01198. ಶ್ರೀ ರಾಮ ನಮನ..


01198. ಶ್ರೀ ರಾಮ ನಮನ..
_______________________________


ಕೇಳು ರಾಮನ ಸ್ವಗತ, ಭೂಮ್ಯಾಕಾಶ ವಿಸ್ತೃತ
ದಿಕ್ಕುದೆಸೆಯೆಲ್ಲೆಡೆ, ರಾಮ ನಾಮಾಮೃತ ಚಿತ್ತ ||

ಅದೊ ಹನುಮನ ಕರ, ಬರಿ ವಿನಯದ ಸ್ವರ
ನಮಿಸೊ ಭಕುತಿ ಭಾವ, ತೆರೆದು ಎದೆ ದ್ವಾರ ||

ಅವಳಲ್ಲವೆ ಸೀತಾಮಾತೆ, ಸಹನೆಯುಟ್ಟ ಸೀರೆ
ಜನಕನುಡಿಯ ಜನ್ಮದಾತೆ, ಬದುಕೆಲ್ಲ ಪರಭಾರೆ ||

ಕಾಯ್ವ ಯೋಧ ಲಕ್ಷ್ಮಣ, ಸೋದರ ಅಸಾಧಾರಣ
ಬದಿ ನಿಂತೆ ಸದಾ ಸನ್ನದ್ಧ, ಜನ್ಮ ಕಾರ್ಯ ಕಾರಣ ||

ಸಚಿತ್ರ ಸರಳ ಸುಂದರ, ವಿಚಿತ್ರ ಕಥಾ ಹಂದರ
ರಾಮನಾಗಿ ತೋರಿಸಿಕೊಟ್ಟ, ನರ ಬದುಕುವ ತರ ||

– ನಾಗೇಶ ಮೈಸೂರು
೦೪.೦೪.೨೦೧೭

(Picture from internet / social media)

00310. ಶ್ರೀ ರಾಮನಾಗುವ ಸಂಕಟ


00310. ಶ್ರೀ ರಾಮನಾಗುವ ಸಂಕಟ
________________________

ಶ್ರೀ ರಾಮನವಮಿಯ ಸಂಧರ್ಭದಲ್ಲಿ ಶ್ರೀ ರಾಮ ನಾಮಾಮೃತವನ್ನು ಪಾನಕ, ನೀರು ಮಜ್ಜಿಗೆಗಳ ಸೇವನೆಯ ಮೂಲಕ ಆಚರಿಸುವ ಸಂಭ್ರಮ ನಮಗೆ ಹೊಸದೇನಲ್ಲ. ಬೇಸಿಗೆಯ ಬಿರುಸು ಬಿಚ್ಚಿಕೊಳ್ಳುವ ಹೊತ್ತಿಗೆ ಈ ಪಾನಕ-ನೀರು ಮಜ್ಜಿಗೆಯ ತಂಪುಗಳು ನಿಜಕ್ಕೂ ಆಹ್ಲಾದಕರ ಅನುಭೂತಿ ತರುವ ಪೇಯಗಳು. ಆದರೆ ಬರಿ ಹೊಟ್ಟೆ ತಂಪಾದರೆ ಸಾಲದು, ಆಧ್ಯಾತ್ಮಿಕ ಹಸಿವಿಗೆ ತಂಪೆರೆವ ದೇವನ್ನಾಮ ಸ್ಮರಣೆಯೂ ಆಗಬೇಕಲ್ಲ ? ಶ್ರೀರಾಮ ನವಮಿಗೆ ಅವನ ಸ್ಮರಣೆಗಿಂತ ಮಿಗಿಲಾದದ್ದು ಏನಿದ್ದೀತು ಅನಿಸಿ ರಾಮನ ಬಾಲ್ಯದ, ಮದುವೆಯಾಗುವವರೆಗಿನ ರಾಮ ಕಥಾ ಸಾರವನ್ನು ಈ ಕೆಳಗಿನ ಪದ್ಯಗಳಲ್ಲಿ ಬಿಡಿಸಿಡಲು ಯತ್ನಿಸಿದ್ದೇನೆ. ‘ಶ್ರೀ ರಾಮನಾಗಿ ಬದುಕುವ ಸಂಕಟ’ ಅನ್ನುವ ತಲೆ ಬರಹದೊಂದಿಗೆ ಆರಂಭಿಸಿದ ಈ ‘ಫ್ರೀಸ್ಟೈಲ್ ರಾಮಾಯಣ’ ಕೊನೆಯತನಕ ಹೊರಟರೆ ತುಂಬಾ ಉದ್ದದ ಸರಕಾಗುವ ಕಾರಣ ಬರಿ ಹದಿನೈದು ಪಂಕ್ತಿಗೆ ನಿಲ್ಲಿಸಿದ್ದೇನೆ. ದೇವರ ಸ್ಮರಣೆಯ ನೆಪಕ್ಕೆ ಉದ್ದ ಎಷ್ಟಾದರು ಸಾಲದು, ಬರಿ ಅಷ್ಟಿಷ್ಟಿದ್ದರೂ ಸಾಕು – ಎಲ್ಲವು ಮನಸಿನಂತೆ ಮಹಾದೇವ ಅನ್ನುವ ಲೆಕ್ಕ ಅಲ್ಲವೆ ? ಪಂಕ್ತಿಯ ವ್ಯಾಖ್ಯಾನ, ವಿವರಣೆಗೆ ಸಮಯದ ಅಭಾವ – ಮುಂದೆಂದಾದರು ಮತ್ತೆ ಪ್ರಯತ್ನಿಸುವೆ. ಹಿನ್ನಲೆ / ಮುನ್ನುಡಿಯ ರೂಪದ ಮೂರು ಪದ್ಯಗಳನ್ನು ಜತೆಗೆ ಸೇರಿಸಿದ್ದೇನೆ 🙂

ಹಿನ್ನಲೆ / ಮುನ್ನುಡಿ
____________________________________________

ಮೂರ್ಖತೆಯ ತೆಗುಳು, ದ್ವಾರಪಾಲರ ಅಹಂಕಾರಗಳು
ನೆಮ್ಮದಿಯ ವೈಕುಂಠ, ಕಿಚ್ಚನ್ಹಚ್ಚಿಸಿ ಮಹಾಲಕ್ಷ್ಮಿಗೆ ದಿಗಿಲು
ಸನಕಾದಿ ಮುನಿಗಳ ಶಾಪ, ಭೂಲೋಕದ ಜನ್ಮಪರಿತಾಪ
ಸೇವೆಯಾಳುಗಳ ವತಿಯಿಂದ, ಶ್ರೀ ಹರಿಗೂ ಬಿಡದ ಕೂಪ || 01 ||

……. (to read the full article, please click the page link below and scroll down : https://nageshamysore.wordpress.com/00310-%e0%b2%b6%e0%b3%8d%e0%b2%b0%e0%b3%80-%e0%b2%b0%e0%b2%be%e0%b2%ae%e0%b2%a8%e0%b2%be%e0%b2%97%e0%b3%81%e0%b2%b5-%e0%b2%b8%e0%b2%82%e0%b2%95%e0%b2%9f/ )

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha MN
WeBlog site: nageshamysore.wordpress.com

00195. ನರಮಾನವನಾಗಿ ರಾಮನ ಜನುಮ…(೦೫ / ೦೫)


00195. ನರಮಾನವನಾಗಿ ರಾಮನ ಜನುಮ…(೦೫ / ೦೫)

ಯುದ್ಧ ಗೆದ್ದಾಯ್ತು, ರಾವಣ ಬಿದ್ದಾಯ್ತು ಇನ್ನೆಲ್ಲಾ ನಿರಾಳವಾಯ್ತು ಎಂದು ಎಲ್ಲರು ಅಂದುಕೊಳ್ಳುತ್ತಿರುವಾಗಲೆ ಬಂದೆರಗಿತು ಮತ್ತೊಂದು ರೀತಿಯ ಧರ್ಮ ಸಂಕಟ. ಸೀತೆಯ ಪಾವಿತ್ರ್ಯ, ಪಾತಿವ್ರತ್ಯದ ಬಗ್ಗೆ ಶ್ರೀರಾಮನಿಗೆಷ್ಟೆ ನಂಬಿಕೆಯಿದ್ದರೂ, ಅವನು ಇಳೆಯ ರಾಜವಂಶದವನ ಪಾತ್ರದಲ್ಲಿ ಆ ನಂಬಿಕೆಯನ್ನು ಮಾತ್ರ ಆದರಿಸಿ ನಿರ್ಧಾರ ಕೈಗೊಳ್ಳುವಂತಿಲ್ಲ…..

https://nageshamysore.wordpress.com/00194-%e0%b2%a8%e0%b2%b0%e0%b2%ae%e0%b2%be%e0%b2%a8%e0%b2%b5%e0%b2%a8%e0%b2%be%e0%b2%97%e0%b2%bf-%e0%b2%b0%e0%b2%be%e0%b2%ae%e0%b2%a8-%e0%b2%9c%e0%b2%a8%e0%b3%81%e0%b2%ae-%e0%b3%a6%e0%b3%ab/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00194. ನರಮಾನವನಾಗಿ ರಾಮನ ಜನುಮ…(೦೪ / ೦೫)


00194. ನರಮಾನವನಾಗಿ ರಾಮನ ಜನುಮ…(೦೪ / ೦೫)

ಒಟ್ಟಾರೆ ರಾಮನ ಮಾನವ ಮನದ ಮಾನಸಿಕ ತುಮುಲ, ತಾಕಲಾಟಗಳಿಗೆಲ್ಲ ಮದ್ದು ಲೇಪಿಸುವ ಹಾಗೆ, ಬರಿ ಅವನ ಆಂತರ್ಯದ ನೋವನ್ನರಿಯುವುದಷ್ಟೆ ಅಲ್ಲ, ನಿಷ್ಠೆಯಿಂದ ಅದನ್ನು ಪರಿಹರಿಸುವ ದಾರಿ ಹುಡುಕುವ ಹನುಮನಂತಹ ಬಂಟನೂ ಸಿಕ್ಕಿದ್ದು ರಾಮನ ಪರಿತಪ್ತ ಮನವನ್ನು ಅದೆಷ್ಟೊ ನಿರಾಳವಾಗಿಸಿತೆನ್ನಬೇಕು. ಅಂತೆಯೆ ಸೂಕ್ತ ಸಾಂಗತ್ಯ, ಸಹಚರ್ಯದ ಕೆಳೆಯಿದ್ದರೆ ಅತಿಮಾನುಷ ಶಕ್ತಿ, ಪವಾಡ , ಮಹಿಮೆಗಳ ಹಂಗಿಲ್ಲದೆ, ಈ ಭೂಮಿಯ ಮೇಲಿನ ಜೀವನವನ್ನು ಸುಗಮಗೊಳಿಸಿಕೊಳ್ಳುತ್ತ, ಕಷ್ಟಗಳಿಗೆ ಪರಿಹಾರ ಹುಡುಕಿಕೊಳ್ಳುತ್ತಾ ಸಾಗಬಹುದೆಂಬ ಸಂದೇಶವೂ ಸಹ. ಧರ್ಮಸೂಕ್ಷ್ಮತೆಯೆಲ್ಲಾ ಬಲ್ಲ ಹನುಮ ಬರಿ ಸೀತೆಯನ್ನು ಕಂಡು ಹಿಡಿದುದು ಮಾತ್ರವಲ್ಲದೆ ಅವಳಲ್ಲಿ, ಶ್ರೀರಾಮನೆ ಬಂದು ಬಿಡಿಸಿಕೊಳ್ಳುವ ತನಕ ಸೈರಣೆಗೆ ಬೇಕಾದ ಧೈರ್ಯ, ಆತ್ಮವಿಶ್ವಾಸಗಳನ್ನು ತುಂಬಿ ಬರುತ್ತಾನೆ….

https://nageshamysore.wordpress.com/00194-%e0%b2%a8%e0%b2%b0%e0%b2%ae%e0%b2%be%e0%b2%a8%e0%b2%b5%e0%b2%a8%e0%b2%be%e0%b2%97%e0%b2%bf-%e0%b2%b0%e0%b2%be%e0%b2%ae%e0%b2%a8-%e0%b2%9c%e0%b2%a8%e0%b3%81%e0%b2%ae-%e0%b3%a6%e0%b3%aa/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00193. ನರಮಾನವನಾಗಿ ರಾಮನ ಜನುಮ…(೦೩ / ೦೫)


00193. ನರಮಾನವನಾಗಿ ರಾಮನ ಜನುಮ…(೦೩ / ೦೫)
__________________________________________

ಅಂತೂ ಯಾವ ರಾಜನೀತಿಯ ಸೂತ್ರವೊ, ಯಾವ ರಣನೀತಿಯ ಹಿನ್ನಲೆಯೊ, ಎರಡೂ ಅಲ್ಲದ ‘ಮೊದಲು ಸಿಕ್ಕಿದವರಿಗೆ ಮೊದಲ ಆದ್ಯತೆ’ ಎನ್ನುವ ಸರಳ ಮತ್ತು ನೇರ ನೀತಿ ಅನುಕರಿಸಿದ ಪರಿಣಾಮವೊ – ಒಟ್ಟಾರೆ ಸುಗ್ರೀವ ಸಖ್ಯ ಬೆಳೆಸಿದ್ದಾಯ್ತು ಮತ್ತು ಅವನನ್ನು ಕಿಷ್ಕಿಂದೆಯ ರಾಜನನ್ನಾಗಿಸಿದ್ದೂ ಆಯ್ತು. ಆರಂಭದ ಹರ್ಷೊಲ್ಲಾಸದ ಆಚರಣೆ, ಹೇಷಾರವವೆಲ್ಲ ಮುಗಿದ ಮೇಲೆ ತಳಾರ ಕೂತು ಚರ್ಚಿಸಿ ನಿರ್ಧರಿಸುವ ಹೊತ್ತು ಬಂತು – ಏನು ಮುಂದಿನ ಹೆಜ್ಜೆ? ಎಂದು………

https://nageshamysore.wordpress.com/00193-%e0%b2%a8%e0%b2%b0%e0%b2%ae%e0%b2%be%e0%b2%a8%e0%b2%b5%e0%b2%a8%e0%b2%be%e0%b2%97%e0%b2%bf-%e0%b2%b0%e0%b2%be%e0%b2%ae%e0%b2%a8-%e0%b2%9c%e0%b2%a8%e0%b3%81%e0%b2%ae-%e0%b3%a6%e0%b3%a9/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00192. ನರಮಾನವನಾಗಿ ರಾಮನ ಜನುಮ…(೦೨ / ೦೫)


00192. ನರಮಾನವನಾಗಿ ರಾಮನ ಜನುಮ…(೦೨ / ೦೫)
__________________________________________

ಆಯಿತು – ಯಾವುದಾವುದೊ ನೆಪವೊ, ಜಗನ್ನಾಟಕದ ಸೊಗವೊ ಕಾಡಿಗಂತೂ ಹೊರಟಿದ್ದಾಯಿತು. ಹೇಳಿ ಕೇಳಿ ಪತಿಯೆ ಪ್ರತ್ಯಕ್ಷ ದೈವವೆನ್ನುವ ಕಾಲಮಾನ. ಪತಿಯ ಬೆನ್ನಿಡಿದು ಬಾಳುವುದೆ ಪತಿವ್ರತಾಸತಿಯ ಪರಮ ಧರ್ಮವೆನ್ನುವ ಕಾಲ. ವನವಾಸಕ್ಕೆ ಹೊರಟವನ ಹಿಂದೆ ಸೀತಾ ಮಾತೆಯೂ ಹೊರಟಾಗ ಬೇಡವೆನ್ನಲಾದೀತೆ?……

https://nageshamysore.wordpress.com/00192-%e0%b2%a8%e0%b2%b0%e0%b2%ae%e0%b2%be%e0%b2%a8%e0%b2%b5%e0%b2%a8%e0%b2%be%e0%b2%97%e0%b2%bf-%e0%b2%b0%e0%b2%be%e0%b2%ae%e0%b2%a8-%e0%b2%9c%e0%b2%a8%e0%b3%81%e0%b2%ae-%e0%b3%a6%e0%b3%a8/)

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00190. ನರಮಾನವನಾಗಿ ರಾಮನ ಜನುಮ…(೦೧ / ೦೫)


00190. ನರಮಾನವನಾಗಿ ರಾಮನ ಜನುಮ…(೦೧ / ೦೫)
______________________________________

ಪ್ರತಿ ಬಾರಿಯಂತೆ ಈ ಬಾರಿಯೂ ಉರಿಬಿಸಿಲಿನ ನಡುವೆ ಕಾಲಿಡುತ್ತಿದೆ ಶ್ರೀ ರಾಮನವಮಿ (08. ಏಪ್ರಿಲ್. 2014). ಈಚಿನ ಕೆಲವಾರು ದಿನಗಳಲ್ಲಿ ಸೀತೆ, ಊರ್ಮಿಳೆ, ಮಂಡೋದರಿ, ಶೂರ್ಪನಖಿ, ಭಾನುಮತಿಯಂತಹ ಕೆಲವು ಸ್ತ್ರೀ ಪಾತ್ರಗಳನ್ನು ಕುರಿತು ಬರೆಯುತ್ತಿದ್ದಾಗೆಲ್ಲ ನಮ್ಮ ರಾಮಾಯಣ ಮಹಾಭಾರತಗಳ ಪ್ರಮುಖ ಪುರುಷ ಪಾತ್ರಗಳನ್ನು ಕುರಿತೂ ಅಷ್ಟಿಷ್ಟು ಜಾಲಾಡಿಸಬೇಕೆಂಬ ಅನಿಸಿಕೆ ಮೂಡಿ ಬರುತ್ತಿತ್ತು. ಅದರಲ್ಲೂ ಶ್ರೀ ರಾಮನ ಕುರಿತಾದ ಪುಟ್ಟದೊಂದು ಕವನ ಬರೆದಿದ್ದರೂ (ಶ್ರೀ ರಾಮನಿಗೇನಿತ್ತನಿವಾರ್ಯ?) ಆ ಪಾತ್ರದ ಅರ್ಥ ವ್ಯಾಪ್ತಿಗೆ ಆ ಗಾತ್ರ ತೀರಾ ಸಣ್ಣದೆನಿಸಿತ್ತು. ಅದೇ ಹೊತ್ತಿನಲ್ಲಿ ಸೀತೆಯ ಪಾತ್ರ ಕುರಿತಾದ ಬರಹಕ್ಕೆ ಪ್ರತಿಕ್ರಿಯಿಸುತ್ತ ಸಂಪದದ ಶ್ರೀ ಗಣೇಶ್ ಜಿ, ರಾಮನ ಪಾತ್ರವಾದರೂ ಯಾವ ರೀತಿ ಕಮ್ಮಿ? ಎಂದು ದಬಾಯಿಸಿ ಕೇಳಿದ್ದು ಇನ್ನು ಮನಸಿನಲ್ಲಿ ಹಸಿರಾಗಿದ್ದ ಕಾರಣ, ಈ ಬಾರಿಯ ರಾಮ ನವಮಿಗಾದರೂ ರಾಮನ ಪಾತ್ರದ ಕುರಿತು ಏನಾದರೂ ಬರೆಯಲೆ ಬೇಕೆಂಬ ತುಡಿತ ಹೆಚ್ಚಾದಾಗ ಮೂಡಿದ ಬರಹ “ನರಮಾನವನಾಗಿ ರಾಮನ ಜನುಮ…” ( ಹೀಗೆ ಭಾನುಮತಿಯ ಬರಹಕ್ಕೆ ಪ್ರೇರಣೆಯಾದವರು ಸಂಪದಿಗ ಸಪ್ತಗಿರಿಗಳು). ಪುರುಷನೆಂಬ ಕಾರಣಕ್ಕೊ ಏನೊ ಸ್ತ್ರೀ ಪಾತ್ರಗಳಿಗೆ ದಕ್ಕುವ ಅನುಕಂಪ, ಧನಾತ್ಮಕ ಪರಿಗಣನೆಗಳಿಂದ ಹೊರಗುಳಿಯುವ ಅನೇಕ ಪ್ರಮುಖ ಪಾತ್ರಗಳಲ್ಲಿ ರಾಮನೂ ಒಬ್ಬನೆಂದು ನನ್ನ ಅನಿಸಿಕೆ…….(click the link and scroll down for the complete article)

https://nageshamysore.wordpress.com/00190-%e0%b2%a8%e0%b2%b0%e0%b2%ae%e0%b2%be%e0%b2%a8%e0%b2%b5%e0%b2%a8%e0%b2%be%e0%b2%97%e0%b2%bf-%e0%b2%b0%e0%b2%be%e0%b2%ae%e0%b2%a8-%e0%b2%9c%e0%b2%a8%e0%b3%81%e0%b2%ae-%e0%b3%a6%e0%b3%a7/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com