01581. ಮಂಕುತಿಮ್ಮನ ಕಗ್ಗ ೮೩:ನಿತ್ಯ ದ್ವಂದ್ವದೆ ಮಗ್ನ


01581. ಮಂಕುತಿಮ್ಮನ ಕಗ್ಗ ೮೩:ನಿತ್ಯ ದ್ವಂದ್ವದೆ ಮಗ್ನ

ಮಂಕುತಿಮ್ಮನ ಕಗ್ಗ ೮೩ ರ ಮೇಲಿನ ನನ್ನ ಟಿಪ್ಪಣಿ..

https://www.facebook.com/story.php?story_fbid=1118406378295835&id=640670512736093&notif_id=1517279530220212&notif_t=notify_me_page&ref=notif

01449. ಮಂಕುತಿಮ್ಮನ ಲಗ್ಗ ೮೨ ರ ಟಿಪ್ಪಣಿ: ಅಜ್ಜಿಯಾಟದಿ ಬೊಮ್ಮ (ಕಣ್ಣಾಮುಚ್ಚೆ ಕಾಡೇ ಗೂಡೆ..)


01449. ಮಂಕುತಿಮ್ಮನ ಲಗ್ಗ ೮೨ ರ ಟಿಪ್ಪಣಿ: ಅಜ್ಜಿಯಾಟದಿ ಬೊಮ್ಮ (ಕಣ್ಣಾಮುಚ್ಚೆ ಕಾಡೇ ಗೂಡೆ..)

ಮಂಕುತಿಮ್ಮನ ಲಗ್ಗ ೮೨ ರ ಟಿಪ್ಪಣಿ ರೀಡೂ ಕನ್ನಡದಲ್ಲಿ,…

https://www.facebook.com/story.php?story_fbid=1081839858619154&id=640670512736093&notif_id=1511922811515420&notif_t=notify_me_page&ref=notif

01362. ಮಂಕುತಿಮ್ಮನ ಕಗ್ಗ ೭೬ ಟಿಪ್ಪಣಿ – ಜೀವತೆಗೆ ಚಂಚಲತೆ, ಮಿಕ್ಕೆಲ್ಲ ನಿರ್ಲಿಪ್ತ


01362. ಮಂಕುತಿಮ್ಮನ ಕಗ್ಗ ೭೬ ಟಿಪ್ಪಣಿ – ಜೀವತೆಗೆ ಚಂಚಲತೆ, ಮಿಕ್ಕೆಲ್ಲ ನಿರ್ಲಿಪ್ತ
ಮಂಕುತಿಮ್ಮನ ಕಗ್ಗ ೭೬ ಟಿಪ್ಪಣಿ – ರೀಡೂ ಕನ್ನಡದಲ್ಲಿ
https://kannada.readoo.in/2017/09/%E0%B2%9C%E0%B3%80%E0%B2%B5%E0%B2%A4%E0%B3%86%E0%B2%97%E0%B3%86-%E0%B2%9A%E0%B2%82%E0%B2%9A%E0%B2%B2%E0%B2%A4%E0%B3%86-%E0%B2%AE%E0%B2%BF%E0%B2%95%E0%B3%8D%E0%B2%95%E0%B3%86%E0%B2%B2%E0%B3%8D

01350. ಮಂಕುತಿಮ್ಮನ ಕಗ್ಗ ೭೫: ನೊರೆಯ ಸರಿಸಿದಲ್ಲದೆ ಕಾಣಿಸದೊಳಗಿನ ಹಾಲು


01350. ಮಂಕುತಿಮ್ಮನ ಕಗ್ಗ ೭೫: ನೊರೆಯ ಸರಿಸಿದಲ್ಲದೆ ಕಾಣಿಸದೊಳಗಿನ ಹಾಲು

ಮಂಕುತಿಮ್ಮನ ಕಗ್ಗ ೭೫ರ ಮೇಲಿನ ನನ್ನ ಟಿಪ್ಪಣಿ ರೀಡೂ ಕನ್ನಡದಲ್ಲಿ :

http://kannada.readoo.in/2017/09/%E0%B2%A8%E0%B3%8A%E0%B2%B0%E0%B3%86%E0%B2%AF-%E0%B2%B8%E0%B2%B0%E0%B2%BF%E0%B2%B8%E0%B2%BF%E0%B2%A6%E0%B2%B2%E0%B3%8D%E0%B2%B2%E0%B2%A6%E0%B3%86-%E0%B2%95%E0%B2%BE%E0%B2%A3%E0%B2%BF%E0%B2%B8%E0%B2%A6

02197. ಮಂಕುತಿಮ್ಮನ ಕಗ್ಗ ೭೪: ಬೊಮ್ಮನ ಬೇಸರಕೆ ಜೊತೆ, ಈ ಸೃಷ್ಟಿಯಾಯ್ತಂತೆ !


02197. ಮಂಕುತಿಮ್ಮನ ಕಗ್ಗ ೭೪: ಬೊಮ್ಮನ ಬೇಸರಕೆ ಜೊತೆ, ಈ ಸೃಷ್ಟಿಯಾಯ್ತಂತೆ !
ಮಂಕುತಿಮ್ಮನ ಕಗ್ಗ ೭೪ ರ ಮೇಲಿನ ನನ್ನ ಟಿಪ್ಪಣಿ ರೀಡೂ ಕನ್ನಡದಲ್ಲಿ
http://kannada.readoo.in/2017/09/ಬೊಮ್ಮನ-ಬೇಸರಕೆ-ಜೊತೆ-ಈ-ಸೃಷ್

2176. ಮಂಕುತಿಮ್ಮನ ಕಗ್ಗ ೭೩: ಸಂತೆಯಲಿದ್ದೂ ಒಂಟಿ, ನಿರ್ಲಿಪ್ತದೆ ಈ ಜಗಕಂಟಿ..


2176. ಮಂಕುತಿಮ್ಮನ ಕಗ್ಗ ೭೩: ಸಂತೆಯಲಿದ್ದೂ ಒಂಟಿ, ನಿರ್ಲಿಪ್ತದೆ ಈ ಜಗಕಂಟಿ..

ಮಂಕುತಿಮ್ಮನ ಕಗ್ಗ ೭೩ರ ಮೇಲಿನ ನನ್ನ ಟಿಪ್ಪಣಿ ರೀಡೂ ಕನ್ನಡದಲ್ಲಿ…

http://kannada.readoo.in/2017/08/%E0%B2%B8%E0%B2%82%E0%B2%A4%E0%B3%86%E0%B2%AF%E0%B2%B2%E0%B2%BF%E0%B2%A6%E0%B3%8D%E0%B2%A6%E0%B3%82-%E0%B2%92%E0%B2%82%E0%B2%9F%E0%B2%BF-%E0%B2%A8%E0%B2%BF%E0%B2%B0%E0%B3%8D%E0%B2%B2%E0%B2%BF

02159. ಕಗ್ಗ ೭೨ ರ ಟಿಪ್ಪಣಿ – ರೀಡೂ ಕನ್ನಡದಲ್ಲಿ: ಜಗದ-ನಂಟಿನಂಟಿನ-ವ್ಯಾಪ್ತಿ


02159. ಕಗ್ಗ ೭೨ ರ ಟಿಪ್ಪಣಿ – ರೀಡೂ ಕನ್ನಡದಲ್ಲಿ

ಜಗದ-ನಂಟಿನಂಟಿನ-ವ್ಯಾಪ್ತಿ:

http://kannada.readoo.in/2017/08/ಜಗದ-ನಂಟಿನಂಟಿನ-ವ್ಯಾಪ್ತಿ

02147. ಮಂಕುತಿಮ್ಮನ ಕಗ್ಗ ೦೭೧ ರ ಟಿಪ್ಪಣಿ (ರೀಡೂ ಕನ್ನಡದಲ್ಲಿ) : ‘ಸಂತುಲಿತ ವ್ಯವಸ್ಥೆಗಳ ನಂಟಿನ ಸಂತುಲಿತ ವ್ಯವಸ್ಥೆ’ ಈ ವಿಶ್ವ !


02147. ಮಂಕುತಿಮ್ಮನ ಕಗ್ಗ ೦೭೧ ರ ಟಿಪ್ಪಣಿ (ರೀಡೂ ಕನ್ನಡದಲ್ಲಿ) : ‘ಸಂತುಲಿತ ವ್ಯವಸ್ಥೆಗಳ ನಂಟಿನ ಸಂತುಲಿತ ವ್ಯವಸ್ಥೆ’ ಈ ವಿಶ್ವ !

http://kannada.readoo.in/2017/08/ಸಂತುಲಿತ-ವ್ಯವಸ್ಥೆಗಳ-ನಂಟಿ

02138. ಮಂಕುತಿಮ್ಮನ ಕಗ್ಗ ೭೦ರ ಟಿಪ್ಪಣಿ – ರೀಡೂ ಕನ್ನಡದಲ್ಲಿ..


02138. ಮಂಕುತಿಮ್ಮನ ಕಗ್ಗ ೭೦ರ ಟಿಪ್ಪಣಿ – ರೀಡೂ ಕನ್ನಡದಲ್ಲಿ..
೭೦. ರಸ ವಾಸನೆ ಸರಕಿನ ನಿರಂತರತೇ, ಸಮತೋಲನ !

http://kannada.readoo.in/2017/08/೭೦-ರಸ-ವಾಸನೆ-ಸರಕಿನ-ನಿರಂತರತ

02110. ಮಂಕುತಿಮ್ಮನ ಕಗ್ಗ ೬೭ರ: ಆಳದಾಗೋಚರ ಸಂಕಲ್ಪ ಲಿಪಿ, ಪದರದಲೆಮ್ಮಾ ತೊಳಲಾಟ !


02110. ಮಂಕುತಿಮ್ಮನ ಕಗ್ಗ ೬೭ರ: ಆಳದಾಗೋಚರ ಸಂಕಲ್ಪ ಲಿಪಿ, ಪದರದಲೆಮ್ಮಾ ತೊಳಲಾಟ !

ಮಂಕುತಿಮ್ಮನ ಕಗ್ಗ ೬೭ರ ಟಿಪ್ಪಣಿ ರೀಡೂ ಕನ್ನಡದಲ್ಲಿ:ಆಳದಾಗೋಚರ ಸಂಕಲ್ಪ ಲಿಪಿ, ಪದರದಲೆಮ್ಮಾ ತೊಳಲಾಟ !

02090.ಮಂಕುತಿಮ್ಮನ ಕಗ್ಗ ೦೬೬:’ದುಂದುಗಾರನವನೆಂದರೆ, ನೀ ಮಂದದೃಷ್ಟಿಯವನಾಗುವೆ ಮರುಳೆ..!’


02090.ಮಂಕುತಿಮ್ಮನ ಕಗ್ಗ ೦೬೬:’ದುಂದುಗಾರನವನೆಂದರೆ, ನೀ ಮಂದದೃಷ್ಟಿಯವನಾಗುವೆ ಮರುಳೆ..!’
ಮಂಕುತಿಮ್ಮನ ಕಗ್ಗ ೬೬ ರ ಟಿಪ್ಪಣಿ – ರೀಡೂ ಕನ್ನಡದಲ್ಲಿ

02078. ಮಂಕುತಿಮ್ಮನ ಕಗ್ಗ ೦೬೫. ಕೃತಕ ಮಣಿಯಂತಲ್ಲ, ವಿಕಸಿಪ ಸುಮದಂತಿರಬೇಕು – ಜ್ಞಾನ !


02078. ಮಂಕುತಿಮ್ಮನ ಕಗ್ಗ ೦೬೫. ಕೃತಕ ಮಣಿಯಂತಲ್ಲ, ವಿಕಸಿಪ ಸುಮದಂತಿರಬೇಕು – ಜ್ಞಾನ !

http://kannada.readoo.in/2017/06/%E0%B2%95%E0%B3%83%E0%B2%A4%E0%B2%95-%E0%B2%AE%E0%B2%A3%E0%B2%BF%E0%B2%AF%E0%B2%82%E0%B2%A4%E0%B2%B2%E0%B3%8D%E0%B2%B2-%E0%B2%B5%E0%B2%BF%E0%B2%95%E0%B2%B8%E0%B2%BF%E0%B2%AA-%E0%B2%B8%E0%B3%81

02064. ಮಂಕುತಿಮ್ಮನ ಕಗ್ಗ ೬೩ ರ ಟಿಪ್ಪಣಿ , ರೀಡೂ ಕನ್ನಡದಲ್ಲಿ …


02064. ಮಂಕುತಿಮ್ಮನ ಕಗ್ಗ ೬೩ ರ ಟಿಪ್ಪಣಿ , ರೀಡೂ ಕನ್ನಡದಲ್ಲಿ …

http://kannada.readoo.in/2017/06/ಬಿಡು-ಒರಟು-ನರಭಾಷೆ-ಆಲಿಸೊಳಗ

00874. ಕಗ್ಗಕೊಂದು ಹಗ್ಗ ಹೊಸೆದು… ಮಂಕುತಿಮ್ಮನ ಕಗ್ಗ 22


00874. ಕಗ್ಗಕೊಂದು ಹಗ್ಗ ಹೊಸೆದು… ಮಂಕುತಿಮ್ಮನ ಕಗ್ಗ 22

ಮಂಕುತಿಮ್ಮನ ಕಗ್ಗ 22 ರ ಟಿಪ್ಪಣಿ ರೀಡೂ ಕನ್ನಡದಲ್ಲಿ

00865. ಕಗ್ಗಕೊಂದು ಹಗ್ಗ ಹೊಸೆದು 21


00865. ಕಗ್ಗಕೊಂದು ಹಗ್ಗ ಹೊಸೆದು 21

ಕಗ್ಗಕೊಂದು ಹಗ್ಗ ಹೊಸೆದು… http://bit.ly/2bKMleI

(published in Readoo Kannada)

00857. ಕಗ್ಗಕೊಂದು ಹಗ್ಗ ಹೊಸೆದು…


00857. ಕಗ್ಗಕೊಂದು ಹಗ್ಗ ಹೊಸೆದು…

ಮಂಕುತಿಮ್ಮನ ಕಗ್ಗ 20 ರ ಟಿಪ್ಪಣಿ ಇಂದಿನ ರೀಡೂ ಕನ್ನಡದಲ್ಲಿ :

ಕಗ್ಗಕೊಂದು ಹಗ್ಗ ಹೊಸೆದು…

00845. ಕಗ್ಗಕೊಂದು ಹಗ್ಗ – 19


00845. ಕಗ್ಗಕೊಂದು ಹಗ್ಗ – 19
___________________________

ಮಂಕುತಿಮ್ಮನ ಕಗ್ಗ – 19 ರ ಟಿಪ್ಪಣಿ ರೀಡೂ ಕನ್ನಡದಲ್ಲಿ

00836. ಕಗ್ಗಕೊಂದು ಹಗ್ಗ ಹೊಸೆದು…ಮಂಕುತಿಮ್ಮನ ಕಗ್ಗ 18


00836. ಕಗ್ಗಕೊಂದು ಹಗ್ಗ ಹೊಸೆದು…ಮಂಕುತಿಮ್ಮನ ಕಗ್ಗ 18

ಮಂಕುತಿಮ್ಮನ ಕಗ್ಗ 18 ಕ್ಕೆ ನನ್ನ ಟಿಪ್ಪಣಿ ರೀಡೂ ಕನ್ನಡದಲ್ಲಿ..

ಕಗ್ಗಕೊಂದು ಹಗ್ಗ ಹೊಸೆದು…

00834. ಕಗ್ಗಕೊಂದು ಹಗ್ಗ ಹೊಸೆದು…ಮಂಕುತಿಮ್ಮನ ಕಗ್ಗ 17 


00834. ಕಗ್ಗಕೊಂದು ಹಗ್ಗ ಹೊಸೆದು…ಮಂಕುತಿಮ್ಮನ ಕಗ್ಗ 17 

ಮಂಕುತಿಮ್ಮನ ಕಗ್ಗ 17 ಕ್ಕೆ ನನ್ನ ಟಿಪ್ಪಣಿ ರೀಡೂ ಕನ್ನಡದಲ್ಲಿ.. 

ಕಗ್ಗಕೊಂದು ಹಗ್ಗ ಹೊಸೆದು…

00823. ಕಗ್ಗಕೊಂದು ಹಗ್ಗ 16: ಮಂಕುತಿಮ್ಮನ ಕಗ್ಗ 16 ಕ್ಕೆ ನನ್ನ ಟಿಪ್ಪಣಿ ರೀಡೂ ಕನ್ನಡದಲ್ಲಿ.. 


00823. ಕಗ್ಗಕೊಂದು ಹಗ್ಗ 16: ಮಂಕುತಿಮ್ಮನ ಕಗ್ಗ 16 ಕ್ಕೆ ನನ್ನ ಟಿಪ್ಪಣಿ ರೀಡೂ ಕನ್ನಡದಲ್ಲಿ..

ಕಗ್ಗಕೊಂದು ಹಗ್ಗ ಹೊಸೆದು…

0822. ಮಂಕುತಿಮ್ಮನ ಕಗ್ಗ 15 ರ ಟಿಪ್ಪಣಿ ಇಂದಿನ ರೀಡೂ ಕನ್ನಡದಲ್ಲಿ..


ಮಂಕುತಿಮ್ಮನ ಕಗ್ಗ 15 ರ ಟಿಪ್ಪಣಿ ಇಂದಿನ ರೀಡೂ ಕನ್ನಡದಲ್ಲಿ..

ಕಗ್ಗಕೊಂದು ಹಗ್ಗ ಹೊಸೆದು…

00820. ಮಂಕುತಿಮ್ಮನ ಕಗ್ಗ 14 ರ ನನ್ನ ಟಿಪ್ಪಣಿ ರೀಡೂ ಕನ್ನಡದಲ್ಲಿ..


00820. ಮಂಕುತಿಮ್ಮನ ಕಗ್ಗ 14 ರ ನನ್ನ ಟಿಪ್ಪಣಿ ರೀಡೂ ಕನ್ನಡದಲ್ಲಿ..

ಕಗ್ಗಕೊಂದು ಹಗ್ಗ ಹೊಸೆದು…

00803. ಮಂಕುತಿಮ್ಮನ ಕಗ್ಗ 13 ರ ನನ್ನ ಟಿಪ್ಪಣಿ ಇಂದಿನ ರೀಡೂ ಕನ್ನಡದಲ್ಲಿ


00803. ಮಂಕುತಿಮ್ಮನ ಕಗ್ಗ 13 ರ ನನ್ನ ಟಿಪ್ಪಣಿ ಇಂದಿನ ರೀಡೂ ಕನ್ನಡದಲ್ಲಿ

http://kannada.readoo.in/2016/06/ಕಗ್ಗಕೊಂದು-ಹಗ್ಗ-ಹೊಸೆದು-10

00793. ಮಂಕುತಿಮ್ಮನ ಕಗ್ಗ ೧೨ ರ ಟಿಪ್ಪಣಿ, ಇಂದಿನ ರೀಡೂ ಕನ್ನಡದಲ್ಲಿ (೧೭.೦೬.೨೦೧೬)


00793. ಮಂಕುತಿಮ್ಮನ ಕಗ್ಗ ೧೨ ರ ಟಿಪ್ಪಣಿ, ಇಂದಿನ ರೀಡೂ ಕನ್ನಡದಲ್ಲಿ (೧೭.೦೬.೨೦೧೬)

ನನ್ನ ಮಂಕುತಿಮ್ಮನ ಕಗ್ಗ ೧೨ ರ ಟಿಪ್ಪಣಿ, ಇಂದಿನ ರೀಡೂ ಕನ್ನಡದಲ್ಲಿ (೧೭.೦೬.೨೦೧೬)

ಕಗ್ಗಕೊಂದು ಹಗ್ಗ ಹೊಸೆದು…

00781. ಕಗ್ಗಕೊಂದು ಹಗ್ಗ ಹೊಸೆದು…(೧೦ ಮತ್ತು ೧೧)


00781. ಕಗ್ಗಕೊಂದು ಹಗ್ಗ ಹೊಸೆದು…(೧೦ ಮತ್ತು ೧೧)

ಮಂಕುತಿಮ್ಮನ ಕಗ್ಗ ೧೦ ಮತ್ತು ೧೧ ಕ್ಕೆ ನನ್ನ ಟಿಪ್ಪಣಿ ರೀಡೂ ಕನ್ನಡದಲ್ಲಿ (11.06.2016)

ಕಗ್ಗಕೊಂದು ಹಗ್ಗ ಹೊಸೆದು…

00752. ಕಗ್ಗಕೊಂದು ಹಗ್ಗ ಹೊಸೆದು – ಟಿಪ್ಪಣಿ ೦೦೯ (readoo 30.05.2016)


00752. ಕಗ್ಗಕೊಂದು ಹಗ್ಗ ಹೊಸೆದು – ಟಿಪ್ಪಣಿ ೦೦೯ (readoo 30.05.2016)
___________________________________________________________

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೦೯ : ಇವತ್ತಿನ ರೀಡೂ ಕನ್ನಡದಲ್ಲಿ ಪ್ರಕಟಿತ (೩೦.೦೫.೨೦೧೬)

ಕಗ್ಗಕೊಂದು ಹಗ್ಗ ಹೊಸೆದು…

00729. ಕಗ್ಗಕೊಂದು ಹಗ್ಗ ಹೊಸೆದು – ಕಗ್ಗದ ಟಿಪ್ಪಣಿ ೮


00729. ಕಗ್ಗಕೊಂದು ಹಗ್ಗ ಹೊಸೆದು – ಕಗ್ಗದ ಟಿಪ್ಪಣಿ ೮
__________________________________

ಕಗ್ಗದ ಟಿಪ್ಪಣಿ ೮, ಇಂದಿನ ರೀಡೂ ಕನ್ನಡದಲ್ಲಿ (೨೦.೦೫.೨೦೧೬)

ಕಗ್ಗಕೊಂದು ಹಗ್ಗ ಹೊಸೆದು…

00706. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೦೭ ( readoo Kannada on 12.05.2016)


00706. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೦೭ ( readoo Kannada on 12.05.2016)

ಕಗ್ಗಕೊಂದು-ಹಗ್ಗ-ಹೊಸೆದು-4

ಕಗ್ಗಕೊಂದು ಹಗ್ಗ ಹೊಸೆದು…

00690. ಕಗ್ಗ ಟಿಪ್ಪಣಿ ೦೦೬ ( ೦೫.೦೫.೨೦೧೬ ‘ರೀಡೂ ಕನ್ನಡ’ದಲ್ಲಿ)


00690. ಕಗ್ಗ ಟಿಪ್ಪಣಿ ೦೦೬ ( ೦೫.೦೫.೨೦೧೬ ‘ರೀಡೂ ಕನ್ನಡ’ದಲ್ಲಿ)
_______________________________________________________

ಕಗ್ಗಕೊಂದು ಹಗ್ಗ ಹೊಸೆದು… ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೦೬

00678. ಕಗ್ಗ ೦೫ ರ ಟಿಪ್ಪಣಿ


00678. ಕಗ್ಗ ೦೫ ರ ಟಿಪ್ಪಣಿ
______________________

ಕಗ್ಗ ೦೫ ರ ಟಿಪ್ಪಣಿ : ಇಂದಿನ ರೀಡೂ ಕನ್ನಡದಲ್ಲಿ..(೨೯.೦೪.೨೦೧೬)

ಕಗ್ಗಕೊಂದು ಹಗ್ಗ ಹೊಸೆದು… – 5

00663. ಕಗ್ಗಕೊಂದು ಹಗ್ಗ ಹೊಸೆದು – ಟಿಪ್ಪಣಿ ೦೪


00663. ಕಗ್ಗಕೊಂದು ಹಗ್ಗ ಹೊಸೆದು – ಟಿಪ್ಪಣಿ ೦೪ 

ಇಂದಿನ ರೀಡೂ ಕನ್ನಡದಲ್ಲಿ ಪ್ರಕಟಿತ (೨೦.೦೪.೨೦೧೬) 

ಕಗ್ಗಕೊಂದು ಹಗ್ಗ ಹೊಸೆದು 

00653. ಕಗ್ಗಕೊಂದು ಹಗ್ಗ ಹೊಸೆದು – 03


ಕಗ್ಗಕೊಂದು ಹಗ್ಗ ಹೊಸೆದು…

ಮೂರನೆಯ ಕಗ್ಗದ ಮೇಲಿನ ನನ್ನ ಟಿಪ್ಪಣಿ : ಇಂದಿನ ರೀಡೂ ಕನ್ನಡದಲ್ಲಿ (೧೨.೦೪.೨೦೧೬)

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೦೩ : http://kannada.readoo.in/2016/04/ಕಗ್ಗಕೊಂದು-ಹಗ್ಗ-ಹೊಸೆದು-3

– ನಾಗೇಶ ಮೈಸೂರು

00635: ಕಗ್ಗಕೊಂದು ಹಗ್ಗ ಹೊಸೆದು – 02


00635: ಕಗ್ಗಕೊಂದು ಹಗ್ಗ ಹೊಸೆದು – 02
________________________

ಎರಡನೆ ಕಗ್ಗದ ನನ್ನ ಟಿಪ್ಪಣಿ ೦೫.ಏಪ್ರಿಲ್.೨೦೧೬ ರೀಡೂ ಕನ್ನಡದಲ್ಲಿ . ಥ್ಯಾಂಕ್ಯೂ ರೀಡೂ ಕನ್ನಡ ಟೀಮ್ ! 

ಕಗ್ಗಕೊಂದು ಹಗ್ಗ ಹೊಸೆದು

– ನಾಗೇಶ ಮೈಸೂರು

00634: ಕಗ್ಗಕೊಂದು ಹಗ್ಗ ಹೊಸೆದು – 01


00634: ಕಗ್ಗಕೊಂದು ಹಗ್ಗ ಹೊಸೆದು – 01

ಮೊದಲನೇ ಕಗ್ಗದ ನನ್ನ ಟಿಪ್ಪಣಿ ೨೪. ಮಾರ್ಚ್. ೨೦೧೬ ರೀಡೂ ಕನ್ನಡದಲ್ಲಿ . ಥ್ಯಾಂಕ್ಯೂ ರೀಡೂ ಕನ್ನಡ ಟೀಮ್ ! 

ಕಗ್ಗಕೊಂದು ಹಗ್ಗ ಹೊಸೆದು..

– ನಾಗೇಶ ಮೈಸೂರು

00415. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೩೩


00415. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೩೩
___________________________________

ನರ ಪರೀಕ್ಷೆಯೆ ಬೊಮ್ಮನಾಶಯವೆ? ನಮ್ಮ ಬಾಳ್ |
ಬರಿ ಸಮಸ್ಯೆಯೆ ? ಅದರ ಪೂರಣವದೆಲ್ಲಿ ? ||
ಸುರಿದು ಪ್ರಶ್ನೆಗಳನುತ್ತರವ ಕುಡೆ ಬಾರದನ |
ಗುರುವೆಂದು ಕರೆಯುವೆಯ ? – ಮಂಕುತಿಮ್ಮ || ೩೩ ||

ಪರಬ್ರಹ್ಮದೊಡನೆಯೆ ಪಂಥಕ್ಕಿಳಿದಂತೆ ಆ ತತ್ವದೊಡನೆ ಕವಿಯ ವಾಗ್ವಾದ, ಸಂವಾದ ಮುಂದುವರೆಯುತ್ತದೆ, ಈ ಪದ್ಯದಲ್ಲು. ಇಲ್ಲಿ ಕವಿಯೆತ್ತಿಕೊಂಡ ನಂಬಿಕೆ – ಪರಬ್ರಹ್ಮದ ಪರಮಗುರು ಸ್ವರೂಪದ್ದು; ಪರಬ್ರಹ್ಮವನ್ನು ಗುರುವಿನ ಗುರುವೆಂದು ಭಾವಿಸುವ ಭಾವನೆಯ ಮೂಲ ಅಶಯಕ್ಕೆ ಸವಾಲೊಡ್ಡುವ ಪ್ರಶ್ನೆಯ ರೂಪದಲ್ಲಿ.

ನಮ್ಮ ಬಾಳೆನ್ನುವುದರತ್ತ ಒಮ್ಮೆ ದಿಟ್ಟಿಸಿ ನೋಡಿದರೆ ಬರಿಯ ಸಮಸ್ಯೆಗಳೆ ಎದ್ದು ಕಾಣುತ್ತವೆ, ಅದರಲ್ಲು ಉತ್ತರವಿಲ್ಲದ (ಪೂರಣವಿಲ್ಲದ) ಅನೇಕಾನೇಕ ಒಗಟುಗಳ ರೂಪದಲ್ಲಿ. ಆ ಪ್ರಶ್ನೆ, ಸಮಸ್ಯೆ, ಒಗಟುಗಳ ಮೊತ್ತ, ಆಳ, ಅಗಲ, ವಿಸ್ತಾರಗಳನ್ನೆಲ್ಲ ನೋಡುತ್ತಿದ್ದರೆ, ಅವೆಲ್ಲವನ್ನು ಆ ಪ್ರರಬ್ರಹ್ಮನು ಹುಟ್ಟುಹಾಕಿರುವುದೆ ಕೇವಲ ನರ ಮಾನವನ ಪರೀಕ್ಷೆಗೇನೊ? ಅನಿಸಿಬಿಡುತ್ತದೆ. ಯಾವುದೊ ಕಾರಣಕ್ಕೊ, ಏನೊ – ನರಮಾನವ ಆ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿಕೊಂಡು ಹೊರಬರಲಾಗದೆ ಅದರ ನಡುವಲ್ಲೆ ತೊಳಲಾಡುವಂತೆ ಮಾಡುವುದೆ ಆ ಬೊಮ್ಮನ (ಪರಬ್ರಹ್ಮದ) ಮೂಲ ಆಶಯ (ಉದ್ದೇಶ)ವಿದ್ದಂತೆ ಕಾಣುತ್ತದೆ.

ಅವನ ಸೃಷ್ಟಿ ನಿಯಮದ ಸಮೀಕರಣದಲ್ಲಿ ಬರಿಯ ಉತ್ತರವಿಲ್ಲದ, ಗೊಂದಲ, ಸಂಶಯ ತುಂಬಿದ ಸಮಸ್ಯೆಗಳ ಸುರಿಮಳೆಯೆ ಜೀವನ ಕ್ರಮವಾದಂತೆ ಕಾಣಿಸುತ್ತದಲ್ಲ ? ಎಂದು ಕೊರಗುತ್ತದೆ ಕವಿ ಹೃದಯ. ಉತ್ತರವೆ ಇರದ ಹಾಗೆ ಬರಿಯ ಪ್ರಶ್ನೆಗಳನ್ನು ಮಾತ್ರ ಸುರಿದು ಕಂಗೆಡಿಸಿ , ಕೊನೆಗೆ ಅಸಹಾಯಕತೆಯಿಂದ ಕರೆದಾಗಲೂ ಉತ್ತರ ಕೊಡಲು ಬಾರದವನನ್ನು ಗುರುವೆಂದು ಕರೆಯುವುದಾದರು, ಒಪ್ಪಿಕೊಳ್ಳುವುದಾದರು ಎಂತು? ಆ ಪರಬ್ರಹ್ಮನೆನಿಸಿಕೊಂಡವನಿಗೆ ಹಾಗೆ ಕರೆಸಿಕೊಳ್ಳುವ ಅರ್ಹತೆ ನಿಜಕ್ಕೂ ಇದೆಯೆ ? ಎಂದು ಪಂಥಕ್ಕೆ ಬಿದ್ದಂತೆ ಕೇಳುತ್ತಾನಿಲ್ಲಿ ಮಂಕುತಿಮ್ಮ. ಹಾಗೆ ಪಂಥಕ್ಕೆ ಬಿದ್ದಂತೆ ಕೆಣಕಿದರಾದರೂ, ರೇಗಿದಂತಾಗಿ ಉತ್ತರ ಕೊಡಲು ಬರಬಹುದೇನೊ ಎನ್ನುವ ಹುಸಿ ಆಶಯವನ್ನು ನಿಷ್ಪತ್ತಿಸಬಹುದು ಮುಗ್ದ, ಸಹೃದಯ ಓದುಗ ಮನಸು.

00414. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೩೨


00414. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೩೨
___________________________________

ಪರಬೊಮ್ಮ ನೀ ಜಗವ ರಚಿಸಿದವನಾದೊಡದು |
ಬರಿಯಾಟವೋ ಕನಸೊ ನಿದ್ದೆ ಕಲರವವೋ ? ||
ಮರುಳನವನಲ್ಲದೊಡೆ ನಿಯಮವೊಂದಿರಬೇಕು |
ಗುರಿ ಗೊತ್ತದೇನಿಹುದೋ? – ಮಂಕುತಿಮ್ಮ || ೩೨ ||

ಹಿಂದಿನೆರಡು ಪರಬ್ರಹ್ಮದ ಸ್ವರೂಪ ಮತ್ತು ತಂತ್ರಗಾರಿಕೆಯ ಕುರಿತಾದ ಸ್ವೈರ ವಿಹಾರದಿಂದ ಕವಿಯ ಮನಸೀಗ ಆ ಸೃಷ್ಟಿಯ ಹೊತ್ತಿನ ಪರಬ್ರಹ್ಮದ ಮನಸ್ಥಿತಿಯ ಕುರಿತಾದ ವಿಶ್ಲೇಷಣೆಗಿಳಿದುಬಿಡುತ್ತದೆ.

ಕಣ್ಣಿಗೆ ಕಾಣಿಸದೆ ಮಿಥ್ಯೆಯ ಮರೆಯಲ್ಲಡಗಿಕೊಂಡ ಸ್ವರೂಪದ ಗೊಂದಲವೊಂದೆಡೆ ತಿಳಿಯಾಗುವ ಮೊದಲೆ, ಪ್ರಕೃತಿ ಸಹಜ ಸ್ಥಿತಿಯಲನಾವರಣವಾಗದ ಮತ್ತೊಂದು ಗೊಂದಲ ಸೇರಿಕೊಂಡು ಎಲ್ಲವನ್ನು ಅಯೋಮಯವಾಗಿಸಿಬಿಟ್ಟಿದೆ. ಇದೆಲ್ಲ ಗೊಂದಲಗಳನ್ನು ನೋಡಿದರೆ ಅದೇನು ಬೇಕಾಗಿಯೆ ಸೃಜಿಸಿಕೊಂಡ ಬುದ್ಧಿವಂತಿಕೆಯ ಪರಿಸರವೊ ಅಥವಾ ಕೈ ಹಿಡಿದ ಕಸುಬಲ್ಲಿ ಏಮಾರಿ, ಸರಿಯಾಗಿ ಫಲಿಸದ, ಅನಿರೀಕ್ಷಿತತೆಯ ಹುಚ್ಚಾಟವೊ? ಎಂಬ ಸಂಶಯ ಕವಿಯ ಮನದಲ್ಲಿ ಮೂಡಿರಬೇಕು. ಅದರ ಫಲಶೃತಿಯೆಂಬಂತೆ ಈ ಸಾಲುಗಳು ಹೊರಡುತ್ತವೆ – ಪರಬ್ರಹ್ಮನನ್ನೆ ಅವನ ವಿಧಾನ, ನಿಯಮಗಳ ಹಿನ್ನಲೆಯನ್ನು ಪ್ರಶ್ನಿಸುವ ಸಾಹಸದತ್ತ.

ಈ ಇಹ ಜಗದ ಆಸ್ತಿಕ ಪಾಮರ ಪಂಡಿತರೆಲ್ಲರ ಒಮ್ಮತದ, ಒಕ್ಕೊರಲಿನ ನಂಬಿಕೆಯೆಂದರೆ ಈ ಜಗವನ್ನು ರಚಿಸಿ, ಸೃಷ್ಟಿ ಮಾಡಿದ್ದು ಪರಬ್ರಹ್ಮನೆಂದು. ಒಂದು ವೇಳೆ ಅದು ನಿಜವೆ ಎಂದಿಟ್ಟುಕೊಂಡರು ಇಷ್ಟೆಲ್ಲ ಗೊಂದಲ, ಅಸಹಜತೆಗಳನ್ನು ನೋಡಿದರೆ ಒಂದನುಮಾನವಂತೂ ಬರುತ್ತದೆ – ಇದೇನು ಸುಮ್ಮನೆ ಹುಡುಗಾಟವಾಡಲೆಂದು ರಚಿಸಿದ, ಉಢಾಪೆಯ ಅನಾಸಕ್ತ ಸೃಷ್ಟಿಯೊ ? ಅಥವಾ ಕನಸಿನಲ್ಲೊ, ನಿದ್ದೆಯಲ್ಲೊ ಬಡಬಡಿಸುತ್ತ ಸರಿಯಾದ ಪೂರ್ವನಿಯೋಜಿತ ಯೋಜನೆ, ರೂಪುರೇಷೆಯಿರದೆ ದಕ್ಕಿದ ಅರೆಕಲ್ಪನೆಯನ್ನೆ ಸಾಕಾರವಾಗಿಸಿದ ರೀತಿಯೊ? ಎಂದು ಸಂಶಯಿಸುತ್ತಲೆ ಮುಂದಿನೆರಡು ಸಾಲುಗಳಲ್ಲಿ ಆ ಪ್ರಶ್ನೆಗಿರಬಹುದಾದ ಉತ್ತರವನ್ನು ಊಹಿಸುತ್ತದೆ ಕವಿ ಮನ.

ಇಷ್ಟೆಲ್ಲಾ ಅದ್ಭುತ ರಚನೆಯನ್ನು ಸೃಜಿಸುವಾತ ಬರಿಯ ಹುಚ್ಚಾಟದಿಂದ (ಮರುಳುತನ) ಅದನ್ನು ಸಾಧಿಸಲು ಸಾಧ್ಯವಾಗದ ಕಾರಣ, ಅವನ ಈ ಸೃಷ್ಟಿಗು ಯಾವುದೊ ಒಂದು ಮೂಲ ನಿಯಮ, ರೀತಿ ನೀತಿಗಳ ಕಟ್ಟುಪಾಡಿರಬೇಕು. ಯಾವುದೊ ಪೂರ್ವ ನಿಯೋಜಿತ ಗೊತ್ತು, ಗುರಿ, ಉದ್ದೇಶಗಳಿರಬೇಕು. ಆದರೆ ಆ ದಿಕ್ಕು ದೆಸೆಗಳ ಸುಳಿವು ನಮಗೆ ಕಾಣುತ್ತಿಲ್ಲವಷ್ಟೆ ಎಂದು ಭಾಗಶಃ ಉತ್ತರದ ಸಾಧ್ಯತೆಯಲ್ಲಿಯೆ ಸಮಾಧಾನಪಟ್ಟುಕೊಳ್ಳುತ್ತದೆ ಕವಿಯ ಚಿಕಿತ್ಸಕ ಬುದ್ಧಿ. ಆ ಪ್ರಕ್ರಿಯೆಯಲ್ಲೆ ಕವಿಯಂತಃಕರಣಗಳೆಲ್ಲ ಅಲೆದಾಡಿ ಕ್ರಮಿಸಿದ ದೂರ, ಆಳ, ಅಗಲಗಳ ತುಣುಕನ್ನು ಪರಿಚಯಿಸುತ್ತದೆ – ತನ್ನ ಪದಗಳ ಆಳ ಅರ್ಥದ ವ್ಯಾಪ್ತಿಯ ಪರಿಧಿಯಲ್ಲೆ.

00413. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೩೧


00413. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೩೧
___________________________________

ಬಚ್ಚಿಟ್ಟುಕೊಂಡಿಹುದೆ ಸತ್ಯ ಮಿಥ್ಯೆಯ ಹಿಂದೆ ? |
ನಚ್ಚುವುದೆ ಮರೆಯೊಳಿಹುದನೆ ಸತ್ಯವೆಂದು ? ||
ಅಚ್ಚರಿಯ ತಂತ್ರವಿದು ; ಬ್ರಹ್ಮ ಸೃಷ್ಟಿಗಳೇಕೊ |
ಮುಚ್ಚಿಹವು ಸಾಜತೆಯ – ಮಂಕುತಿಮ್ಮ || ೩೧ ||

ಈ ಪದ್ಯದ ಹಿನ್ನಲೆಯಾಗಿ ಹಿಂದಿನ ಪದ್ಯವನ್ನು (ಮೂವತ್ತನೆಯದು) ನೋಡಿದರೆ, ಇದೊಂದು ರೀತಿ ಅದರ ಮುಂದುವರೆದ ಭಾಗವೆನ್ನಬಹುದು. ಅಲ್ಲಿ ಕಣ್ಣಿಗೆದುರಾಗಿಟ್ಟ ಅನಾವರಣವನ್ನೆ ನಂಬಬಾರದು ಎಂದರೆ ಮತ್ತೇನನ್ನು ನಂಬುವುದೊ ? ಎಂದು ದಬಾಯಿಸಿದ ಮಂಕುತಿಮ್ಮ, ಇಲ್ಲ ಸ್ವಲ್ಪ ತಗ್ಗಿದ ಭಾವದಲ್ಲಿ ಆ ಕಣ್ಣಿಗೆ ಕಾಣಿಸದ್ದರ ಹಿಂದೆಯು ನಿಜಕ್ಕೂ ಏನಾದರೂ ಇರಬಹುದೇ ? ಎಂದು ಆಲೋಚಿಸುತ್ತಾನೆ – ತೆರೆದ, ಬಿಚ್ಚು ಮನದ ಮತ್ತೊಂದು ಭಾವವನ್ನು ಪ್ರಕಟವಾಗಿ ತೋರಿಸುತ್ತ.

ಒಂದು ವೇಳೆ ಆ ಸತ್ಯವೆನ್ನುವುದು ನಿಜಕ್ಕೂ ಸುಳ್ಳು (ಮಿಥ್ಯೆ) ಎಂಬ ಮುಖವಾಡ, ಪರದೆಯ ಹಿಂದೆ ಅಡಗಿಕೊಂಡಿರಬಹುದೆ? ಯಾವುದೊ ಪುರುಷಾರ್ಥ, ಘನೋದ್ದೇಶದಿಂದ ಮುಸುಕುಧಾರಿ ವೇಷ ಹಾಕಿಕೊಂಡು ಬೇಕೆಂತಲೆ ಕಾಣಿಸಿಕೊಳ್ಳದೆ ಅಡಗಿ ಕೂತಿದೆಯೆ? ಆ ಮರಯಲ್ಲಡಗಿ ಕೂತದ್ದನೆ ನಾವು ಸತ್ಯವೆಂದು ನಂಬಬೇಕೆ (ನಚ್ಚುವುದೆ) ? ಎಂದೆಲ್ಲ ಗೊಂದಲದಲ್ಲಿ , ದ್ವಂದ್ವದಲ್ಲಿ ಮುಳುಗುತ್ತದೆ ಕವಿಯ ಮನಸು. ಕಾಣದ್ದನು ನಂಬೆನೆನ್ನುವ ವಾಸ್ತವವಾದಿಯ ನಿರಾಕರಣೆ ನಾಸ್ತಿಕತೆಯ ಅಂಶಕ್ಕೆ ಇಂಬು ಕೊಡುವಂತಿದ್ದರೆ, ಇಲ್ಲಿ ಕಾಣಿಸಿಕೊಳ್ಳುವ ಅನುಮಾನ ‘ನಮಗೆ ಮೀರಿದ್ದದೇನೊ ಸತ್ಯ ಇದ್ದರೂ ಇರಬಹುದೇ ?’ ಎನ್ನುವ ಆಸ್ತಿಕದತ್ತ ಓಲುವ ಇಂಗಿತವನ್ನೀಯುತ್ತದೆ.

ಆದರೆ ಇಲ್ಲಿ ನಿಜಕ್ಕು ಅನಾವರಣವಾಗುವುದು, ಆಸ್ತಿಕ ನಾಸ್ತಿಕ ಭಾವಗಳೆರಡನ್ನು ಮೀರಿದ ಜಾಗೃತ ಪ್ರಜ್ಞೆಯ, ಸತ್ಯಾನ್ವೇಷಣೆಯ ಜಿಜ್ಞಾಸೆ. ಒಟ್ಟಿನಲ್ಲಿ ಈ ಗೊಂದಲಕ್ಕೊಂದು ನೇರ ಸರಳ ಪರಿಹಾರ ಕಾಣಿಸದೆಂದು ಅರಿವಾದ ಕವಿ ಹೃದಯ ಅದನ್ನು ಬದಿಗಿತ್ತು, ಆ ರೀತಿಯ ಸೃಷ್ಟಿಯನ್ನು ರೂಪಿಸಿದ, ರಚಿಸಿದ ಸೃಷ್ಟಿಕರ್ತನ ತಂತ್ರದತ್ತ ಹೊರಳಿಬಿಡುತ್ತದೆ, ಕೊನೆಯೆರಡು ಸಾಲುಗಳಲ್ಲಿ. ಯಾಕೆ ಸ್ವತಃ ತಾನೇ ಸೃಜಿಸಿದ ನಿಸರ್ಗ, ಪ್ರಕೃತಿಯ ಸಹಜ ನಿಯಮಗಳನ್ನು (ಸಾಜತೆ) ಈ ಬ್ರಹ್ಮಸೃಷ್ಟಿ ಪರಿಪಾಲಿಸುವುದಿಲ್ಲ? ಯಾಕೆ ತನದೇ ಆದ ಬೇರೇನೊ ತಂತ್ರ, ನಿಯಮವನ್ನು ಹಾಕಿಕೊಂಡಂತೆ ಕಾಣಿಸುತ್ತಿದೆ ? ಸಹಜದಲ್ಲೆ ತಮ್ಮನ್ನು ಅನಾವರಣಗೊಳಿಸಿಕೊಳ್ಳುವ ಬದಲು, ಬ್ರಹ್ಮಾಂಡದಿಂದ ಹಿಡಿದು ದೃಗ್ಗೋಚರ ಅಸ್ತಿತ್ವದವರೆಗೆ ಈ ಬ್ರಹ್ಮ ಸೃಷ್ಟಿಗಳೇಕೆ ಹೊರಗೆ ನಿಚ್ಚಳವಾಗಿ ಕಾಣಿಸಿಕೊಳ್ಳದ, ಗೋಚರವಾಗದೆ ಸುಳ್ಳಿನ ಮರೆಯಲ್ಲಡಗಿರುವ ಸತ್ಯದಂತೆ ಪ್ರವರ್ತಿಸುತ್ತವೆ? ಏನೀ ತಂತ್ರದ ಹಿನ್ನಲೆ, ಗುಟ್ಟು? ಅಂತಿಮದಲ್ಲಿ ಅದೇನೇ ಇದ್ದರೂ, ನಾವು ಕಾಣುವ ಸಾಮಾನ್ಯ ನಿಯಮಕ್ಕೆ ಅಪವಾದದಂತೆ ಇರುವುದು ಮಾತ್ರ ನಿಜ ಎಂದು ಒಪ್ಪಿಕೊಳ್ಳುತ್ತಲೆ, ತನ್ನ ಬ್ರಹ್ಮ ಸೃಷ್ಟಿಯ ಕುರಿತಾದ ವಿಸ್ಮಿತ ಭಾವವನ್ನು ಪ್ರಕಟಪಡಿಸುತ್ತಾನೆ ಮಂಕುತಿಮ್ಮ.

ಈ ರೀತಿಯ ಹಲವಾರು ಪದ್ಯಗಳಲ್ಲಿ ಬರುವ ಸೃಷ್ಟಿಯ ಗುಟ್ಟಿನ ಕುರಿತಾದ ಹುಡುಕಾಟ, ಈ ವಸ್ತು ವಿಷಯ ಕವಿಯನ್ನು ಸಾಕಷ್ಟು ಕಾಡಿರುವ ಸುಳಿವು ನೀಡುತ್ತದೆ. ಆ ಕಾಡುವಿಕೆಯ ಹುಡುಕಾಟದಲ್ಲಿ ಉಂಟಾದ ಸೋಲು, ಗೆಲುವು, ದಿಗ್ಭ್ರಮೆ, ವಿಷಾದ, ಖೇದ, ಉದ್ವೇಗಾದಿ ಭಾವಗಳೆಲ್ಲವೂ ನೇರ ಅಥವ ಪರೋಕ್ಷವಾದ ಪದ ಲಾಲಿತ್ಯದ ರೂಪದಲ್ಲಿ ಆವಿರ್ಭವಿಸಿ, ಅನುಭವದ ಮೂಸೆಯಲ್ಲಿ ಹೊರಳಾಡಿ ಬಂದು, ಈ ನಾಲ್ಕು ಸಾಲಿನ ಪದ್ಯಸಾರ ರೂಪಾಗಿ ಅವತರಿಸಿಕೊಂಡ ಆ ಸಮ್ಮಿಶ್ರಣ ಭಾವದ ಕುರುಹನ್ನು ಇಲ್ಲಿಯೂ ಕಾಣಬಹುದು. ಮೊದಲೆರಡು ಸಾಲು ಸುಳ್ಳಿನ ಹಿಂದೆ ಅಡಗಿಕೊಂಡ ಕಾರಣದ ಗುಟ್ಟು ಬಿಡಿಸಲಾಗದೆ ಸೋತ ಹತಾಶೆಯ ದನಿ ಸೂಸಿದರೆ, ಕೊನೆಯೆರಡು ಸಾಲಲ್ಲಿ ಸೋತೆನೆಂದು ಕೈಕಟ್ಟಿ ಕೂರದೆ ನಿಸರ್ಗ ಸಹಜವಲ್ಲದ ಈ ತಂತ್ರಗಾರಿಕೆಯನ್ನು ಬ್ರಹ್ಮ ಸೃಷ್ಟಿ ಯಾಕೆ ಬಳಸಿಕೊಂಡಿತೆಂದು ಅನ್ವೇಷಣೆಗೆ ಹೊರಟ ದನಿ ಕಾಣಿಸುತ್ತದೆ – ಕವಿಯ ಜೀವನೋತ್ಸಾಹ ಮತ್ತು ಸೋಲಿಗೆ ಕುಗ್ಗದೆ, ಜಗ್ಗದೆ ಮುನ್ನಡೆವ ಛಲವನ್ನು ತೋರಿಸುತ್ತ; ಆ ಪಯಣದಲ್ಲೆ ಓದುಗರಿಗೆ ಜೀವನದರ್ಶನವನ್ನೂ ಮಾಡಿಸುತ್ತ !

00412. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೩೦


00412. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೩೦
___________________________________

ಬ್ರಹ್ಮವೇ ಸತ್ಯ ಸೃಷ್ಟಿಯೆ ಮಿಥ್ಯವೆನ್ನುವೊಡೆ |
ಸಂಬಂಧವಿಲ್ಲವೇನಾ ವಿಷಯ ಯುಗಕೆ? ||
ನಮ್ಮ ಕಣ್ಮನಸುಗಳೆ ನಮಗೆ ಸಟೆ ಪೇಳುವೊಡೆ |
ನೆಮ್ಮುವುದದಾರನೋ ? – ಮಂಕುತಿಮ್ಮ || ೩೦ ||

ಇದೋ ಇಲ್ಲಿನ್ನೊಂದು ಸೃಷ್ಟಿ ಮತ್ತು ಅದರ ಕತೃವಿನ (ಬ್ರಹ್ಮದ) ಕುರಿತಾದ ಕವಿ ಕುತೂಹಲದ ಜಿಜ್ಞಾಸೆ. ಈ ಬ್ರಹ್ಮಾಂಡಾದಿ ಜಗವೆಲ್ಲ ಬ್ರಹ್ಮ ಸೃಷ್ಟಿಯೆನ್ನುತ್ತಾರೆಯಾದರೂ, ಅವನದೆ ಆದ ಈ ಸೃಷ್ಟಿಯೆಲ್ಲ, ಶಾಶ್ವತವಲ್ಲದ ನಿಮಿತ್ತ ಮಾತ್ರ, ಬರಿ ಮಾಯೆ, ಬರಿಯ ಮಿಥ್ಯೆ ಎಂದು ಹೇಳುತ್ತದೆ ನಮ್ಮ ಪುರಾಣ, ಪ್ರವಚನ.

ಈ ಮಾಯಾಸೃಷ್ಟಿಯ ಅನಿಶ್ಚಿತ, ಅನಿಯಮಿತ, ಅಶಾಶ್ವತ ಅಸ್ತಿತ್ವದಲ್ಲಿ ಸತ್ಯವೆನ್ನುವುದು ಕೇವಲ ಬ್ರಹ್ಮ ಮಾತ್ರ. ಇದನ್ನೆಲ್ಲಾ ಸೃಜಿಸಿದ ಆತನ ಬಿಟ್ಟು ಮಿಕ್ಕೆಲ್ಲವು ಬರಿಯ ಭ್ರಮೆ, ನೀರ್ಗುಳ್ಳೆಯ ಹಾಗಿನ ಅಸ್ಥಿರ ಅಸ್ತಿತ್ವ ಎನ್ನುವುದನ್ನು ನಿಜವೆ ಎಂದಿಟ್ಟುಕೊಂಡರು, ಹಾಗೆಂದ ಮಾತ್ರಕ್ಕೆ ಅವೆರಡರ ನಡುವೆ ಯಾವ ಸಂಬಂಧವಾಗಲಿ, ನಂಟಾಗಲಿ ಇಲ್ಲವೆಂದುಬಿಡಲಾದೀತೆ? ಅವುಗಳ ಪರಸ್ಪರ ವಿರೋಧಾಭಾಸದ ಅಸ್ತಿತ್ವವೆಷ್ಟೆ ಸತ್ಯವಿದ್ದರೂ ಸಹ, ಅವೆರಡರ ವಸ್ತು-ವಿಷಯ, ಇರುವಿಕೆಯ ರೀತಿ, ಅವುಗಳ ಪರಸ್ಪರ ಸಂಬಂಧ ನಾವಿರುವ ಯುಗಕ್ಕೆ ಸಂಬಂಧಿಸಿದ್ದಲ್ಲವೆಂದು, ಅದೆಂದೊ ಆಗಿಹೋದ ಪುರಾತನ ಕತೆಯೆಂದು ಬದಿಗೆ ಸರಿಸಲಾದೀತೆ? ಅವುಗಳುಂಟು ಮಾಡಿರುವ, ಮಾಡುತ್ತಿರುವ ಪರಿಣಾಮ, ಫಲಿತಗಳನ್ನು, ಅನುಭವಗಳನ್ನು ಕಡೆಗಣಿಸಲಾದೀತೆ ?

ಪುರಾಣ ಶಾಸ್ತ್ರಗ್ರಂಥಗಳು ಹೇಳುತ್ತವೆ ಆ ಬ್ರಹ್ಮ ಮಾತ್ರವೆ ಸತ್ಯ ಎಂದು. ಆದರೆ ಅವನೆಲ್ಲಿ ಎಂದು ಕಾಣುವುದೇ ಇಲ್ಲವಾಗಿ ಆ ಮಾತನ್ನು ನಿಜವೆನ್ನಬೇಕೊ, ಸುಳ್ಳೆನ್ನಬೇಕೊ ಎನ್ನುವ ಜಿಜ್ಞಾಸೆ ಹುಟ್ಟಿಕೊಳ್ಳುತ್ತದೆ. ಅದೇ ರೀತಿ, ಈ ಸೃಷ್ಟಿಯೇ ಮಿಥ್ಯವೆಂದು ಸಾರುವ ಮತ್ತೊಂದು ಎಳೆ ಹಿಡಿದು ಹೊರಟರೆ, ಮಸಲಾ ಆ ಮಿಥ್ಯೆ ಎನ್ನುವುದೆ ಸತ್ಯದ ರೂಪದಲ್ಲಿ ನಮ್ಮ ಕಣ್ಮುಂದೆಯೆ ಇದೆ, ನಾವದರಲ್ಲೆ ದಿನವೂ ಬದುಕು ಸಾಗಿಸುತ್ತಿದ್ದೇವೆ !

ಈ ಪರಿಸ್ಥಿತಿಯಲ್ಲಿ ಕಣ್ಣೆದುರಿಗಿರುವುದನ್ನು ನಂಬಬೇಡ, ಕಾಣದಿರುವುದನ್ನು ನಂಬು ಎನ್ನುವ ತರ್ಕ-ಸಿದ್ದಾಂತ, ನಾವು ಹುಟ್ಟಿನಿಂದ ನಂಬಿಕೊಂಡು ಬಂದ ಕಣ್ಣಿಂದ ನೋಡಿ, ಮನಸಿಂದ ಗ್ರಹಿಸುವ ತರ್ಕ ಪ್ರಕ್ರಿಯೆಗೆ ತದ್ವಿರುದ್ಧವಾದ ಅಭಾಸವೆನಿಸುವುದಿಲ್ಲವೆ ? ನಮ್ಮ ಇಂದ್ರೀಯಾಂತಃಕರಣಗಳೆ ನಮಗೆ ಸುಳ್ಳು (ಸಟೆ) ಹೇಳುತ್ತಿವೆ, ಅದನ್ನು ನಂಬಬೇಡ ಎಂದರೆ ಯಾರು ನಿಜ ಹೇಳುತ್ತಿದ್ದರೆಂದು ನಂಬುವುದು? ವೈಜ್ಞಾನಿಕ ತರ್ಕವನ್ನಾಧರಿಸಿದ ಕಣ್ಮುಂದಿನ ಸಾಕ್ಷಾಧಾರವನ್ನೊ? ಕಾಣಿಸದ ತತ್ವ ಸಿದ್ದಾಂತವನ್ನೊ? – ಎನ್ನುವ ಮಂಕುತಿಮ್ಮನ ಗೊಂದಲ ಇಲ್ಲಿನ ಸಾರ.

ಹಾಗೆಯೆ ಸೂಕ್ಷ್ಮವಾಗಿ ಗಮನಿಸಿದರೆ ಆಸ್ತಿಕತ್ವ, ನಾಸ್ತಿಕತ್ವದ ನಡುವಿನ ತಿಕ್ಕಾಟದ, ಗೊಂದಲದ ಎಳೆಯೂ ಪ್ರಶ್ನೆಯ ರೂಪಾಗಿ ಇಲ್ಲಿ ಅನಾವರಣಗೊಂಡಿದೆ. ಅದೇ ಹೊತ್ತಿನಲ್ಲಿ ಸೃಷ್ಟಿಸಿಯಾದ ಮೇಲೆ ನನ್ನ ಕೆಲಸ ಮುಗಿಯಿತೆನ್ನುವಂತೆ ನಿರ್ಲಿಪ್ತನಾಗಿ ಕೂತ ಸೃಷ್ಟಿಕರ್ತನ ಮೇಲಿನ ದೂರುವ ದನಿಯೂ ಇಲ್ಲಿ ಅಡಕವಾಗಿದೆ.

00410. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೨೯


00410. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೨೯
___________________________________

ಎರುಡುಮಿರಬಹುದು ದಿಟ; ಶಿವರುದ್ರನಲೆ ಬೊಮ್ಮ |
ಕರವೊಂದರಲಿ ವೇಣು, ಶಂಖವೊಂದರಲಿ ||
ಬೆರಳ್ಗಳೆರಡಾನುಮಿರೆ ಕೈ ಚಿಟಿಕೆಯಾಡುವುದು |
ಒರುವನಾಡುವುದೆಂತು – ಮಂಕುತಿಮ್ಮ || ೨೯ ||

ಈ ಪದ್ಯದಲ್ಲಂತು ನಮ್ಮ ವೇದಾಂತಿಕ ತತ್ವಶಾಸ್ತ್ರದ ನಂಬಿಕೆಯ ಸಾರವೆ, ಹಿಂಡಿ ಸೋಸಿದ ರಸದಂತೆ ಕಾಣಿಸಿಕೊಂಡಿದೆ. ಇಲ್ಲಿ ಗೊತ್ತಿರಬೇಕಾದ ಮುಖ್ಯ ಹಿನ್ನಲೆಯೆಂದರೆ ನಮ್ಮ ದೇವರುಗಳ ಕುರಿತಾದ ನಂಬಿಕೆಯ ಹಿಂದಿರುವ ಸ್ಥೂಲ, ಮೂಲಾಧಾರ ಕಲ್ಪನೆ.

ನಮಗೆ ತಿಳಿದಿರುವಂತೆ, ನಾವು ಪೂಜಿಸುವ ದೇವರುಗಳು ನೂರಾರು, ಸಾವಿರಾರು. ಮುಕ್ಕೋಟಿಗು ಮಿಗಿಲಾದ ದೇವತೆಗಳಿದ್ದಾರೆಂದೆನ್ನುತ್ತದೆ ನಮ್ಮ ಪುರಾಣಗಳ ಕಡತ. ಆದರೆ ಅದು ಬಾಹ್ಯದ ಮೇಲ್ಪದರದ ಧ್ಯಾನ. ತುಸು ಆಳವಾದ ಅಧ್ಯಯನಕ್ಕೆ ಹೊಕ್ಕರೆ ಅನಾವರಣವಾಗುವ ಕಲ್ಪನೆಯೆಂದರೆ ಇರುವುದೊಂದೆ ದೈವ – ಅದೇ ಪರಬ್ರಹ್ಮ. ಮಿಕ್ಕೆಲ್ಲವೂ ಆ ಮೂಲ ಸ್ವರೂಪದ ವಿವಿಧ ಸೃಷ್ಟಿ ರೂಪಾಂತರಗಳು ಎಂದು. ಈ ಹಿನ್ನಲೆಯಲ್ಲೆ ಕವಿಯಲ್ಲಿ ಮೂಡುವ ಸಂದೇಹಗಳು ಇಲ್ಲಿ ಅಂತಿಮ ಪ್ರಶ್ನೆಯಾಗಿ ಕಾಣಿಸಿಕೊಂಡಿವೆ.

ಮೊದಲಿಗೆ ಪರಬ್ರಹ್ಮನ ಮೂಲರೂಪೆ ಚಿಗುರೊಡೆದ ಶಾಖೆಗಳಾಗಿ ಮಿಕ್ಕೆಲ್ಲರ ರೂಪಾಗಿ ಪ್ರಕಟವಾಗಿದೆಯೆಂದು ಅಂದುಕೊಂಡೆ ಮುಂದುವರೆದರೆ – ಆ ಸಾಕ್ಷಾತ್ ಪರಬ್ರಹ್ಮನಾದ ಶಿವನು ರುದ್ರನ ರೂಪದಲ್ಲೂ ಕಾಣಿಸಿಕೊಳ್ಳುತ್ತಾನೆ (ಏಕಾದಶ – ಅಂದರೆ ಹನ್ನೊಂದು ರುದ್ರರು ಇದ್ದಾರೆಂದು ಪ್ರತೀತಿ). ಒಂದೆಡೆ ಸೌಮ್ಯ ರೂಪಿ ಶಿವನಿರುವ ಸತ್ಯವಾದರೆ ಮತ್ತೊಂದೆಡೆ ರೌದ್ರ ರೂಪಿ ರುದ್ರನೂ ಇರುವ ಸತ್ಯ.

ಅದೇ ತರ್ಕದಲ್ಲಿ ವಿಷ್ಣುವಿನ ಪರಿಗಣನೆಗಿಳಿದರೆ ಒಂದೆಡೆ ಮನಮೋಹಕ ಗಾಯನದ ಸುಧೆಯುಣಿಸುವ ಮೋಹನ ಮುರುಳಿ, ಅರ್ಥಾತ್ ಕೊಳಲನ್ಹಿಡಿದ ಕೃಷ್ಣನ ರೂಪ ಅನುಭವಕ್ಕೆ ಬಂದರೆ ಮತ್ತೊಂದೆಡೆ ಅದೆ ಗೊಲ್ಲರಗೊಲ್ಲನ ಕೈಯಲ್ಲಿ ಯುದ್ಧ ಕಹಳೆಯನೂದುವ, ಪಾಂಚಜನ್ಯ ಶಂಖವಿರುವ ಅವತಾರ ಕಾಣಿಸಿಕೊಳ್ಳುತ್ತದೆ. ಹೀಗೆ ಒಬ್ಬನದೆ ವ್ಯಕ್ತಿತ್ವದ ಹೊದಿಕೆಯಡಿಯಲ್ಲಿ ಎರಡು ಪರಸ್ಪರ ವಿರೋಧಾಭಾಸದ ಗುಣಾವಗುಣಗಳ ಸಂಕಲನ ಕಂಡುಬರುತ್ತದೆ. ಇವೆರಡರಲ್ಲಿ ಯಾವುದು ಅವರ ನೈಜಗುಣ ಎಂದು ಭಾವಿಸಬೇಕೆನ್ನುವ ಗೊಂದಲ ಕವಿಯನ್ನು ಕಾಡುತ್ತದೆ. ಸಮಯಕ್ಕೆ ತಕ್ಕಂತೆ ಎರಡನ್ನು ಬಳಸಿದ ಹಿನ್ನಲೆಯಲ್ಲಿ ಎರಡೂ ದಿಟವಾದ ನೈಜ ಗುಣಗಳೆ ಇರಬಹುದೇ ಎಂಬ ಅನುಮಾನವೂ ಎಡತಾಕುತ್ತದೆ.

ಕೊನೆಗೆ ಆ ಸಂಶಯಗಳೆಲ್ಲ ಸಂಗಮಿಸಿದ ಅಚ್ಚರಿ ವಿಸ್ಮಯದ ರೂಪ ತಾಳುತ್ತ, ಒಂದು ಮಾಮೂಲಿ ಚಿಟಿಕೆ ಹೊಡೆಯಲೂ ಕನಿಷ್ಠ ಎರಡು ಬೆರಳಿರಬೇಕು. ಅಂತಿರುವಾಗ ಆ ದೇವರೆನಿಸಿಕೊಂಡ ಅವನೊಬ್ಬನೆ ಹೀಗೆ ಎರಡು ಅಥವಾ ಅದಕೂ ಮಿಕ್ಕಿದ ಬಗೆ ಬಗೆ ಪಾತ್ರಗಳನ್ನಾಡುವುದಾದರೂ ಎಂತೊ ಎಂದು ತನ್ನಲ್ಲೆ ಪ್ರಶ್ನೆಯಾಗಿಸಿಕೊಂಡು ಮಥಿಸಿಕೊಳ್ಳತೊಡಗುತ್ರದೆ. ಇಲ್ಲೂ ಅದೇ ಎದ್ದು ಕಾಣುವ ದ್ವಂದ್ವದ, ಗೊಂದಲ ಭಾವವೆ ಪ್ರಶ್ನೆಯ ಮೂಲ ಸ್ವರೂಪವಾಗಿರುವುದನ್ನು ಕಾಣಬಹುದು.

00408. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೨೮


00408. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೨೮
___________________________________

ಕಾರುಣ್ಯ ಸರಸ ಸೌಂದರ್ಯ ರುಚಿಗಳೆ ಸೃಷ್ಟಿ |
ಕಾರಣಮೆನಿಪ್ಪವೊಲು ತೋರ್ಪುದೊಂದು ಚಣ ||
ಕಾರ್ಪಣ್ಯ ಕಟುಕತೆಗಳೆನಿಪುದಿನ್ನೊಂದು ಚಣ |
ತೋರದಾವುದು ದಿಟವೊ – ಮಂಕುತಿಮ್ಮ || ೨೮ ||

ಈ ಸೃಷ್ಟಿಯು ಆವಿರ್ಭವಿಸಿದ ರೀತಿ, ಅದರ ಪ್ರಕಟ ಸ್ಥಿತಿ ಮತ್ತದರ ಕೌತುಕಗಳು ಕವಿಯನ್ನು ಎಡಬಿಡದೆ ಕಾಡುತ್ತ ವಿಸ್ಮಯ, ಸೋಜಿಗಕ್ಕೊಳಪಡಿಸಿರುವುದನ್ನು ಅನೇಕ ಕಡೆಗಳಲ್ಲಿ, ಅನೇಕ ಪದ್ಯಗಳಲ್ಲಿ ಕಾಣಬಹುದು. ಇದು ಅಂತಹುದೆ ಮತ್ತೊಂದು ಪದ್ಯ – ಈ ಬಾರಿ ಸೃಷ್ಟಿಯುದ್ಭವದ ಮೂಲಸರಕು, ಸಾಮಾಗ್ರಿಗಳೇನಿರಬಹುದು ಎನ್ನುವ ಜಿಜ್ಞಾಸೆಯನ್ನು ಬೆನ್ನಟ್ಟುತ್ತ.

ವಿಪರ್ಯಾಸವೆಂದರೆ ಇಲ್ಲಿಯು ಅದೆ ದ್ವಂದ್ವದ ಗೊಂದಲ, ಅನುಮಾನ ಇಣುಕುತ್ತಾ ಪ್ರಶ್ನೆಯ ಸಾಲಾಗಿಬಿಡುತ್ತದೆ. ಜೀವನದಲ್ಲಿ ಸುಖದ ರಸಾನುಭೂತಿಯನ್ನು ಅನುಭವಿಸುವಾಗ, ಒಳಿತಿನ ಅನೇಕ ಗುಣಗಳು ಸುತ್ತೆಲ್ಲ ಹರಡಿಕೊಂಡ ಸೌಂದರ್ಯವಾಗಿಯೊ, ಮಾತುಕತೆಯ ಸರಸ ಸ್ವಾರಸ್ಯವಾಗಿಯೊ, ದಯೆ, ಕರುಣೆಗಳನ್ನು ಸೂಸುತ್ತ , ಧಾರೆಯೆರೆಯುತ್ತ ನಡೆವ ಉದಾತ್ತತೆಯಾಗಿಯೊ ರಾಗಾಲಾಪನೆ, ಗಾನಗೋಷ್ಟಿ ನಡೆಸುತ್ತ, ಬಾಳನ್ನೆಲ್ಲ ಈ ರುಚಿಗಳು ಬರುವ ಮೂಲಸಾಮಾಗ್ರಿಯನ್ನು ಬಳಸಿಯೆ ಮಾಡಿರಬೇಕೆಂಬ ವಾದಕ್ಕೆ ಪುಷ್ಠಿ ಕೊಡುವಂತೆ ಕಾಣಿಸಿಕೊಳ್ಳುತ್ತದೆ. ಆದರೆ ಆ ಅನಿಸಿಕೆ ನಿಜವಿರಬೇಕೆಂದು ತೀರ್ಮಾನಿಸಲು ಬಿಡದಂತೆ ಮತ್ತೊಂದು ಕಡೆ ದುಃಖದ ಎರಕದಲ್ಲಿ ತೆಗೆದ ಬಡತನದ ಕಷ್ಟ ಕಾರ್ಪಣ್ಯತೆ, ಜೀವನ ಮತ್ತು ಜೀವಿಗಳು ತೋರುವ ಕನಿಕರವಿರದ ಕಟುಕ ಸ್ವಭಾವದಂತಹ ನೇತಾತ್ಮಕ ಗುಣಗಳು ಕಾಣಿಸಿಕೊಂಡು ಮೊದಲು ಕಂಡದ್ದೆಲ್ಲವನ್ನು ಸತ್ಯವಲ್ಲದ ಭ್ರಮೆಯನ್ನಾಗಿಸಿಬಿಡುತ್ತದೆ. ಒಮ್ಮೆ ಅದು ಸತ್ಯವೆಂದೆನಿಸಿದರೆ ಮತ್ತೊಮ್ಮೆ ಇದು ಸತ್ಯವೆನಿಸುತ್ತದೆ.

ಎರಡರಲ್ಲಿ ಯಾವುದು ದಿಟ, ಯಾವುದು ತಟವಟ ಎನ್ನುವುದು ಗೊತ್ತಾಗುವುದೆ ಇಲ್ಲವಲ್ಲಾ ? ಎಂಬುದು ಮಂಕುತಿಮ್ಮನ ಅಳಲಿನ ರೂಪದಲ್ಲಿಲ್ಲಿ ವ್ಯಕ್ತವಾಗಿದೆ. ಒಟ್ಟಾರೆ ಗೊಂದಲ, ದ್ವಂದ್ವಗಳೆ ಬದುಕನ್ನು ನೇಯ್ದ ಮೂಲಾದಿಮೂಲ ಸರಕು ಎನ್ನುವುದನ್ನು ಇಲ್ಲಿ ಮತ್ತೆ ಮತ್ತೆ ಕಾಣುತ್ತದೆ ಕವಿಯ ಮನಸು.

00407. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೨೭


00407. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೨೭
___________________________________

ಧರೆಯ ಬದುಕೇನದರ ಗುರಿಯೇನು? ಫಲವೇನು ? |
ಬರಿ ಬಳಸು ಬಡಿದಾಟ ಬರಿ ಪರಿಭ್ರಮಣೆ ||
ತಿರುತಿರುಗಿ ಹೊಟ್ಟೆ ಹೊರಕೊಳುವ ಮೃಗಖಗಕಿಂತ |
ನರನು ಸಾಧಿಪುದೇನು ? ಮಂಕುತಿಮ್ಮ || ೨೭ ||

ಭೂಮಿಯ ಮೇಲಿನ ಬದುಕಿನ ಕುರಿತಾದ ವೇದಾಂತಿಕ, ನಿರ್ಲಿಪ್ತ, ವೈರಾಗ್ಯ ಭಾವದ ಟಿಪ್ಪಣಿ ಈ ಕವನದಲ್ಲಿ ಕಾಣುತ್ತದೆ. ಈ ಇಳೆಯ ಮೇಲಿನ ಬದುಕಿನ ಗುರಿ, ಗಮ್ಯವೇನೆಂದು ಯಾರು ಬಲ್ಲರು ? ಹೀಗೀಗೆ ಬದುಕಬೇಕೆಂದು ರೀತಿ, ನೀತಿ, ನಿಯಮಾದಿಗಳನ್ನು ಹಾಕಿಕೊಂಡು ನಡೆಯುತ್ತಿದ್ದರೂ ಕೂಡ, ಅದು ಎಲ್ಲಿಗೆ ಹೋಗುವ ಉದ್ದೇಶದಿಂದ ಎಂಬುದು ಮಾತ್ರ ಯಾರಿಗೂ ಗೊತ್ತಿರದ ಗೊಂದಲವೆ. ಇನ್ನು ಗಮ್ಯ ತಿಳಿಯದಿದ್ದರು ಅದರ ಅಂತಿಮ ಫಲದ ಖಚಿತ ಅರಿವಾದರೂ ಇದೆಯೆ ? ಎಂದರೆ ಅಲ್ಲೂ ಅನಿಶ್ಚಿತತೆಯೆ. ಉದ್ದೇಶ, ಗಮ್ಯ, ಫಲಿತಗಳನ್ನು ಸಾರುವ ನೂರಾರು ತತ್ವ, ಸಿದ್ದಾಂತ ಸಾರಗಳಿದ್ದರು ಅವೆಲ್ಲ ಬರಿಯ ನಂಬಿಕೆಯ ಆಧಾರದಲ್ಲಿ ಪ್ರಸ್ತುತಪಡಿಸಿದ ವಾದಗಳೆ ಹೊರತು, ಅದರ ಸತ್ಯಾಸತ್ಯತೆಯ ಖಚಿತ ಅರಿವು ಯಾರಿಗೂ ಇದ್ದಂತಿಲ್ಲ.

ಹೋಗಲಿ ಯಾವುದೊ ಒಂದನ್ನು ನಂಬಿಯಾದರೂ ಮುನ್ನಡೆಯುವ ಎನ್ನಲುಂಟೆ ? ಅದಕ್ಕೂ ಅಡ್ಡಗಾಲು ಹಾಕುವಂತೆ ಆ ತತ್ವ, ಸಿದ್ದಾಂತಗಳಲ್ಲೂ ಹಲವಾರು ಬಗೆಬಗೆ ರೀತಿ, ನೀತಿ, ವಾದ, ವಿವಾದಗಳ ತಿಕ್ಕಾಟ. ಯಾವುದೊ ಒಂದು ದಾರಿ ಹಿಡಿದು ಹೋಗಲಿಕ್ಕೆ ಬಿಡದ ಹಲವಾರು ನಂಬಿಕೆ, ಜಾತಿ, ಮತ, ಧರ್ಮ, ಶ್ರದ್ದೆಗಳು ಪ್ರಭಾವ ಬೀರುತ್ತಾ ತಾನು ಹೆಚ್ಚು, ನಾನು ಹೆಚ್ಚು ಎಂದು ಬಡಿದಾಟಕ್ಕೆ ನಿಲ್ಲುತ್ತವೆ. ಹೀಗೆ ಆ ದಾರಿ ಹಿಡಿದು ನಡೆದರು ಬರಿ ಭ್ರಮ ನಿರಸನ, ನೇರವಲ್ಲದ ಪರೋಕ್ಷ ದಾರಿಯ ಸುತ್ತಾಟ, ಕೊನೆಗೆ ಸುತ್ತಿದುದರ ಸುತ್ತಲೆ ಮತ್ತೆ ಮತ್ತೆ ಸುತ್ತಿ ಪರಿಭ್ರಮಿಸುವ ಹಣೆ ಬರಹ.

ಇದೆಲ್ಲಾ ನೋಡಿ ತುಲನೆಗಿಳಿದರೆ, ಕೇವಲ ಹಸಿವಾದಾಗ ಹೊಟ್ಟೆ ತುಂಬಿಸಿಕೊಳ್ಳಲು ಮಾತ್ರ ಬೇಟೆಗಿಳಿದು ಸಿಕ್ಕಿದ್ದನ್ನು ಕಬಳಿಸಿ ಹೊಟ್ಟೆ ಹೊರೆದುಕೊಳ್ಳುವ ಪ್ರಾಣಿ ಪಕ್ಷಿಗಳಿಗು, ನಮಗೂ ಅಂತಿಮ ಸಾಧನೆಯ ಮಾನದಂಡದಲ್ಲಿ ಇರುವ ವ್ಯತ್ಯಾಸವಾದರೂ ಏನು ? ಅವು ಕೂಡ ಗೊತ್ತು, ಗುರಿಯಿಲ್ಲದೆ ಉಂಡಲೆದಾಡಿ ಕೊನೆಗೊಮ್ಮೆ ‘ಶಿವಾಯ ನಮಃ’ ಎನ್ನುತ್ತವೆ – ಸಾವೆಂಬ ಅಂತಿಮದಲ್ಲಿ. ಇರುವತನಕ ಏನೇನೊ ಬಡಿದಾಡಿ ಹಾರಾಡುವ ಮನುಜ ಜನ್ಮದ ಕತೆಯೂ ಅಷ್ಟೆ. ಆ ಪ್ರಾಣಿಪಕ್ಷಿಗಳಿಗಿಂತ ಹೆಚ್ಚೇನು ಸಾಧಿಸನು. ಅಂದ ಮೇಲೆ ನರ ಜನ್ಮವೆ ಮಿಕ್ಕೆಲ್ಲದಕ್ಕಿಂತ ಶ್ರೇಷ್ಠ, ಉತ್ತಮ ಎಂದು ಬೀಗುತ್ತಾ, ಅಹಂಕಾರ ಪಡುವುದರಲ್ಲಿ ಅರ್ಥವಿದೆಯೆ ? ಆ ತಿಳುವಳಿಕೆಯ ವಿನಮ್ರತೆಯಲ್ಲಿ ಬಾಳು ಸಾಗಿಸಿ ಈ ಜೀವನ ಯಾತ್ರೆ ಮುಗಿಸುವುದೊಳಿತು ಎನ್ನುವ ನೀತಿ ಪಾಠ ಇಲ್ಲಿನ ಆಂತರ್ಯದಲ್ಲಿ ಅಡಗಿದೆ.

00405. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೨೬


00405. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೨೬
___________________________________

ಸೃಷ್ಟಿಯಾಶಯವದೇನಸ್ಪಷ್ಟ ಸಂಶ್ಲಿಷ್ಟ |
ಇಷ್ಟ ಮೋಹಕ ದಿವ್ಯ ಗುಣಗಳೊಂದು ಕಡೆ ||
ಕಷ್ಟ ಭೀಭತ್ಸ ಘೋರಂಗಳಿನ್ನೊಂದು ಕಡೆ |
ಕ್ಲಿಷ್ಟವೀ ಬ್ರಹ್ಮಕೃತಿ – ಮಂಕುತಿಮ್ಮ || ೦೨೬ ||

ದ್ವಂದ್ವವೆನ್ನುವುದು ಈ ಇಹ ಜೀವನದಲ್ಲಿ ಪ್ರಧಾನವಾಗಿ ಎದ್ದು ಕಾಣುವ ಅಂಶ. ಸುಖ-ದುಃಖ, ದಿನ-ರಾತ್ರಿ, ಸೌಂದರ್ಯ-ಕುರೂಪ, ಸತ್ಯ-ಮಿಥ್ಯ, ಸದ್ಗುಣ-ದುರ್ಗುಣ – ಹೀಗೆ ಯಾವುದೆ ಕೋನದಲ್ಲಿ ನೋಡಿದರು ಈ ಅಸ್ತಿತ್ವ-ಪ್ರತಿ ಅಸ್ತಿತ್ವದ ದ್ವಂದ್ವವಿರುವುದು ಎದ್ದು ಕಾಣುತ್ತದೆ. ಈ ದ್ವಂದ್ವದ ತತ್ವದಿಂದ ಬ್ರಹ್ಮ ಸೃಷ್ಟಿಯೂ ಹೊರತಲ್ಲವೆಂದು ಗಮನಿಸಿ ಕವಿಮನ ವಿಸ್ಮಿತವಾಗುವ ಪರಿ ಈ ಸಾಲುಗಳಲ್ಲಿ ವ್ಯಕ್ತವಾಗಿವೆ.

ಈ ಸೃಷ್ಟಿಯಲ್ಲಿನ ಸೋಜಿಗವೆಂದರೆ ಅದನ್ನು ಅರ್ಥ ಮಾಡಿಕೊಳ್ಳಲು ಹೊರಟಾಗ, ಅದರ ಮೂಲ ಆಶಯವೇನಿತ್ತು ಎನ್ನುವುದರಿಂದಲೆ ಈ ದ್ವಂದ್ವ ಆರಂಭವಾಗುತ್ತದೆ. ಯಾವುದೆ ಅಸ್ತಿತ್ವದ ಹಿನ್ನಲೆಯಲ್ಲಿ ಕೆಲಸ ಮಾಡುವ ಕ್ರಿಯಾಶಕ್ತಿಗಳೆಂಬ ತ್ರಿಶಕ್ತಿ ರೂಪಗಳಲ್ಲಿ ನಮ್ಮ ಕಣ್ಣಿಗೆ ಪ್ರಕಟ ರೂಪದಲ್ಲಿ ಅನಾವರಣವಾಗುವುದು ಕ್ರಿಯಾಶಕ್ತಿಯ ಫಲಿತ. ಅದನ್ನು ಮಾಡಬೇಕೆಂಬ ಇಚ್ಚ್ಛೆ, ಆಶಯವಾಗಲಿ ಅದನ್ನು ಕಾರ್ಯಗತಗೊಳಿಸಬೇಕಾದ ಜ್ಞಾನ ಶಕ್ತಿಯಾಗಲಿ ಕೇವಲ ಹಿನ್ನಲೆಯಲ್ಲಿ ಕೆಲಸ ಮಾಡುವ ಪ್ರೇರಕ ಶಕ್ತಿಗಳಷ್ಟೆ. ಆದರೆ ನಾವು ನೋಡುವ ಪ್ರಕಟ ರೂಪ ಮಾತ್ರ ಬರಿಯ ದ್ವಂದ್ವಗಳಿಂದಲೆ ತುಂಬಿ ಹೋಗಿದೆ. ಒಂದೆಡೆ ಮನಸಿಗೆ ಹಿತವೆನಿಸುವ, ಮುದ ಕೊಡುವ, ಅಭೂತಪೂರ್ವ ಅನುಭವವೀವ ದಿವ್ಯತೆಯುಳ್ಳ ಗುಣಗಳು, ಮತ್ತದರ ಪ್ರತಿರೂಪಗಳು ಕಂಡು ಬಂದರೆ, ಅದೇ ಸೃಷ್ಟಿಯ ಮತ್ತೊಂದೆಡೆ ಬಡತನದಂತಹ ಕಷ್ಟ-ಕಾರ್ಪಣ್ಯಗಳು, ಅಸಹ್ಯ ಹುಟ್ಟಿಸುವ ಸ್ವರೂಪಗಳು, ಘಟನೆಗಳು, ಘೋರ-ಭೀಕರತೆಗಳು ಕಣ್ಣಿಗೆ ಬೀಳುತ್ತವೆ ಅದೇ ಸೃಷ್ಟಿಯಲ್ಲಿ.

ಬ್ರಹ್ಮವೆಂಬ ಕಲಾವಿದ ಸೃಷ್ಟಿಸಿದ ಈ ಸೃಷ್ಟಿಯೆಂಬ ಕಲಾಕೃತಿ , ಸಹಜವಾಗಿ ಮತ್ತು ತಾರ್ಕಿಕವಾಗಿ ಸುಂದರವಾಗಿರಬೇಕಲ್ಲವೆ – ಕಲಾವಿದನ ಸಂದೇಶವನ್ನು ಬಿತ್ತರಿಸುತ್ತ? ಇಲ್ಲೇಕೆ ಕಲೆಗಾರ ಸೌಂದರ್ಯವನ್ನು ಬಿಂಬಿಸಿದಷ್ಟೆ, ಕುರೂಪವನ್ನು ಬಿಡಿಸಿಟ್ಟ ? ಇದೇನು ಬೇಕೆಂದೆ ಮಾಡಿದ ಕೆಲಸವೆ ಅಥವಾ ಅವನ ಹತೋಟಿ ಮೀರಿ ಆಯಾಚಿತವಾಗಿ ಘಟಿಸಿದ ಸಂಕೀರ್ಣತೆಯೊ? ಅವನ ಇಚ್ಛಾಶಕ್ತಿಯೆ ಹೀಗೆ ಮಾಡಬೇಕೆಂದು ಮೊದಲೆ ನಿರ್ಧರಿಸಿತ್ತೆ? ಯಾಕೊ ಸೃಷ್ಟಿಯ ಆಶಯವೆ ಅಸ್ಪಷ್ಟವಾಗಿ, ಅರ್ಥವಾಗದ ಸಂಕೀರ್ಣ ಒಗಟಾಗಿ ಕಾಣುವುದಲ್ಲಾ? ಈ ಬ್ರಹ ಸೃಷ್ಟಿಯ ಅದ್ಭುತ ಕಲಾಕೃತಿಯನ್ನು ಅರ್ಥ ಮಾಡಿಕೊಳ್ಳುವುದೆ ಕ್ಲಿಷ್ಟವಿರುವಂತಿದೆಯಲ್ಲಾ? ಎನ್ನುತ್ತಿದ್ದಾನಿಲ್ಲಿ ಮಂಕುತಿಮ್ಮ.

00404. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೨೫


00404. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೨೫
___________________________________

ಜೀವಗತಿಗೊಂದು ರೇಖಾಲೇಖವಿರಬೇಕು |
ನಾವಿಕನಿಗಿರುವಂತೆ ದಿಕ್ಕು ದಿನವೆಣಿಸೆ ||
ಭಾವಿಸುವುದೆಂತದನು ಮೊದಲು ಕೊನೆ ತೋರದಿರೆ ? |
ಆವುದೀ ಜಗಕಾದಿ? – ಮಂಕುತಿಮ್ಮ || 25 ||

ಜೀವನಕ್ಕೊಂದು ಗುರಿಯಿರಿರಬೇಕು, ಗಮ್ಯವಿರಬೇಕು ಅದೇ ಜೀವನೋತ್ಸಾಹದ ಸ್ಪೂರ್ತಿಯ ಗುಟುಕು ಎನ್ನುತ್ತಾರೆ. ಆದರೆ ಜೀವನ ಹೀಗೆ ಯಾವುದೊ ದಿಕ್ಕು, ದೆಸೆ ಹಿಡಿದು ಹೊರಟರು ಅದನ್ನು ಸರಿಯಾದ ಹಾದಿಯಲ್ಲಿ ನಿರ್ದೇಶಿಸುತ್ತ, ನಡೆಸಲು ಒಂದು ಮಾರ್ಗದರ್ಶಿ ಸೂತ್ರವಿರಬೇಕು. ನೀರಿನಲ್ಲಿ ದೋಣಿಯನ್ನೊ, ಹಡಗನ್ನೊ ನಡೆಸುವ ನಾವಿಕನಿಗೆ ಹೇಗೆ ಹಾದಿಯ ಸುಳಿವನ್ನು ಭೂಪಠವೊಂದು ಒದಗಿಸಬಲ್ಲದೊ, ಹೇಗೆ ಸೂಜಿಕಾಂತವೊಂದು (ಮ್ಯಾಗ್ನೆಟಿಕ್ ಕಂಪಾಸ್) ತನ್ನ ಸದಾ ಉತ್ತರ – ದಕ್ಷಿಣಾಭಿಮುಖವಾಗಿ ನಿಲ್ಲುವ ಮುಖೇನ ನಾವಿಕ ನಡೆದ ದಿಕ್ಕನ್ನು ನಿಖರವಾಗಿ ತಿಳಿಸುವುದು ಮಾತ್ರವಲ್ಲದೆ, ಯಾನದಲ್ಲಿ ಕಳೆದ ದಿನಗಳೆಷ್ಟು, ಉಳಿದ ದಿನಗಳೆಷ್ಟು ಎಂದೆಲ್ಲಾ ವಿವರವೀಯುತ್ತ ಅವನ ಗಮ್ಯದ ಪಯಣಕ್ಕೆ ನಿರಂತರವಾಗಿ ಸಹಾಯ ಮಾಡುತ್ತಿರುತ್ತದೆ. ನಮ್ಮ ಜೀವನದ ನಿರಂತರ ಚಲನೆಯ ನಾವೆಗು ಅಂತದ್ದೊಂದು ದಿಕ್ಕು ದೆಸೆ ತೋರಿ ಗುರಿಯತ್ತ ಒಯ್ಯುವ ಸಲಕರಣೆ, ಉಪಕರಣವಿರಬೇಕೆನ್ನುವುದು ಬಹಶ ಸರಳ, ಸಾಧಾರಣ ನಿರೀಕ್ಷೆ.

ಆದರೆ ನಾವಿರುವ ಜಗ ನಿಯಮದಲ್ಲಿ ಹಾಗೆ ನಡೆಯುವುದಿಲ್ಲ. ಇಲ್ಲಿ ಆದಿಯೂ ಕಾಣುವುದಿಲ್ಲ , ಅಂತ್ಯವೂ ಗೊತ್ತಾಗುವುದಿಲ್ಲ. ಜೀವನದಲ್ಲಿ ಮುನ್ನುಗ್ಗುತ್ತ ಇರಬೇಕೆನ್ನುವುದೇನೊ ಸತ್ಯವಾದರೂ, ಅಂತಿಮವಾಗಿ ಎಲ್ಲಿಗೆ ಮತ್ತು ಹೇಗೊ ಹೋಗಬೇಕೆಂಬುದನ್ನು ನಿಖರವಾಗಿ ತಿಳಿಸದೆ ಎಲ್ಲಿಗೆಂದು ಹೋಗುವುದು? ಅಂತಿಮವಿರಲಿ, ಆರಂಭಿಸುವುದೆಲ್ಲಿಂದ ಎನ್ನುವ ಶುರುವಿನ ಗೆರೆಯನ್ನು ತೋರುವುದಿಲ್ಲವಲ್ಲ ಈ ಜೀವನದರ್ಶನ ? ಅಸ್ಪಷ್ಟವಾಗಿಯಾದರೂ ಆ ಆದಿ ಅಂತಿಮ ತುದಿಗಳ ಅರಿವಿಲ್ಲದ ಸನ್ನಿವೇಶದಲ್ಲಿ, ಅವನ್ನು ಊಹಿಸಿ, ಪರಿಭಾವಿಸಿಕೊಂಡು ಮುನ್ನಡೆಯಲಾದರೂ ಹೇಗೆ? ಆ ಪ್ರಶ್ನೆ ಕೇಳೋಣವೆಂದರೆ ಯಾರನ್ನು ಕೇಳುವುದು? ಸೃಷ್ಟಿಕರ್ತ ಕೈಗೆ ಸಿಗುವಳತೆಯಲ್ಲಿ ಕಾಣುತ್ತಿಲ್ಲವಲ್ಲ? ಬಹುಶಃ ಅವನನ್ನು ಕಾಣಬೇಕೆಂದರೆ, ಅವನಿರುವ ಜಾಗ ಅಂದರೆ, ಅವನು ಮೊಟ್ಟಮೊದಲು ತನ್ನ ಕಾಯಕ ಆರಂಭಿಸಿದ ಆದಿಯ ಆದಿಯಲೆಲ್ಲೊ ಇರಬಹುದೋ ಏನೊ? ಅಲ್ಲಿಗೆ ಹೋಗಿ ಸಮಸ್ಯೆ, ಪ್ರಶ್ನೆಗಳಿಗೆಲ್ಲ ಪರಿಹಾರ ಕೇಳಿ ಬರುವಾ ಎಂದರೆ ಆ ಜಗದ ಆದಿ, ಜಗದ ಮೂಲ ಯಾವುದು ಎನ್ನುವುದು ಗೊತ್ತಿಲ್ಲವೆ? ಯಾರನ್ನು ಕೇಳುವಂತಿಲ್ಲ, ಆರಂಭ ಅಂತ್ಯ ಗೊತ್ತಿಲ್ಲ, ಯಾವುದೇ ಉಪಕರಣಗಳ ಸಹಕಾರವೂ ಇಲ್ಲ – ಆದರೂ ನೀಸಿ ನಿಭಾಯಿಸು ಎಂದರೆ ಹೇಗೆ ಮಾಡುವುದೆಂಬ ಪ್ರಶ್ನೆ ಮಂಕುತಿಮ್ಮನಲ್ಲಿ ಅನುರಣಿಸಿದೆ.

ಇಲ್ಲಿ ‘ಮೊದಲು ಕೊನೆ’ ಎನ್ನುವುದು ಹುಟ್ಟು ಸಾವಿನ ಪ್ರತೀಕವೂ ಹೌದು. ಅವುಗಳ ಅನಿಶ್ಚಿತತೆ, ಅಸ್ಪಷ್ಟತೆಗಳ ನಡುವೆಯೂ ಬರಿ ಊಹೆ, ಪರಿಭಾವನೆಯಲ್ಲಿ ಬದುಕು ನಡೆಸುವುದೆಂತು? ಎನ್ನುವುದು ಮುಖ್ಯ ಪ್ರಶ್ನೆಯಾಗಿಬಿಡುತ್ತದೆ. ಅಂತೆಯೆ ‘ಆವುದೀ ಜಗಕಾದಿ?’ ಎನ್ನುವುದು ಸೃಷ್ಟಿಯ ಒಟ್ಟಾರೆ ಬುಡದ ಮೂಲಕ್ಕೆ ಕೈ ಹಾಕುವ ಯತ್ನ – ಆ ಗುಟ್ಟರಿವಾದರೆ ಜೀವನದ ಗುಟ್ಟನ್ನು ಬಿಡಿಸಬಹುದೆನ್ನುವ ಆಶಯ ಅದರಲ್ಲಡಕವಾಗಿರುವ ಭಾವ.

00403. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೨೪


00403. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೨೪
___________________________________

ನರರ ಭಯ ಬಯಕೆಗಳೆ ಸುರರ ತಾಯ್ತಂದೆಗಳೋ ? |
ಸುರರಟ್ಟಹಾಸದಿನೆ ನರಭಕ್ತಿಯೊರಲೋ? ||
ಪರಿಕಿಸುವರೇನವರ್ಗಳನ್ಯೋನ್ಯಶಕ್ತಿಗಳ ? |
ಧರುಮವೆಲ್ಲಿದರಲ್ಲಿ ? – ಮಂಕುತಿಮ್ಮ || 24 ||

ಸುರರ ಜತೆಗಿನ ನರರ ಬಂಧವನ್ನು ಬಿಂಬಿಸುತಲೆ ಅದರಲ್ಲಿರುವ ತಾರತಮ್ಯವನ್ನು ಟೀಕಿಸುವ ಹುನ್ನಾರ ಈ ಪದ್ಯದ್ದು. ನರ ಮಾನವರಿಗೆ ದೇವರೆಂದರೆ ಭಯ ಭಕ್ತಿ ಉಂಟು – ಅವರ ಶಕ್ತಿ ಮತ್ತು ಅಗಾಧ ಸಾಮರ್ಥ್ಯಗಳು ತಮ್ಮನ್ನು ಬಗ್ಗುಬಡಿಯಬಲ್ಲವೆಂಬ ಅರಿವಿನಿಂದ; ಅಷ್ಟೆ ಆಸೆ, ಆಸ್ಥೆ, ಪ್ರೀತಿಯೂ ಉಂಟು – ಅದೇ ಅಗಾಧ ಶಕ್ತಿ, ಸಾಮರ್ಥ್ಯಗಳು ವರದ ರೂಪದಲ್ಲಿ ಪ್ರಸನ್ನವಾಗಿ ಪ್ರಕಟವಾದರೆ ಬದುಕು ಪಾವನವಾಗುವುದಲ್ಲ – ಎಂಬ ಕಾಮನೆಯಲ್ಲಿ. ಒಂದೆಡೆ ಬಯಕೆಗಳನ್ನು ತೀರಿಸಬಲ್ಲ ಮತ್ತು ಇನ್ನೊಂದೆಡೆ ಕಷ್ಟ ಕಾರ್ಪಣ್ಯವಿತ್ತು ಶಿಕ್ಷಿಸಬಲ್ಲ ಶಕ್ತಿಗಳೆರಡು ಇರುವುದರಿಂದ ದೇವತೆಗಳಿಗೆ ಕೊಂಚ ಹೆಚ್ಚೆ ಹಮ್ಮು. ಅವೆರಡರ ಬಲ ಸಾಮರ್ಥ್ಯಗಳೆ ಅವರ ತಲೆಗೇರಿಕೊಂಡು, ಅವರನ್ನು ಆಡಿಸುವ ಶಕ್ತಿಗಳಾಗಿಬಿಡುತ್ತವೆ – ಅವೇ ಅದರ ತಾಯ್ತಂದೆಗಳೊ ? ಎನ್ನುವಂತೆ. ನರರ ಅಸಹಾಯಕತೆ ಹೆಚ್ಚಿದಷ್ಟು, ಅವರ ಭಯ, ಭೀತಿ ಇನ್ನಷ್ಟು ಹೆಚ್ಚಿ ಅವರೆಲ್ಲ ಒಕ್ಕೊರಲಿನಿಂದ ಕಾಪಾಡೆಂದು ಮೊರೆಯಿಡುತ್ತಿದ್ದರೆ, ಹಾಗೆ ಕಾಪಾಡಬಲ್ಲ ದೇವತೆಗಳು ನೇರ ಬಂದು ಸಮಯಕ್ಕೊದಗುವರೆ ? ಇಲ್ಲವೆ ಇಲ್ಲ. ಬದಲಿಗೆ ಇದನ್ನೆ ಆಟವಾಗಿಸಿಕೊಂಡು, ತಮ್ಮಲ್ಲಿರುವ ಬಲ, ಶಕ್ತಿಗಳ ಪರೀಕ್ಷೆಗೆ ಇದನ್ನೆ ಸದಾವಕಾಶವಾಗಿ ಬಳಸಿಕೊಳ್ಳುತ್ತ ಅವನ್ನೆಲ್ಲ ದುರ್ಬಲರ ಮೇಲೆ ಪ್ರಯೋಗಿಸಿ ಆಟವಾಡಿಸುತ್ತಾರೆ.

ಕಷ್ಟಗಳ ಪರಂಪರೆಯಲ್ಲಿ ನಲುಗುವ ಮಂದಿ ಅದನ್ನು ಕರ್ಮವೆಂದೊ, ದೇವರೊಡ್ಡಿದ ಪರೀಕ್ಷೆಯೆಂದೊ ಮಾತಾಡದೆ ಅನುಭವಿಸಿಕೊಂಡು ಹೋಗುತ್ತಿದ್ದರೂ, ಬಿಡದೆ ಆ ದೇವರ ಧ್ಯಾನ, ಭಕ್ತಿಯ ಪೂಜೆಗಳನ್ನು ಮುಂದುವರೆಸಿಕೊಂಡೆ ಹೋಗುತ್ತಾರೆ, ಮತ್ತಷ್ಟು ತೊಡಕಿಗೆ ಸಿಗದಿದ್ದರೆ ಸಾಕೆನ್ನುವ ಆಸೆಯಲ್ಲಿ. ದೇವತೆಗಳನ್ನು ಧರ್ಮಾಧಿಕಾರಿಗಳೆನ್ನುತ್ತಾರೆ, ಅವರು ಜನರ ಕಷ್ಟನಷ್ಟದ ತುಲನೆ ಮಾಡಿ ಎಲ್ಲವನ್ನು ಸುಗಮವಾಗಿರಿಸಬೇಕು. ಆದರೆ ಅವರೆ ಗೋಳುಹಾಕಿಕೊಳ್ಳುತ್ತ, ಬಗೆಬಗೆಯ ಪರೀಕ್ಷೆಗೊಡ್ಡಿ ಕಾಡಿದರೆ ಅಲ್ಲಿ ಧರ್ಮವಾದರೂ ಎಲ್ಲಿರುತ್ತದೆ? ಸಮಾನ ಬಲದವರಲ್ಲದ ಅಶಕ್ತ ಮಾನವರ ಮೇಲಿನ ಈ ಶೋಧನೆ ತರವೆ? ಎನ್ನುವ ಜಿಜ್ಞಾಸೆ ಮಾಡುತ್ತಲೆ ಆ ಸುರ ಬಳಗದ ನೈತಿಕ ಧರ್ಮವನ್ನು ಪ್ರಶ್ನಿಸುತ್ತಾನೆ – ಮಂಕುತಿಮ್ಮ.

00401. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೨೩


00401. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೨೩
_____________________________________

ತಿರು ತಿರುಗಿ ತೊಳಲುವುದು ತಿರಿದನ್ನವುಣ್ಣುವುದು |
ಮೆರೆದು ಮೈ ಮರೆಯುವುದು ಹಲ್ಲ ಕಿರಿಯುವುದು ||
ಮರಳಿ ಕೊರಗಾಡುವುದು ಕೆರಳುವುದು ನರಳುವುದು |
ಇರವಿದೇನೊಣರಗಳೆ? – ಮಂಕುತಿಮ್ಮ || ೦೨೩ ||

ಇಡೀ ಬದುಕಿನ ಕಿತ್ತಾಟವೆಲ್ಲ ನಾಲ್ಕೆ ಸಾಲುಗಳಲ್ಲಿ ಎಷ್ಟು ಸೊಗಸಾಗಿ ಬಿಂಬಿತವಾಗಿವೆ ನೋಡಿ ಈ ಸಾಲುಗಳಲ್ಲಿ. ಈ ಇಹದ ಜೀವನ, ಇರುವಿಕೆಯೆ ಒಂದು ಒಣ ಕೆಲಸಕ್ಕೆ ಬಾರದ ರಗಳೆಯ ಹಾಗಂತೆ! ಯಾಕೆಂದರೆ ಈ ಬದುಕಿನ ಪೂರ್ತಿ ಮಾಡುವ ಕೆಲಸಗಳೆಲ್ಲ ಒಂದಲ್ಲ ಒಂದು ರೀತಿಯ ಅತಂತ್ರ ಹಾಗು ಕೆಲಸಕ್ಕೆ ಬಾರದ ಚಂಚಲ ಚಿತ್ತ ಪ್ರವೃತ್ತಿಯ ಕೆಲಸಗಳೆ. ಎಲ್ಲವು ಸಮೃದ್ಧವಾಗಿದ್ದಾಗ ತಿಂದುಂಡು ಸುಖವಾಗಿರುತ್ತದೆಯೆ ಮಾನವ ಜನ್ಮ ? ಹಾಗಿರಲು ಮನಸು ಬಿಡುವುದಿಲ್ಲವಲ್ಲಾ? ಹೊಟ್ಟೆ ತುಂಬಿದ ಮೇಲೆ ಏನಾದರು ಮಾಡದೆ ಉಂಡದ್ದು ಅರಗುವುದಿಲ್ಲ. ಅದಕ್ಕೆಂದೆ ಕೆಲಸ, ಉದ್ದೇಶ ಇರಲಿ, ಬಿಡಲಿ ಸುಮ್ಮನೆ ತಿರು ತಿರುಗಿ, ಸುತ್ತಾಡಿಕೊಂಡು ಬಳಲಿ ತೊಳಲಾಡುವುದು, ಇರುವುದರ ಸಂತೃಪ್ತಿಯನ್ನು ಬಿಟ್ಟು ಇರದುದರ ಅತೃಪ್ತಿಗೆ ಅಲವತ್ತುಗೊಳ್ಳುವುದು ಇತ್ಯಾದಿಯಾಗಿ ಕಂಗೆಡುತ್ತದೆ ಮಾನವ ಜನ್ಮ.

ಅದೇ ಇರದ ಹೊತ್ತಲಿ ಭಿಕ್ಷೆ ಬೇಡಿಯಾದರು (ತಿರಿದನ್ನ) ಅನ್ನವುಣ್ಣಲು ಹೇಸದ ಮನೋಭಾವ. ಮೈಕೈ ಗಟ್ಟಿಯಿದ್ದರು ದುಡಿದು ತಿನ್ನದೆ ಸೋಮಾರಿಯಾಗಿ ಅವರಿವರಲ್ಲಿ ತಿರುಪೆಯೆತ್ತಿ ತಿನ್ನುವ ದುರ್ಬುದ್ಧಿ. ಎಲ್ಲವೂ ಇದ್ದಾಗ ಅಹಂಕಾರದ ಮದದಲ್ಲಿ ಮೆರೆದಾಡುವುದು ಒಂದೆಡೆಯಾದರೆ, ಕೆಳಗೆ ಬಿದ್ದಾಗ ಏನೂ ಇರದ ಹತಾಶ ಸ್ಥಿತಿಯಲ್ಲಿ ಪೆಚ್ಚುಪೆಚ್ಚಾಗಿ ಹಲ್ಲು ಕಿರಿಯುತ್ತ ನಿಲ್ಲಲೂ ಸೈ ಎನ್ನುವ ಪರಿಸ್ಥಿತಿ. ಕಳೆದು ಹೋದ ವೈಭವದ ದಿನಗಳನ್ನು, ವಂಚಿತವಾದ ಅವಕಾಶಗಳನ್ನು, ಕೈ ಮೀರಿ ಹೋದ ಗಳಿಗೆಗಳನ್ನು ನೆನೆದುಕೊಂಡು ಮತ್ತೆ ಮತ್ತೆ ಕೊರಗುವಂತೆ ಆಗುವುದೆಷ್ಟು ಬಾರಿಯೊ. ಆ ಕೊರಗಾಟವೆ ಕೋಪತಾಪ, ಕ್ರೋಧಾಕಾರವಾಗಿ ಪರಿಣಮಿಸಿ ನರಳಿಸಿ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನೂ ಕೆಡಿಸಿ ಕಂಗೆಡಿಸಿಬಿಡುತ್ತದೆ ಬದುಕು. ಅವೆಲ್ಲ ನಿರಂತರ ಜಂಜಾಟ, ಕಾಡುವಿಕೆಯನ್ನು ಕಂಡೆ ‘ಇದೇನೊಣ ರಗಳೆ ಬದುಕಪ್ಪ ?’ ಎಂದು ಕೇಳುತ್ತಾನೆ ಮಂಕುತಿಮ್ಮ. ಕಷ್ಟಪಟ್ಟು ಮೈಮುರಿದು ದುಡಿದು, ಮೂರುಹೊತ್ತು ನೆಮ್ಮದಿಯಾಗಿ ತಿಂದುಂಡು ಯಾವುದೆ ಜಂಜಾಟದ ಹಂಗಿರದೆ ಸುಖವಾಗಿರಲು ಬಿಡದಲ್ಲ ಈ ಇಹ ಜೀವನದ ಇರುವಿಕೆಯ ಕೊಸರಾಟ – ಎಂಬ ಅಚ್ಚರಿ ಬೆರೆತ ವಿಷಾದ, ಖೇದ ಕವಿಯ ಮಾತುಗಳಲ್ಲಿ ಪ್ರಕಟವಾಗಿವೆ.

00400. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೨೨


00400. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೨೨
___________________________________

ಕೃತಿಮವೊಂ ಜಗವೆಲ್ಲ | ಸತ್ಯತೆಯದೆಲ್ಲಿಹುದೋ? |
ಕರ್ತೃವೆನಿಸಿದನೆ ತಾಂ ಗುಪ್ತನಾಗಿಹನು ||
ಚತ್ರವಿ ಜಗವಿದರೊಳಾರ ಗುಣವೆಂತಹುದೊ !
ಯಾತ್ರಿಕನೆ ಜಾಗರಿರೊ – ಮಂಕುತಿಮ್ಮ ||

ತನ್ನೆಚ್ಚರದಲ್ಲಿ ತಾನು ಸದಾ ಜಾಗೃತನಾಗಿರಬೇಕೆಂದು ಸಾರುವ ಕವಿವಾಣಿ ಈ ಪದ್ಯದ ತಾತ್ಪರ್ಯ. ಈ ಕಲಿಯುಗದ ಜಗದಲ್ಲಿ ಎಲ್ಲವು ಕೃತಕ, ಕೃತಿಮ. ಎಲ್ಲರು ಒಂದಲ್ಲ ಒಂದು ರೀತಿಯ ವೇಷ ತೊಟ್ಟುಕೊಂಡು ನಟಿಸುವವರೆ ಆದ ಕಾರಣ ಯಾರ ನಿಜ ಸ್ವರೂಪ ಏನೆಂದು ಸುಲಭದಲ್ಲಿ ಗೊತ್ತಾಗುವುದಿಲ್ಲ. ತಮ್ಮ ಗುರಿ ಸಾಧನೆಗಾಗಿ ಯಾವ ಮಟ್ಟಕ್ಕೆ ಬೇಕಾದರು ಇಳಿಯುವ ಮಟ್ಟಕ್ಕೆ ಜನ ಮಾನಸಿಕವಾಗಿ ಸಿದ್ದರಿರುವಾಗ ಸತ್ಯ, ನ್ಯಾಯಗಳಿಗೆ ಬೆಲೆಯಾದರೂ ಎಲ್ಲಿ? ಅವು ಇರುವುದಾದರೂ ಎಲ್ಲಿ? ಅಷ್ಟೆಲ್ಲಾ ಏಕೆ – ಈ ಸೃಷ್ಟಿಯಲ್ಲಿ ಎಲ್ಲವನ್ನು ನಿರ್ಮಿಸಿದ ಆ ಸೃಷ್ಟಿಕರ್ತನೆ ಯಾರ ಕೈಗು ಸಿಗದಂತೆ ಎಲ್ಲೊ ಗುಪ್ತನಾಗಿ ಅಡಗಿಕೊಂಡುಬಿಟ್ಟಿದ್ದಾನೆ – ಆ ಹೊಡೆತಗಳನ್ನು ಸಹಿಸಲಾಗದ ಭೀತಿಯ ಸಲುವಾಗಿ. ಇನ್ನು ಪಾಮರರಾದ ನಮ್ಮಗಳ ಪಾಡೇನು?

ಜಗದಲ್ಲಿರುವವರು ಒಬ್ಬಾರೊ ಇಬ್ಬಾರೊ ಆಗಿದ್ದರೆ ಅವರನ್ನು ಅಧ್ಯಯನ ಮಾಡಿ, ಗುಣಾವಗುಣ, ಲೋಪದೋಷಗಳನ್ನೆಲ್ಲಾ ಪೂರ್ತಿಯಾಗಿ ಅರಿತು ನಂತರ ಅವರೊಡನಾಟ ಸೂಕ್ತವೆ, ಅಲ್ಲವೆ ಎಂದು ನಿರ್ಧರಿಸಬಹುದಿತ್ತೇನೊ? ಆದರೆ ಇಡಿ ಜಗವೆ ದೊಡ್ಡ ಚತ್ರದಂತೆ ಜನ ಜಂಗುಳಿಯಿಂದ ತುಂಬಿಹೋಗಿದೆ – ಗೊತ್ತಿದ್ದವರು, ಗೊತ್ತಿಲ್ಲದವರು ಎಲ್ಲರೂ ಸೇರಿಕೊಂಡು. ಅಂದಮೇಲೆ ಅಲ್ಲಿ ಅರಿಯುವುದನ್ನಾದರೂ ಯಾರನ್ನು? ನಂಬುವುದಾದರೂ ಯಾರನ್ನು? ಯಾರ ನಿಜವಾದ ಗುಣ ಹೀಗೇ ಎಂದು ಹೇಳುವುದಾದರೂ ಎಂತು? ಈ ಜೀವನ ಪಯಣದಲ್ಲಿ ಯಾತ್ರಿಕರಾಗಿ ಬಂದ ನಮಗೆ ಹಿಂದೆಯೂ ಗೊತ್ತಿಲ್ಲ, ಮುಂದೆಯೂ ಗೊತ್ತಿಲ್ಲ. ಯಾತ್ರೆಯಲ್ಲಿ ಹೋಗುತ್ತೋಗುತ್ತಲೆ ಅಷ್ಟಿಷ್ಟು ಅರಿತು, ಕಲಿತು ಮುನ್ನಡೆಯುವ ಪರಿಸ್ಥಿತಿ. ಈ ಗೊಂದಲ, ಗದ್ದಲದಲ್ಲಿ ನಮ್ಮೆಚ್ಚರಿಕೆಯಲ್ಲಿ ನಾವು ನಡೆಯುವುದು ಒಳಿತು. ಸುಮ್ಮನೆ ಯಾರಾರನ್ನೊ ನಂಬಿ ಬದುಕು ಸಾಗಿಸಲಾಗದು – ಮೋಸ ಹೋಗದ ರೀತಿಯಲ್ಲಿ, ಎನ್ನುವ ಬುದ್ದಿಮಾತು ಹೇಳುತ್ತಿದ್ದಾನಿಲ್ಲಿ ಮಂಕುತಿಮ್ಮ.

ಸಾರಾಂಶದಲ್ಲಿ ಹೇಳುವುದಾದರೆ ಈ ಜಗದ ಸೃಷ್ಟಿಯ ಮೂಲ ಸ್ವರೂಪವೆ ಕೃತಿಮತೆ, ಮಿಥ್ಯತೆಗಳ ಮೂಲವಸ್ತುವನ್ನೊಳಗೊಂಡು, ಅದರ ಪ್ರಕಟ ರೂಪಕ್ಕೆ ದಂಗಾಗಿ, ಅದನ್ನು ಸೃಷ್ಟಿಸಿದ ಆ ಸೃಷ್ಟಿಕರ್ತನೇ ಬಯಲಿಗೆ ಬರದೆ ಅವಿತುಕೊಂಡಿರುವಂತೆ ಮಾಡಿಬಿಟ್ಟಿದೆ. ಇಂತದ್ದರಲ್ಲಿ ಹುಲು ಮಾನವರಾದ ನಮ್ಮ ಪಾಡೇನು ಲೆಕ್ಕ? ಅವನಿಗಾದರೊ ಯಾರಾರ ಗುಣ ವಿಶೇಷಗಳೇನೆಂದು ಅರಿಯುವ ಸಾಮರ್ಥ್ಯವಾದರೂ ಇದ್ದೀತು. ಅದಾವುದೂ ಇಲ್ಲದ ನಾವು ಈ ಚತ್ರದ ದೊಂಬಿಯಂತಹ ಜಗದಲ್ಲಿ, ಯಾರನ್ನಾದರು ಸರಿ ನಂಬಿ ಮುನ್ನಡೆವೆ ಎನ್ನಲಾದೀತೆ ? ಬೆಳ್ಳಗಿರುವುದೆಲ್ಲ ಹಾಲು ಎಂದು ನಂಬಿ ಮೋಸಕ್ಕೊಳಗಾಗದೆ ಬಾಳ ಪಯಣದ ಹಾದಿಯಲ್ಲಿ ಎಚ್ಚರದಿಂದ ನಡೆಯೊ ಯಾತ್ರಿಕ ಎನ್ನುವ ಕಿವಿಮಾತು ಮಂಕುತಿಮ್ಮನ ನುಡಿಗಳಲ್ಲಿ ಅನುರಣಿತವಾಗಿದೆ.

00399. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೨೧


00399. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೨೧
___________________________________

ಹೊನ್ನೆಂದು ಜಗದಿ ನೀಂ ಕೈಗೆ ಕೊಂಡುದನು ವಿಧಿ –
ಮಣ್ಣಿಸುವನ್; ಅವನ ವರ ಮಣ್ಣಿಸುವೆ ನೀನು ||
ಭಿನ್ನಂಮಿಂತಿರೆ ವಸ್ತು ಮೌಲ್ಯಗಳ ಗಣನೆಯೀ |
ಪಣ್ಯಕ್ಕೆ ಗತಿಯೆಂತೊ ? – ಮಂಕುತಿಮ್ಮ || ೦೨೧ ||

ಲೋಕದ ದೃಷ್ಟಿಯಲ್ಲಿ ಪ್ರತಿಯೊಂದು ವಸ್ತುವು ಅದರದರದೆ ಆದ ಮೌಲ್ಯ, ಗುಣಾತ್ಮಕತೆಯನ್ನು ಹೊಂದಿರುತ್ತದೆ – ಅವರವರು ಕಾಣುವ ಅನುಕೂಲ ಪ್ರತಿಕೂಲಗಳ ಗಣನೆಯನುಸಾರ. ಪ್ರತಿಯೊಬ್ಬರ ಅನಿಸಿಕೆಗು ಅವರವರ ಮನಸಿಗೆ ಸೂಕ್ತವಾಗಿ ಹೊಂದುವ ವಿವರಣೆ ಮಾತ್ರವೆ ಆಪ್ತವಾಗಿ, ಸಹ್ಯವಾಗುವ ಕಾರಣ ನೈಜ ಸತ್ಯ ಎಷ್ಟೊ ಬಾರಿ ಅವರ ಅರಿವಿಗೆ ಬಂದಿರುವುದಿಲ್ಲ. ಆ ಕಾರಣದಿಂದಲೆ ತಪ್ಪು ತಿಳುವಳಿಕೆಗೆ ಬಲಿಯಾಗಿ ಮೋಸ ಹೋಗುವ ಬಗೆ ಇಲ್ಲಿನ ಸಾಲುಗಳಲ್ಲಿ ಬಿಂಬಿತವಾಗಿದೆ. ಖೇದವೆಂದರೆ, ತಪ್ಪರಿವುಂಟಾಗಿದೆಯೆನ್ನುವುದು ಎಷ್ಟೊ ಬಾರಿ ಸ್ವತಃ ಆ ವ್ಯಕ್ತಿಗೆ ತಿಳಿಯದೆ ಹೋಗುವುದರಿಂದ, ನೈಜ ಮೌಲ್ಯವಿರುವ ವಸ್ತುವನ್ನೂ ಕಡೆಗಣಿಸಿ ದೂರೀಕರಿಸಿಬಿಡಬಹುದು ; ಮೌಲ್ಯವಿರದ್ದನ್ನು ಆಪ್ತವಾಗಿಸಿಕೊಂಡು ಅಪಾತ್ರ ಕಾಳಜಿಯನ್ನು ತೋರಿಬಿಡಬಹುದು. ಎರಡು ರೀತಿಯೂ ಸರಿಯಿಲ್ಲವೆನ್ನುವುದು ಗೊತ್ತಾಗದೇ ಹೋದರೆ, ಜೀವನ ವ್ಯಾಪಾರ ಸುಲಲಿತವಾಗಿ, ಸುಸೂತ್ರವಾಗಿ ನಡೆಯುವುದಾದರೂ ಹೇಗೆ ? ಎಂಬುದು ಕವಿಯ ಪ್ರಶ್ನೆ.

ಸಾರಾಂಶದಲ್ಲಿ ಹೇಳುವುದಾದರೆ, ನಾವು ಹೊನ್ನು ಎಂದು ಬೆನ್ನತ್ತಿ ಹೊರಟಿದ್ದನ್ನು ಮಾಯಾಮೃಗವಾಗಿಸಿ ಮಣ್ಣಾಗಿಸಿಬಿಡುತ್ತದೆ ವಿಧಿ. ಬೆಲೆ ಬಾಳುವಂತಹ ವಸ್ತು ಎನ್ನುವ ಭ್ರಮೆಯಲ್ಲಿ ಕೈ ಸೇರಿದ ಆ ವಸ್ತು, ಅಂತಿಮವಾಗಿ ಮೌಲ್ಯವಿರದ ಮಣ್ಣಾಗಿ ಭ್ರಮ ನಿರಸನವಾಗಿಬಿಡುತ್ತದೆ. ಅದು ಸಾಲದೆಂಬಂತೆ, ಆ ನಿಯಾಮಕನು ಎಷ್ಟೊ ಬಾರಿ ಕೇಳದೆಯೂ ವರ ನೀಡಿದ ಹೊತ್ತಲ್ಲಿ ಅದು ಹೊನ್ನೆಂದು ಗುರುತಿಸದೆ ಮಣ್ಣು ಎಂದು ಮೌಲ್ಯಮಾಪನ ಮಾಡಿ, ನಿರ್ಲಕ್ಷಿಸಿಬಿಡುತ್ತೇವೆ – ನಮ್ಮ ವಕ್ರ ದೃಷ್ಟಿದೋಷದ ಪರಿಣಾಮವಾಗಿ. ವ್ಯಾಪಾರವೆನ್ನುವುದು (ಪಣ್ಯ) ಕೊಡು-ಕೊಳ್ಳುವ ಪ್ರಕ್ರಿಯೆ; ಅದು ನೆಟ್ಟಗೆ ನಡೆಯಬೇಕಾದರೆ ಇರಬೇಕಾದ ಕನಿಷ್ಠ ವಾತಾವರಣವೆಂದರೆ – ಆ ವ್ಯವಹಾರಸ್ಥರಿಗಿಬ್ಬರಿಗು ತಾವು ಮಾಡುತ್ತಿರುವ ವ್ಯಾಪರದ ಮೌಲ್ಯ ಕುರಿತು ಸರಿಯಾಗಿ ಗೊತ್ತಿರಬೇಕು ಮತ್ತು ಸಮಾನ ತಿಳಿವು, ಜ್ಞಾನ ಇರಬೇಕು. ಆದರೆ ಈ ವಿಧಿ ಮತ್ತು ಮಾನವನ ನಡುವಿನ ವ್ಯಾಪಾರದಲ್ಲಿ ಸರಕಿನ ಮೌಲ್ಯದ ಅರಿವು ವಿರುದ್ಧಾರ್ಥವಿದ್ದಂತೆ ಕಾಣುವುದಲ್ಲ? ನಾವು ಲೌಕಿಕ ಗಣನೆಯಲ್ಲಿ ಅತಿ ಮೌಲ್ಯದ್ದೆಂದುಕೊಂಡಿದ್ದು, ವಿಧಿಯ ಪಾರಮಾರ್ಥಿಕ ಪರಿಗಣನೆಯಲ್ಲಿ ಯಕಃಶ್ಚಿತ್ ಮಾತ್ರದ ಮೌಲ್ಯದ್ದಾಗಿಬಿಡುತ್ತದೆ. ಅದೇ ರೀತಿ ವಿಧಿ ತೋರಿದ ಹಾದಿ, ಒಣ ವೇದಾಂತದ ಕೆಲಸಕ್ಕೆ ಬಾರದ ಸರಕಿನಂತೆ ಭಾಸವಾಗಿ, ಅದನ್ನು ನಿರ್ಲಕ್ಷಿಸಲು ಪ್ರೇರೇಪಿಸುತ್ತದೆ. ಹೀಗಿದ್ದರೆ ವಿಧಿ ಮತ್ತು ಮಾನವರ, ವರ್ತಕ – ಗ್ರಾಹಕರ ನಡುವಿನ ನಿಜಾಯತಿಯ ವ್ಯಾಪಾರ ನಡೆಯುವುದಾದರು ಹೇಗೆ ಸಾಧ್ಯ ? ಎಂದು ಬೇಸರಿಸುತ್ತಾನೆ ಮಂಕುತಿಮ್ಮ.

ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಷಯವೆಂದರೆ ಇಲ್ಲಿನ ಪಣ್ಯದ ಸರಕು ಬರಿಯ ಹೊನ್ನು, ಮಣ್ಣಿನ ಭೌತಿಕ ವಸ್ತುಗಳು ಮಾತ್ರವಲ್ಲ; ಅಭೌತಿಕ, ಅಲೌಕಿಕ ಸ್ತರದ ಸರಕುಗಳು ಸೇರಿಕೊಳ್ಳುವುದರಿಂದ ಸಾಮಾನ್ಯ ಜನರು ಮಾತ್ರವಲ್ಲದೆ ಜ್ಞಾನಿಗಳು, ಪಂಡಿತರೂ ಸಹ ಏಮಾರಿ ಹಳ್ಳಕ್ಕೆ ಬೀಳುವುದು ಇಲ್ಲಿನ ವಿಶೇಷ. ಆ ಅರಿವಿದ್ದ ಗ್ರಾಹಕರು ನಾವಾಗಿ ಮೌಲ್ಯಮಾಪನದಲ್ಲಿ ಇರುವ ಅಂತರವನ್ನು ಗ್ರಹಿಸಿ, ನಿವಾರಿಸಿಕೊಳ್ಳಲು ಯತ್ನಿಸಿದರೆ ಅಷ್ಟಿಷ್ಟು ಸುಖ ಕಾಣಬಹುದೆಂಬುದು ಕವಿಯ ಅಂತರಾಳದ ಆಶಯ.

00398. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೨೦


00398. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೨೦
___________________________________

ಕಂಡ ದೈವಕ್ಕೆಲ್ಲ ಕೈಯ ಮುಗಿದೇನಹುದು ? |
ಚಂಡ ಚತುರೋಪಾಯದಿಂದಲೇನಹುದು ? ||
ತಂಡುಲದ ಹಿಡಿಯೊಂದು ತುಂಡು ಬಟ್ಟೆಯದೊಂದು |
ಅಂಡಲೆತವಿದಕೇನೊ ? – ಮಂಕುತಿಮ್ಮ || ೦೨೦ ||

ಎಲ್ಲರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎಂದು ದಾಸರು ಎಂದೊ ಹೇಳಿಬಿಟ್ಟಿದ್ದಾರೆ. ಅದರೊಂದು ಮುಖವನ್ನು ಈ ಪದ್ಯದ ಸಾರವೂ ಅನುರಣಿಸುತ್ತದೆ ಮೂಢನಂಬಿಕೆಗಳ ಹಿಂದೆ ನಡೆವ ಜಗವನ್ನು ಛೇಡಿಸುವ ದನಿಯಲ್ಲಿ. ಮಾನವನ ಆಸೆ, ಆಕಾಂಕ್ಷೆಗಳಿಗೆ ಕೊನೆ ಮೊದಲಿಲ್ಲದ ಕಾರಣ ಏನಾದರೊಂದು ಅಹವಾಲು ಹಿಡಿದು ಅದರ ಪೂರೈಕೆಗೆ ಯಾರದೋ ದುಂಬಾಲು ಬೀಳುವ ಪ್ರವೃತ್ತಿ ಸಹಜವಾಗಿ ಕಾಣುವಂತದ್ದು. ತನ್ನ ಬಂಧು, ಬಳಗ, ನೆಂಟರಿಷ್ಟರ ಮೊರೆಹೊಕ್ಕೊ, ಗೊತ್ತಿರುವ, ಗೊತ್ತಿರದಿರುವೆಲ್ಲರ ಕೈ, ಕಾಲು ಹಿಡಿದೊ ತಮ್ಮ ಬಯಕೆ ಪೂರೈಸಿಕೊಳ್ಳುವುದು ಅದರಲ್ಲೆಲ್ಲ ಪ್ರಮುಖವಾಗಿ ಕಾಣುವ ವಿಧಾನವಾದರೂ, ಅದನ್ನು ಮೀರಿದ ಮುನ್ನುಡಿಯಾಗಿ ಕಂಡ, ಕಂಡ ದೇವರಿಗೆ ಕೈ ಜೋಡಿಸಿ, ಹರಕೆ ಹೊತ್ತು, ಪೂಜೆ ಪುನಸ್ಕಾರದ ಆಮಿಷಗಳನ್ನೊಡ್ಡಿ ತಮ್ಮ ಕಾಮನೆಗಳನ್ನು ಪೂರೈಸುವಂತೆ ಬೇಡಿಕೊಳ್ಳುವುದು ಸಾಧಾರಣ ಪ್ರತಿಯೊಬ್ಬರಲ್ಲಿ ಕಾಣಬಹುದಾದ ಸಂಗತಿ.

ಆ ಆಸೆ, ಕಾಮನೆ, ಕಾರ್ಯಸಾಧನೆಗಳ ತೀವ್ರತೆ ಎಷ್ಟಿರುತ್ತದೆಂದರೆ, ಅದಕ್ಕಾಗಿ ಮಾನವ ಎಂತಹ ಚಂಡ-ಚತುರೋಪಾಯಗಳನ್ನು ಮಾಡಲೂ ಸಿದ್ಧ. ಸಾಮ, ದಾನ, ಬೇಧ, ದಂಡಾದಿ ಚತುರೋಪಾಯಗಳನ್ನು ಬಳಸಿ ಯಾವ ಹುನ್ನಾರವನ್ನು ಮಾಡಿಯಾದರೂ ಸರಿ, ತಾನಂದುಕೊಂಡಿದ್ದನ್ನು ಸಾಧಿಸುವ, ತನ್ನ ಬಯಕೆಯನ್ನು ಪೂರೈಸಿಕೊಳ್ಳುವ, ಯಾವ ನೈತಿಕಾನೈತಿಕ ಮಟ್ಟಕ್ಕಾದರೂ ಇಳಿಯುವ ಮಾನವ ಇದನ್ನೆಲ್ಲಾ ನಿಜಕ್ಕು ಮಾಡುವ ಅಗತ್ಯವಿದೆಯೆ ? ಎಂದು ಕೇಳುತ್ತಾನೆ ಮಂಕುತಿಮ್ಮ. ಎಷ್ಟೆ ಗಳಿಸಲಿ, ಏನೇ ಉಳಿಸಲಿ, ಏನೇ ವೈಭೋಗದಿಂದ ಮೆರೆದಾಡಲಿ ಪ್ರತಿಯೊಬ್ಬನಿಗು ನಿಜಕ್ಕೂ ಬೇಕಾಗಿರುವುದು ಒಂದಷ್ಟು ಹಿಡಿಯನ್ನ (ತಂಡುಲ) ಮತ್ತು ಮಾನ ಮುಚ್ಚುವ ಗೇಣುದ್ದದ ಬಟ್ಟೆ ಮಾತ್ರ. ಆ ಕನಿಷ್ಠದಗತ್ಯದ ಹೊರತಾಗಿ ಮಿಕ್ಕೆಲ್ಲವು ಬರಿಯ ತೋರಿಕೆಯ ವೈಭವವೆ ಹೊರತು ಮತ್ತೇನು ಇಲ್ಲ. ಇಂತಿರುವಾಗ, ಅಷ್ಟೆಲ್ಲಾ ಹುನ್ನಾರ, ಸಂಚು ನಡೆಸುತ್ತ ಅಂಡಲೆಯುವ ಪಾಡಾದರು ಏಕೆ ಬೇಕು ? ಎಂದು ಪ್ರಶ್ನಿಸುತ್ತ ಸರಳ ಜೀವನ ಸತ್ಯವನ್ನು ಬಿಚ್ಚಿಡುತ್ತಾನೆ. ಯಾವಾಗ ಆ ದೊಡ್ಡ ಲಾಲಸೆಗಳಿರದೊ ಆಗ ದೇವರಲ್ಲಿ ಬೇಡುವುದೂ ಕೂಡ ಐಹಿಕದ, ಲೌಕಿಕ ಸೌಖ್ಯದ ಬದಲು ಅಲೌಕಿಕದ, ವ್ಯಕ್ತಿ ವಿಕಸನದ ಸಾತ್ವಿಕ ಲಾಲಸೆಯಾಗಿಬಿಡುತ್ತದೆ. ಅದರತ್ತ ಚಿಂತಿಸುವಂತೆ ಪ್ರೇರೇಪಿಸುತ್ತದೆ, ಈ ಪದ್ಯದ ಸಾಲುಗಳು.

00397. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೯


00397. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೯
___________________________________

ಗಾಳಿ ಮಣ್ಣುಂಡೆಯೊಳಹೊಕ್ಕು ಹೊರಳಲದು |
ಆಳೆನಿಪುದಂತಾಗದಿರೆ ಬರಿಯ ಹೆಂಟೆ ||
ಬಾಳೇನು ಧೂಳು ಸುಳಿ, ಮರ ತಿಕ್ಕಿದುರಿಯ ಹೊಗೆ |
ಕ್ಷ್ವೇಳವೇನಮೃತವೇಂ ? ಮಂಕುತಿಮ್ಮ ||

ಈ ಪದ್ಯವನ್ನು ಓದಿದಾಗೆಲ್ಲ ಮತ್ತೆ ಮತ್ತೆ ಗಹನದಿಂದ ಲೌಕಿಕ ಸಂವಹನದ ಛಾಯೆ ಎದ್ದು ನಿಲ್ಲುತ್ತದೆ. ಅಲೌಕಿಕ ಚಿಂತನೆಯ ಉಚ್ಛ ಸ್ತರದಿಂದ ಐಹಿಕ ಜೀವನದ ನಶ್ವರತೆಯ ಸೆರಗಿಗೆ ನೇರ ಕೊಂಡಿ ಬಿಗಿಯುವ ಈ ಶೈಲಿ ಅನನ್ಯವೆಂದೆ ಹೇಳಬಹುದು. ನಮ್ಮ ಧಾರ್ಮಿಕ ಪ್ರೇರೇಪಿತ ತತ್ವ, ಸಿದ್ದಾಂತಗಳಲ್ಲಿ ನಂಬಿಕೆಯಿರುವವರಿಗೆ ಸೃಷ್ಟಿಕರ್ತ ಬ್ರಹ್ಮ ಮಣ್ಣಿನಿಂದ ಈ ಮಾನವ ಪ್ರತಿಮೆಗಳನ್ನು ಮಾಡಿ, ಜೀವ ತುಂಬಿ ಈ ಜಗತ್ತಿಗೆ ಬಿಡುತ್ತಾನೆಂಬ ಕಲ್ಪನೆ ಚಿರಪರಿಚಿತ. ಸಾಮಾನ್ಯ ಜನಪದರಲ್ಲಂತು ಅದು ಕಲ್ಪನೆ, ಕಥೆಗು ಮೀರಿದ ಪ್ರಶ್ನಾತೀತ ನಂಬಿಕೆಯ ಸ್ತರದ ವಸ್ತು. ಇಲ್ಲಿ ಮಣ್ಣಿನ ಹೆಂಟೆಯೆನ್ನುವುದು ಅದೇ ಕಲ್ಪನೆಯ ಸಾಕಾರ ರೂಪ. ಅದು ಬ್ರಹ್ಮನ ಕೃತ್ಯವೊ, ವೈಜ್ಞಾನಿಕ ಪ್ರಕ್ರಿಯೆಯೊ ಎನ್ನುವ ಜಿಜ್ಞಾಸೆಯನ್ನೆಲ್ಲ ಬದಿಗಿರಿಸಿ ನೋಡಿದರೆ, ಪ್ರತಿಯೊಂದು ಜೀವಿ ಅಥವ ವ್ಯಕ್ತಿಯ (ಆಳು) ಅಸ್ತಿತ್ವವನ್ನು ನಿರೂಪಿಸುವ ಸತ್ವವೆಂದರೆ ಅದರ ಉಸಿರಾಟದ ಪ್ರಕ್ರಿಯೆ. ಅದೇ ಜೀವ ಜಗಕ್ಕು , ನಿರ್ಜೀವ ಜಗಕ್ಕೂ ನಡುವೆ ಇರುವ ವ್ಯತ್ಯಾಸ. ಉಸಿರಾಟ ನಿಂತರೆ ಗಾಳಿಯಿಲ್ಲದ ಜೀವ ಹೊತ್ತಿದ್ದ ದೇಹ ಆ ನಿರ್ಜೀವ ವಸ್ತುವಿಗೆ ಸಮ, ಬರಿಯ ಮಣ್ಣು ಹೆಂಟೆಯಿದ್ದ ಹಾಗೆ. ಹೀಗಾಗಿ ಬರಿಯ ಮಣ್ಣಿನ ಹೆಂಟೆಯಂತಹ ದೇಹದೊಳಕ್ಕೆ ಗಾಳಿ (ಜೀವಾಮ್ಲ, ಪ್ರಾಣವಾಯು) ಹೊಕ್ಕು ಮನೆ ಮಾಡಿಕೊಂಡರಷ್ಟೆ ಅದು ಜೀವವೆನಿಸಿಕೊಳ್ಳುವುದು. ಅದರ ಸೂಚನೆಯಾಗಿಯೆ ಹೊರಳಾಟದ ರೂಪದಲ್ಲಿ ಒಳಗು, ಹೊರಗೆಲ್ಲ ಚಲಿಸುತ್ತ ಜೀವಂತವಾಗಿಡುತ್ತದೆ ಇಡೀ ಮಣ್ಣಿನ ಹೆಂಟೆಯನ್ನು. ಇದು ಮೊದಲ ಸಾಲಲ್ಲಿ ಬಿಂಬಿತವಾಗುವ ಭಾವ.

ಹಾಗೆಂದು, ಬರಿಯ ಗಾಳಿ ಹೊರಳಾಡಿಬಿಟ್ಟಿತೆಂದು ಅದನ್ನು ಜೈವಿಕ ಅಸ್ತಿತ್ವದ ಸಾರ್ಥಕತೆಯೆಂದು ಹೇಳಿಬಿಡಲಾಗುವುದೆ? ಆಗದು. ಬರಿಯ ಗಾಳಿ ತುಂಬಿದ ಮಾತ್ರಕ್ಕೆ ಮಾನವ ಜನ್ಮಕ್ಕೆ ಸಂಪೂರ್ಣ, ಪರಿಪೂರ್ಣ ಸ್ಥಿತಿ ಬಂದಂತಾಗಲಿಲ್ಲ. ಜೀವನದ ಸಾರ್ಥಕತೆ ಅಡಗಿರುವುದು ಬರಿಯ ಗಾಳಿ ತುಂಬಿದ ಭೌತಿಕ ಅಸ್ತಿತ್ವ ಮಾತ್ರದಲ್ಲಲ್ಲ. ಅದಕ್ಕೊಂದು ಬೇರೆಯದೆ ಆದ ಘನ ಉದ್ದೇಶವಿದೆ. ಯಾವುದೋ ಪುರುಷಾರ್ಥದ ಬೆನ್ನು ಹತ್ತಿ ಹೋಗಬೇಕಾದ ಕರ್ತವ್ಯ, ಬಂಧನ, ಅನಿವಾರ್ಯತೆಗಳಿವೆ. ಅದಾವುದು ಇರದ ಮೋಹ, ಲಾಲಸೆಗಳಿಂದ ಗಾಳಿ ತುಂಬಿದ ಆಳಂತೆ ಮಾತ್ರ ಬದುಕಿದರೆ ಅದು ಮಣ್ಣು ಹೆಂಟೆಗೆ ಸಮವೆ ಹೊರತು, ನಿಜವಾದ ಅರ್ಥದಲ್ಲಿ ಆಳೆಂದು ಹೇಳಲಾಗುವುದಿಲ್ಲ. ಇದ್ದೂ ಇರದ ಅಸ್ತಿತ್ವದ ಸಮನಾಗಿಬಿಡುತ್ತದೆಯೆನ್ನುವ ಅರ್ಥ ಎರಡನೆ ಸಾಲಲ್ಲಿ ಹೊರಡುತ್ತದೆ.

ಇದರ ಜತೆಗೆ ಎರಡನೆ ಸಾಲಿನಲ್ಲಿ ಬಳಸಿರುವ ಹೆಂಟೆ ಪದಕ್ಕೆ ಇರುವ ಹೆಣ್ಣುಕೋಳಿ ಎನ್ನುವ ಅರ್ಥವನ್ನು ಆರೋಪಿಸಿದರೆ ಅದು ಅಧೀರತೆ, ಪುಕ್ಕಲುತನಗಳ ಸೂಚ್ಯ ಇಂಗಿತವೂ ಆಗುತ್ತದೆ. ಗಾಳಿ ತುಂಬಿದ ಮಣ್ಣುಹೆಂಟೆ ತನ್ನ ಪುರುಷಾರ್ಥವನ್ನರಿತು ಸರಿಯಾದ ‘ಆಳಿನ’ ಸ್ವರೂಪವನ್ನು ಅವತರಿಸಿಕೊಳ್ಳದಿದ್ದರೆ ಅದು ಪುಕ್ಕಲುತನ, ಹೇಡಿತನದ ಸಂಕೇತವೂ ಆಗುತ್ತದೆ, ಬರಿಯ ಹೆಂಟೆಯ ಬದುಕಿನಂತಾಗುತ್ತದೆ. ಮುಂಬರುವ ಕಷ್ಟಕಾರ್ಪಣ್ಯಗಳನ್ನೆಲ್ಲ ಎದುರಿಸುವ ಧೈರ್ಯ, ಸ್ಥೈರ್ಯವಿಲ್ಲದೆ ಸೋತು ಸೊರಗುವ ಅಸಹಾಯಕತೆ, ಜವಾಬ್ದಾರಿಯಿಂದ ಓಡಿಹೋಗುವ ಸೋಗಲಾಡಿತನ ಬದುಕನ್ನು ನಿಯಂತ್ರಿಸತೊಡಗುತ್ತದೆ. ಅಂತಹ ಬದುಕು ಈ ಜೀವನದ ನಿಜವಾದ ಉದ್ದೇಶವಲ್ಲ ಎಂಬ ದೃಷ್ಟಿಯಲ್ಲು ಅರ್ಥೈಸಬಹುದು.

ಹೀಗೆ ಗಹನ ಸ್ತರದಲ್ಲಿ ಜೀವ ಜೀವಾತ್ಮಗಳ ಜತೆಗಿನ ಜೀವಾನಿಲದ ಅನೋನ್ಯತೆಯನ್ನು, ಅದಕ್ಕೆ ಆರೋಪಿಸಲ್ಪಡುವ ಬರಿಯ ಲೌಕಿಕಕ್ಕೆ, ಐಹಿಕಕ್ಕೆ ಮೀರಿದ ಯಾವುದೊ ಗುರುತರ ಹೊಣೆಗಾರಿಕೆಯನ್ನು ತೋರಿಸುತ್ತ ವ್ಯಕ್ತಿ, ವ್ಯಕ್ತಿತ್ವದ ಸಾರ್ಥಕತೆಯತ್ತ ಸೆಳೆಯುವ ಪ್ರಯತ್ನ ಮಾಡುವ ಮೊದಲೆರಡು ಸಾಲುಗಳಿಗಿಂತ ವಿಭಿನ್ನ ಸ್ತರದ ಅನುಭವವಾಗುವುದು ಕೊನೆಯೆರಡು ಸಾಲಿನಲ್ಲಿ. ‘ಗಾಳಿ ತುಂಬಿದ ಆಳಾಗಿ’ ಸೂಕ್ತ ಸಾರ್ಥಕ ಜೀವನ ನಡೆಸಬೇಕು ಅಂತೇನೊ ಹೇಳಿದ್ದಾಯ್ತು. ಆದರೆ ಅದೇನು ಸುಲಭದ ಕಾರ್ಯವೆ ? ಹೂವೆತ್ತಿದಂತೆ ನಡೆದುಬಿಡುವ ಕೆಲಸವೆ? ಆ ಕುರಿತ ವಿಶ್ಲೇಷಣೆ ಮುಂದಿನ ಸಾಲುಗಳ ಸಾರ. ಬದುಕೆನ್ನುವುದು ಹೂವಿನ ಮಂಚವಲ್ಲ. ನಡೆಯುವ ಹಾದಿಯಲ್ಲಿ ನೂರೆಂಟು ಅಡ್ಡಿ, ಆತಂಕಗಳು, ತಂಟೆ, ತಕರಾರುಗಳು ಕಾಡುತ್ತವೆ. ಒಳ ತುಂಬಿದ ಗಾಳಿಯನ್ನೆ ಕಂಗೆಡಿಸುವ ರೀತಿಯ ಧೂಳಿನ ಸುಳಿಗಳು ಎದುರಾಗುತ್ತವೆ. ನೀರಿನಲ್ಲಿ ತನ್ನನ್ನೆ ಸುತ್ತುತ್ತ ಸಿಕ್ಕಿದ್ದನ್ನೆಲ್ಲ ಕಬಳಿಸಿ ಸುರುಳಿ ಸುತ್ತಿಸಿ ಎತ್ತೆಸೆಯುವ ಸುಳಿಗಳು ಎದುರಾಗುತ್ತವೆ. ಅದನ್ನೆಲ್ಲ ಎದುರಿಸಿ ಬದುಕುವ, ಮುನ್ನುಗ್ಗುವ ಧೈರ್ಯ, ಅನುಭವ, ಛಾತಿ, ಪಕ್ವತೆ – ಎಲ್ಲವೂ ಇರಬೇಕು. ಆದರೆ ಈ ಪರಿಪಕ್ವತೆಯೆನ್ನುವುದು ಮಣ್ಣುಹೆಂಟೆಗೆ ಹುಟ್ಟಿನಿಂದ ಬಂದ ಸರಕಲ್ಲವಲ್ಲ ? ಅದನ್ನು ಹಂತಹಂತವಾಗಿ ಕಲಿಸಿಕೊಡುವುದೆ ಜೀವನಾನುಭವ. ಅದಿರದ ಜೀವಿಯ ತನುಮನಗಳು ಮರದ ಹಾಗೆ. ಹೊರಗಿನ ತೊಗಟೆ ಒಣಗಿ ಪಕ್ವವಿದ್ದಂತೆ ಕಂಡರೂ, ಆ ಕವಚದಡಿಯಲ್ಲಿ ಒಳಗೆಲ್ಲ ಹಸಿಹಸಿ. ಹಸಿ ಮರಕ್ಕೆ ಬೆಂಕಿ ಹಚ್ಚಿದರೆ ಒಣಪುಳ್ಳೆಯ ಹಾಗೆ ಚಟಪಟನೆ ಉರಿಯುವುದು ಸಾಧ್ಯವೆ? ಆ ಅಪಕ್ವತೆಯ ‘ಹಸಿತನ’ ಬೆಂಕಿಯಾಗುರಿಯಬೇಕಾದರೆ ನೋವಿನ ಅನುಭವ ಅನುಭವಿಸಲೇಬೇಕು – ಹೊಗೆಯಾಗುವ ರೂಪದಲ್ಲಿ. ಆ ಹೊಗೆ ಸ್ವಯಂ ತನ್ನನ್ನು ಕಾಡುವಷ್ಟೆ ಸಹಜವಾಗಿ ಇತರರನ್ನು ಕಾಡುತ್ತದೆನ್ನುವುದು ಮತ್ತೊಂದು ವಿಪರ್ಯಾಸ. ಆ ಪ್ರಕ್ರಿಯೆಯಲ್ಲೆ ನೋವಿನ ಮೂಲಕ ಪಕ್ವತೆಯಾಗರಳುವ ರೂಪಾಂತರ ಸಹ. ಇಡಿ ಬದುಕಿನ ಪೂರ್ತಿ ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆ – ಸುಖದುಃಖಗಳೆಂಬ ನಿರಂತರ ತಾಡನಗಳೊಡನೆ ಸೆಣೆಸುತ್ತ. ನೈಜ ಸ್ಥಿತಿಯಿದಾಗಿರುವಾಗ ವಿಷವಾದರೇನು, ಅಮೃತವಾದರೇನು? ಸಿಹಿಯಾದರೇನು, ಕಹಿಯಾದರೇನು? – ಎಂದು ಎಲ್ಲವನ್ನು ಒಂದೆ ರೀತಿಯಲ್ಲಿ ಸ್ವೀಕರಿಸುತ್ತ, ಪ್ರತಿಯೊಂದನ್ನು ಪರಿಪಕ್ವತೆಯ ಹಾದಿಗೊದಗಿದ ಪೂರಕ ಸರಕೆಂದು ಅನುಭಾವಿಸುತ್ತ ಬದುಕಿನ ಸಾರ್ಥಕತೆಯತ್ತ ಹೆಜ್ಜೆಯಿಡಬೇಕು – ಬರಿಯ ಮಣ್ಣಿನ ಹೆಂಟೆಯಾಗಿಯೆ ಉಳಿದುಬಿಡದೆ, ಎನ್ನುತ್ತಾನೆ ಮಂಕುತಿಮ್ಮ.

00396. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೮


00396. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೮
___________________________________

ನದಿಯ ತೆರೆಯವೊಲುರುಳಿ ಹೊರಳುತಿರುವುದು ಜೀವ |
ಮೊದಲಿಲ್ಲ ಮುಗಿವಿಲ್ಲ ನಿಲುವಿಲ್ಲವದಕೆ ||
ಬದುಕೇನು ಸಾವೇನು ಸೊದೆಯೇನು ವಿಷವೇನು ? |
ಉದಕಬುದ್ಬುದವೆಲ್ಲ ! – ಮಂಕುತಿಮ್ಮ ||

ನದಿಯ ತೆರೆಯೆನ್ನುವುದು ಅದರ ಸೆರಗಿನಂಚಿನ ಕುಸುರಿಯೆ ಆದರು ಅದನ್ನು ನಿಯಂತ್ರಿಸುವ ಹಿನ್ನಲೆ ಶಕ್ತಿ ಅದರ ಸ್ವಂತದ್ದಲ್ಲ. ನದಿಯ ಅಂತರಾಳ ಮತ್ತು ಬಾಹ್ಯಗಳ ಏನೆಲ್ಲ ಪ್ರಕ್ರಿಯೆಗಳ ನಿರಂತರ ತಿಕ್ಕಾಟ ಪಡೆಯುವೊಂದು ಪ್ರಕಟ ರೂಪಾಗಿ ತೆರೆಗಳ ಅಸ್ತಿತ್ವ. ಆ ತಿಕ್ಕಾಟದ ನಿರಂತರ ಪ್ರಕ್ರಿಯೆಯನ್ನು ಪ್ರತಿಬಿಂಬಿಸುವಂತೆ ತೆರೆ ತೆರೆಗಳಾಗಿ ಮೂಡಿ ಬಂದು ತನ್ನನ್ನೆ ಮರುಕಳಿಸಿಕೊಳ್ಳುತ್ತಿರುತ್ತದೆ ದಡದತ್ತ – ನದಿ ತನ್ನೆಲ್ಲ ಒತ್ತಡಗಳನ್ನು ತೆರೆಯ ರೂಪದಲ್ಲಿ ಬಿಡುಗಡೆಯಾಗಿಸಿ ತಾನು ನಿರಾಳವಾಗುತ್ತಿದೆಯೇನೊ ಅನ್ನುವಂತೆ. ಈ ಬದುಕೆಂಬ ಮಹಾನದಿಯಲ್ಲಿ ಹೋರಾಡುತ್ತಿರುವ ನಾವುಗಳು ಆ ಬಾಳುವೆಯೊಡ್ಡುವ ಕಷ್ಟಸುಖಗಳ ತೆರೆಗೆ ಸಿಕ್ಕಿಬಿದ್ದ ಜೀವಿಗಳೆ. ಅದರಡಿಯಲಿ ಸಿಕ್ಕಿ ಅದು ದೂಡಿಸಿದಂತೆ, ಅಡ್ಡಾಡಿಸಿದಂತೆ, ಬಳಸಾಡಿಸಿದಂತೆ ಆಡುತ್ತ ಅದರೊಟ್ಟಿಗೆ ಎತ್ತಲೊ ಸಾಗುತ್ತೇವೆ. ಅದರ ನಡುವೆ ಸಿಕ್ಕಿ ಬಿದ್ದ ಮೇಲೆ ಆ ಹೊರಳಾಟದಿಂದ ತಪ್ಪಿಸಿಕೊಳ್ಳುವ ದಾರಿಯೆ ಇಲ್ಲ – ನಿಲ್ಲಲು ಬಿಡದೆ, ಮನಸೋ ಇಚ್ಛೆ ಸ್ವೇಚ್ಛೆಯಾಗಿರಲು ದಾರಿಕೊಡದೆ ಅತಂತ್ರತೆಯನ್ನೆ ನಿರಂತರವಾಗಿಸುವಂತೆ ಇರುವ ಅದರ ಧಾಳಿಗೆ ಆರಂಭ, ಅಂತ್ಯ, ಒಂದು ನಿಶ್ಚಿತ ನೆಲೆಯಾಗಲಿ ಇಲ್ಲ. ನಿರಂತರ ಹೊರಳಾಟ, ಹೊಯ್ದಾಟವೆ ಅದರ ಮೂಲಭೂತ ಗುಣಲಕ್ಷಣ.

ಇಂತಹ ಚಲನಶೀಲತೆಯ ನಿರಂತರತೆಯಲ್ಲಿ ಎಲ್ಲಾ ತರಹದ ಬದುಕಿನ ರಸಗಳ ಅನುಭವವೂ ಆಗಿಬಿಡುತ್ತದೆ – ಸುಖದ ಅನುಭೂತಿಯ ಹುಟ್ಟಾಗಲಿ, ಹರ್ಷವುಕ್ಕಿಸುವ ಅಮೃತ ಸಮಾನ ಅನುಭವಗಳಾಗಲಿ ಅಥವಾ ದುಃಖ, ವಿಷಾದ, ಖೇದಗಳನ್ನು ಬಡಿಸಿಕ್ಕುವ ಸಾವು ಮತ್ತು ಕಷ್ಟಕಾರ್ಪಣ್ಯಗಳ ವಿಷಕೂಪದ ತೊಳಲಾಟಗಳಾಗಲಿ ಎಲ್ಲವು ಅದರ ಮೂಸೆಯಿಂದೆದ್ದು ಬಂದ ಸರಕುಗಳೆ. ಎಲ್ಲವು ಆ ತೆರೆಯಡಿಯಲ್ಲಿ ವಿವಿಧಾಕಾರ ತೊಟ್ಟುಬಂದ ವೇಷಗಳೆ. ಅದರಿಂದಲೆ ಅವುಗಳ ಸ್ವರೂಪವೂ ತೆರೆಗಳ ಮೂಲ ಸ್ವರೂಪಕ್ಕಿಂತ ಭಿನ್ನವಿರಲು ಸಾಧ್ಯವಿಲ್ಲ. ಆ ತೆರೆಗಳಾಗಿದ್ದು ಮೂಲತಃ ನೀರಿನಿಂದ ; ಮತ್ತದರ ಚಲನೆಯ ಒತ್ತಡಗಳುಂಟು ಮಾಡುವ ಫಲಿತವೆ ಕುದಿದೆದ್ದು ಮರೆಯಾಗುವ ನೀರ್ಗುಳ್ಳೆಗಳ ಸಮೂಹ. ಈ ಕಷ್ಟ ಸುಖಗಳೆಂಬ ನೀರಿನ ಗುಳ್ಳೆಗಳು ಎಷ್ಟೇ ವೇಗದ ತೆರೆಯ ಮೇಲೆ ಕುಳಿತುಕೊಂಡು ಬಂದಪ್ಪಳಿಸಿದರು, ನೀರಿನ ಶಾಶ್ವತ ಅಸ್ತಿತ್ವವಿರದ ಆ ಗುಳ್ಳೆ ನಿರಂತರವಾಗಿರಲು ಆಗದೆ ತಂತಾನೆ ಕ್ಷಯವಾಗಿ ಹೋಗುತ್ತದೆ, ತನ್ನ ಮೂಲಭೂತ ಅಸ್ತಿರ ಗುಣದಿಂದಾಗಿ. ಅದರ ಅನುಭವವಾದ ಜೀವಕ್ಕೆ ಕಷ್ಟ ಸುಖಗಳೆಂಬ ಗುಳ್ಳೆಯನ್ನೆದುರಿಸುವ ಪಕ್ವತೆ, ಮನೋಸ್ಥೈರ್ಯ ಬರುವುದೇ ಅದೆಲ್ಲ ಶಾಶ್ವತವಲ್ಲ ಎಂಬ ತಿಳುವಳಿಕೆಯಿಂದ. ಅದನ್ನರಿತು ನಿರ್ಲಿಪ್ತನಾಗಿರೊ ಎನ್ನುವ ಪರಿಪಕ್ವ ಕವಿಮನ ಇಲ್ಲಿ ಕಾಣಿಸಿಕೊಂಡಿದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ – ಅನುಭವದ ಮೂಸೆಯಲ್ಲಿ ಮೂಡಿದ ಅಗಾಧ ಜೀವನದ ಸರಳ ಸತ್ಯದ ಅರಿವು. ಒಂದಲ್ಲ ಒಂದರಡಿ ಸಿಕ್ಕಿ ಹೊರಳಾಡುತ್ತ ನಡೆಯುವುದೆ ಜೀವನ. ಅದನ್ನೊಂದು ನಿಶ್ಚಿತ ದಡ ಮುಟ್ಟಿಸಿ ಆ ಸ್ಥಿತಿಯನ್ನೆ ನಿಶ್ಚಲ ನಿರಂತರವಾಗಿಸಿ ನೆಮ್ಮದಿಯಾಗಿರುವಂತಹ ಸ್ಥಿತಿ ಬಹುಶಃ ಎಂದಿಗೂ ಸಾಧ್ಯವಾಗುವುದಿಲ್ಲ. ಸುಖದಷ್ಟೆ ಸಹಜವಾಗಿ ದುಃಖ, ಒಂದರ ಜತೆಗೊಂದು ತೆರೆಗಳಾಗಿ ಜೀವನ ನೌಕೆಯನ್ನು ಸ್ಪರ್ಷಿಸಿ ಅದರ ದಿಕ್ಕುದೆಸೆಗಳನ್ನು ಸ್ಥಳಾಂತರಿಸಲೆತ್ನಿಸಿ ಹೋಗುತ್ತಲೆ ಇರುತ್ತದೆ. ಅದನ್ನು ನುರಿತ ನಾವಿಕನಂತೆ ನಿಭಾಯಿಸಿಕೊಂಡು, ಅದರ ಕ್ಷಣಿಕತೆಯನ್ನು ಅರ್ಥಮಾಡಿಕೊಂಡು ಮುನ್ನಡೆಯುತ್ತಿರಬೇಕು. ಜೀವನದಂತೆ ಈ ಜೀವವೂ ಕ್ಷಣಿಕವಾದದ್ದೆ – ನೀರಿನ ಗುಳ್ಳೆಯಂತೆ. ಅದನ್ನು ಒದ್ದಾಡಿಸಿ, ತೊಳಲಾಡಿಸಲೆಂದೆ ಮೋಹ, ಮದ, ಮತ್ಸರ, ಮಾತ್ಸರ್ಯಾದಿ ರಾಗದ್ವೇಷಗಳ ಮಾಯಾಗುಳ್ಳೆಗಳು ಮನದ ನದಿಯಲ್ಲಿ ತೆರೆಯ ರೂಪದಲ್ಲಿ ಬಂದು ಕಾಡುತ್ತಲೆ ಇರುತ್ತವೆ. ಅದರ ನೈಜ ರೂಪವರಿತು ನಿಭಾಯಿಸಿ ಗೆಲಬಲ್ಲವನೆ ಬದುಕಿನ ಚಂಚಲತೆಯಲ್ಲೂ ನೆಮ್ಮದಿ, ಸಮಾಧಾನ, ಸಾರ್ಥಕತೆಯನ್ನು ಕಂಡುಕೊಳ್ಳುವನು. ಇವೆಲ್ಲ ಜೀವನ ಗಹನತೆಯನ್ನು ಸೊಗಸಾಗಿ ಹಿಡಿದಿಟ್ಟಿವೆ ಈ ಸಾಲುಗಳು ಸರಳ ಹೋಲಿಕೆಯ ಅಂತರಾಳದಲ್ಲಿ – ವಿವರಣೆಯನ್ನು ವಿಸ್ತರಿಸುತ್ತ ಹೋದಷ್ಟು ಜೀವನದೆಲ್ಲ ಮಜಲುಗಳಿಗು ಅನ್ವಯವಾಗುವ ವಿಶ್ವರೂಪವನ್ನು ತೋರಿಸುತ್ತ – ಪ್ರಾಯಶಃ ಆ ನದಿಯ ತೆರೆಗಳ ಹಾಗೆಯೆ!

00395. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೭


00395. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೭
___________________________________

ತಳಮಳವಿದೇನಿಳೆಗೆ ? ದೇವದನುಜರ್ ಮಥಿಸೆ |
ಜಳನಿಧಿಯೊಳಾದಂತೆ ಸುಧೆಗೆ ಪೀಠಿಕೆಯೇಂ ? ||
ಹಾಳಾಹಳವ ಕುಡಿವ ಗಿರೀಶನಿದ್ದಿರ್ದೊಡೀ |
ಕಳವಳವದೇತಕೆಲೊ ? – ಮಂಕುತಿಮ್ಮ ||

ಕವಿ ಭುವಿಯ ಮೇಲಿನ ಜೀವನದಲ್ಲಿ ತನ್ನ ಸುತ್ತಲು ಕಾಣುವ ಹೋಯ್ದಾಟ, ಗೊಂದಲ, ಅನಿರೀಕ್ಷಿತತೆಯಾದಿಗಳೆಲ್ಲ ಸಂಗಮಿಸಿಕೊಂಡು ತಳಮಳದ ರೂಪಾಗಿ ಪ್ರಕಟವಾಗುವ ಪರಿಗೆ ಬೆರಗಾಗಿ ಕೇಳುವ ಮಾತುಗಳಿವು. ಪುರಾತನ ಪುರಾಣಕಾಲದಿಂದಲು ಏನಾದರು ಒಳಿತು ಘಟಿಸುವ ಮುನ್ನ ಅದರ ಹಿನ್ನೆಲೆಯಲ್ಲೇನೊ ವಿಪರೀತದ ಅವಘಡ ಮುನ್ನುಡಿಯಾಗಿ ಬರುವುದು ಸಹಜವಾಗಿ ಕಾಣುವ ಪ್ರಕ್ರಿಯೆ. ಅದಕ್ಕೊಂದು ದೊಡ್ಡ ಉದಾಹರಣೆಯೆಂದರೆ ದೇವ ದಾನವರು ಒಟ್ಟಾಗಿ ನಡೆಸಿದ ಸಮುದ್ರ ಮಥನ. ಈ ಮಥನದಲ್ಲಿ ಕೈಗೂಡಿಸಿದ ಸುರಾಸುರರಿಗೆ ಆ ಜಳ ನಿಧಿಯ ಮಥನದಲ್ಲಿ ಮೊದಲು ದರ್ಶನವಾಗಿದ್ದು ಹಾಲಾಹಲವೆಂಬ ವಿನಾಶಕಾರಿ ವಿಷವೆ ಹೊರತು ಅಮೃತ ಸುಧೆಯಲ್ಲ. ಅಂದರೆ ಅಮೃತವೊದಗುವ ಮುನ್ನದ ಪೀಠಿಕೆಯಾಗಿ ವಿಷವುದಿಸಿ ಬಂದಿತ್ತು ತನ್ನ ಕಠೋರಾತಿಕಠೋರ ರೂಪದಲ್ಲಿ. ಹೀಗೆಲ್ಲಾ ಸತ್ಫಲಿತದ ಮುನ್ನದ ಪೀಠಿಕೆಯಾಗಿ ಏನಾದರು ಘೋರ ಪರಿಣಾಮವಿರಬೇಕೆನ್ನುವುದೆ ಲೋಕದ ನಿಯಮವೆನ್ನುವುದಾದರೆ, ಈ ಇಳೆಯ ಮೇಲಿನ ಬದುಕಿನಲ್ಲಿ ಕಾಣುತ್ತಿರುವ ತಳಮಳವೂ ಕೂಡ ಅಂತಹುದ್ದೆ ಸತ್ಫಲಿತಕ್ಕೆ ಮುನ್ನ ಮುನ್ನುಡಿಯಾಗಿ ಬಂದಿರುವ ಪೀಠಿಕೆಯೆ? ಎಂದು ಕೇಳುತ್ತದೆ ಕವಿಮನ. ಆ ಹಾಲಹಲವೆದ್ದ ಹೊತ್ತಿನಲ್ಲಿ ಅದೆಲ್ಲರನ್ನು ಆಪೋಶಿಸಿ, ನುಂಗಿದರೆ ನುಂಗಲೆಂದೇನು ಕೈ ಬಿಟ್ಟು ಸುಮ್ಮನೆ ಕೂತನೇ ಆ ಪರಮೇಶ ? ಬದಲಿಗೆ ಹಿಂದೆ ಮುಂದೆ ಯೋಚಿಸದೆ ಆ ಭೀಕರವನ್ನು ಕುಡಿದು ಗಂಟಲಿಗಿಳಿಸಿಕೊಂಡು ಮಿಕ್ಕವರೆಲ್ಲರು ಅದರಿಂದ ಪಾರಾಗುವಂತೆ ಮಾಡಿದ್ದು ಮಾತ್ರವಲ್ಲದೆ, ಅವರು ನಿರಾಳವಾಗಿ ಕಡಲನ್ನು ಕಡೆಯುವುದನ್ನು ಮುಂದುವರೆಸುತ್ತ ಯಶಸ್ವಿಯಾಗಿ ಅಮೃತವನ್ನು ಸಂಪಾದಿಸಲು ಅನುವು ಮಾಡಿಕೊಟ್ಟನು. ಹೀಗೆ ವಿಷವನ್ನು ಕುಡಿದು ಸರ್ವರನ್ನು ರಕ್ಷಿಸಿದ ಗಿರೀಶನಿರುವಾಗ, ಲೋಕದ ತಳಮಳವನ್ನು ನೋಡಿ ಅವನು ಸುಮ್ಮನಿರುತ್ತಾನೆಯೆ ? ಸೂಕ್ತ ಸಮಯದಲ್ಲಿ ತಾನಾಗಿಯೆ ಬಂದು ರಕ್ಷಿಸದಿರುತ್ತಾನೆಯೆ? ಎಂದು ಸಮಾಧಾನಗೊಳ್ಳುವ ಕವಿ ಮನ ಇಲ್ಲಿ ಅನಾವರಣಗೊಂಡಿದೆ.

ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಹಿಂದಿನ ಕೆಲವು ಪದ್ಯಗಳಲ್ಲಿದ್ದ ಆತಂಕ, ತಳಮಳಗಳೆ ಇಲ್ಲಿನ ಮೂಲ ವಿಷಯವಾದರು ಅಲ್ಲೆಲ್ಲೂ ಕಾಣದ ಆಶಾವಾದದ ಚಿಗುರು ಇಲ್ಲಿ ಎದ್ದು ಕಾಣುತ್ತದೆ. ಎಷ್ಟೆ ತೊಳಲಾಟವಿದ್ದರು, ಬದುಕಿನ ಈ ಹೋರಾಟದಲ್ಲಿ ಅದು ಮುಂಬರುವ ಯಾವುದೊ ಒಳಿತಿಗೆ ಬರೆಯುತ್ತಿರುವ ಮುನ್ನುಡಿಯೆಂಬ ಭಾವದಲ್ಲಿ ನೋಡಿದರೆ ಅನುಭವಿಸುತ್ತಿರುವ ಕಷ್ಟಗಳೆಲ್ಲ ಕಷ್ಟಗಳೆಂದೆನಿಸದೆ, ಯಾವುದೊ ಅನಿವಾರ್ಯವಾದ ಪೂರ್ವಸಿದ್ದತೆಯಾಗಿ ಕಾಣಿಸಿಕೊಂಡುಬಿಡುತ್ತದೆ. ‘ಆಗುವುದೆಲ್ಲ ಒಳ್ಳೆಯದಕ್ಕೆ’ ಎನ್ನುವ ಗಾದೆ ಮಾತಿನಂತೆ ಆ ಹೊತ್ತಲ್ಲಿ ಅನುಭವಿಸುತ್ತಿರುವ ತಳಮಳಕ್ಕೆ ಕಾರಣವಾದ ಕಷ್ಟ-ಕಾರ್ಪಣ್ಯಗಳೂ ಕೂಡ ಸಹನೀಯವಾಗಿ, ಅವನ್ನೆದುರಿಸಿ ಬದುಕುವ ಸ್ಥೈರ್ಯ, ಧೈರ್ಯ ತುಂಬುತ್ತವೆ. ಮುಂದೆ ನಿಜಕ್ಕು ಒಳಿತಾಯಿತೊ ಇಲ್ಲವೊ ಎನ್ನುವುದಕ್ಕಿಂತ , ಅದಾಗಬಹುದೆನ್ನುವ ಭಾವನೆ ಮನಸನ್ನು ಹಗುರಾಗಿಸಿ ಪ್ರಸ್ತುತದ ದುಸ್ತಿತಿಯನ್ನೆದುರಿಸುವಲ್ಲಿ ಮನಸ್ಥೈರ್ಯವನ್ನಿತ್ತು ಮುನ್ನಡೆಸುತ್ತದೆ. ಹೀಗಾಗಿ ಇದೊಂದು ಆಶಾವಾದವನ್ನು ತುಂಬುವ, ಪ್ರತಿಬಿಂಬಿಸುವ ಪದ್ಯವಾಗಿಬಿಡುತ್ತದೆ. ಇಲ್ಲೂ ಕವಿ ಬಳಸುವ ಸಮುದ್ರಮಥನದ ಹೋಲಿಕೆ ಅಪಾರ ಪ್ರಾಮುಖ್ಯತೆಯುಳ್ಳದ್ದಾಗಿಬಿಡುತ್ತದೆ. ಯಾಕೆಂದರೆ, ನಮ್ಮ ಸಂಸ್ಕೃತಿಯಲ್ಲಿ ಪಾಮರನಿರಲಿ, ಪಂಡಿತನಿರಲಿ – ಸಮುದ್ರ ಮಥನ ಕಥನವನ್ನು ಯಾವುದಾದರೊಂದು ಬಗೆಯಲ್ಲಿ ಅಷ್ಟಿಷ್ಟಾದರೂ ಅರಿಯದವನಾದರೂ ಯಾರು ? ಅದರಿಂದಲೆ ಎಲ್ಲರಿಗು ಆಪ್ಯಾಯವಾಗುವ ಸಾಲುಗಳಾಗಿ ಬಿಡುತ್ತವೆ ರಂಜನೆ ಮತ್ತು ಮಹತ್ವದ ಎರಡು ಬಗೆಯ ದೃಷ್ಟಿಯಿಂದಲೂ.

00393. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೬


00393. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೬
______________________________

ಇಳೆಯಬಿಟ್ಟಿನ್ನುಮೆತ್ತಲುಮೈದದ ಪ್ರೇತ |
ವಲೆವಂತೆ ಲೋಕ ತಲ್ಲಣಿಸುತಿಹುದಿಂದು ||
ಹಳೆಧರ್ಮ ಸತ್ತಿಹುದು ಹೊಸಧರ್ಮ ಹುಟ್ಟಿಲ್ಲ |
ತಳಮಳಕೆ ಕಡೆಯೆಂದೊ? – ಮಂಕುತಿಮ್ಮ ||

ಇಹ ಜೀವನದಲ್ಲಿ ದೇಹವೊಂದರೊಳಗಿನ ಜೀವವಾಗಿರುವ ತನಕ ಈ ಭೂಮಿಯಮೇಲೆ ಹೇಗೊ ಬದುಕಿರಲಿಂದು ಲೌಕಿಕ ರಹದಾರಿಯಾದರು ಇರುತ್ತದೆ. ಅಂತಹ ಜೀವಾತ್ಮ ದೇಹ ಸಾವಿಗೀಡಾದಂತೆ, ಅದನ್ನು ತ್ಯಜಿಸಿ ಒಂದೊ ಮೇಲಿನದಾವುದೊ ಲೋಕಕ್ಕೆ ತೆರಳಬೇಕು, ಇಲ್ಲವೆ ಮತ್ತೊಂದಾವುದೊ ದೇಹದಲ್ಲಿ ಜಾಗ ಹುಡುಕಿಕೊಂಡು ಹೊಸ ಜೀವನವನ್ನಾರಂಭಿಸಬೇಕು. ಇವೆರಡು ಆಗದ ಸ್ಥಿತಿಯಲ್ಲಿರುವ ಆತ್ಮಗಳ ಗೋಳಾಟದ ಕಥೆಯೆ ಹೇಳಲಾಗದ ದಾರುಣತೆ. ಆ ತ್ರಿಶಂಕು ಸ್ಥಿತಿಗೆ ಸಿಕ್ಕಿ ತಲ್ಲಣಿಸಿ ಒದ್ದಾಡುವ ಪ್ರೇತದ ಸ್ಥಿತಿ ಯಾವ ದೇವರಿಗೆ ತಾನೆ ಪ್ರೀತಿ ? ಇಳೆಯಲ್ಲಿರುವಂತಿಲ್ಲ, ಬಿಟ್ಟೆಲ್ಲೂ ಹೋಗುವ ತಾಣವೂ ಗೊತ್ತಿಲ್ಲದ ಅತಂತ್ರ ಪರಿಸ್ಥಿತಿಯಲ್ಲಿ ದಿಕ್ಕೆಟ್ಟು ಅಲೆಯುವುದೆ ‘ಹಣೆಬರಹ’ವಾಗಿಬಿಡುತ್ತದೆ. ಅದೇ ಮನಸ್ಥಿತಿಯಲ್ಲಿ ತಲ್ಲಣಿಸಿ ಕಂಗೆಟ್ಟಿರುವ ಲೋಕದ ಪರಿಸ್ಥಿತಿಗೆ ಮಮ್ಮಲ ಮರುಗುವ ಪರಿ ಈ ಸಾಲುಗಳಲ್ಲಿ ವರ್ಣಿತವಾಗಿದೆ. ಈ ಲೋಕದ ತಲ್ಲಣವಾದರೂ ಯಾಕಾಗಿ? ಕವಿ ಕಾಣುವಂತೆ ಹಳೆಯ ಧರ್ಮ ಸತ್ತುಹೋಗಿದೆ, ದೇಹ ಬಿಟ್ಟ ಆತ್ಮದಂತೆ. ಆದರೆ ಅದರ ಬದಲಿನ ಹೊಸಧರ್ಮ ಹುಟ್ಟಿಲ್ಲವಾಗಿ ಏನು ಮಾಡಬೇಕೆಂದರಿವಾಗದೆ ಅಡ್ಡಾಡುವ ಪ್ರೇತದಂತೆ ತಲ್ಲಣಿಸಿಹೋಗಿದೆ ಈ ಲೋಕ. ಸತ್ತುಹೋದ ಹಳತಿಗೆ ಮತ್ತೆ ಮುಖ ತೋರುವಂತಿಲ್ಲ; ಹೊಸತನ್ನಾಶ್ರಯಿಸೋಣವೆಂದರೆ ಅದಿನ್ನು ಹುಟ್ಟೆ ಇಲ್ಲ. ಇತ್ತ ಹಳೆ ಧರ್ಮವನ್ನು ಮುಂದುವರಿಸಲೂ ಆಗದು, ಹೊಸ ಮನೋಧರ್ಮವನ್ನು ಅಳವಡಿಸಿಕೊಳಲು ಆಗದು. ಅಂತಹ ಅತಂತ್ರಕ್ಕೆ ಸಿಕ್ಕಿ ತಲ್ಲಣಿಸಿ ನರಳುವ ಪಾಡು ಈ ಲೋಕದ್ದಾಗಿ ಹೋಗಿದೆ. ಈ ತಳಮಳ ಎಂದಾದರು ಕೊನೆಯಾಗಲುಂಟೆ ಅಥವ ಇದು ಜೀವಮಾನ ಪೂರ್ತಿ ನಿರಂತರವೆ ? ಎಂದು ಸಂಕಟಪಡುವ ಕವಿಮನದ ಜಿಜ್ಞಾಸೆ ಈ ಪದ್ಯದ ಭಾವ.

ಇಲ್ಲಿ ಧರ್ಮ ಎನ್ನುವುದನ್ನು ಬರಿಯ ಪದದ ನೈಜ ಮೂಲಾರ್ಥಕ್ಕೆ ಮಾತ್ರ ಸೀಮಿತಗೊಳಿಸದೆ ಧರ್ಮ, ಸಂಸ್ಖೃತಿ, ಆಚಾರ, ವಿಚಾರ, ನಡೆ, ನುಡಿ, ಜೀವನ ಶೈಲಿ, ಮನೋಭಾವ, ಮನೋಧರ್ಮಗಳನ್ನೆಲ್ಲ ಒಗ್ಗೂಡಿಸಿದ ಸಮಷ್ಟಿತ ಭಾವದಲ್ಲಿ ನೋಡಬೇಕು. ಆಗಷ್ಟೆ ಈ ಪದ್ಯದ ಗಹನತೆ ಮತ್ತು ವಿಶಾಲ ವ್ಯಾಪ್ತಿಯ ಆಳಗಲ ನಿಲುಕಿಗೆ ಸಿಗುವುದು. ಈಗಿನ ಪೀಳಿಗೆಗಳಲ್ಲಿರುವ ಗೊಂದಲ, ಗುರಿ-ಗಮ್ಯ ಗೊತ್ತಿರದ ಬದುಕಿನ ರೀತಿ, ಯಾಂತ್ರಿಕವಾಗಿ ಏನೊ ಮಾಡಿಕೊಂಡು ಹೋಗುತ್ತಿರುವ ಅಸಹಾಯಕ ಭಾವ – ಇವೆಲ್ಲಕ್ಕು ಮೂಲ ಕಾರಣವನ್ನು ಇಲ್ಲಿ ವಿವರಿಸಿರುವುದನ್ನು ಕಾಣಬಹುದು. ಹಿಂದೆ ಮುಂದೆ ನೋಡದೆ ಹಳತ ಬಿಟ್ಟು ಹೊಸತನ್ನು ಅಳವಡಿಸಿಕೊಳಲು ಹೊರಟ ಲೋಕ ಹೊಸತರ ಸ್ವರೂಪದ ಸುಳಿವೆ ಕಾಣದೆ ಎಡವಿ ಬಿದ್ದುದನ್ನು ಸರಳವಾಗಿ ಆಡಿ ತೋರಿಸುವ ಚಮತ್ಕಾರ ಈ ಸಾಲುಗಳದು.

00392. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೫


00392. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೫
_______________________________

ಹಳೆಯ ಭಕ್ತಿ ಶ್ರದ್ಧೆಯಳಿಸಿಹೋಗಿವೆ ಮಾಸಿ |
ಸುಳಿದಿಲ್ಲವಾವ ಹೊಸ ದರ್ಶನದ ಹೊಳಪುಂ ||
ಪಳಗಿದ್ದ ಮನೆ ಬಿದ್ದ ಕುಂಟ ಕುರುಡನ ತೆರದಿ |
ತಳಮಳಿಸುತಿದೆ ಲೋಕ – ಮಂಕುತಿಮ್ಮ ||

ಪರಂಪರೆಯೆನ್ನುವುದು ಪೀಳಿಗೆಯಿಂದ ಪೀಳಿಗೆಗೆ ಹರಿದು ಬರಬೇಕಾದ ಅಮೃತ ರಸ – ಹಾಗೆ ಬರುವಾಗ ತನ್ನಂತಾನೆ ಹೊಸತಿಗೆ ಅಳವಡಿಸಿಕೊಳ್ಳುತ್ತ, ಹೊಂದಿಸಿಕೊಳ್ಳುತ್ತ, ‘ಹಳೆ ಬೇರು, ಹೊಸ ಚಿಗುರು’ ಎನ್ನುವ ಹಾಗೆ. ಆದರೆ ಈ ಕಲಿಯುಗದ ಮಹಿಮೆಯೊ, ಕಾಲಧರ್ಮದ ಪ್ರಭಾವವೊ – ಪೀಳಿಗೆ ಪೀಳಿಗೆಗೆ, ಸಂತತಿ ಸಂತತಿಗೆ ಆ ಹಳತಿನ ಕುರಿತಾದ ಗೌರವ, ಶ್ರದ್ಧೆ, ಆದರ, ಭಕ್ತಿಗಳು ಕುಗ್ಗುತ್ತಾ, ಮಾಸುತ್ತ ಅದರ ಬದಲು ಆಧುನಿಕತೆಯ ಅಂಧಾನುಕರಣೆ, ಹಳತಿನ ಅವಹೇಳನ ಮಾಡುವ ಮನೋಭಾವಗಳು ನೆಲೆಯೂರುತ್ತಿವೆ. ಅಪ್ಪ ಹಾಕಿದ ಆಲದ ಮರದಂತೆ ಹಳತಿಗೆ ಜೋತುಬಿದ್ದ ನಿಂತ ನೀರಾಗಬಾರದು ಎನ್ನುವುದು ನಿಜವಾದರೂ, ಹಳತೆಲ್ಲ ಹಿಂದೆ ಸರಿಯುತ್ತಿರಬೇಕಾದರೆ, ಅದರ ಮೀರಿಸುವ ಅಥವಾ ಕನಿಷ್ಠ ಅದರದೆ ಸಮಾನ ಬಲದ ಹೊಸ ದರ್ಶನ, ಸಿದ್ದಾಂತ, ತಿಳುವಳಿಕೆ, ಜ್ಞಾನದ ಆಸರೆಯೀವ ಹೊಸತೊಂದರ ಸಹಚರ್ಯೆಯಿರಬೇಕಲ್ಲವೆ? ಹೊಸತಿನ ಸಿದ್ದಾಂತದ ಮಾರ್ಗದರ್ಶನದ ಸುಳಿವೆ ಕಾಣುತ್ತಿಲ್ಲವಾದರೂ, ಹಳತನ್ನೆಲ್ಲ ಒದರೆಸೆದುಬಿಟ್ಟು , ಹೊಸತರಂತೆ ಕಾಣುವ ಯಾವಾವುದೊ ದಾರಿಯತ್ತ ಹಿಂದೆ ಮುಂದೆ ನೋಡದೆ ಮುನ್ನುಗ್ಗುವುದು ಸರಿಯೆ ? ಎನ್ನುವ ಪ್ರಶ್ನೆ ಕವಿಯದು. ಅಚ್ಚರಿಯೆಂದರೆ ಈ ರೀತಿಯ ಮಾನಸಿಕ ತಳಮಳ ಈಗಲೂ ನಮ್ಮ ಮನಗಳಲ್ಲಿ ಜೀವಂತವಾಗಿರುವ ಪರಿ ನೋಡಿದರೆ, ಈ ರೀತಿಯ ಹಳತು – ಹೊಸತರ ತಿಕ್ಕಾಟದ ಸದ್ದು ಪೀಳಿಗೆಗಳಾಚೆಗೂ ಸದಾ ನಿರಂತರವಾಗಿ ಹರಿಯುವ ಅಂತರಗಂಗೆಯೇನೊ ಎನಿಸದಿರದು. ಆದರೆ ಈ ಪರಿಸ್ಥಿತಿಗೆ ಸಿಕ್ಕಿಬಿದ್ದ ಮನಗಳ ಸ್ಥಿತಿಯಾದರೂ ಎಂತದ್ದೆನ್ನುವುದನ್ನು ಕವಿ ಎಷ್ಟು ಸೊಗಸಾಗಿ ಕುಂಟ ಕುರುಡನ ಪ್ರತಿಮೆಯಲ್ಲಿ ಹಿಡಿದಿಡುತ್ತಾರೆ ನೋಡಿ? ಹಳತಿನ ಆರಾಮವೆನಿಸಿದ್ದ ಪರಿಸರ ಹೇಗಿತ್ತೆಂದರೆ ಕುಂಟಾ, ಕುರುಡ ಎನಿಸಿಕೊಂಡವರೂ ಸಹ ಯಾವುದೆ ತೊಡಕಿಲ್ಲದೆ ಸರಾಗವಾಗಿ ಅಡ್ಡಾಡಿಕೊಂಡು ಮನೆಯಲ್ಲಿರುವಷ್ಟು. ಆದರೆ ಅಲ್ಲಿ ಪಳಗಿದ್ದ, ಅದರಲ್ಲಿ ಹೇಗೊ ಸಮತೋಲನ ಕಂಡುಕೊಂಡು ಜೀವಿಸಿಕೊಂಡಿದ್ದ ಕುಂಟ, ಕುರುಡರು ಹೊಸತಿನ ಆಘಾತಕ್ಕೆ ಸಿಕ್ಕಿ ತತ್ತರಿಸಿ ಹೋಗುತ್ತಿದ್ದಾರೆ ದಿಕ್ಕು ದೆಸೆ ಕಾಣದಂತೆ – ಹೊಂದಿಕೊಳ್ಳಲಾಗದ, ನಿಭಾಯಿಸಿಕೊಳ್ಳುವುದು ಹೇಗೆಂದು ಗೊತ್ತಿರದ ಹೊಸ ಮನೆಯಲ್ಲಿ. ಈ ಜಗದ, ಲೋಕದ ಜನರ ಸ್ಥಿತಿಯೇನೂ ಕಡಿಮೆಯಿಲ್ಲ ‘ ಅತ್ತಲೂ ಇರುವಂತಿಲ್ಲ, ಇತ್ತಲು ಇರುವಂತಿಲ್ಲ’ ಎಂಬ ‘ಅತ್ತ ದರಿ, ಇತ್ತ ಪುಲಿ’ ಗೊಂದಲದಲ್ಲಿ ಸಿಕ್ಕಿ ಆ ಕುಂಟರು, ಕುರುಡರ ಹಾಗೆಯೆ ತಳಮಳಿಸುತ್ತಿದ್ದರೆ ಎನ್ನುತ್ತಾನೆ ಮಂಕುತಿಮ್ಮ.

ನಿಗದಿಯಾದ ಪೂರ್ವ ಯೋಜನೆಯಿರದೆ, ಸರಿಯಾದ ದಿಕ್ಕು ದೆಸೆಯನ್ನರಿಯದೆ ಗೊತ್ತು ಗುರಿಯಿರದ ಎತ್ತಲೊ ನಡೆದಂತಿರುವ ಜಗವನ್ನು ಕಂಡು ಕಳವಳದಿಂದ ಹೇಳುತ್ತಿರುವ ಮಾತೆನ್ನುವ ಭಾವ ಒಂದೆಡೆ ಮೊಳಗಿದರೆ, ಹಾಗೆ ನಡೆದಿರುವ ಹಾದಿಗೆ ಇರಬೇಕಾದ ತೀರಾ ಸಾಮಾನ್ಯ ಜ್ಞಾನವೂ ಇರದ ವಿಷಾದ, ಖೇದವೂ ಅಲ್ಲಿ ಮನೆ ಮಾಡಿಕೊಂಡಿದೆ. ಒಂದೆಡೆ ಬಿದ್ದುಹೋಗುತ್ತಿರುವ ಹಳತಿನ ಮೌಲ್ಯವನ್ನು ಅರಿಯದ ಮೂಡರೆಂಬ ಸಂಕಟ ಕಾಡುತ್ತಿದ್ದರೆ, ಮತ್ತೊಂದೆಡೆ ಅದನ್ನು ದೂರ ತಳ್ಳುವ ಅವಸರದಲ್ಲಿ ಅಪ್ಪಿಕೊಳ್ಳುತ್ತಿರುವ ಹೊಸತಿನಲ್ಲಿ ಎಳ್ಳಿಗಿಂತ ಹೆಚ್ಚು ಜೊಳ್ಳೆ ಇದೆಯಲ್ಲಾ ಎನ್ನುವ ನೋವು ಕಾಣಿಸಿಕೊಳ್ಳುತ್ತದೆ ಕವಿ ಭಾವದಲ್ಲಿ. ಹಳತು ಸರಿಯಿಲ್ಲವೆಂಬ ನೈಜ ಕಾರಣಕ್ಕೆ ಹೀಗಾಗಿದ್ದರೆ ಅಷ್ಟೊಂದು ಬೇಸರವಿರುತ್ತಿರಲಿಲ್ಲವೇನೊ – ಆದರಿಲ್ಲಿ ಹಳತನ್ನರಿಯದೆಯೆ ಅದರ ಮೌಲ್ಯಮಾಪನ ಮಾಡದೆಯೆ ತಿರಸ್ಕರ, ಅಸಡ್ಡೆಯಿಂದ ಹೊಸತರತ್ತ ಮುಖ ಮಾಡಿಕೊಂಡು ಹೋದರು, ಅಲ್ಲಿ ಇದ್ದಕ್ಕಿಂತ ಉತ್ತಮವಾದದ್ದೇನಾದರೂ ಇರುವುದೆ ಎಂದು ತಾಳೆ ನೋಡಲು ಆಗದಷ್ಟು ಗೊಂದಲವಿರುವೆಡೆ ಕುರುಡು ಹೆಜ್ಜೆ ಹಾಕಬೇಕಾದ ಅನಿವಾರ್ಯಕ್ಕೆ ತಳಮಳಿಸುವ ಕವಿಭಾವ ಇಲ್ಲಿ ಅನನ್ಯ ರೂಪದಲ್ಲಿ ಪ್ರಕಟವಾಗುತ್ತದೆ, ಲೋಕದ ಕಳವಳದಂತೆಯೆ.

00391. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೪


00391. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೪
_________________________________

ಒಂದೆ ಗಗನವ ಕಾಣುತೊಂದೆ ನೆಲವನು ತುಳಿಯು |
ತೊಂದೆ ಧಾನ್ಯವನುಣ್ಣುತೊಂದೆ ನೀರ್ಗುಡಿದು ||
ಒಂದೆ ಗಾಳಿಯನುಸಿರ್ವ ನರ ಜಾತಿಯೊಳಗೆಂತು |
ಬಂದುದೀ ವೈಷಮ್ಯ ? – ಮಂಕುತಿಮ್ಮ ||

ಮಾನವರೆಲ್ಲರು ವಾಸಿಸುತ್ತಿರುವುದೊಂದೊ ಭೂಮಿಯ ಮೇಲೆ. ಅಂತಾಗಿ ಎಲ್ಲ ನೋಡುತ್ತಿರುವ ತಾಣ, ದಿಕ್ಕುಗಳು ಬೇರೆಬೇರೆಯಾದರೂ, ಎಲ್ಲರೂ ಕಾಣುತ್ತಿರುವುದು ಮಾತ್ರ ಒಂದೆ ಆಕಾಶ. ಹೆಜ್ಜೆಯಿಕ್ಕಿ ನಡೆದಾಡುವ ಅಸಂಖ್ಯಾತ ಹಾದಿಗಳಿದ್ದರು ಅದೆಲ್ಲವು ಒಂದೆ ಭೂಮಿಯ ಮಡಿಲಿಗಂಟಿದ ವಿಸ್ತೃತ ರೂಪಗಳಾದ ಕಾರಣ, ನಡೆವ ಉದ್ದೇಶದಿಂದ ತುಳಿಯುವ ನೆಲವೂ ಒಂದೆ ಆಗುತ್ತದೆ – ಭೂಮಿಯ ಯಾವುದೇ ಮೂಲೆಯಲ್ಲಿ ನೆಲೆಸಿದ್ದರು.

ಇನ್ನು ಅದೇ ನೆಲದಲ್ಲಿ ಬೆಳೆಯುವ ಧಾನ್ಯವಾದರೂ ಬೇರೆಯೆನ್ನಲಾದೀತೆ ? ಏನೆ ಬೆಳೆದುಂಡರೂ ಅದು ಬರುವುದು ಒಟ್ಟಾರೆ ಭುವಿಯ ಬಸಿರನ್ನೊಡೆದ ಹಸಿರಿನ ರೂಪಾಗಿಯೆ. ಆದರಲ್ಲೂ ಆಹಾರದ ಸರಪಳಿಯ ಕೊಂಡಿಯಿಡಿದು ಹೊರಟರೆ ಎಲ್ಲದರ ಆದಿ ಮೂಲವೂ ಒಂದೆ ಆಗಿಬಿಡುತ್ತದೆ.

ಇನ್ನು ಆಹಾರವೆ ಹಾಗೆಂದಮೇಲೆ ನೀರಿನ ವಿಷಯದಲ್ಲಂತೂ ಮಾತನಾಡುವಂತೆಯೆ ಇಲ್ಲ – ಎಲ್ಲರೂ ಕುಡಿವ ನೀರು ಆ ಭೂಮಿಯ ಮೂಲದಿಂದಲೆ ಬರಬೇಕು ತಾನು ಬರುವಾಗ ಬೆರೆತ ಲವಣಾದಿಗಳಿಂದ ಯಾವುದೆ ರುಚಿಯನ್ನು ಆರೋಪಿಸಿಕೊಂಡರು. ಕಡೆಗೆ ಮಳೆಯಾಗುವ ನೀರು ಕೂಡ ಇಲ್ಲಿಂದಲೆ ಆವಿಯಾಗಿ ಮೇಲೇರಿ, ಮೋಡವಾಗಿ ನುಲಿದು ಮತ್ತೆ ಮಳೆಯಾಗಿ ಇಳೆ ಸೇರಬೇಕು.

ಇನ್ನು ಎಲ್ಲರೂ ಉಸಿರಾಡುವ ಗಾಳಿ ? ಬೇರೆಲ್ಲದರ ವಿಷಯದಲ್ಲಿ ಸ್ವಲ್ಪ ತಾರತಮ್ಯ, ರೂಪ ಬೇಧಗಳನ್ನು ಕಾಣಬಹುದೊ ಏನೊ – ಆದರೆ ಗಾಳಿಯ ವಿಷಯದಲ್ಲಿ ಹಾಗೆನ್ನುವಂತೆಯೆ ಇಲ್ಲ, ಅದರಲ್ಲೂ ಪ್ರಾಣವಾಯುವಿನ ವಿಷಯದಲ್ಲಿ. ಎಲ್ಲೆ ಇದ್ದರೂ, ಎಲ್ಲರೂ ಕುಡಿಯುವುದು , ಉಸಿರಾಡುವುದು ಅದೊಂದೆ ಗಾಳಿಯ ರೂಪವನ್ನು. ಜತೆಗೇನೆ ಕಲ್ಮಷಗಳ ಮಿಶ್ರಣವನ್ನು ಒಳಗೆಳೆದುಕೊಳ್ಳಬೇಕಾಗಿ ಬಂದರು ಬದುಕಿನ , ಜೀವದ ಉಳಿವಿಗೆ ಪ್ರಾಣವಾಯುವಷ್ಟೆ ಸಚೇತಕ ಪ್ರತಿಯೊಬ್ಬನಲ್ಲು.

ಹೀಗೆ ಇಡೀ ನರ ಜಾತಿಯ ಮೂಲಭೂತ ವಿಶ್ಲೇಷಣೆಗಿಳಿದರೆ ಎಷ್ಟೊಂದು ಸಾಮ್ಯತೆಗಳು ಎದ್ದು ಕಾಣುತ್ತವೆ , ಅದರಲ್ಲು ಪ್ರತಿಯೊಬ್ಬರಲ್ಲು ಸಮಾನವಾಗಿರುವ ಸಾಮ್ಯತೆಗಳು. ಆದರೂ ರಾಗದ್ವೇಷ ಪ್ರೇರಿತವಾದ ಮಾನವ ಹೃದಯಗಳು ಪರಸ್ಪರರತ್ತ ವೈಷಮ್ಯ ಸಾಧಿಸುತ್ತ, ನಾನು ಬೇರೆ, ನೀನು ಬೇರೆ ಎಂದು ನೂರಾರು ಜಾತಿ, ಕುಲ, ಮತಗಳ ಹಂಗಿನಲ್ಲಿ ಹೊಟ್ಟೆಕಿಚ್ಚು, ಸ್ವಾರ್ಥಲಾಲಸೆಯ ಲೆಕ್ಕಾಚಾರಕ್ಕೆ ಸಿಕ್ಕಿ ನರಳುವುದೇಕೊ ? ಎನ್ನುವುದು ಮಂಕುತಿಮ್ಮನ ಸಂದೇಹ. ಎಲ್ಲರನ್ನು ಮಾಡಿದವನೊಬ್ಬನೆ, ಎಲ್ಲರ ವಾಸ, ಆಹಾರ, ದಾಹಾದಿಗಳ ಸ್ವರೂಪವು ಒಂದೆ. ಅಂದ ಮೇಲೆ ಕಾದಾಡದೆ ಒಗ್ಗಟ್ಟಾಗಿರಲೇನು ಅಡ್ಡಿ ? ಎನ್ನುವ ಕವಿ ಹೃದಯ ಅದೇ ಮನೋಭಾವದ ಎಲ್ಲರಿಗು ಸುಲಭದಲ್ಲಿ ಅರ್ಥವಾಗುತ್ತದೆ. ಇಲ್ಲಿನ ವೈಷಮ್ಯ ಭಾವ ಯಾವುದೆ ಎರಡು ನರರ ನಡುವೆ ಇರಬಹುದಾದ ಸಂಕೀರ್ಣವಾದರೂ, ಈ ಪದ್ಯಕ್ಕೆ ಆ ಕಾಲದಲ್ಲಿ ಮತ್ತು ಈಗಲೂ ಪ್ರಸ್ತುತವಿರುವ ನಮ್ಮ ಜಾತಿಮತ ಪದ್ದತಿಗಳೆ ಪ್ರಬಲ ಪೂರಕ ಹಿನ್ನಲೆಯಾಗಿದ್ದಿರಬೇಕು. ಆದರೆ ಆ ಹಿನ್ನಲೆಯಿರದೆಯೂ ಈಗಲೂ ಪ್ರಸ್ತುತವಾಗುತ್ತ, ಇಡೀ ಜಗತ್ತಿನ ನಿಲುಕಿನಲ್ಲಿ ಈಗಲೂ ಅನ್ವಯವಾಗುವ ಈ ಸಾಲುಗಳು ಅದರ ನಿರಂತರತೆಗೆ ಪ್ರತ್ಯಕ್ಷ ಸಾಕ್ಷಿ ಎನ್ನಬಹುದು.

00390. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೩


00390. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೩
_______________________________

ಪುರುಷ ಸ್ವತಂತ್ರತೆಯ ಪರಮ ಸಿದ್ದಿಯದೇನು ? |
ಧರಣಿಗನುದಿನದ ರಕ್ತಾಭಿಷೇಚನೆಯೆ? ||
ಕರವಾಲವನು ಪುಷ್ಪಸರವೆಂದು ಸೆಳೆದಾಡೆ |
ಪರಿಮಳವ ಸೂಸುವುದೆ? – ಮಂಕುತಿಮ್ಮ ||

ಸ್ವಾತಂತ್ರ ಮತ್ತು ಸ್ವೇಚ್ಛೆಯ ನಡುವಿನ ತೆಳುಗೆರೆ ಬಹಳ ಸೂಕ್ಷ್ಮವಾದದ್ದು. ಯಾವುದು ಎಲ್ಲಿ ಮುಗಿಯುತ್ತದೆ, ಮತ್ತೆಲ್ಲಿ ಆರಂಭವಾಗುತ್ತದೆ ಎಂದು ಗುರುತಿಸುವುದು ಸುಲಭವಲ್ಲ. ಸ್ವಾತಂತ್ರವಿರದಾಗ ಅದಕ್ಕೆ ಹಪಹಪಿಸುವ ಮನಕ್ಕೆ, ಅದು ಸಿಕ್ಕಿದಾಗ ರೆಕ್ಕೆ ಬಿಚ್ಚಿದ ಹಕ್ಕಿಯಷ್ಟೆ ಆನಂದಾನುಭೂತಿ ಲಭ್ಯ. ಅದಕ್ಕಾಗಿ ಹೊಡೆದಾಟ ನಡೆಸದೆ ಸುಲಲಿತವಾಗಿ ಕೈ ಸೇರಿದ ಸುಖವನ್ನನುಭವಿಸಿದವರಿಗೆ ಅದರ ಸ್ವಾನುಭವವಿರದಿದ್ದರು, ಅದರ ಮೌಲ್ಯದ ಅರಿವು, ಎಚ್ಚರಿಕೆಯಿರಬೇಕಾದ್ದು, ಸೂಕ್ಷ್ಮ ಗಡಿರೇಖೆಯ ಮಿತಿಯ ಪರಿಗಣನೆಯಿರಬೇಕಾದ್ದು ಮುಖ್ಯ. ಕವಿಯ ಸಾಮಾಜಿಕ ಪರಿಸರದಲ್ಲಿ ಪುರುಷ ಪ್ರಾಧಾನ್ಯತೆ ಸಾಮಾನ್ಯವಾಗಿದ್ದ ಕಾರಣ, ಅದು ಅವರಲ್ಲಿನ ಹೆಚ್ಚಿನ ಸ್ವಾತಂತ್ರವನ್ನು ಕೊಡಮಾಡುವ ಅಧಿಕಾರಯುತ ಶಕ್ತಿಯಾಗಿ ಬದಲಾಗುವುದು ಅಸಹಜ ಬೆಳವಣಿಗೆಯೇನಲ್ಲ. ಮೂಲತಃ ಪುರುಷಪ್ರಧಾನ ಪರಿಸರದಲ್ಲಿ ಅವರಿಗೆ ಸಿಗುವ ಸ್ವತಂತ್ರತೆಯು ಜವಾಬ್ದಾರಿಯಿಂದ, ಹೊಣೆಗಾರಿಕೆಯಿಂದ ಬಳಸಲ್ಪಡುವ ಅಧಿಕಾರವೊ, ಸಂಯಮಿತ ಸ್ವೇಚ್ಛೆಯೊ ಆಗಬೇಕೆ ಹೊರತು ದುರ್ಬಳಕೆಯ ಪರಿಕರವಾಗಬಾರದು. ಆದರೆ ಇತಿಹಾಸವನ್ನು ಆಳವಾಗಿ ಅವಲೋಕಿಸಿದರೆ ಕಾಣುವುದೇನು? ಸಿಕ್ಕ ಸ್ವಾತಂತ್ರವು ನೀಡುವ ಶಕ್ತಿಯನ್ನೆ ಮಿಕ್ಕೆಲ್ಲರನ್ನು ಕಡಿವಾಣ, ಹತೋಟಿ, ನಿಯಂತ್ರಣದಲ್ಲಿರಿಸುವ ಸಿದ್ದಿಯ ಸಮನಾರ್ಥಕವಾಗಿಸಿ, ಸ್ವೇಚ್ಛೆಯಿಂದ ಹಿಂದೆ ಮುಂದೆ ನೋಡದೆ ಸಿಕ್ಕಸಿಕ್ಕವರನ್ನೆಲ್ಲ ತರಿದು ಧರೆಗೊರಗಿಸುತ್ತ ರಕ್ತಾಭೀಷೇಕ ಮಾಡಿಕೊಂಡು ಹೋಗುವುದೇನು ದೊಡ್ಡ ಪುರುಷಾರ್ಥವೆ ? ಎಂದು ಕೇಳುತ್ತದೆ ಕವಿಮನಸು. ಹಾಗೆ ಮುನ್ನಡೆಯುವ ಅವಸರದಲ್ಲಿ ಅಗತ್ಯವಿರಲಿ, ಬಿಡಲಿ ಸಿಕ್ಕೆಡೆಯಲ್ಲೆಲ್ಲ ಕರವಾಳವನ್ನು (ಕತ್ತಿ), ಹೂವಿನ ಸರವೆತ್ತಿದಷ್ಟೆ ಸಲೀಸಾಗಿ ಸೆಳೆಯುತ್ತ ಹೋದರೆ, ಅದರಿಂದುಂಟಾಗುವ ದುಷ್ಕೃತ್ಯದ ಫಲಿತ ರಕ್ತ ಸುರಿಸುವುದಲ್ಲದೆ ಹೂವಿನ ಪರಿಮಳವನ್ನು ಹೊರಚೆಲ್ಲಲು ಸಾಧ್ಯವೆ ಎನ್ನುತ್ತಾನೆ ಮಂಕುತಿಮ್ಮ.

ಇಲ್ಲಿ ಮೇಲ್ನೋಟಕ್ಕೆ ಪುರುಷ ಶಕ್ತಿ, ಕತ್ತಿಯ ಯುದ್ಧ, ರಕ್ತಾಭಿಷೇಚನ ಇತ್ಯಾದಿಗಳ ಬಳಕೆಯಿಂದ ಯುಗಯುಗಗಳಿಂದ ನಡೆದು ಬಂದ ಕದನ, ಯುದ್ಧಗಳ ಕುರಿತಾಗಿ ಹೇಳುತ್ತಿದ್ದರೆ ಎಂದನಿಸಿದರು, ನನಗೆ ಮತ್ತೊಂದು ನಿಗೂಢ ಕೋನವೂ ಇದರೊಳಗಡಗಿರುವಂತೆ ಭಾಸವಾಗುತ್ತದೆ. ಇದು ಅಂತರಾಳದಲ್ಲಿ ಗಂಡು ಹೆಣ್ಣಿನತ್ತ ನೋಡುತ್ತಿದ್ದ ದೃಷ್ಟಿಕೋನದ ಟೀಕೆಯೂ ಆಗಿರಬೇಕೆಂಬುದೆ ಆ ಅನಿಸಿಕೆ. ಪುರುಷ ಸ್ವಾತಂತ್ರ ಬಲದಿಂದ ಸಿಕ್ಕಿದ ಅಧಿಕಾರವನ್ನೆ ಬಳಸಿ ಹೆಣ್ಣಿನ ನೇರ ಅಥವಾ ಪರೋಕ್ಷ ಶೋಷಣೆಗೆ ತೊಡಗುವ, ಉಗುರಲಿ ಹೋಗುವುದನ್ನು ಕೊಡಲಿ ಹಿಡಿದು ತೊಲಗಿಸುವ ಪ್ರವೃತ್ತಿಯನ್ನು ಟೀಕಿಸುವ, ಸ್ತ್ರೀಯ ಮಾನಸಿಕ ವಿಭಿನ್ನತೆಯ ವಿವೇಚನೆ ಮತ್ತು ಸೂಕ್ಷ್ಮಜ್ಞತೆಯರಿವಿರದ ಒರಟುತನವನ್ನು ಎತ್ತಾಡುವ, ಹಿಂಸಾಪ್ರವೃತ್ತಿಗಿಳಿದು ದಂಡಿಸುವ ಬುದ್ಧಿಯನ್ನು ಖಂಡಿಸುವ ಕವಿಭಾವವೇನೊ ಅನಿಸುತ್ತದೆ. ಇಲ್ಲಿ ಧರಣಿಯನ್ನು ಹೆಣ್ಣಿನ ಪ್ರತಿಮಾ ರೂಪವಾಗಿ ಪರಿಗಣಿಸುತ್ತ, ರಕ್ತಾಭಿಷೇಚನವನ್ನು ಒರಟು ದೌರ್ಜನ್ಯಕ್ಕೆ ಸಮೀಕರಿಸುತ್ತ ನೋಡಿದಾಗ ಅದರ ಮುಂದಿನ ಸಾಲು ಮತ್ತಷ್ಟು ಅರ್ಥಗಳನ್ನು ಸ್ಪುರಿಸುತ್ತದೆ. ಸ್ತ್ರೀಯ ಒಡನಾಟದಲ್ಲಿ ಸಹಜವಾಗಿ ಬಳಸಬಹುದಾದ ಮಧುರಭಾವಾನುಭೂತಿಯ ಪುಷ್ಪಸರದ ಬದಲು, ಬಲವಂತದ ಕಟ್ಟೋತ್ತಾಯದ ಕರವಾಳದಂತಹ ಕ್ರಮದನುಸರಣೆಗಿಳಿದು, ನಂತರ ಫಲಿತವಾಗಿ ಹೂವಿನ ಪರಿಮಳ ಹೊರಡಲಿಲ್ಲವೆಂದು ದೂರಲಾಗುತ್ತದೆಯೆ ? ಪ್ರಕೃತಿಯನೊಲಿಸುವ ಹುನ್ನಾರದಲ್ಲಿ ತನ್ನಾಯುಧಗಳೊಡನೆ ರಣರಂಗಕ್ಕೆ ಹೊರಟ ಪುರುಷ ಪ್ರವೃತ್ತಿ, ಮೃದುಲ ಪ್ರಕೃತಿಯ ಅಂತರಾಳವನ್ನರಿಯದೆ ತನ್ನ ಶಕ್ತಿ, ಬಲದ ಹಮ್ಮಿನಲ್ಲಿ ಹಣಿಯಲು ಹೊರಟರೆ ಆ ಒರಟು ಚೆಲ್ಲಾಟಕ್ಕೆ ನೆತ್ತರ ಘಾತಕ ಸ್ರಾವವಾಗುವುದೆ ಹೊರತು ಪರಿಮಳಭರಿತ ಪುಷ್ಪಗಳಿಂದ ಸುವಾಸನೆ ಬೀರುವ ಮಾನಸ ಸರೋವರವಾಗದು. ಹೀಗೆ ಪ್ರಕೃತಿಯತ್ತ ಪುರುಷನ ದೃಷ್ಟಿಕೋನದ ಒಂದು ತುಣುಕನ್ನು ಈ ಸಾಲುಗಳು ದರ್ಶನ ಮಾಡಿಸುತ್ತವೆಯೆಂದು ನನ್ನ ಭಾವನೆ.

ಇದೇನು ಕವಿಯ ಮೂಲದಿಂಗಿತ ಭಾವಗಳಲೊಂದಾಗಿತ್ತೊ ಅಥವಾ ಸಾಮಾನ್ಯವಾಗಿ ಕವಿತೆಗಳಲ್ಲಾಗುವಂತೆ ಓದುಗನ ಭಿನ್ನ ಮನಸ್ಥಿತಿಗನುಸಾರವಾಗಿ ಸ್ಪುರಿಸುವ ವೈವಿಧ್ಯ ಭಾವದ ಸರಕೊ ಹೇಳುವುದು ಕಠಿಣ. ಅದರಲ್ಲೂ ಇದನ್ನು ಬರೆದ ಕಾಲಮಾನದಲ್ಲಿದ್ದ ಮಡಿವಂತಿಕೆ, ಸಾಮಾಜಿಕ ಮತ್ತು ಪರಿಸರ ಪ್ರೇರಿತ ನಿರ್ಬಂಧಗಳ ಕಾರಣದಿಂದ ಕವಿ ಅದನ್ನು ಪ್ರಕಟವಾಗಿ ಹೇಳಬೇಕೆಂದುಕೊಂಡರು, ಮುಕ್ತವಾಗಿ ಬಿಚ್ಚಿಡುವುದಕ್ಕಿಂತ ಗೂಢಾರ್ಥದಡಿ ಬಚ್ಚಿಡುವ ಸಾಧ್ಯತೆಯೆ ಹೆಚ್ಚು. ಇದು ಅಂತಹುದೆ ಅರ್ಥವೇ – ಎಂದು ಅಧಿಕಾರಯುತವಾಗಿ ಹೇಳಬಲ್ಲ ಪಾಂಡಿತ್ಯ ನನಗಿರದಿದ್ದರು, ಇದು ನನ್ನಲ್ಲಿ ಹೊರಳಿದ ವಿಭಿನ್ನ ಭಾವವೊಂದೆಂದು ಹೇಳಲು ಅಡ್ಡಿಯಿಲ್ಲವೆನ್ನಬಹುದು.

00388. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೨


00388. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೨
_____________________________

ಮಾನವರೋ ದಾನವರೋ ಭೂಮಾತೆಯನು ತಣಿಸೆ |
ಶೋಣಿತವನೆರೆಯುವರು ಬಾಷ್ಪ ಸಲುವುದಿರೆ? ||
ಏನು ಹಗೆ! ಏನು ಧಗೆ! ಏನು ಹೊಗೆ! ಯೀ ಧರಣಿ |
ಸೌನಿಕನ ಕಟ್ಟೆಯೇಂ ? – ಮಂಕುತಿಮ್ಮ ||

ಸುತ್ತೆಲ್ಲ ನಡೆದಿರುವ ಅಟ್ಟಹಾಸದ ರೂವಾರಿಗಳಾದರೊ ಬೇರಾರೊ ಆಗಿರದೆ ಇದೆ ಮನುಕುಲದ ಸಂತತಿಯ ವಾರಸುದಾರರೆ ಆಗಿರುವ ವಿಷಾದದ ಸಂಗತಿಯನ್ನು ಗಮನಿಸಿದ ವಿಹ್ವಲ ಕವಿಮನ ‘ಅವರೇನು ಮನುಷ್ಯರೋ? ರಾಕ್ಷಸ ಸಂತತಿಯವರೊ? ಎಂದು ರೊಚ್ಚಿಗೇಳುತ್ತದೆ. ಆ ಸಾತ್ವಿಕ ಕೋಪದ ದನಿಯಲ್ಲೆ ಮನಸು ಕೇಳುತ್ತದೆ – ತನಗಾಗಿ ಕೇವಲ ಕಣ್ಣೀರ ರೂಪದ ಬಾಷ್ಪಾಂಜಲಿ ಸಾಕೆನ್ನುವ ಭೂತಾಯಿಯ ಮಡಿಲಿಗೆ ಯಾಕೆ ರಕ್ತಧಾರೆಯನ್ನೆರೆಯುತ್ತುವರು? ಎಂದು. ಹರ್ಷಾತಿರೇಖದ ಆನಂದಬಾಷ್ಪವೇ ಆಗಲಿ, ದುಃಖಾತಿರೇಖದ ಗೋಳಿನ ಕಣ್ಣೀರೆ ಆಗಲಿ – ಎರಡು ಭಾವಾತಿರೇಖಗಳ ಪ್ರದರ್ಶನಕ್ಕೆ ಕೇವಲ ಕಣ್ಣೀರಿನ ಸಂವಹನವೊಂದಿದ್ದರೆ ಸಾಕು, ಆ ತಾಯಿಯನ್ನು ತೃಪ್ತಿಪಡಿಸಲು ಅಥವಾ ಅವಳ ಅರಿವಿಗೆ ನಿಲುಕುವಂತೆ ಅನಾವರಣಗೊಳ್ಳಲು. ಅಂತಹ ನೀರನ್ನು ಮಾತ್ರ ಕೇಳುವ, ಅದನ್ನು ಕುಡಿದು ತಣಿದೆ ಅದರಿಂದಲೆ ವನರಾಜಿಯನ್ನು ಪೋಷಿಸಿ, ಸಲಹಿ ಮತ್ತದನ್ನೆ ಮತ್ತೆ ಫಸಲಾಗಿ ಮರಳಿಸುವ ಉದಾತ್ತ ಧ್ಯೇಯೋದ್ದಾತ್ತ ಜನನಿಯ ಮಡಿಲಿಗೆ , ಹೀಗೆ ಹೊಡೆದಾಟ, ಬಡಿದಾಟಗಳ ಮೂಲಕ ನರರನ್ನೆ ಕತ್ತರಿಸಿ, ರಕ್ತದ ಕೋಡಿ ಹರಿಸಿ ಅವಳಿಗೆ ಬೇಡಿದ್ದರೂ ಅದನ್ನು ಕುಡಿಸುವರಲ್ಲ – ಎಂಬ ವಿಸ್ಮಯ, ನೋವು ಮುಗ್ದ ಕವಿ ಮನದ ಪ್ರಲಾಪವಾಗಿಬಿಡುತ್ತದೆ.

ಮತ್ತೆ ಕೊಂಚ ಒಳಗಿಳಿದು ನೋಡಿದರೆ – ಯಾವುದೆ ಕದನ, ಯುದ್ಧ, ಹೋರಾಟ, ಹೊಡೆದಾಟ, ಬಡಿದಾಟಗಳೆಲ್ಲ ನೇರವಾಗಿಯೊ, ಪರೋಕ್ಷವಾಗಿಯೊ ಈ ಭೂಮಾತೆಯ ಸ್ವಾಧೀನ ಮತ್ತು ಸ್ವಾಮಿತ್ಯಕ್ಕೋಸ್ಕರ, ಮತ್ತವಳಲ್ಲಡಗಿದ ಅಪಾರ ಸಂಪತ್ತಿನ ಅಧಿಪತ್ಯಕ್ಕೋಸ್ಕರ ಎಂಬುದರ ಅರಿವು ಕವಿಯ ದಿಗ್ಭ್ರಮೆ, ನೋವುನ್ನು ಅಧಿಕವಾಗಿಸಿದ್ದು ಕಾಣುತ್ತದೆ. ಅದೇನನ್ನು ಬೇಡದ ಬರಿಯ ಭಾಷ್ಪಾರ್ಪಣೆಗೆ ಎಲ್ಲವನ್ನು ಕೊಡುವ ವಿಶಾಲ, ಉದಾರ ಮನಸಿನ ಮಡಿಯನ್ನೆಲ್ಲ ಪಾಶವೀ ರಕ್ತದಿಂದ ಮೈಲಿಗೆಯಾಗಿಸುತ್ತಾರಲ್ಲ ಎಂಬ ಹಪಹಪಿಕೆಯಲ್ಲಿ. ಆದರೆ ಆ ಹಿತವಚನದ ಮಾತನ್ನು ಕೇಳುವ ಜನರಾದರೂ ಯಾರು? ಯಾವುದಾದರೊಂದು ಕಾರಣದ ನೆಪ ಹಿಡಿದು ಹಗೆಯ ಕತ್ತಿ ಮಸೆಯುತ್ತ, ಅದೆಬ್ಬಿಸಿದ ದ್ವೇಷದ ದಳ್ಳುರಿಯ ಕಿಡಿಯಲ್ಲಿ, ಉಸಿರುಗಟ್ಟಿಸುವ ಆ ಬೆಂಕಿಯ್ಹೊಗೆಯ ಪರಿಸರದಲ್ಲೆ ಪರಸ್ಪರ ಕಾದುತ್ತ ಇಡೀ ಭೂಮಂಡಲವನ್ನೆ ರಣರಂಗವನ್ನಾಗಿಸಿ ಪರಸ್ಪರರನ್ನೆ ತರಿದು ಹಾಕುತ್ತಿರುವರಲ್ಲ? ಇದನ್ನೇನು ವಾಸಿಸುವ ಭೂಮಿಯೆಂದುಕೊಂಡಿದ್ದಾರೊ ಅಥವಾ ಕಟುಕನ ಕಟ್ಟೆಯಲಿ ದಯೆ, ಧರ್ಮ, ದಾಕ್ಷಿಣ್ಯ ತೋರದೆ ಕಡಿಯುವ ಕಸಾಯಿಖಾನೆ ಎಂದು ಭಾವಿಸಿದ್ದಾರೊ? ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತದೆ ಬೇಸತ್ತ ಮಂಕುತಿಮ್ಮನ ಮನ.

00387. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೧


00387. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೧
_________________________________

ಮುತ್ತಿರುವುದಿಂದು ಭೂಮಿಯನೊಂದು ದುರ್ದೈವ |
ಮೃತ್ಯು ಕುಣಿಯುತಲಿಹನು ಕೇಕೆ ಹಾಕುತಲಿ ||
ಸುತ್ತಿಪುದು ತಲೆಯನನುದಿನದ ಲೋಕದ ವಾರ್ತೆ |
ಎತ್ತಲಿದಕೆಲ್ಲ ಕಡೆ? ಮಂಕುತಿಮ್ಮ ||

ಇದ್ದಕ್ಕಿದ್ದಂತೆ ಜಿಗ್ಗನೆದ್ದು ಎಲ್ಲೆಂದರಲ್ಲಿ ಹರಡುವ ಸಾಂಕ್ರಾಮಿಕ ರೂಪದ ರೋಗರುಜಿನಗಳು, ಯುದ್ಧಾವಘಡಘಳಿಂದ ಜರ್ಝರಿತವಾಗಿದ್ದ ಕಾಲಘಟ್ಟದಲ್ಲಿ ದುಗುಡ, ತಳಮಳದಿಂದ ಕೂಡಿದ ಕವಿಯ ಮನದಲ್ಲಿ ಮೂಡುವ ಸಂಕಟಗಳ ಭಾರದ ಆಲಾಪ ಈ ಸಾಲುಗಳಲ್ಲಿ ಕಾಣಿಸಿಕೊಂಡಿವೆ. ಸಂಭವಿಸುತ್ತಿರಬಹುದಾದ ಅನಾಹುತ ಸ್ಥಳೀಯವಾಗದೆ ಜಾಗತಿಕ ಸ್ವರೂಪದ್ದಾದ ಕಾರಣ ಇಡೀ ಭೂಮಿಯನ್ನೆ ಬಂದಪ್ಪಳಿಸಿದೆಯೊಂದು ದುರ್ದೈವ – ಎಂದು ಅಲವತ್ತುಗೊಳ್ಳುತ್ತದೆ ಕವಿ ಮನ. ಬಂದು ಮುತ್ತಿದ ದುರ್ದೈವದ ದೆಸೆಯಿಂದ ಎಲ್ಲೆಡೆಯು ಕೇಕೆ ಹಾಕುತ್ತ, ಹಾಹಾಕಾರದೊಡನೆ ಕಾಣಿಸಿಕೊಳ್ಳುತ್ತಿರುವ ಮೃತ್ಯುವಿನ ಅಟ್ಟಹಾಸಕ್ಕು ಒದ್ದಾಡಿಕೊಂಡೆ, ವಿಲಪಿಸುತ್ತದೆ ಕವಿ ಹೃದಯ. ಆ ದಿನ ಧರ್ಮಕ್ಕೆ ಸಹಜವಾಗಿ ಎಲ್ಲೆಡೆಯು ಬರಿ ಅವುಗಳದೆ ಸುದ್ಧಿಯಾಗಿ, ಎಲ್ಲೇ ಹೋದರು, ಏನೆ ಮಾಡಲ್ಹೊರಟರು ಅದರ ಪ್ರಭಾವವೆ ಎಲ್ಲೆಡೆ ತನ್ನ ಛಾಪು ಒತ್ತುತ್ತ ಅದು ಬಿಟ್ಟರೆ ಬೇರೆ ವಿಷಯವೆ ಇಲ್ಲವೆನ್ನುವಂತಾಗಿಸಿಬಿಟ್ಟಿದೆ; ಅದು ಪ್ರಭಾವ ಬೀರದಿರುವ ಯಾವ ತಾಣವೂ, ಯಾವ ಸಂಗತಿಯೂ ಕಾಣದಾಗಿ, ಇದ್ದಕ್ಕೆಲ್ಲ ಕೊನೆಯಿದೆಯೆ ಎಂದಾದರು? ಇದರಿಂದೆಲ್ಲ ಬಿಡುಗಡೆ, ಮುಕ್ತಿ ಸಿಗಲಿದೆಯೆ ? ಎಂದು ಖೇದಗೊಳ್ಳುತ್ತದೆ. ತನ್ನೆಲ್ಲ ಆಧ್ಯಾತ್ಮಿಕ ಮತ್ತು ಮಾಮೂಲಿ ದೈನಂದಿನ ಪ್ರಭಾವಲಯದ ಪರಿಧಿಯಲ್ಲಿ ವಿಹರಿಸುತ್ತಿದ್ದ ಕವಿಮನ ತನ್ನ ಸುತ್ತಲಿನ ಅಪರೂಪದ ಕಠೋರ ವಾಸ್ತವಕ್ಕೆ ಸ್ಪಂದಿಸುವ ಬಗೆಯನ್ನಿಲ್ಲು ಕಾಣಬಹುದು.

00386. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೦


00386. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೦
____________________________________

ಏನು ಪ್ರಪಂಚವಿದು | ಏನು ಧಾಳಾಧಾಳಿ! |
ಏನದ್ಭುತಾಪಾರಶಕ್ತಿ ನಿರ್ಘಾತ! ||
ಮಾನವನ ಗುರಿಯೇನು? ಬೆಲೆಯೇನು? ಮುಗಿವೇನು? |
ಏನರ್ಥವಿದಕೆಲ್ಲ ? ಮಂಕುತಿಮ್ಮ ||

ಪ್ರಪಂಚವೆನ್ನುವುದು ಅಸ್ತಿತ್ವಕ್ಕೆ ಬಂದದ್ದೇನೊ ಆಯಿತು, ಜೀವಿಗಳ ಸೃಷ್ಟಿಯಾಗಿ ಕಾಲ ದೇಶಗಳ ಕೋಶದಲ್ಲಿ ಭೂಗೋಳದ ವಿಸ್ತಾರದಲ್ಲಿ ಹರಡಿಕೊಂಡಿದ್ದು ಆಯ್ತು. ಇನ್ನು ಮೇಲಾದರೂ ಎಲ್ಲಾ ಸುಖಕರವಾಗಿ, ಸುಗಮವಾಗಿ ನಡೆದುಕೊಂಡು ಹೋಗಬಹುದಲ್ಲಾ ? ಎಂದುಕೊಳ್ಳುವ ಕವಿಮನಕ್ಕೆ ಕಾಣಿಸುವುದು ಬರಿ ನಿರಾಶೆಯೆ. ಪ್ರಪಂಚದ ಎಲ್ಲರು ತಮ್ಮ ತಮ್ಮ ಸ್ವಾರ್ಥ, ಹವಣಿಕೆ, ಹಿತಾಸಕ್ತಿಗಳ ಹಿಂದೆ ಬಿದ್ದು ಪರಸ್ಪರ ಪ್ರತ್ಯಕ್ಷ ಅಥವಾ ಪರೋಕ್ಷ ಹೋರಾಟಕ್ಕಿಳಿದು, ಪರಸ್ಪರ ಧಾಳಿ – ಪ್ರತಿಧಾಳಿಯನ್ನು ಮಾಡಿಕೊಂಡು ಕದನಕ್ಕಿಳಿದ ಪರಿ ಕವಿಯನ್ನು ಕಾಡುತ್ತದೆ. ಅದು ಸಾಲದೆನ್ನುವಂತೆ ದಿಗ್ಭ್ರಮೆಯಾಗಿಸುವ ಮತ್ತೊಂದು ಅಂಶವೆಂದರೆ ಆ ಕದನ, ಹೋರಾಟಗಳಲ್ಲಿ ಬಳಕೆಯಾಗಿ ವ್ಯರ್ಥವಾಗಿ ವ್ಯಯವಾಗುತ್ತಿರುವ ಅಪಾರ ಶಕ್ತಿ ಸಂಚಯ. ಹುಟ್ಟಿ ಸಾಯುವ ಮನುಜ ಜೀವಿತದಲ್ಲಿ, ತನ್ನಿರುವಿನ ಮೂರು ದಿನಗಳಲ್ಲಿ ಇಷ್ಟೆಲ್ಲಾ ಹೊಡೆದಾಟ, ಹೋರಾಟಕ್ಕಿಳಿದು ಒದ್ದಾಡುವ ಮಾನವನ ನಿಜವಾದ ಗುರಿಯಾದರೂ ಏನು ? ಹೀಗೆ ಮಾಡುತ್ತಿರುವುದಕ್ಕೆಲ್ಲ ಏನಾದರು ಬೆಲೆ, ಮೌಲ್ಯಗಳಿವೆಯೆ ? ಇದ್ದಕ್ಕೆಲ್ಲ ಕೊನೆಯೆನ್ನುವುದು ಇದೆಯೆ? ಮನುಜನಿಗೆ ತನ್ನ ನಿಜವಾದ ಉದ್ದೇಶ, ಗುರಿಗಳ ಮನನವಾಗಿ, ತನ್ಮೂಲಕ ಅದರ ಮೌಲ್ಯದ ಪರಿಜ್ಞಾನವೂ ಅರಿವಾಗಿ, ಕೊನೆಯ ಮುಕ್ತಾಯದಲ್ಲಿ ಸಾರ್ಥಕ ಭಾವವನ್ನು ಕಾಣುವ ದಿನಗಳು ಬರುವುದುಂಟೆ ? ಅದೊಂದು ಗೊತ್ತಿರದೆ ಮಾಡುತ್ತಿರುವ ಈ ಹುನ್ನಾರಗಳಿಗೆಲ್ಲಾ ಏನಾದರು ಅರ್ಥವಿದೆಯೆ ಎಂದು ಕೇಳುತ್ತದೆ ಕವಿಯ ಮನಸು. ಇದು ಲೌಕಿಕ ಸ್ತರದ ವಾಸ್ತವ ಸ್ಥಿತಿಗೆ ಹೊಂದುವ ನೇರ ವಿವರಣೆ.

ಇದನ್ನೆ ಕೊಂಚ ಎತ್ತರದ ತಾತ್ವಿಕ ಸ್ತರದಿಂದ ನೋಡಿದರೆ ಮತ್ತಷ್ಟು ಅರ್ಥವ್ಯಾಪ್ತಿಗಳು ಹೊರಡುತ್ತವೆ. ಮೊದಲೆರಡು ಸಾಲುಗಳನ್ನು ಲೌಕಿಕ ಪ್ರಪಂಚಕ್ಕೆ ಹೋಲಿಸಿದಷ್ಟೆ ಸಹಜವಾಗಿ ವಿಶ್ವಚಿತ್ತದಲ್ಲಿ, ವ್ಯೋಮ ಗರ್ಭದಲ್ಲಿ ನಡೆಯುವ ಲಕ್ಷಾಂತರ ನಿರಂತರ ಸ್ಪಂದನ, ತಿಕ್ಕಾಟಗಳಿಗೂ ಸಮೀಕರಿಸಬಹುದು. ಅಲ್ಲಿ ನಡೆಯುವ ಧಾಳಿಗಳಾಗಲಿ, ಶಕ್ತಿ ಪ್ರತಿಶಕ್ತಿಗಳ ವಿನಿಮಯವಾಗಲಿ, ಅದ್ಭುತ ಶಕ್ತಿಪಾತದ, ವ್ಯಯಾಪವ್ಯಯದ ಹೊಡೆತಗಳ ಭೀಕರತೆಯಾಗಲಿ ಲೌಕಿಕದಳತೆಯಲ್ಲಿ ವಿವರಿಸಲೇ ಆಗದಷ್ಟು ಅಗಾಧ ಗಾತ್ರದ್ದು. ಆದರೂ ಅವೆಲ್ಲಾ ಯಾವುದೊ ನಿಯಂತ್ರಿತ ವ್ಯವಸ್ಥೆಯಲ್ಲಿ ಬಂಧಿಯಾದ ಶಿಸ್ತಿನ ಸಿಪಾಯಿಗಳಂತೆ ತಮ್ಮ ಇರುವಿಕೆಯನ್ನು ನಿಭಾಯಿಸಿಕೊಂಡು ಹೋಗುತ್ತಿವೆ. ಏನೊ ಗಹನ ಗುರಿಯಿರುವಂತೆ, ಬೆಲೆಯಿರುವಂತೆ, ಗೊತ್ತಿರುವ ನಿಶ್ಚಿತ ಅಂತ್ಯವು ಇರುವಂತೆ ಕಾರ್ಯ ನಿರ್ವಹಿಸುತ್ತಿವೆ. ಅಂತಹ ಅದ್ಭುತಗಳ ಗಾತ್ರ ಆಕಾರಕ್ಕೆ ಹೋಲಿಸಿದರೆ ಮಾನವ ಲೆಕ್ಕಕ್ಕೆ ಬಾರದಷ್ಟು ನಗಣ್ಯ. ಆದರೇಕೊ ಅವನ ಬದುಕಿನಲ್ಲಿ ಯಾವ ಗೊತ್ತು, ಗುರಿ, ಮೌಲ್ಯಗಳಿರುವಂತೆ ಕಾಣುತ್ತಿಲ್ಲವಲ್ಲ ? ಆ ಸಮಷ್ಟಿಯಿಂದ ಅದೇ ತತ್ವ, ಸಿದ್ದಾಂತ, ನಿಖರತೆಗಳು ಭಟ್ಟಿ ಇಳಿದು ಮಾನವ ಜೀವನದ ಗತಿ ನಿರ್ದೇಶಿಸಿದಂತೆ ಕಾಣುವುದಿಲ್ಲವಲ್ಲ ? ಯಾಕೀ ವಿಭಿನ್ನತೆ ಒಂದೆ ಸೃಷ್ಟಿಯೆರಡು ಸಂತಾನಗಳಲ್ಲಿ ? ಏನಿದರ ಅರ್ಥ ? ಎಂದು ಕೇಳುವ ಕವಿ ಮನ ವಿಭಿನ್ನತೆಯನ್ನು ಅಚ್ಚರಿಯಿಂದ ನೋಡುವಷ್ಟೆ ಸಹಜವಾಗಿ, ಅದರ ಫಲಿತ ವ್ಯತ್ಯಾಸಗಳನ್ನು ಗಮನಿಸಿ ನಡೆಸುವ ಜಿಜ್ಞಾಸೆ ಇಲ್ಲಿನ ತಿರುಳು.

00385. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೦೯


00385. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೦೯
_______________________________

ಏನು ಭೈರವಲೀಲೆಯೀ ವಿಶ್ವಭ್ರಮಣೆ! |
ಏನು ಭೂತಗ್ರಾಮನರ್ತನೋನ್ಮಾದ! ||
ಏನಗ್ನಿ ಗೋಳಗಳು! ಏನಂತರಾಳಗಳು! |
ಏನು ವಿಸ್ಮಯ ಸೃಷ್ಟಿ! ಮಂಕುತಿಮ್ಮ ||

ಭೈರವ ಲೀಲೆಯೆನ್ನುವುದು ಆ ಕಾಲ ಭೈರವನ ಪ್ರಚಂಡ ರೂಪಿನ ರೌದ್ರಾವತಾರದ ಹಿನ್ನಲೆಯಲ್ಲಿ ಪರಿಗಣಿಸಬೇಕಾದ ಹೋಲಿಕೆ. ಇಲ್ಲಿ ಕವಿ ಸೃಷ್ಟಿಯುಂಟಾದ ಬಗೆಯನ್ನು ನಮ್ಮ ಕಲ್ಪನೆಗೆಟುಕುವ ಪರಿಧಿಯಲ್ಲಿ ವಿವರಿಸುವ ಸಲುವಾಗಿ ಈ ಭೈರವನ ಪ್ರಚಂಡತೆಯ ಅಂಶವನ್ನು ಬಳಸಿಕೊಳ್ಳುತ್ತಾರೆ. ಮೂಲತಃ ಇಲ್ಲಿ ವಿಶ್ವ ಭ್ರಮಣೆಯೆನ್ನುವುದು ಕೇವಲ ವಿಶ್ವದ ನಿರಂತರ ಪರಿಭ್ರಮಣೆಯೆಂದು ಮಾತ್ರವಲ್ಲದೆ, ಅದರ ಮೂಲ ಸೃಷ್ಟಿಯ ಹಿನ್ನಲೆಯಲ್ಲಿ ಹೇಳಿದ್ದೆಂದು ಪರಿಗಣಿಸಬೇಕು. ಆ ದೃಷ್ಟಿಕೋನದಲ್ಲಿ ನೋಡಿದರೆ ಈ ವಿಶ್ವಭ್ರಮಣೆಯನ್ನು ‘ಬೃಹತ್ ಸ್ಪೋಟ’ಕ್ಕೆ ನೇರವಾಗಿ ಸಮೀಕರಿಸಿಬಿಡಬಹುದು. ಆ ಸ್ಪೋಟದ ತರುವಾಯ ತಾನೆ ವಿಶ್ವದ ಸೃಷ್ಟಿಯಾದದ್ದು ? ಆ ಬೃಹತ್ ಸ್ಪೋಟದಲ್ಲುಂಟಾದ ಹಾಹಾಕಾರದ, ಸೋಜಿಗದ ಭೈರವ ಲೀಲೆಯನ್ನು ಹೇಗೆಂದು ವರ್ಣಿಸುವುದೆಂದು ವಿಸ್ಮಯ ಪಡುತ್ತದೆ ಕವಿ ಮನಸು. ಆ ವಿಶ್ವಭ್ರಮಣೆಯ ಆರಂಭದ ಸರಣಿ ಪ್ರಕ್ರಿಯೆಯ ಮುಂದುವರೆದ ಮರುಸ್ಪೋಟದ ಭಾಗವಾಗಿ ತಾನೆ ಮಿಕ್ಕೆಲ್ಲ ಗ್ರಹತಾರಾ ಮಂಡಲಗಳ ಸೃಷ್ಟಿಯಾದದ್ದು ? ಅವೆಲ್ಲ ಕವಿ ದೃಷ್ಟಿಯಲ್ಲಿ ಉನ್ಮಾದದ ಭೂತಗ್ರಾಮ ನರ್ತನದಂತೆ ಕಾಣುತ್ತದೆ. ಇಲ್ಲಿ ನನಗನಿಸುವಂತೆ ಭೂತಗ್ರಾಮವನ್ನು ಎರಡು ರೀತಿಯಲ್ಲಿ ನೋಡಬಹುದು – ಮೊದಲನೆಯದು ನಮ್ಮ ವೇದಾಂತಿಕ ತಳಹದಿಯಿಂದ ಬರುವ ನಂಬಿಕೆಯಾದ ಪಂಚ ಭೂತಗಳದು. ಸೃಷ್ಟಿಯಲ್ಲೆಲ್ಲವೂ ಪಂಚಭೂತಗಳಿಂದಲೆ (ಆಕಾಶ, ಗಾಳಿ, ನೀರು, ಭೂಮಿ, ಅಗ್ನಿ) ಆದುದೆನ್ನುವ ಸಿದ್ದಾಂತ ಇಲ್ಲಿ ಪ್ರಸ್ತುತವಾಗುವ ಕಾರಣ ಭೂತಗ್ರಾಮ ನರ್ತನವೆನ್ನುವುದು ಈ ಪಂಚಭೂತಗಳ ಪಾಕವೆತ್ತಿ ಸೃಷ್ಟಿಯಡುಗೆ ಮಾಡುತ್ತಿರುವ ಪ್ರಕೃತಿಯ ಕ್ರಿಯೆ ಎಂದು ವಿವರಿಸಬಹುದು. ಮತ್ತೊಂದು ರೀತಿಯಲ್ಲಿ ನೋಡಿದರೆ ಭೂತಗ್ರಾಮವೆನ್ನುವುದು ಭೂತಗಳು ನೆಲೆಸಿದ ನೆಲೆಯಾದ ಸ್ಮಶಾನದ ಸಂಕೇತವೂ ಆಗಬಹುದೇನೊ ? ಮಸಣದಲ್ಲಿ ತಾನೆ ಭೂತ ಪ್ರೇತಗಳು ಉನ್ಮಾದದಿಂದ ಹೆಣದ ಸುತ್ತ ನರ್ತನಗೈಯ್ಯುವುದು ? ಕವಿಗೆ ಈ ಸೃಷ್ಟಿ ಪ್ರಕ್ರಿಯೆಯಲ್ಲಿ ಅದೇ ರೀತಿಯ ಉನ್ಮಾದವೆ ಕಂಡಿರಬಹುದು. ಮತ್ತೊಂದು ಬದಿಯಿಂದ ನೋಡಿದರೆ ಅದು ಲಯದ ಅಥವ ನಾಶದ ಸಂಕೇತವೂ ಆಗಬಹುದು. ಒಟ್ಟಾರೆ ಮೊದಲೆರಡು ಸಾಲುಗಳಲ್ಲಿ ಸೃಷ್ಟಿ ಪ್ರಕ್ರಿಯೆಯ ಆಂತರ್ಯವನ್ನು ಅದರೆಲ್ಲ ರೌದ್ರತೆಯೊಡನೆ ಹಿಡಿದಿಡುವ ಯತ್ನ ಕಾಣುತ್ತದೆ.

ಮಿಕ್ಕೆರಡು ಸಾಲುಗಳು ಅದನ್ನೆ ಮುಂದುವರೆಸುತ್ತ ಆ ಸೃಷ್ಟಿ ಪ್ರಕ್ರಿಯೆಯ ಫಲಿತದತ್ತ ಕಣ್ಣು ಹಾಯಿಸುತ್ತದೆ. ಸ್ಪೋಟದಿಂದಾದ ಉತ್ಪನ್ನಗಳೆಲ್ಲ ಒಂದೇ ಎರಡೆ ? ನಕ್ಷತ್ರಗಳಂತಹ ಲಕ್ಷಾಂತರ ಅಗ್ನಿಗೋಳಗಳು, ಅದರ ಸುತ್ತ ನೆರೆದ ಗ್ರಹ ಸಮೂಹಗಳು, ಧೂಮಕೇತು – ಉಲ್ಕೆಯಂತಹ ಆಕಾಶಕಾಯಗಳು, ಅದರ ನಿಗೂಢತೆಯನ್ನು ಹೆಚ್ಚಿಸುವ ಯಾವಾವುದೊ ಕಾಯದಸ್ತಿತ್ವಗಳು, ಕಪ್ಪುಬಿಲ – ಬಿಳಿಬಿಲದಂತಹ ಅರಿಯಲಾಗದ ಒಗಟಿನ ಅಂತರಾಳಗಳು – ಒಂದೆ, ಎರಡೆ ಅಲ್ಲಿನ ವಿಸ್ಮಯಗಳು ? ಅದೆಲ್ಲವನ್ನು ಒಗ್ಗೂಡಿಸುತ್ತ ಕವಿ ಒಂದೆ ಮಾತಿನಲ್ಲಿ ಹೇಳಿಬಿಡುತ್ತಾರೆ – ‘ಏನು ವಿಸ್ಮಯ ಸೃಷ್ಟಿ !’ ಎಂದು. ಸೃಷ್ಟಿಯ ನಂತರವೂ ಅದನ್ನು ನಿಖರವಾಗಿ ಅರಿಯಲಾಗದ, ಅದರ ನಿರಂತರತೆಯೂ, ಅನಂತ ಸ್ವರೂಪವು ಕೂಡ ‘ಏನಂತರಾಳ’ ಎಂಬ ಮಾತಿನಲ್ಲಿ ಸೂಚ್ಯವಾಗಿ ಧ್ವನಿತವಾಗುತ್ತದೆ.

00383. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೦೮


00383. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೦೮
____________________________________

ಕ್ರಮವೊಂದು ಲಕ್ಷ್ಯವೊಂದುಂಟೇನು ಸೃಷ್ಟಿಯಲಿ? |
ಭ್ರಮಿಪುದೇನಾಗಾಗ ಕರ್ತೃವಿನ ಮನಸು? ||
ಮಮತೆಯುಳ್ಳವನಾತನಾದೊಡೀ ಜೀವಗಳು |
ಶ್ರಮಪಡುವುವೇಕಿಂತು ? – ಮಂಕುತಿಮ್ಮ || ೦೦೮ ||

ನಮ್ಮ ಸುತ್ತಲ ಸೃಷ್ಟಿಯನ್ನು ಒಮ್ಮೆ ಅವಲೋಕಿಸಿ ನೋಡಿದರೆ ಎಷ್ಟೊಂದು ವೈವಿಧ್ಯ ಪ್ರಬೇಧಗಳು ಕಣ್ಣಿಗೆ ಬೀಳುತ್ತವೆ ಎನ್ನುವುದು ಬರಿಯ ಊಹೆಯಳತೆಯಲ್ಲೂ ಹಿಡಿದಿಡಲು ಅಸಾಧ್ಯ. ಅವೆಲ್ಲವನ್ನು ಒಟ್ಟಾಗಿ ನೋಡಿದಾಗ ಕವಿಯ ಮನದಲ್ಲಿ ಮೂಡುವ ಪ್ರಶ್ನೆಯೆಂದರೆ – ಈ ಆಗಾಧ, ವೈವಿಧ್ಯಮಯ ಸೃಷ್ಟಿಯಲ್ಲಿ ಏನಾದರೂ ಕ್ರಮಬದ್ಧವಾದ ಯೋಜನೆಯೇನಾದರು ಇದೆಯೆ ? ಯಾವುದಾದರು ಅಂತಿಮ ಗುರಿ ಸಾಧನೆಯ ಉದ್ದೇಶವಿದೆಯೆ ? ಎಂಬುದು. ಹೊರನೋಟದಲ್ಲಿ ನೋಡಿದಾಗ ಒಂದಕ್ಕೊಂದು ಸಂಬಂಧವಿರದ ನೂರೆಂಟು ಅಸ್ತಿತ್ವಗಳನ್ನು ತೇಪೆ ಹಾಕಿ ಹೇಗೊ ಒಟ್ಟಾಗಿ ಪೇರಿಸಿಟ್ಟಂತೆ ಕಾಣುವ ಈ ಸೃಷ್ಟಿ ನಿಜವಾಗಿಯೂ ಯೋಜನಾಬದ್ದವಾಗಿ, ಕ್ರಮಬದ್ಧವಾಗಿ, ಸೃಜನಾತ್ಮಕವಾಗಿ ಸೃಷ್ಟಿಸಿದ್ದೆ ? ಅಥವಾ ಯಾವುದೊ ಗಳಿಗೆಯೊಂದರಲ್ಲಿ ಸೃಷ್ಟಿಕರ್ತನ ಮನದಲ್ಲಿ ಮೂಡಿಬಂದ ಭ್ರಮಾರೂಪದ ಅಡ್ಡಾದಿಡ್ಡಿ ಆಲೋಚನೆಯೊಂದು ಮೂರ್ತರೂಪಾಗಿ ಈ ರೀತಿಯ ಅವ್ಯವಸ್ಥಿತವಾಗಿ ಕಾಣುವ ಸೃಷ್ಟಿಯುಂಟಾಯಿತೆ ? ಸೃಷ್ಟಿಕರ್ತನನ್ನು ಮಮತಾಮಯಿ, ಕರುಣಾಮಯಿ, ತನ್ನ ಸೃಷ್ಟಿಯ ಮೇಲೆ ಅಪಾರ ಕಾಳಜಿಯುಳ್ಳವನು ಎಂದೆಲ್ಲಾ ಹೇಳುತ್ತಾರೆ. ಅವನು ಅಷ್ಟೆಲ್ಲ ವಿಶೇಷಣಗಳಿಗೆ ನಿಜಕ್ಕೂ ನ್ಯಾಯ ದೊರಕಿಸಬೇಕಿದ್ದರೆ ತಾನು ಸೃಷ್ಟಿಸಿದ ಜೀವಗಳು ಶ್ರಮ ಪಡದಂತೆ, ಯಾತನೆಗೊಳಗಾಗದಂತೆ, ಸುಖ-ಶಾಂತಿ-ಸಮೃದ್ಧಿಯಿಂದ ನೆಮ್ಮದಿಯಾಗಿರುವಂತೆ ಕಾಪಾಡಿಕೊಂಡು ಬರಬೇಕಿತ್ತಾಲ್ಲಾ ? ಯಾಕಾ ಕಾಳಜಿ ಕಾಣುವುದಿಲ್ಲ ? ಎಂದು ಪ್ರಶ್ನಿಸುತ್ತಾನೆ ಮಂಕುತಿಮ್ಮ.

ಇಲ್ಲಿ ಮತ್ತೆ ಗಮನಿಸಬಹುದಾದ ಅಂಶವೆಂದರೆ ಮೊದಲೆರಡು ಸಾಲುಗಳು ಗಹನ ತಾತ್ವಿಕವಾದ ಸೃಷ್ಟಿಕ್ರಮದ ಮಾತಾಡಿದರೆ, ಕೆಳಗಿನೆರಡು ಸಾಲುಗಳು ಆ ಗಹನತೆಯನ್ನು ಲೌಕಿಕಕೆ ಜೋಡಿಸುವ ಪ್ರಾಪಂಚಿಕ ಯಾತನೆಗಳನ್ನು ಕುರಿತು ಪ್ರಶ್ನಿಸುತ್ತದೆ. ಹೀಗೆ ಮತ್ತೆ ಗಹನದಿಂದ ಸರಳಕ್ಕೆ ಕೊಂಡಿಯಾಗುವ ಕವಿಭಾವ ಮತ್ತೆ ಎದ್ದು ಕಾಣುತ್ತದೆ. ಅವೆರಡರ ನಡುವಿನ ದೂರವನ್ನು ಓದುಗರ ನಿಲುಕಿಗೆ ಬಿಟ್ಟುಬಿಡುವುದರಿಂದ ಪ್ರತಿಯೊಬ್ಬರೂ ಆ ಕಂದಕವನ್ನು ತಮ್ಮ ತಮ್ಮ ಜ್ಞಾನ, ವಿವೇಚನೆಯನುಸಾರ ತುಂಬಿಸಿಕೊಳ್ಳಬಹುದು. ಬಹುಶಃ ಇದರಿಂದಾಗಿಯೆ ಈ ಪದ್ಯಗಳು ಪ್ರತಿಯೊಬ್ಬರಿಗು ಬೇರೆಬೇರೆಯದೆ ಆದ ಅರ್ಥವನ್ನು ಸ್ಪುರಿಸುವುದು – ಬಲ್ಲವರಿಗೆ, ಪಂಡಿತರಿಗೆ ಆ ಅಂತರ ನೂರಾರು ಮೈಲುದ್ದದ ಆಧ್ಯಾತ್ಮಿಕ, ವೇದಾಂತಿಕ ಸರಕಿಂದ ತುಂಬಿಸಿಡಬಲ್ಲ ರಾಜಮಾರ್ಗವಾಗಿ ಬೆರಗುಗೊಳಿಸಿದರೆ, ಅದಾವುದು ಬೇಕಿಲ್ಲದ ಪಾಮರನಿಗೆ ನಡುವಿನ ಅಂತರವೆ ಗೋಚರಿಸದೆ, ಮೊದಲು ಭಗವಂತನ ಮಾತಾಡಿ ನಂತರ ಲೌಕಿಕಕ್ಕೆ ನಂಟು ಹಾಕಿದ ಮಾಮೂಲಿ ಸಾಲುಗಳಾಗಿಬಿಡುತ್ತವೆ.

ಆದರೆ ಅದೇ ಕವಿ ದೃಷ್ಟಿಯಲ್ಲಿ ಮೊದಲೆರಡು ಸಾಲುಗಳಲ್ಲಿ ಆ ಪರಮ ಶಕ್ತಿಯ ಕಾರ್ಯ, ವಿಕ್ರಮ, ಪರಾಕ್ರಮವನ್ನು ಶ್ಲಾಘಿಸಿದಂತೆ ಕಂಡರೂ, ಕೊನೆಯೆರಡು ಸಾಲುಗಳಲ್ಲಿ ಆ ಸಾಧನೆಯ ಫಲಿತದಲ್ಲಡಗಿರುವ ಕುಂದು, ಕೊರತೆ, ಹುಳುಕು, ದೋಷಗಳನ್ನು ಎತ್ತಾಡುವ ವಿಮರ್ಶೆ, ಟೀಕೆಯಾಗಿಬಿಡುತ್ತದೆ. ಆ ಶ್ಲಾಘನೆ, ಟೀಕೆ, ವಿಮರ್ಶೆಗಳೂ ಕೂಡ ಬಹುತೇಕ ಪ್ರಶ್ನಾರೂಪದಲ್ಲಿರುವುದರಿಂದ ಅದು ಕವಿ ದೇವರಿಗೆ ಹಾಕಿದ ಪ್ರಶ್ನೆಯೂ ಆಗುತ್ತದೆ, ಸ್ವಯಂ ತನಗೆ ಹಾಕಿಕೊಂಡದ್ದೂ ಆಗಿಬಿಡುತ್ತದೆ, ಅಂತಿಮವಾಗಿ ಅದೆ ಪ್ರಶ್ನೆ ಓದುಗ ಮನಕ್ಕು ದಾಟಿಕೊಂಡುಬಿಡುತ್ತದೆ ಅವರಿಗರಿವಿಲ್ಲದಂತೆ! ಅದೇ ಇಲ್ಲಿನ ಬಹುತೇಕ ಪದ್ಯಗಳಲ್ಲಿರುವ ಒಂದು ಸಾಮಾನ್ಯ ಅಂಶ.

00382. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೦೭


00382. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೦೭
___________________________________

ಬದುಕಿಗಾರ್ ನಾಯಕರು ? ಏಕನೊ ಅನೇಕರೋ? |
ವಿಧಿಯೊ, ಪೌರುಷವೊ, ಧರುಮವೊ, ಅಂಧಬಲವೋ? ||
ಕುದುರುವುದದೆಂತು ಈಯವ್ಯವಸ್ಥೆಯ ಪಾಡು ? |
ಅದಿಗುದಿಯೆ ಗತಿಯೇನೊ? – ಮಂಕುತಿಮ್ಮ ||

ಬದುಕಿನ ನಾವೆ ನಡೆಸಲು ಚುಕ್ಕಾಣಿ ಹಿಡಿದಿರುವ ನಾಯಕರಾದರು ಯಾರು ? ಅದೇನು ಒಬ್ಬರಿಂದ ನಡೆಯುವ ಯಾನವೊ ಅಥವಾ ಅನೇಕರಿಂದ ಲೊ? ಅದನ್ನು ನಡೆಸುತ್ತಿರುವುದೇನು ವಿಧಿ ಬಲವೊ, ಮೈ ತುಂಬಿದ ಕಸುವು ನೀಡುವ ಶಕ್ತಿಯೊ, ಪಾಪಪುಣ್ಯದ ಪರಿವೆಯಲ್ಲಿ ನೇರ ಹಾದಿಯಲ್ಲಿ ನಡೆಸುವ ಧರ್ಮ ಪ್ರಜ್ಞೆಯೊ ಅಥವಾ ಯಾವುದೊ ಕಣ್ಗಾಣದ ಅಂಧಬಲವೊ? ಇಷ್ಟೆಲ್ಲಾ ಸೇರಿಕೊಂಡು ಎಲ್ಲವೂ ನಾಯಕರಾಗಿ ತಂತಮ್ಮತ್ತ ಎಳೆದಾಡಿಸುತಿದ್ದರೆ ಬದುಕಿನ ವ್ಯವಸ್ಥೆ ತನ್ನ ಅಸಮತೋಲನದ ಅವ್ಯವಸ್ಥೆಯನ್ನು ನಿವಾರಿಸಿಕೊಂಡು, ಸಮತೋಲನದಲ್ಲಿ ಕುದುರಿಕೊಳ್ಳಲಾದರೂ ಹೇಗೆ ಸಾಧ್ಯ ? ಬಹುಶಃ ಅದು ಸಾಧ್ಯವೆ ಇರದ ಸಂಭವವಾಗಿ ಬರಿಯ ತಳಮಳವಾಗಿಯೆ ಉಳಿದುಬಿಡುವ ನಿರಂತರ ಗತಿಯೊ ? ಎಂದು ಕಳವಳವನ್ನು ವ್ಯಕ್ತಪಡಿಸುತ್ತಾನೆ ಮಂಕುತಿಮ್ಮ.

ಎಷ್ಟೊಂದು ಬದುಕಿನ ಅನುಭವ, ಕಷ್ಟ-ಕಾರ್ಪಣ್ಯ, ಸುಖದುಃಖಗಳೆಲ್ಲದರ ಸಂಕಲಿತ ಮೊತ್ತ ಅನುಭವ ಮೂಸೆಯಿಂದೆದ್ದು ಪದಗಳಾಗಿವೆಯಿಲ್ಲಿ ನೋಡಿ. ಆ ಅನುಭವದೆಲ್ಲಾ ಸಾರಕ್ಕು ಒಂದು ಷರಾ ಹಾಕುವ ಅಧಿಕಾರಯುತ ದನಿಯಲ್ಲಿ ಕವಿ ಪ್ರಶ್ನಿಸಿಕೊಳ್ಳುತ್ತಾನೆ – ಈ ಬದುಕಿಗೆ ಯಾರಾದರು ಒಬ್ಬರು ನಾಯಕರೆಂದು ಇದ್ದಾರೆಯೊ? ಒಂದು ಪಂದ್ಯದ, ಕದನದ, ಪಂಥದ ಜಯಾಪಜಯ, ಯಶಾಪಯಶಗಳು ನಾಯಕತ್ವದ ಮೇಲೆ ಅವಲಂಬಿಸಿರುತ್ತದೆ ಎನ್ನುತ್ತೇವೆ. ಹಾಗಿದ್ದಲ್ಲಿ ಬದುಕಿನ ನಾವೆಯನ್ನು ಸುಗಮವಾಗಿ ನಡೆಸಲು ಒಬ್ಬ ಧೀಮಂತ ನಾಯಕನ ಅವಶ್ಯಕತೆಯಷ್ಟೆ ಇರಬೇಕಲ್ಲವೆ, ತಾರ್ಕಿಕವಾಗಿ? ನಮ್ಮೆಲ್ಲರ ಬದುಕಿನಲ್ಲಿ ಪರಿಸ್ಥಿತಿ ಹಾಗಿದೆಯೆ ? ನಾಯಕನೆನಿಸಿಕೊಂಡವನೊಬ್ಬ ನಮ್ಮ ಬದುಕಲ್ಲಿ ಇರುವುದೆ ನಿಜವಾದರೆ ಅವನು ಯಾರು? ಅದೇನು ಒಬ್ಬ ನಾಯಕನೊ ಅಥವಾ ಹಲವು ನಾಯಕರ ತಿಕ್ಕಾಟ, ತಾಕಲಾಟದ ದೊಂಬಿಯೊ ? ಎಂದೂ ಪ್ರಶ್ನಿಸುತ್ತಾನೆ. ಒಂದು ವೇಳೆ ಅನೇಕರಿರುವುದು ನಿಜವಾದರು ಅವರಲ್ಲೊಬ್ಬನಾದರೂ ನಾಯಕತ್ವ ವಹಿಸಿದ್ದಾನೆಯೆ ? ಅಥವಾ ಅವರಾರು ಜವಾಬ್ದಾರಿ, ಹೊಣೆ ಹೊರದೆ ತಮಗೆ ಬೇಕಾದಂತೆ ತಮ್ಮ ಪಾಡಿಗೆ ಎಲ್ಲ ಕಡೆಗು ಎಳೆದಾಡಿಸುತ್ತ, ಕಂಗೆಡಿಸುತ್ತ ಅವ್ಯವಸ್ಥೆಯನ್ನು ಹುಟ್ಟುಹಾಕಿವೆಯೆ ? ನಾವಾಡುವ ರೀತಿಯನ್ನೆಲ್ಲ ನಿಯಂತ್ರಿಸುವ ನಾಯಕತ್ವ ವಹಿಸುವುದು ವಿಧಿಯೊ, ಪೌರುಷವೊ, ಧರ್ಮವೊ, ಅಂಧಬಲವೊ ? ಅವೆಲ್ಲದರ ಒಟ್ಟಾರೆ ಪ್ರಭಾವದಿಂದ ರೂಪುಗೊಂಡ ಗೊಂದಲ, ಕಳವಳಗಳೊ? ಅವೇನೆ ಆಗಿದ್ದರು ಅಂತಿಮವಾಗಿ ಅವುಗಳೆಲ್ಲದರ ನಿವ್ವಳ ಫಲಿತ ಬರಿಯ ತಳಮಳ ಮಾತ್ರವೆ ಇರುವಂತಿದೆಯಲ್ಲಾ? ಏನು ಆ ತಳಮಳದೊಂದಿಗೆ ಸಾಗುತ್ತ ಬದುಕು ಮುಗಿಸಬೇಕೇನೊ – ಎಂದು ನಿರಾಶೆಯ ಉದ್ಗಾರವೆತ್ತುತ್ತಾನೆ ಕವಿ.

ಇಲ್ಲೂ ಕೂಡ ಸೃಷ್ಟಿಸಿ ಬದುಕಲು ಬಿಟ್ಟದಾವುದೊ ಶಕ್ತಿಯ ಮೇಲಿನ ಆಕ್ರೋಶ, ಸಾತ್ವಿಕ ಸಿಟ್ಟು ಅವ್ಯಕ್ತ ಮತ್ತು ಪರೋಕ್ಷ ರೂಪದಲ್ಲಿ ವ್ಯಕ್ತವಾಗುವುದನ್ನು ಕಾಣಬಹುದು – ಅದರ ಅರೆಬರೆ ಕೆಲಸಕ್ಕೆ. ಒಂದೆಡೆ ನಮ್ಮ ಬದುಕಿನಲ್ಲಿ ಪುಕ್ಕಟೆ ಸಲಹೆ ಕೊಡುವವರು ನೂರಾರು ಜನ ಸಿಗುತ್ತಾರೆ. ತಾವಿತ್ತರೆ ಅವರೆ ಇತರರ ಬದುಕಿನ ನಾಯರಂತೆಯೂ ವರ್ತಿಸಿಬಿಡುತ್ತಾರೆ. ಆದರೆ ನಮ್ಮನ್ನು ಸರಿಯಾಗಿ ಮಾರ್ಗದರ್ಶನ ಕೊಟ್ಟು, ಸರಿಯಾದ ಸಂಗತ ಪಥದಲ್ಲಿ ನಡೆಸಬಲ್ಲ ನಿಜವಾದ ನಾಯಕ ಯಾರು ಎಂದರೆ ಬರುವ ಉತ್ತರ – ಮೌನ. ಆ ನಾಯಕತ್ವ ನಿಜಕ್ಕೂ ಬರಬೇಕಾದದ್ದು ಹೊರಗಿನಿಂದಲ್ಲ, ಬದಲಿಗೆ ಒಳಗಿನಿಂದ. ಆ ಒಳಗನ್ನು ನಿಯಂತ್ರಿಸುವ ನಾಯಕತ್ವ ಯಾರದೂ ಎಂದರೆ ಅಲ್ಲೂ ತರತದ ನಾಯಕರ ಪೈಪೋಟಿ; ಕೆಲವೊಮ್ಮೆ ವಿಧಿಯಾಟ ತನ್ನನ್ನೆ ನಾಯಕನೆನಿಸುವಂತೆ ಮಾಡಿದರೆ, ಮತ್ತೊಮ್ಮೆ ಸಾಹಸ, ಬಲದಾಸರೆ ಸಹಾಯಕ್ಕೆ ಬಂದು ತಾನೆ ನಾಯಕನೆನ್ನುತ್ತದೆ. ಮತ್ತೆ ಕೆಲವು ಸನ್ನಿವೇಶದಲ್ಲಿ ಧರ್ಮದ ಕೈ ಮೇಲಾದರೆ ಮಿಕ್ಕಿದ ಗಳಿಗೆಯಲ್ಲಿ ಮುನ್ನಡೆಸುವುದು ಯಾವುದೊ ಅಂಧಶ್ರದ್ಧೆಯ ಬಲ. ಹೀಗೆ ಒಂದೊಂದು ಒಂದೊಂದು ರೀತಿಯ ವಿಶ್ವರೂಪ ತಾಳುತ್ತ, ಬೇರೆ ಬೇರೆ ಸಮಯದಲ್ಲಿ ಸಂಗತವಾದಂತೆ ತೋರುವ ಅವುಗಳ ಪರಿ ಸಮಾಧಾನಕ್ಕಿಂತ ಗೊಂದಲ ತಳಮಳಗಳನ್ನು ಹೆಚ್ಚಿಸುವುದೆ ಹೆಚ್ಚು. ಆ ಪ್ರಕ್ರಿಯಲ್ಲಿ ಅವು ಹುಟ್ಟುಹಾಕುವ ಅವ್ಯವಸ್ಥೆಯ ತಲೆ ಬೇನೆ ಮತ್ತೊಂದೆಡೆ. ಇದೆಲ್ಲ ಕರ್ಮಫಲವೆಂದು ಸುಮ್ಮನೆ ಅನುಭವಿಸಿಕೊಂಡು ಹೋಗಬೇಕೆನ್ನುವ ಅನಿವಾರ್ಯತೆ, ನಿರ್ಲಿಪ್ತ ಶರಣಾಗತ ಭಾವವೂ ಇಲ್ಲಿ ಇಣುಕುತ್ತದೆ. ಅಂತೆಯೆ ಮತ್ತೆ ಕವಿಯ ಸಾಧಾರಣ ಬದುಕಿನ ಸ್ತರದಿಂದ ಅಗಾಧತೆಯ ಸ್ತರದತ್ತ ಒಯ್ಯುವ ಪದ ಸಾಲುಗಳ ಚಮತ್ಕಾರವು ಕಾಣುತ್ತದೆ ಈ ಸಾಲುಗಳ ಅಂತರಾಳದಲ್ಲಿ.

00379. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೦೬


00379. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೦೬
________________________________

ಒಗಟೆಯೇನೀ ಸೃಷ್ಟಿ ? ಬಾಳಿನರ್ಥವದೇನು |
ಬಗೆದು ಬಿಡಿಸುವರಾರು ಸೋಜಿಗವನಿದನು ? ||
ಜಗವ ನಿರವಿಸಿದ ಕೈಯೊಂದಾದೊಡೇಕಿಂತು ? |
ಬಗೆ ಬಗೆಯ ಜೀವಗತಿ – ಮಂಕುತಿಮ್ಮ ||

ಈ ಸೃಷ್ಟಿಯೇನಿದ್ದರು ಬರಿಯ ಒಗಟಾಗಿಯೆ ಇರುವಂತದ್ದೇನು? ಆ ಒಗಟಿನೊಳಗೆ ಬೆಸೆದುಕೊಂಡ ಈ ಬಾಳಿಗೇನಾದರೂ ಅರ್ಥವಿದೆಯೆ? ಈ ಒಗಟಿನ ಗುಟ್ಟನ್ನು ಹರಿದು, ಈ ಸೃಷ್ಟಿಯ, ಬಾಳಿನ ಸೋಜಿಗದ ಸೂತ್ರವನ್ನು ಬಿಡಿಸಿ ಅನಾವರಣಗೊಳಿಸುವವರಾರಾದರು ಇದ್ದಾರೆಯೆ? ಸೃಷ್ಟಿಯ ಅಂಗವಾಗಿ ಈ ಜಗವೆಲ್ಲವನ್ನು ಸೃಜಿಸಿ, ನಿರ್ಮಿಸಿದ ನಿರ್ಮಾತೃ ಒಬ್ಬನೆ ಎನ್ನುವುದಾದರೆ, ಅವನ ಕೈಯಲ್ಲೇಕೆ ಏಕರೂಪಿನ ಸಮಾನ ಸೃಷ್ಟಿಯಾಗುವ ಬದಲು ವಿಧವಿಧ ವೈವಿಧ್ಯದ ಅನೇಕಾನೇಕ ಜೀವಗತಿಗಳು ನಿರ್ಮಿತವಾದವು? ಅದೇನು ವೈವಿಧ್ಯತೆಯ ಪ್ರದರ್ಶನವೊ ಅಥವಾ ಏಕರೂಪಿನ ನಿಯಂತ್ರಣವಿಡಲಾಗದೆ ಹೋದ ಕಾರಣದಿಂದ ಸೃಷ್ಟಿಯಾಗಿ ಹೋದ ಜೀವರಾಶಿಗಳ ಮೊತ್ತವೊ ? ಎಂದು ಇಲ್ಲಿ ಪ್ರಶ್ನೆಯೆತ್ತುತ್ತಾನೆ ಮಂಕುತಿಮ್ಮ.

ಈ ಸೃಷ್ಟಿಯೆ ಒಂದು ಒಗಟಾಗಿ ಪರಿಣಮಿಸಿದರೆ ಅದರಲ್ಲಿ ನಡೆಸುವ ಬಾಳುವೆಯೂ ಒಗಟೇ ತಾನೆ? ಆ ಒಗಟಿನ ಬೆಡಗು ಸೇರಿರುವುದರಿಂದಲೆ ಅದನ್ನರಿಯುವ ಕುತೂಹಲ ಒಂದಲ್ಲಾ ಒಂದು ರೀತಿ ಕಾಡುವುದು. ಹೋಗಲಿ, ಅರಿಯಲೆತ್ನಿಸಿದರೆ ಸುಲಭವಾಗಿ ಬಿಟ್ಟುಕೊಡುವ ಬೆಡಗೇ ಅದು ? ಎಂದರೆ ಅದೂ ಇಲ್ಲ. ಯಾವಾಗ ಅರಿಯಲಾಗಲಿಲ್ಲವೊ ಆಗದರ ಬಗೆ ಕುತೂಹಲ, ಸೋಜಿಗ ಇನ್ನು ಹೆಚ್ಚಾಗುವುದು ಸಹಜ ಪ್ರಕ್ರಿಯೆಯೆ ಅಲ್ಲವೆ? ಅಂತಹ ಸೋಜಿಗವನ್ನು ಬಿಡಿಸಬಲ್ಲಂತವರು, ಬಿಡಿಸಿದವರು ಯಾರಾದರೂ ಇರುವರೆ ಎಂಬನುಮಾನವನ್ನು ಪ್ರಶ್ನೆಯ ಮೂಲಕ ವ್ಯಕ್ತಪಡಿಸುತ್ತಿದ್ದರೂ, ಬಹುತೇಕ ಯಾರೂ ಇಲ್ಲವೆಂಬ ಅನಿಸಿಕೆಯೆ ಅಲ್ಲಿ ಹೆಚ್ಚು ದನಿಸಿದಂತನಿಸುತ್ತದೆ. ಈ ಮೊದಲಿನೆರಡು ಸಾಲುಗಳಲ್ಲಿ ಸೃಷ್ಟಿಯಾನಂತರದ ಅಸ್ತಿತ್ವ, ಸ್ವರೂಪಗಳನ್ನು ಬೆದಕಿ ನೋಡುವ ಕವಿಯ ಯತ್ನ ಎದ್ದು ಕಾಣುತ್ತದೆ. ಹಾಗೆ ಕೆದಕುತ್ತಲೆ ವಿಹರಿಸುತ್ತ ಹೋಗುವ ಮನಸಿಗೆ ಇದ್ದಕ್ಕಿದ್ದಂತೆ ಸಂದೇಹದ ರೂಪಿನಲ್ಲಿ ಪ್ರಶ್ನೆಯೊಂದು ಮೂಡಿಬರುತ್ತದೆ – ಆ ಸೃಷ್ಟಿಯಲ್ಲಿರುವ ಅಗಣಿತ ಜೀವಜಾಲದ ವೈವಿಧ್ಯಮಯ ವಿನ್ಯಾಸಗಳೆಲ್ಲ ಕಣ್ಣಿಗೆ ಬಿದ್ದು ಗಮನ ಸೆಳೆದಾಗ. ಈ ಜಗದ ಸೃಷ್ಟಿಗೆ ಕಾರಣೀಭೂತವಾದ ಮೂಲಶಕ್ತಿ ಒಂದೆ ಎಂಬುದು ಆಸ್ತಿಕರೆಲ್ಲರು ನಂಬುವ ಖಚಿತ ಸಿದ್ದಾಂತ. ಅದು ನಿಜವೆ ಆದಲ್ಲಿ ಆ ಸೃಷ್ಟಿಕರ್ತನ ಕೈ ಚಳಕದಲ್ಲಿ ಮೂಡಿಬಂದ ಸೃಷ್ಟಿಗಳೆಲ್ಲವೂ ಒಂದೇ ರೀತಿ ಇರಬೇಕಿತ್ತಲ್ಲವೆ? ಹಾಗಿರದೆ ಏಕಷ್ಟೊಂದು ಬಗೆ ಬಗೆಯ ಜೀವ ವೈವಿಧ್ಯಗಳನ್ನು ಸೃಷ್ಟಿಸಿದ ? ಎಂದು ಕೇಳುತ್ತಾರೆ ಕವಿ. ಪ್ರತಿಯೊಂದು ವೈವಿಧ್ಯಕ್ಕೂ ತನ್ನದೇ ಆದ ರೀತಿ, ನೀತಿ, ನಡೆ, ನುಡಿ, ಕಾಲ ಚಕ್ರಾದಿಗಳನ್ನಂಟಿಸಿ ನಡೆಸುವ ಪರಿಗೆ ಅದೆಲ್ಲಾ ಅವನ ಪೂರ್ವನಿಯೋಜಿತ ಉದ್ದೇಶದಂತೆ ಕಂಡರು, ಕವಿಗೆ ಏಕ ರೂಪತೆಯನ್ನು ನಿರಂತರ ಕಾಪಡಿಕೊಂಡು ಸೃಷ್ಟಿಸಲಾಗದ ಕಾರಣಕ್ಕೆ ಹೀಗೆ ವೈವಿಧ್ಯಗಳನ್ನಾಗಿಸಿ ಕೈ ತೊಳೆದುಕೊಂಡುಬಿಟ್ಟನೇನೊ ಎಂಬ ಅನುಮಾನದ ಎಳೆಯೂ ಕಂಡೂ ಕಾಣದಂತೆ ಇಣುಕುತ್ತದೆ ಕೊನೆಯೆರಡು ಸಾಲಿನಲ್ಲಿ. ಅದರ ಜತೆಜತೆಗೆ ಆ ವೈವಿಧ್ಯತೆಗೆ ಅಚ್ಚರಿ ವ್ಯಕ್ತಪಡಿಸುವ ಮುಗ್ದ ಮಗುವಿನ ಸೋಜಿಗವೂ ಕಾಣಿಸಿಕೊಳ್ಳುತ್ತದೆ.

ಇಲ್ಲಿ ಮತ್ತೊಂದು ಗಮನಿಸುವ ಅಂಶವೆಂದರೆ ಸೃಷ್ಟಿಯ ಕುರಿತಾದ ಮೊದಲ ಸಾಲಿನ ಮಾತು. ಈ ಸೃಷ್ಟಿ ಕೇವಲ ಜೀವ ಜಗತ್ತಿಗೆ ಸೀಮಿತವಾದ ಸೃಷ್ಟಿಯಂತೆ ಕಾಣುವುದಿಲ್ಲ. ಬದಲಿಗೆ ಬ್ರಹ್ಮಾಂಡವೂ ಸೇರಿದಂತೆ ಸಮಷ್ಟಿಯೆಲ್ಲದರ ಸೃಷ್ಟಿಯ ಕುರಿತು ವ್ಯಕ್ತಪಡಿಸಿದ ಸೋಜಿಗದಂತೆ ಕಾಣುತ್ತದೆ. ಆ ಗಹನತೆಯಲ್ಲಿ ಆರಂಭವಾದದ್ದು ಏಕಾಏಕಿ ಬಾಳುವೆ, ಜೀವ ಜಗತ್ತಿನ ಲೌಕಿಕ ಸ್ತರಕ್ಕೆ ಬಂದರೂ, ಅವೆರಡರ ನಡುವಿರುವ ಎಲ್ಲವನ್ನು ಆ ಎರಡು ತುದಿಗಳ ಮೂಲಕ ಹಿಡಿದಿಟ್ಟ ಸಾರ ಸಂಗ್ರಹ ಭಾವವನ್ನು ಒಳಗೊಂಡಿದೆಯೆನ್ನುವುದು ನನ್ನ ಗ್ರಹಿಕೆ. ತನ್ಮೂಲಕ ತನ್ನ ವಿಸ್ತಾರ ವ್ಯಾಪ್ತಿಯನ್ನು ತಾತ್ವಿಕ, ಅಧ್ಯಾತ್ಮಿಕ, ವೈಜ್ಞಾನಿಕ ಸ್ತರಗಳೆಲ್ಲದರ ಎಲ್ಲೆಗಡಿಯನ್ನು ದಾಟಿಸಿ ಮೇರುಮಟ್ಟಕ್ಕೆ ಕೊಂಡೊಯ್ದು ಬಿಡುತ್ತದೆ ವಿಶ್ಲೇಷಣೆಯ ಗಹನ ಮತ್ತು ಆಳವಾದ ಯಾನದಲ್ಲಿ.

00378. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೦೫


00378. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೦೫

 ________________________

ದೇವರೆಂಬುದದೇನು ಕಗ್ಗತ್ತಲೆಯ ಗವಿಯೆ ? |
ನಾವರಿಯಲಾರದೆಲ್ಲದರೊಟ್ಟು ಹೆಸರೆ ? ||
ಕಾವನೋರ್ವನಿರಲ್ಕೆ ಜಗದ ಕಥೆಯೇಕಿಂತು ? |
ಸಾವು ಹುಟ್ಟುಗಳೇನು ? – ಮಂಕುತಿಮ್ಮ ||

ಒಳಗೇನಿದೆಯೆಂದು ಕಾಣಿಸದಂತೆ ಗಾಡಾಂಧಕಾರದಿಂದ ತುಂಬಿರುವ ನಿಗೂಢ ಗವಿಯಂತಹ ಅಸ್ತಿತ್ವವೆ ದೇವರೆ ? ನಮ್ಮ ನಿಲುಕಿಗೆ ಸಿಗದ, ನಾವು ಅರಿಯಲಾಗದೆ ಹೋಗುತ್ತಿರುವುದೆಲ್ಲವುಗಳ ಮೊತ್ತವನ್ನೆ ಸಮಷ್ಟಿಸಿ ಅದಕ್ಕೆ ಒಟ್ಟಾರೆ ದೇವರೆಂದು ಹೆಸರು ಕೊಟ್ಟು ಕೈ ತೊಳೆದುಕೊಂಡುಬಿಡಬಹುದೆ? ಎಲ್ಲರನ್ನು ಕಾಯುವವನೆ ದೇವರೆನ್ನುತ್ತಾರೆ, ಇಡಿ ಜಗವನ್ನೆ ಅವನು ಕಾಪಾಡುತ್ತಾನೆನ್ನುತ್ತಾರೆ. ಅಂತಿದ್ದರೂ, ಈ ಜಗದ ಕಥೆಯೇಕೆ ಏನೊ ಸರಿಯಿಲ್ಲದಂತೆ, ಹದಗೆಟ್ಟಂತೆ ಕಾಣುತ್ತದೆ ? ಜೀವಿಗಳೇಕೆ ದುರ್ಬಲವಾಗಿ ಸಾವು ಹುಟ್ಟುಗಳ ನಿಯತ ಚಕ್ರಕ್ಕೆ ಸಿಲುಕಿ ನರಳುವ ಫಲಿತದಲ್ಲಿ ಪರ್ಯಾವಸನವಾಗುತ್ತಿದೆ ? ಯಾಕಿರಬೇಕಿತ್ತು ಈ ಸಾವು ಹುಟ್ಟುಗಳು, ನಿಜದಲಿ ಏನವುಗಳ ಸಂದೇಶ, ಸಂಕೇತ, ಸೂಚನೆ ? – ಎಂದು ದೇವರ ಸ್ವರೂಪದ ಕುರಿತ ಮಂಕುತಿಮ್ಮನ ಜಿಜ್ಞಾಸೆ ಇಲ್ಲಿದೆ.

ಮೊದಲಿಗೆ ಗವಿಯೆನ್ನುವುದು ನಾವು ನಿರ್ಮಿಸಿದ್ದಲ್ಲ, ಸಹಜ, ಸ್ವಾಭಾವಿಕವಾಗಿ ಪ್ರಕೃತಿಯಲ್ಲಿ ಉಂಟಾಗಿದ್ದು. ಅದರ ಆಳ ಅಗಲಗಳು ಅಷ್ಟು ಸುಲಭವೇದ್ಯವಲ್ಲ. ಒಳಗೇನಿದೆಯೆಂದು ಕಾಣಲೂ ಆಗದ ಗಾಢ ಅಂಧಕಾರ ಬೇರೆ ಸೇರಿಕೊಂಡು ಅದರ ನಿಗೂಢತೆಯನ್ನು ಇನ್ನಷ್ಟು ಜಟಿಲಗೊಳಿಸಿಬಿಡುತ್ತದೆ. ಒಂದೆಡೆ ಅದು ಒಳಗೇನಿರಬೇಕೆಂಬ ಕುತೂಹಲವನ್ನು ಹುಟ್ಟಿಸಿದಷ್ಟೆ ಸಹಜವಾಗಿ, ಮತ್ತೊಂದೆಡೆ ಏನು ಅಪಾಯವಿದೆಯೊ ಭಯ ಭೀತಿಯನ್ನು ಪ್ರಚೋದಿಸುತ್ತದೆ – ಏನು ನಿರೀಕ್ಷಿಸಬಹುದೆಂಬ ಕಲ್ಪನೆಯಿರದ ಕಾರಣ. ಒಟ್ಟಾರೆ ಗವಿಯ ಅಸ್ತಿತ್ವ ಕುತೂಹಲ ಭೀತಿಗಳ ಸಮ್ಮಿಶ್ರ ಸಂಕೇತ. ನಾವು ದೇವರೆಂದು ಪರಿಭಾವಿಸುವುದು ಈ ಗವಿಯ ಹಾಗೆ ತಾನೆ ? ಬಾಹ್ಯದಿಂದ ಗವಿಯ ಅಸ್ತಿತ್ವ ಸುಲಭ ಗ್ರಹಿಕೆಗೆ ಸಿಗುವುದರಿಂದ ದೇವರಿದ್ದಾನೆನ್ನುವ ಸ್ಥೂಲ ಕಲ್ಪನೆಯೆ ಗವಿಯ ಬಾಹ್ಯದೋಲಿಕೆಗೆ ಸುಲಭವಾಗಿ ಸಮೀಕರಿಸಿಕೊಂಡುಬಿಡುತ್ತದೆ. ಆದರೆ ಆ ದೇವರ ಹತ್ತಿರದ, ಒಳನೋಟ, ಸ್ಪಷ್ಟ ಸ್ವರೂಪ, ಅಂತರಾಳಗಳ ಶೋಧನೆಗ್ಹೊರಟರೆ ಗವಿಯ ಬಾಗಿಲಿಗಿಣುಕಿದಷ್ಟೆ ರೀತಿಯ ಅಸ್ಪಷ್ಟತೆ ಕಾಣಿಸಿಕೊಳ್ಳುತ್ತದೆ. ಒಳಗೆಲ್ಲ ಬರಿ ಗಾಢಾಂಧಕಾರವೆ ತುಂಬಿಕೊಂಡು ಏನೂ ಕಾಣಿಸುವುದಿಲ್ಲ. ಹೊರಗಿನ ಬೆಳಕಲಿ ಕಾಣಿಸಿದಷ್ಟು ದೂರವೂ ಕೂಡ ಮಸುಕು ಮಸುಕು ಮಾತ್ರವೆ. ಇದೊಂದು ರೀತಿ ಗವಿಯಿಲ್ಲವೆಂದು ನಿರಾಕರಿಸುವಂತಿಲ್ಲ – ಎದುರಿಗೆ ಕಾಣಿಸುತ್ತಿರುವ ಆಕಾರವದು. ಆದರೆ ತನ್ನೊಳಗಿನ ಅಸ್ತಿತ್ವವೇನೆಂದು ಪ್ರಕಟವಾಗಿ ತೋರಿಸಿಕೊಳ್ಳುವ ಗುಟ್ಟುಗಳಾವುದನ್ನು ಬಿಟ್ಟುಕೊಡದೆ ಎಲ್ಲವನ್ನು ಕಗ್ಗತ್ತಲಲ್ಲಿ ಬಚ್ಚಿಟ್ಟುಕೊಂಡು ಮಾತಡದೆ, ಬಿಮ್ಮನೆಯ ಮೌನದಲ್ಲಿ ಕೂತುಬಿಟ್ಟಿರುತ್ತದೆ, ನಿರ್ಲಿಪ್ತ ಗವಿ ತನ್ನ ಪಾಡಿಗೆ ತಾನು. ನಮಗೆ ದೇವರ ಬಗೆ ಗೊತ್ತಿರುವುದು ಈ ಗವಿಯ ಸ್ವರೂಪದಲ್ಲೆ ತಾನೆ ? ಇರುವನೆಂದು ಹೇಳಬಹುದಾದರು ಶತಃಸಿದ್ಧ ಪ್ರಮಾಣಿಸುವ ಸಾಕ್ಷಾಧಾರಗಳು ಸಿಗುವುದಿಲ್ಲ. ಇಲ್ಲವೆಂದು ಹೇಳಬೇಕಾದರೂ ಆ ತಮದ ಒಗಟನ್ನು ಬಿಡಿಸದೆ ಖಚಿತವಾಗಿ ಸಾರಲಾಗುವುದಿಲ್ಲ. ಹೀಗಾಗಿ ಗವಿಯ ಸಾಂಕೇತಿಕತೆ ದೇವರ ಅಸ್ತಿತ್ವಕ್ಕೆ ಅರ್ಥಪೂರ್ಣ ಹೋಲಿಕೆಯೆಂದೆ ಹೇಳಬಹುದು.

ಆ ಗವಿಯ ಅಂತರಾಳದ ನಿಶೀಥವೆ ನಮಗಲಭ್ಯವಾದ, ನಮಗಿನ್ನು ಗೊತ್ತಿಲ್ಲದ, ನಾವಿನ್ನೂ ಅರಿಯಲಾಗದ ದೇವರ ಕುರಿತಾದ ಎಲ್ಲದರ ಸಮಗ್ರ, ಸಮಷ್ಟಿ ಮೊತ್ತ ಎಂದಂದುಕೊಳ್ಳುವುದಾದರೆ, ಮತ್ತು ಆ ‘ಅಜ್ಞಾನದ ಮೊತ್ತ’ಕ್ಕೊಂದು ಹೆಸರಿಟ್ಟರೆ – ಅದನ್ನೆ ದೇವರೆನ್ನಬಹುದೆ ? ಎನ್ನುವುದು ಮುಂದಿನ ಸಾಲಿನ ಜಿಜ್ಞಾಸೆ. ಪಾಮರನೊಬ್ಬ ತನ್ನಳತೆಗೆ ಮೀರಿದ್ದೆಲ್ಲವನ್ನು ದೈವಕ್ಕೆ ಆರೋಪಿಸುವಷ್ಟೆ ಸಹಜವಾಗಿ ಪಂಡಿತನು ‘ಅಜ್ಞಾನ’ ವೆಂದು ಹೆಸರಿಟ್ಟು ಅದಕ್ಕೆ ಮತ್ತೊಂದು ವ್ಯಾಖ್ಯೆಯನ್ನು ನೀಡುತ್ತಾನೆ. ಆದರೆ ಅವರಿಬ್ಬರೂ ಒಪ್ಪುವ ರೀತಿಯಲ್ಲಿ ಏಕರೂಪವಾಗಿ ಗವಿ ಮತ್ತದರ ಅಂಧಕಾರ ಪ್ರತಿಮಾರೂಪದಲ್ಲಿ ಬಿಂಬಿತವಾಗಿದೆ.

ಸರಿ, ದೇವರ ಸ್ವರೂಪವನ್ನಂತು ಖಚಿತವಾಗಿ ಹೇಳಲಾಗದಿದ್ದರು, ಅವನ ಶಕ್ತಿ, ಸಾಮರ್ಥ್ಯ ಕುರಿತಾದ ನಂಬಿಕೆ, ಶ್ರದ್ದೆ, ವಿಶ್ವಾಸಗಳ ಕಥೆಯೇನು ? ಅವನನ್ನೆ ಸರ್ವಶಕ್ತ, ಸರ್ವರನ್ನು ಸೃಷ್ಟಿಸುವ, ರಕ್ಷಿಸುವ ಹೊಣೆ ಹೊತ್ತವನೆಂದೆಲ್ಲ ವಿಶೇಷಣಗಳನ್ನು ಅವನಿಗೆ ಆರೋಪಿಸಿ, ಅವನನ್ನು ಸರ್ವ ದಯಾಮಯನೆಂದು ಬಿರುದು ಕೊಟ್ಟು ಕೂರಿಸಿಬಿಟ್ಟಿದ್ದೇವೆ. ಇದು ನಿಜವೆ ಆಗಿದ್ದಲ್ಲಿ, ಈ ಜಗವನ್ನೆಲ್ಲ ಪರಿಪಾಲಿಸಿ ಕಾಪಾಡುವವನು ಅವನೆ ಎಂದಾದಲ್ಲಿ ಈ ಜಗದ ಸ್ಥಿತಿಯೇಕೆ ಇಂತಿದೆ ? ಯಾಕೀ ರೀತಿ ಇಟ್ಟಿದ್ದಾನೆ ? ಯಾಕಿಲ್ಲಿ ಹುಟ್ಟು ಸಾವುಗಳ ವಿಷಮ ಚಕ್ರದ ಜತೆ ಸುತ್ತುವ ಸುಖ ದುಃಖಗಳ ಅನಿವಾರ್ಯತೆ ? ಯಾವ ಧ್ಯೇಯೋದ್ದೇಶದಿಂದಲೆ ಸೃಷ್ಟಿಸಿದ್ದರೂ, ಪರಿಪಾಲನೆಯಲ್ಲಿ ಈ ಅಸಮತೋಲನವನ್ನಿಡುವ ಕಾರಣವಾದರೂ ಏನು ? ಎಂದು ಅವನ ಕಾರ್ಯಾಚರಣೆಯ ಮೂಲ ಶೋಧಿಸಲು ಹೊರಡುತ್ತಾನೆ ಮಂಕುತಿಮ್ಮ.

ಇಲ್ಲಿ ಮತ್ತದೆ ಆಧ್ಯಾತ್ಮದ ಎಳೆ ಹಿನ್ನಲೆಯ ನಂಬಿಕೆಯಾಗಿ ಒತ್ತಾಸೆ ನೀಡುವುದು ಇಲ್ಲಿನ ವೈಶಿಷ್ಠ್ಯ. ‘ಕಾಯುವವನು’ ಎನ್ನುವ ಒಂದು ಪದ ಹೇಳಿದರೆ ಸಾಕು ಅದರ ಹಿಂದಿನದೆಲ್ಲ ತಟ್ಟನೆ ದೃಗ್ಗೋಚರವಾಗಿಬಿಡುತ್ತದೆ ಆ ಹಿನ್ನಲೆಯರಿವಿರುವ ಓದುಗ ಮನಕ್ಕೆ. ದೇವರು, ವೇದಶಾಸ್ತ್ರ, ಆಧ್ಯಾತ್ಮಿಕತೆ ಎಲ್ಲವೂ ನಮ್ಮರಿವಿಲ್ಲದೆ ಮನಃಪಟಲದಲ್ಲೊಂದು ಅಮೂರ್ತ ರೂಪಾಗಿ ಕಾಣಿಸಿಕೊಂಡುಬಿಡುತ್ತದೆ – ನಮಗದರ ಸಂಪೂರ್ಣ ಜ್ಞಾನವಿರದಿದ್ದರು. ಅದೇ ಗಳಿಗೆಯಲ್ಲಿ ಕವಿಯು ಇದನ್ನು ಬರೆದಾಗ ಇದ್ದ ಸಾಮಾಜಿಕ ಪರಿಸ್ಥಿತಿ ಈಗಿನದಕ್ಕಿಂತ ಭಿನ್ನವಾಗೇನು ಇರಲಿಲ್ಲವೇನೊ ಎನ್ನುವ ಅನಿಸಿಕೆಯನ್ನು ಮೂಡಿಸುತ್ತದೆ – ಅವರು ಜಗದ ಕಥೆಯ ಮಾತಾಡುವಾಗ. ಬಹುಶಃ ‘ಕಾಲ ಕೆಟ್ಟು ಹೋಯಿತು’ ಎನ್ನುವ ಉದ್ಗಾರ ಪ್ರತಿ ಪೀಳಿಗೆಯಲ್ಲು ಅನುರಣಿತವಾಗುವ ಸರಕೊ ಏನೊ – ಅದರರ್ಥ ಗಹನತೆಯ ವ್ಯಾಪ್ತಿಯ ಅಸೀಮ ಚೌಕಟ್ಟನ್ನು ಮೀರಿ.

00377. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೦೪


00376. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೦೪

__________________________________

ಏನು ಜೀವನದರ್ಥ ? ಏನು ಪ್ರಪಂಚಾರ್ಥ ? |
ಏನು ಜೀವಪ್ರಪಂಚಗಳ ಸಂಬಂಧ ? ||
ಕಾಣದಿಲ್ಲಿರ್ಪುದೇನಾನುಮುಂಟೆ ? ಅದೇನು ? |
ಜ್ಞಾನ ಪ್ರಮಾಣವೇಂ ? – ಮಂಕುತಿಮ್ಮ ||

ನಾವೆಲ್ಲಾ ನಡೆಸಲೇಬೇಕಾದ ಈ ಜೀವನದರ್ಥವೇನು, ಉದ್ದೇಶವೇನು ? ಅದನ್ನು ನಡೆಸುವ ರಂಗವೇದಿಕೆಯಾದ ಈ ಪ್ರಪಂಚದ ಅರ್ಥವೇನು, ಉದ್ದೇಶವೇನು ? ಇವೆರಡರ ನಡುವಿನ ಸಂಬಂಧ, ನಂಟಾದರು ಎಂತದ್ದು, ಯಾವ ಉದ್ದೇಶದ್ದು? ಅದನ್ನರಿಯಲು ಪೂರಕವಾಗಬಹುದಾಗಿದ್ದ ಕಣ್ಣಿಗೆ ಕಾಣದ್ದೇನೊ ಇಲ್ಲಿರುವುದೆ – ನಾನು ಎಂಬುದರ ಇರುವಿಕೆಯ ಜತೆಯಲ್ಲೆ? ಇರುವುದಾದರೆ ಏನು ಆ ಕಾಣದ್ದು ? ಕಣ್ಣಿಗೆ ಕಾಣಿಸದ ವಸ್ತುವೆಂಬ ಜ್ಞಾನವಷ್ಟೆ ಅದನ್ನು ಪ್ರಮಾಣೀಕರಿಸುವ ದಾರಿಯೆ, ಸಾಕ್ಷಾಧಾರವೆ? ಎಂದು ಜಿಜ್ಞಾಸೆ , ಶೋಧನೆಗಿಳಿದಿದ್ದಾನೆ ಮಂಕುತಿಮ್ಮ.

‘ಜೀವ’ವಿರುವೆಲ್ಲಾ ಅಸ್ತಿತ್ವಗಳು ಋತುಗಳಡಿ ಬದಲಾಗುವ ‘ವನ’ದ ಹಾಗೆ ಹುಟ್ಟು ಸಾವಿನ ನಿರಂತರ ಚಕ್ರದಲ್ಲಿ ತೊಡಗಿಸಿಕೊಂಡಿರುವ ಬದುಕು ಒಂದೆಡೆ. ‘ಪಂಚ’ ಭೂತಗಳೆ ಮೂಲ ಸರಕಾಗಿ ಹುಟ್ಟಿಬಂದ ‘ಪ್ರಪಂಚ’ ವೆಂಬ ಜೀವ-ನಿರ್ಜೀವಗಳ ಮೊತ್ತದ ಅಸ್ತಿತ್ವದ ಅಚ್ಚರಿ ಇನ್ನೊಂದೆಡೆ. ಇವೆರಡು ಹೀಗೆ ಅಸ್ತಿತ್ವದಲ್ಲಿರುವ ಉದ್ದೇಶವೇನಿರಬಹುದು ? ಯಾವುದರ ಸಂಕೇತವನ್ನು ನೀಡುತ್ತಿದೆ ಇವುಗಳ ಇರುವಿಕೆ? ಪ್ರಪಂಚವೆಂಬ ರಂಗಮಂಚದ ಮಹಾನ್ ವೇದಿಕೆಯಲ್ಲಿ ನಡೆಯುವ ಜೀವನವೆಂಬ ಮಹಾನ್ ನಾಟಕದ ಅರ್ಥವೇನು? ಅದರಲ್ಲಿ ಪಾತ್ರ ನಿರ್ವಹಿಸುವ ಸಕಲ ಜೀವರಾಶಿಗಳ ಪ್ರೇರಣೆ, ಗುರಿಯಾದರು ಏನು ? ಜೀವನದೊಲವಿನೊಡನೆ ಪ್ರಪಂಚದ ಆ ಪ್ರಾಪಂಚಿಕತೆಯನ್ನು ಬಂಧಿಸಿರುವ ಸಂಬಂಧವೇನು? ಯಾವ ರೀತಿಯ ನಂಟು ಅವೆರಡನ್ನು ಹೀಗೆ ಸಮಷ್ಟಿಯಲ್ಲಿಟ್ಟಿದೆ ? ಯಾರೂ ನಿಯಂತ್ರಿಸದಿದ್ದರು ತಂತಾನೆ ನಡೆದುಕೊಂಡು ಹೋಗುವ ಆ ‘ಸ್ವಯಂಭು – ಸ್ವಯಂಚಾಲಕತ್ವದ’ ಪರಿಯನ್ನು ಇಷ್ಟು ವ್ಯವಸ್ಥಿತವಾಗಿ, ಶಿಸ್ತುಬದ್ಧವಾಗಿ ನಡೆಸುತ್ತಿರುವುದಾದರು ಯಾರು ಎನ್ನುವುದೆ ಗೊತ್ತಾಗದಲ್ಲಾ ? ನಮಗರಿವಿಲ್ಲದ, ಕಣ್ಣಿಗೆ ಕಾಣಿಸದಿರುವ ಯಾವುದೊ ಒಂದು ಅದೆಲ್ಲವನ್ನು ನಡೆಸುತ್ತಿದೆಯೆ – ಅದರಲ್ಲೆ ನಮ್ಮನ್ನೂ ಪಗಡೆಯ ಕಾಯಾಗಿ ಬಳಸಿಕೊಂಡು ? ಆ ಕಾಣದಿದ್ದರು ಇಲ್ಲಿರುವ ಅದರೊಳಗೆ ನಮಗೇ ಕಾಣದ ‘ನಮ್ಮ’ ಅಂಶವೂ ಸೇರಿಕೊಂಡಿದೆಯೆ , ನಮ್ಮರಿವಿಲ್ಲದೆಯೆ (ನಾನುಮುಂಟೆ) ?

ಇಲ್ಲಿ ಒಂದೆಡೆ ಕಾಣದ ಆ ಅಗಾಧ ಶಕ್ತಿಯ ಕುರಿತ ಸೂಚನೆಯಿದ್ದರೆ ಮತ್ತೊಂದೆಡೆ ನಮ್ಮಲ್ಲಿದ್ದೂ ನಮಗೇ ಕಾಣದ ಕೌತುಕವು ಆ ಕಾಣದ್ದರ ಜತೆಗಿದೆಯೆ ಎಂಬ ಪ್ರಶ್ನೆಯೂ ಇದೆ. ಇದನ್ನು ಮೊದಲೆರಡು ಸಾಲಿಗೆ ಸಡಿಲವಾಗಿ ಸಮೀಕರಿಸಿದರೆ, ಜೀವ ಪ್ರಪಂಚಗಳ ನಡುವಿನ ಸಂಬಂಧವಿರುವ ಹಾಗೆ ನಮ್ಮಲ್ಲಿನ ಅಂತರಾಳದ ಅಪರಿಚಿತ ಕೌತುಕಕ್ಕೂ ಮತ್ತು ಆ ಅಗಾಧಶಕ್ತಿಗೂ ಇರಬಹುದಾದ ಸಂಬಂಧವನ್ನು ಸಂಕೇತಿಸುತ್ತದೆ. ಒಟ್ಟಾರೆ, ಕಾಣಿಸದ್ದೇನೊ ಇಲ್ಲಿದ್ದು ಸೂತ್ರವನ್ನಾಡಿಸುತ್ತಿದೆಯೆ, ಅದರೊಳಗೆ ನನ್ನನ್ನು ಒಂದು ಸೂತ್ರದ ಗೊಂಬೆಯಾಗಿಸಿಕೊಂಡು – ಎನ್ನುವ ಪ್ರಶ್ನೆ ಕವಿಯದು. ಹಾಗೇನಾದರು ಇದ್ದಲ್ಲಿ ಅದೇನು ? ಎಂದರಿಯುವ ಕುತೂಹಲವಿದ್ದರು, ಅರಿವಾಗುತ್ತಿಲ್ಲದ, ಕಾಣಿಸುತ್ತಿಲ್ಲದ ಬೇಸರವೂ ಇದೆ. ಅದರಿಂದಾಗಿಯೆ ಕೊನೆಯ ಸಾಲಲ್ಲಿ – ಅದನ್ನು ಕಾಣಲಾಗದ ಸ್ಥಿತಿಯಿದ್ದರು, ಅದರ ಕುರಿತಾದ ವಿವರಣೆ ನೀಡುವ ವೇದ ಶಾಸ್ತ್ರಾದಿಗಳ ಜ್ಞಾನ ಮೂಲಕ್ಕೇನು ಕೊರತೆಯಿಲ್ಲವಾದ ಕಾರಣ, ಆ ಜ್ಞಾನ , ಪಾಂಡಿತ್ಯವನ್ನಷ್ಟೆ ಆ ಕಾಣದುದರ ಇರುವಿಕೆಗೆ ಪ್ರಮಾಣ, ಸಾಕ್ಷಿ ಎಂದಂದುಕೊಂಡು, ಅಷ್ಟಕ್ಕೆ ತೃಪ್ತಿಪಟ್ಟುಕೊಳ್ಳಬೇಕೆ ? ಎಂಬ ನಿರಾಶಾಪೂರ್ಣ ಹತಾಶೆಯನ್ನು ವ್ಯಕ್ತಪಡಿಸುತ್ತಾನೆ ಮಂಕುತಿಮ್ಮ.

ಸೃಷ್ಟಿರಹಸ್ಯದ ನಿಗೂಡತೆಯನ್ನು ಜೀವನ, ಪ್ರಪಂಚದಸ್ತಿತ್ವಗಳ ಮುಖೇನ ಪ್ರಶ್ನಿಸುತ್ತಲೆ ಆ ಕಾಣದ ಪರಮಾತ್ಮತ್ವದ ಜತೆ ನಾನೆಂಬ ‘ಪರಮಾತ್ಮ ಸ್ವರೂಪಿ’ ಯನ್ನು ಸಮೀಕರಿಸಿ ಅದ್ವೈತ ಸಮಷ್ಟಿತ್ವದ ಕುರುಹು ನೀಡುತ್ತಲೆ ಆಧ್ಯಾತ್ಮಿಕದ ಸಹಯೋಗವನ್ನೊದಗಿಸುವ ಈ ಸಾಲುಗಳು, ಅದೇ ವೇದಾಂತದ ಬ್ರಹ್ಮಜ್ಞಾನ ಸಾರವಾದ ‘ಅಜ್ಞಾನ’ವನ್ನು ತೊಡೆಯುವ ‘ಜ್ಞಾನ’ದ ಜೊತೆಗೂ ಜೋಡಿಸಿಕೊಳ್ಳುತ್ತ ತನ್ನ ಅಧ್ಯಾತ್ಮಿಕ ಮುಖವನ್ನು ಪರಿಪೂರ್ಣಗೊಳಿಸಿಕೊಂಡಿವೆಯೆನಿಸುತ್ತದೆ. ಇಲ್ಲಿನ ಅದ್ಭುತವೆಂದರೆ ಆ ಆಧ್ಯಾತ್ಮಿಕದ ಅರಿವು, ಪಾಂಡಿತ್ಯವಿರದವರೂ ಸಹ ಸಾಮಾನ್ಯ ಸ್ತರದಲ್ಲೆ ಓದಿ ಜೀರ್ಣಿಸಿಕೊಂಡರು ಅವರು ಅರ್ಥೈಸಿಕೊಳ್ಳುವ ಸಾರಕ್ಕೂ, ಪಂಡಿತರು ಬಿಡಿಸಿಟ್ಟುಕೊಳ್ಳುವ ಸಾರಕ್ಕೂ ಮೂಲಭೂತ ವ್ಯತ್ಸಾಸವಿರುವುದಿಲ್ಲ ಎನ್ನುವುದು. ಅಲ್ಲಿನ ಪದಗಳು ಸ್ಪುರಿಸುವ ವಿವಿಧಾರ್ಥಗಳು ಅವರವರ ಬೌದ್ಧಿಕ ಮತ್ತು ಪಾಂಡಿತ್ಯಪೂರ್ಣ ಸ್ತರಕ್ಕೆ ಹೊಂದಾಣಿಕೆಯಾಗುವಂತಹದ್ದು.