02158. ಕಳುವೆಯಲ್ಲ ಸ್ವತಂತ್ರ..


02158. ಕಳುವೆಯಲ್ಲ ಸ್ವತಂತ್ರ..
__________________________________

ಯಾರಿಗೊ ಬಂತಾರಿಗೊ, ಅನಬೇಡಾ ಸ್ವತಂತ್ರ
ಬರದಿದ್ದರೆ ಇರುತಿತ್ತೆ, ನಿರಾಳದೀ ದಿನನಿತ್ಯ ?
ಯಾರಿಟ್ಟರೊ ತಲೆದಂಡ, ಯಾರಾರದೊ ಬಲಿದಾನ
ಯಾರ ಬೆವರೊ ಯಾರುಣುತಿಹರೊ, ಕಸಿದಾರದೊ ಅನ್ನ..

ಚಳುವಳಿಯೊ ಬಳುವಳಿಯೊ, ಗೊತ್ತಾಗದು ಅಂದು
ಮನೆಯ ಬಿಟ್ಟು ಬದುಕ ಕೊಟ್ಟು, ಧುಮುಕಿದನಾ ಬಂಧು
ಹೋರಾಟವೊ ಉಪವಾಸವೊ, ಕಾರಾಗೃಹ ಸಹವಾಸ
ಓದು ಬಿಟ್ಟು ಖಾದಿ ತೊಟ್ಟು, ತಂದರಲ್ಲಾ ತಾಯಿಗೆ ಹರ್ಷ

ಮರ ಭಾರತಾಂಬೆ ನೂರಾರು, ಕೊಂಬೆ ಚಾಚಿದಂತೆ ಕವಲು
ಯಾರ ಬಿಟ್ಟಿತ್ತಲ್ಲಿ ಕೊಸರು, ಮಂದಿಗೆಲ್ಲ ದೇಶಸೇವೆ ತೆವಲು
ಉಪ್ಪಾದರೊ ಮುಪ್ಪಾದರೊ, ಜೈಕಾರ ಮೊಳಗೆ ತೊಲಗಿಸಲು
ತಮ್ಮೊಂದಿಡಿ ಜೀವಮಾನ ಬಲಿ, ಕೊಟ್ಟರೊ ನಮ್ಮ ನಗಿಸಲು..

ಇಂದಾಡುತಿದೆ ರಂಗಿನ ಬಾವುಟ, ಜಗದೆಲ್ಲೆಡೆ ದಿಗ್ವಿಜಯ
ಯುದ್ಧ ಕದನ ಹೋರಾಟವಿರದೆ, ಜಯಿಸುತ್ತಿಹ ಭಾರತೀಯ
ಅಂದಾಗದಿರೆ ಅಡಿಪಾಯ,ಇಂದಾಗುತಿತ್ತೆ ಈ ಮಾಯಾಜಾಲ ?
ನೆನೆಯದನೊಂದು ದಿನ ಮನವೇ, ಹೀಗಿರಲಿಲ್ಲ ಗೊತ್ತ ಆ ಕಾಲ ?

ಯಾರಿಗೊ ಬಂದಾ ಸರಕಲ್ಲ, ಎಲ್ಲಿಗೊ ಹೊರಡುವ ರಜೆಯಲ್ಲ
ಅಂದು ಯಾರಾರೇನೇನೆಂದು, ಕಿರಿ ಪೀಳಿಗೆಗೆ ತಿಳಿಸಲಿದೆ ಬಹಳ
ತಿಳಿದು ಮೊದಲು ಅರಿತು ಸಕಲ, ಹೆಚ್ಚಲಿ ಮನದಿ ಗೌರವ ಭಾವ
ನಮ್ಮ ನಾಡ ನಾವೇ ಮರೆಯೆ, ಸಿಕ್ಕಲುಂಟೆ ಪರರ ಸಮ್ಮಾನ ಪರ್ವ ?

– ನಾಗೇಶ ಮೈಸೂರು
(Picture SOurce: https://www.google.com.sg/amp/s/gradeup.co/happy-independence-day-jai-hind-i-ba694f6e-629f-11e6-99d7-56f5752f4668_amp)

00850. ಸ್ವತಂತ್ರದಲ್ಲ್ಯಾಕೆ ತಂತ್ರ ?


00850. ಸ್ವತಂತ್ರದಲ್ಲ್ಯಾಕೆ ತಂತ್ರ ?
______________________

ಸ್ವತಂತ್ರ ಅಂದರೇನು ಗೊತ್ತಾ?
ಅಂತ ಕೇಳ್ತು ಮನಸು
ಸ್ವ- ತಂತ್ರ : ಸೆಲ್ಫ್ ಸ್ಟ್ರಾಟೆಜಿ
ಪರತಂತ್ರದಿಂದ ನಮ್ಮ ತಂತ್ರ
ಆದರೂ ಯಾಕೋ ಕಸಿವಿಸಿ
ತಂತ್ರ ಯಾಕೆ ಬೇಕಿತ್ತು ಅಲ್ಲಿ ?
ಸ್ವ – ರಾಜ್ಯ ಸಾಕಿತ್ತೇನೋ..
ಯಾರ ತಂತ್ರದ ಹಂಗು
ಇಲ್ದಂಗೆ ಇರಬಹುದಿತ್ತೇನೋ..


ಸ್ವತಂತ್ರನೋ ಸ್ವಾತಂತ್ರನೋ
ಸ್ವಾತಂತ್ರ್ಯನೋ ಬರಿ ಗೊಂದಲ
ಬರೆಯೋಕು ನೆನಪಿಡೋಕು ಕಷ್ಟ
ದಿನವಷ್ಟೆ ಗೆಪ್ತಿ ಸುಲಭ..
ಸ್ವ-ತಂತ್ರ ಮಾಡ್ತಾ ಕಂಡಿದ್ದು
ಬರಿ ಸ್ವಾ(ಹಾ) ತಂತ್ರ
ಪರತಂತ್ರ ಕಳೆದು ಎಪ್ಪತ್ತಾಯ್ತು
ವಯೋವೃದ್ಧ ಪಿತಾಮಹ
ಎಲ್ಲಿ ಹಾಸಿದ್ದು ಅಲ್ಲೇ ಇದೆ
ಭೀಷ್ಮನ ಹಾಗೆ ಕಾಯುತ್ತ
ಉತ್ತರಾಯಣ ಪುಣ್ಯಕಾಲದ
ಗುಟುಕಿಗೆ..


ಯಾರೋ ಭೀಷ್ಮ ದ್ರೋಣ ಧರ್ಮ
ದುರ್ಯೋಧನ ಶಕುನಿ ಕರ್ಣ
ಎದ್ದು ಬಂದ ಹಾಗಿದೆ ಮೈ ಕೊಡವಿ
ಆಳಿಗೆ ಆಳು ತಂತ್ರಕೆ ತಂತ್ರ
ದೇಶ ಮುನ್ನಡೆಸೋ ಮಂತ್ರ
ಬುದ್ಧಿ ಲದ್ಧಿಯ ನಡುವಲ್ಲೇ
ಶುದ್ಧಿಗೆ ಹೊರಟಹಾಗಿದೆ
ಪರಶುರಾಮನ ಹಾಗೆ..
ಧೂಳು ಕೊಡವುತ್ತಾನಾ ?
ಹಾಳುಗೆಡವುತ್ತಾನಾ ?
ಗ್ರಹತಾರೆಗಳದೇನೊ ದೀಪಾವಳಿ
ಕಾಣುವಳತೆಯ ಕ್ಷಿತಿಜದಲ್ಲಿ ಮಿಣುಕು
ತಂತ್ರಗಳೆಲ್ಲ ಮಂತ್ರಗಳಾದಾವೆ
ಎಂದು ಕಾದು ನೋಡುತ್ತಿದೆ
ಕುತೂಹಲ
ನನದು ನಿನದು ಅವರಿವರದು

ಸ್ವಾತಂತ್ರಕ್ಕಾಗಿ ಕಾಯೋಣ !

– ನಾಗೇಶ ಮೈಸೂರು
ಸ್ವತಂತ್ರ, ತಂತ್ರ, ನಾಗೇಶ, ಮೈಸೂರು, ನಾಗೇಶಮೈಸೂರು,nagesha, mysore,nageshamysore

(Picture from: http://www.freevector.com/free-bird-vector-graphics, and http://www.frpeterpreble.com/2015/01/freedom-responsibility.html)

00336. ಸ್ವತಂತ್ರ ದಿನಾಚರಣೆಯ ಹರಕೆ


00336. ಸ್ವತಂತ್ರ ದಿನಾಚರಣೆಯ ಹರಕೆ
_____________________________

ಮತ್ತೆ ಸ್ವತಂತ್ರ ದಿನಾಚರಣೆ ಕಾಲಿಡುತ್ತಿದೆ ವಾರದ ಕೊನೆಯಲ್ಲಿ. ಶ್ರಾವಣ ಮಾಸದ ಜತೆಗೆ ಬರುವ ಹಬ್ಬಗಳ ಸಡಗರದ ಜತೆ ಜತೆಗೆ ಕಾಲಿಡುತ್ತಿರುವ ಈ ದಿನ ಸಾಂಕೇತಿಕವಾಗಿ, ಅದರ ಸಲುವಾಗಿ ಹೋರಾಡಿ, ಎಲ್ಲಾ ತರಹದ ತ್ಯಾಗ, ಬಲಿದಾನ ಮಾಡಿದ ಮಹನೀಯರನ್ನು ನೆನೆದು ನಮಿಸುವ ದಿನ. ಅವರು ನೆತ್ತರು ಸುರಿಸಿ ಗಳಿಸಿಕೊಟ್ಟ ಸಂಪತ್ತನ್ನು ಕೈ ಬಿಟ್ಟು ಹೋಗದಂತೆ ಕಾಪಾಡಿಕೊಂಡು, ಪೋಷಿಸಿಕೊಂಡು ಹೋಗಬೇಕಾದ ಕರ್ತವ್ಯ ನಮ್ಮೆಲ್ಲರದು. ಅದನ್ನು ನೆನಪಿಸುವ ಸಲುವಾಗಿ ಎರಡು ಕವನಗಳು ಈ ಕೆಳಗೆ – ಸರ್ವರಿಗು ಸ್ವಾತಂತ್ರ ದಿನದ ಶುಭಾಶಯಗಳೊಂದಿಗೆ….

(Click the page link below for the poems: https://nageshamysore.wordpress.com/00336-%e0%b2%b8%e0%b3%8d%e0%b2%b5%e0%b2%a4%e0%b2%82%e0%b2%a4%e0%b3%8d%e0%b2%b0-%e0%b2%a6%e0%b2%bf%e0%b2%a8%e0%b2%be%e0%b2%9a%e0%b2%b0%e0%b2%a3%e0%b3%86%e0%b2%af-%e0%b2%b9%e0%b2%b0%e0%b2%95%e0%b3%86/ )

Thanks and best regards,

Nagesha Mysore

00243. ಸ್ವಾತ್ಯಂತ್ರ ಮತ್ತು ಸ್ವೇಚ್ಛೆ


00243. ಸ್ವಾತ್ಯಂತ್ರ ಮತ್ತು ಸ್ವೇಚ್ಛೆ
________________________

ಸ್ವಾತ್ಯಂತ್ರೋತ್ಸವದ ದಿನ ಹತ್ತಿರವಾದಂತೆ ಆಚರಣೆಯ ಸಿದ್ದತೆಗಳು ಮತ್ತೆ ಸುದ್ದಿ ಮಾಡುತ್ತಿವೆ; ಅದರಲ್ಲೂ ಭಾರತರತ್ನ, ಕೇಲ್ ರತ್ನದಂತಹ ಪ್ರಶಸ್ತಿಗಳ ಸುದ್ದಿಯೆ ಹೆಚ್ಚು ಗುಡುಗುತ್ತಿದೆ – ನಾವು ಸಿಂಗಪುರದಲ್ಲಿ ನೋಡಲು ಸಾಧ್ಯವಿರುವ ಭಾರತೀಯ ನ್ಯೂಸ್ ಚಾನೆಲ್ಲುಗಳಲ್ಲಿ. ಎಂದಿನಂತೆ ನಮಗಿಲ್ಲಿ ಆಚರಣೆಯ ಸಂಭ್ರಮ ಭಾರತದಲ್ಲಿರುವಂತೆ ಇರುವುದಿಲ್ಲವಾದರು ಆಫೀಸಿಗೆ ಮುಂಚೆ ಎಂಬೆಸಿಯಲ್ಲಿ ಬಾವುಟ ಹಾರಿಸುವುದಲ್ಲಿ ಪಾಲ್ಗೊಳ್ಳಲಿಕ್ಕೊ (ಈ ಬಾರಿಯ ಕಾರ್ಯಕ್ರಮವೇನಿದೆಯೊ ಇನ್ನು ವಿಚಾರಿಸಿಲ್ಲ) ಅಥವಾ ಆಫೀಸಿನಲ್ಲೆ ಕಂಪ್ಯೂಟರಿನ ಮುಂದೆ ಜನಗಣಮನ ಹೇಳಿಕೊಳ್ಳಲಿಕ್ಕೊ ಅಡ್ಡಿಯಿರದು….

https://nageshamysore.wordpress.com/00243-%e0%b2%b8%e0%b3%8d%e0%b2%b5%e0%b2%be%e0%b2%a4%e0%b3%8d%e0%b2%af%e0%b2%82%e0%b2%a4%e0%b3%8d%e0%b2%b0-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%b8%e0%b3%8d%e0%b2%b5%e0%b3%87%e0%b2%9a/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com