00505. ವಿಷಾದಗಳು


00505. ವಿಷಾದಗಳು
_________________

ವಿಷಾದಗಳ ಹಲವು ವಿಶ್ವ ರೂಪಗಳಲ್ಲಿ, ಕೆಲವು ವಿಷಾದವ್ಹುಟ್ಟಿಸಿದ ಪ್ರತಿಕ್ರಿಯೆಗಳು ಮತ್ತೊಂದು ತರದ ವಿಷಾದವಾಗಿಯೆ ಹೊರಹೊಮ್ಮುವ ವ್ಯಂಗ್ಯ, ಈ ಸಾಲುಗಳಲ್ಲಿ ಅಡಕ. ಹೊರಬರುವ ಯತ್ನವೆ ಹೋರಾಟದ ದನಿಯಾದರು ಅದನ್ನಡಗಿಸುವ ವಾಸ್ತವಗಳ ಗುದ್ದಿನ ಶಕ್ತಿ, ಈ ಕವಿತೆಯ ಮತ್ತೊಂದು ಭಾವ. ವಿಷಾದಗಳನೆ ಬಿತ್ತಿ ವಿಷಾದಗಳನೆ ಬೆಳೆವ ವಿಷಾದವೆ ಇದರ ಸಂಗ್ರಹ ಸಾರ.

  
(Picture source wikipedia : https://en.m.wikipedia.org/wiki/File:Maud-Muller-Brown.jpeg)

ನಿನ್ನ ನೆನಪಲ್ಲಿ ಅರಳುತ್ತವೆ
ನೂರೆಂಟು ಕವನ, ಚಿತ್ರ …
ಅಂಚೆಯಲ್ಲಿ
ಸಂಪಾದಕರ ವಿಷಾದ ಪತ್ರ ||

ಮುಗ್ದ ನಗುವಲ್ಲಿ ಆಸೆಯ
ಚಿಮ್ಮಿಸಿದ್ದು ಇತಿಹಾಸ..
ನಿನ್ನ ಪ್ರತಿಕ್ರಿಯೆ –
ಅರ್ಥವಾಗದ ಮಂದಹಾಸ ||

ಅಪ್ಪಿ ಬಿಸಿಯಾಗಲೆ ಬಯಸಿ
ಪಡೆದದ್ದು ನಿನ್ನ ಸಂಗ..
ಆಗಿದ್ದು ಬೆಂಕಿ ಮುಟ್ಟಿದ
ಸುಟ್ಟ ರೆಕ್ಕೆಯ ಪತಂಗ ||

ಕನಸ ಕಣ್ಣಲ್ಲಿ ನೋವ
ಮರೆಸಿದ್ದು ನಿನ್ನ ಪ್ರೀತಿ ;
ಯಾರ ಬಯಕೆಗೋ ಬಿರಿದ
ಹೂವಾಗಿ ಬರಿಯ ಭ್ರಾಂತಿ…||

ಸಂಕ್ರಾಂತಿ ನೋವ ಮನದಿ
ಹಂಚಿದ್ದು ಹಚ್ಚ ಹಸಿರು..
ಆ ನೋವ ಬಿತ್ತಿ ದಿಗ್ಭ್ರಮೆಯ
ಬೆಳೆದಿದೆ ಕ್ಷೀಣ ಉಸಿರು…||

– ನಾಗೇಶ ಮೈಸೂರು

00335. ಮನದ ಗುಟ್ಟಿನ ವಿಷಯ…


00335. ಮನದ ಗುಟ್ಟಿನ ವಿಷಯ…
__________________________

(sampada 08.08.2015)

ಬದುಕು ಕಟ್ಟಿ ಕೊಡುವ ಅನೇಕ ಭಾವ ಸಂಗಮಗಳಲ್ಲಿ, ನಿರಂತರ ಕಾಡುವ ವಿಷಾದ, ಖೇದದ ಭಾವ ಬಲು ಸಾಮಾನ್ಯವಾಗಿ ಕಾಣ ಸಿಗುವಂತದ್ದು. ಅದರಲ್ಲೂ ಈ ಭಾವ ಜನನದ ಮೂಲ ಮೊದಲ ಪ್ರೇಮವಾಗಿದ್ದರಂತೂ, ಜೀವನವಿಡಿ ಕಾಡುವ ಸಿಹಿನೋವಾಗಿ ಉಳಿದುಬಿಡುವ ಸಾಮರ್ಥ್ಯವುಳ್ಳದ್ದು. ಇನ್ನು ಆ ಪ್ರೇಮ ಹೂವಾಗರಳದೆ, ಕೇವಲ ಮನದ ಗುಟ್ಟಿನ ವಿಷಯವಾಗಿ ಉಳಿದು ಹೋಗಿದ್ದರಂತು, ಅದೊಂದು ನಿತ್ಯ ನೂತನ ಕೊರಗಾಗಿ ಜೀವನವಿಡಿ ಸತಾಯಿಸಿಕೊಂಡೆ ಬರುತ್ತದಂತೆ. ಪ್ರೇಮ ಬಯಲಾಗಿ ಸಾಫಲ್ಯ ಪಡೆಯದಿದ್ದರೇನಂತೆ ? ಒಡ್ಡೊಡೆದು ಪ್ರವಹಿಸುವ ಮನದ ಭಾವನೆಗಳಿಗೆ ತಡೆಗೋಡೆ ಹಾಕಲು ಸಾಧ್ಯವೆ ? …..

( to read the rest, please click the page link below : 00335. https://nageshamysore.wordpress.com/00335-%e0%b2%ae%e0%b2%a8%e0%b2%a6-%e0%b2%97%e0%b3%81%e0%b2%9f%e0%b3%8d%e0%b2%9f%e0%b2%bf%e0%b2%a8-%e0%b2%b5%e0%b2%bf%e0%b2%b7%e0%b2%af/)

Thanks and best regards,

Nagesha Mysore