚೆ ಎನ್ನಬೇಕು. ಉದಾಹರಣೆಗೆ : ನವ (ಒಂಬತ್ತು) ದ ಪಥವ್ಹಿಡಿದು ಹೊರಟರೆ – ನವಧಾನ್ಯ, ನವರತ್ನ, ನವರಾತ್ರಿ…. ಹೀಗೆ ಸಾಗುತ್ತದೆ. ಪಂಚಕದಲ್ಲೂ ಹೀಗೆ ಪಂಚಭೂತ, ಪಂಚಾಗ್ನಿ, ಪಂಚಕ್ರಿಯ, ಪಂಚಾವಸ್ಥೆಗಳು ಕಾಣ ಬರುತ್ತವೆ. ಇಲ್ಲಿ ಸಪ್ತದ ಕುರಿತು ಚಿಕ್ಕ ಸಂಕಲನ : ಸಪ್ತರ್ಷಿ, ಸಪ್ತನದಿಗಳಿಂದಿಡಿದು, ನಮ್ಮ ವಾರದ ಏಳು ದಿನಗಳವರೆಗೆ – ಕಟ್ಟಿಕೊಡುವ ಯತ್ನ.

೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭

ಸಪ್ತರ್ಷಿಗಳೇಳು ಋಷಿ ಜನರ ಸತ್ಯ
ಮರೀಚೀ ಅತ್ರಿ ಅಂಗೀರಸ ಪುಲಸ್ತ್ಯ
ಪುಲಹ ಕ್ರತು ವಸಿಷ್ಠರ ಸಂಗಮಿಸೆ
ಏಳು ಪ್ರಖ್ಯಾತ ಋಷಿಗಳು ವರಸೆ ||

ಸಪ್ತಮಾತೃಕೆಯರ ದೇವಿ ಮಹಾತ್ಮೆ
ಬ್ರಾಹ್ಮಿ ಮಾಹೇಶ್ವರಿ ಕೌಮಾರಿ ಜಮೆ
ವೈಷ್ಣವಿ ವಾರಾಹಿ ಇಂದ್ರಾಣಿ ಗಣನೆ
ಜತೆ ಸೇರಿ ಚಾಮುಂಡಿ ರಕ್ಕಸ ದಮನೆ ||

ಸೌಂದರ್ಯದತಿಶಯ ರಾಶಿಗಪ್ಸರೆಗಳು
ರಂಭಾ ಮೇನಕೆ ತಿಲೋತ್ತಮ ನಗಲು
ವಾರಕಾಂತೆ ಶಬರಿ ಹಿಡಿಂಬಿ ಸರದಿಗೆ
ಸೈರಂಧ್ರಿ ಒಟ್ಟಿಗೆ ಸುರಸುಂದರಿ ಸುರಗೆ ||

ಸಪುತಾಂಬುಧಿ ಸಪ್ತ ಸಾಗರಗಳೇಳು
ಲವಣ-ಉಪ್ಪಿಗೆ, ಇಕ್ಷು ತಾ ಕಬ್ಬಿನ್ಹಾಲು
ಸುರಾ-ಮದ್ಯದ ಪೂರ, ಕ್ಷೀರಕೆ-ಹಾಲ
ದಧಿ-ಮೊಸರು, ಸರ್ಪಿಸ್ತುಪ್ಪ, ನೀರ್ಜಲ ||

ದೇಹದಲ್ಲಿಯ ಸಪ್ತಧಾತುಗಳು ತಾವು
ರಸ ರಕ್ತ ಮಾಂಸ ಮಜ್ಜೆಗಳ ಫಲಿತವು
ಮೇದಸ್ಸು ಅಸ್ಥಿ ಶುಕ್ರಗಳೆಂಬವರ ಸೇರಿ
ಸಪ್ತ ಧಾತು ವೈಭವ ಹಿಡಿದ ಸರಿದಾರಿ ||

ಅಷ್ಟೇಕೆ ದೂರ ವಾರಗಳೇಳರ ಪ್ರಾಯ
ಭಾನು ಸೋಮ ಮಂಗಳರ ತಿಳಿಕಾಯ
ಬುಧ ಗುರು ಶುಕ್ರ ಗ್ರಹಗಳ ನೆನೆದೆಯ
ಶನಿವಾರ ಜತೆ ಸೇರಲು ಪೂರ್ಣಮಯ ||

– ನಾಗೇಶ ಮೈಸೂರು

00339. ವಾರದ ಕೊನೆ…


00339. ವಾರದ ಕೊನೆ…
_____________________

ನಮ್ಮ ಈಗಿನ ನವ ನಾಗರೀಕ ಕಾಲಧರ್ಮದಲ್ಲಿ ಎಲ್ಲರದು ಬಿಡುವಿಲ್ಲದ ಓಟ. ‘ಬಾಲ್ಯ’ದಿಂದ ‘ಬುಡಾಪನ್’ವರೆಗು ಬಿಡುವಿಲ್ಲದ ಹಾಗೆ ಏನಾದರು ಹಚ್ಚಿಕೊಂಡೆ ನಡೆವ ದಾಂಧಲೆ. ಅದರಲ್ಲು ಕೆಲಸಕ್ಕೆ ಹೋಗುವ ವರ್ಗದವರಿಗಂತು ವಾರವೆಲ್ಲ ದುಡಿತಕ್ಕೆ ಜೋತುಬಿದ್ದು, ವಾರದ ಕೊನೆ ಬಂದರೆ ಸಾಕು ‘ಉಸ್ಸಪ್ಪ’ ಎಂದು ಕೂರುವ ಹವಣಿಕೆ (ಅವರದೆ ಬಿಜಿನೆಸ್, ಕೆಲಸ ಮಾಡುವವರ ಕಥೆ ಇನ್ನೂ ಅಧ್ವಾನ ಬಿಡಿ, ವಾರದ ಕೊನೆಯಲ್ಲೂ ಪುರುಸೊತ್ತಿರುವುದಿಲ್ಲ)…

(please click the link below to read the rest of the article : https://nageshamysore.wordpress.com/00339-%e0%b2%b5%e0%b2%be%e0%b2%b0%e0%b2%a6-%e0%b2%95%e0%b3%8a%e0%b2%a8%e0%b3%86/)

Thanks and best regards,

Nagesha Mysore